ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಇಟಲಿ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಡುಕಾಟಿ ತನ್ನ ಮಲ್ಟಿಸ್ಟ್ರಾಡಾ ವಿ2 ಅಡ್ವೆಂಚರ್-ಸ್ಪೋರ್ಟ್ ಬೈಕ್ ಅನ್ನು ಡುಕಾಟಿ ವರ್ಲ್ಡ್ ಪ್ರೀಮಿಯರ್ 2022 ವೆಬ್ ಸರಣಿಯ ಮೊದಲ ಸಂಚಿಕೆಯಲ್ಲಿ ಎರಡು ರೂಪಾಂತರಗಳಲ್ಲಿ ಅನಾವರಣಗೊಳಿಸಿದೆ.ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕ್ ಬದಲಿಯಾಗಿ ಹೊಸ ಮಲ್ಟಿಸ್ಟ್ರಾಡಾ ವಿ2 ಬೈಕ್ ಅನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಸ್ಟ್ಯಾಂಡರ್ಡ್ ಮತ್ತು ಎಸ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಅಡ್ವೆಂಚರ್-ಸ್ಪೋರ್ಟ್ ಬೈಕ್ ಹಲವು ನವೀಕರಣಗಳೊಂದಿಗೆ, 5 ಕೆಜಿ ತೂಕದ ಕಡಿತ ಸೇರಿದಂತೆ, ಮತ್ತು ಈಗ ಡುಕಾಟಿ ಸ್ಕೈಹೂಕ್ ಅನ್ನು ಒಳಗೊಂಡಿದೆ. ಇನ್ನು ಈ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ವಿನ್ಯಾಸ

2021ರ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ದೊಡ್ಡ ಮಲ್ಟಿಸ್ಟ್ರಾಡಾ 1260 ನಿಂದ ಸ್ಫೂರ್ತಿ ಪಡೆದ. ಹೊಸ ಮಲ್ಟಿಸ್ಟ್ರಾಡಾ ವಿ2 ಬೈಕ ಫ್ಲೇರ್ಡ್ ಏರ್-ಇಂಟೇಕ್ ಮತ್ತು ಸ್ಪ್ಲಿಟ್, ಫುಲ್-ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ. ಇನ್ನು ದೊಡ್ಡ ವಿಂಡ್‌ಸ್ಕ್ರೀನ್ ಮತ್ತು ಫ್ಯೂಯಲ್ ಟ್ಯಾಂಕ್ ಜೊತೆಗೆ ಎಲ್‌ಇಡಿ ಟೈಲ್ ಲ್ಯಾಂಪ್ ವಿನ್ಯಾಸವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ನವೀಕರಣವು ಸ್ಟ್ರೀಟ್ ಗ್ರೇ ಎಂಬ ಹೊಸ ಬಣ್ಣವನ್ನು ಪಡೆದುಕೊಂಡಿದೆ. ಸ್ಟ್ರೀಟ್ ಗ್ರೇ ಪೇಂಟ್ ಸ್ಕೀಮ್ ಕೆಂಪು ರಿಮ್‌ಗಳನ್ನು ಒಳಗೊಂಡಿದೆ. ಮತ್ತೊಂದೆಡೆ ಡುಕಾಟಿ ರೆಡ್ ಒಂದೇ ಆಗಿರುತ್ತದೆ ಮತ್ತು ಎರಡೂ ಆವೃತ್ತಿಗಳಲ್ಲಿ ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಎಂಜಿನ್

ಈ ಅಡ್ವೆಂಚರ್ ಬೈಕಿನಲ್ಲಿ ಮಲ್ಟಿಸ್ಟ್ರಾಡಾ 950 ಮಾದರಿಯಂತೆಯೇ 937 ಸಿಸಿ ಟೆಸ್ಟಾಸ್ಟ್ರೆಟ್ಟಾ, ಟ್ವಿನ್-ಸಿಲಿಂಡರ್ ಎಂಜಿನ್ ನೊಂದಿಗೆ ಮುಂದುವರಿಯುತ್ತದೆ. ಇದು ಹಿಂದಿನಂತೆಯೇ 111.5 ಬಿಹೆಚ್ ಪಿ ಪವರ್ ಮತ್ತು 94 ನಿಂದ 96 ವರೆಗೆ ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರ ಪರಿಣಾಮವಾಗಿ ಮಲ್ಟಿ ವಿ 2 950 ಗಿಂತ 5 ಕೆಜಿ ಹಗುರವಾಗಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಡುಕಾಟಿ ಟ್ರಾಕ್ಷನ್ ಕಂಟ್ರೋಲ್, ವೆಹಿಕಲ್ ಹೋಲ್ಡ್ ಕಂಟ್ರೋಲ್ ಮತ್ತು ಸ್ಪೋರ್ಟ್, ಟೂರಿಂಗ್, ಅರ್ಬನ್ ಮತ್ತು ಎಂಡ್ಯೂರೋ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಮೊದಲೇ ಹೇಳಿದಂತೆ ಡುಕಾಟಿ ಮಲ್ಟಿಸ್ಟ್ರಾಡಾ ವಿ 2 ಎರಡು ರೂಪಾಂತರಗಳಲ್ಲಿ ಲಭ್ಯವಿದೆ, ಎಸ್ ವೇರಿಯಂಟ್, ಡುಕಾಟಿ ಸ್ಕೈಹೂಕ್ ಸಸ್ಪೆನ್ಷನ್ ಇವಿಒ ಸೆಮಿ-ಆಕ್ಟಿವ್ ಸಸ್ಪೆಂಕ್ಷನ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಸಿಸ್ಟಮ್, ಡುಕಾಟಿ ಕಾರ್ನಿಂಗ್ ಲೈಟ್ಸ್, ಡುಕಾಟಿ ಕ್ವಿಕ್ ಶಿಫ್ಟ್ ಅಪ್ & ಡೌನ್, ಐದು ಇಂಚಿನ ಬಣ್ಣದ ಟಿಎಫ್‌ಟಿ ಡಿಸ್‌ಪ್ಲೇ ಮತ್ತು ಬ್ಯಾಕ್‌ಲಿಟ್ ಹ್ಯಾಂಡಲ್‌ಬಾರ್ ಕಂಟ್ರೋಲ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಮೊದಲೇ ಹೇಳಿದಂತೆ ಡುಕಾಟಿ ಮಲ್ಟಿಸ್ಟ್ರಾಡಾ ವಿ 2 ಎರಡು ರೂಪಾಂತರಗಳಲ್ಲಿ ಲಭ್ಯವಿದೆ, ಎಸ್ ವೇರಿಯಂಟ್ ಸ್ಕೈಹೂಕ್ ಎಲೆಕ್ಟ್ರಾನಿಕ್ ಸಸ್ಪೆನ್ಷನ್, ಕಾರ್ನರ್ ಲೈಟ್ಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಎರಡೂ ರೂಪಾಂತರಗಳನ್ನು ಎರಡು-ಬದಿಯ ಅಲ್ಯೂಮಿನಿಯಂ ಸ್ವಿಂಗಾರ್ಮ್ನೊಂದಿಗೆ ಒಂದೇ ಕೊಳವೆಯಾಕಾರದ ಸ್ಟ್ರೆಲ್ ಟ್ರೆಲಿಸ್ ಫ್ರೇಮ್ ಸುತ್ತಲೂ ನಿರ್ಮಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಸಸ್ಪೆಂಕ್ಷನ್ ಸೆಟಪ್

ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಅಡ್ವೆಂಚರ್-ಸ್ಪೋರ್ಟ್ಸ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 8 ಎಂಎಂ ಕಯಾಬಾ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಎರಡೂ ಸಂಪೂರ್ಣ ಹೊಂದಾಣಿಕೆ ನೀಡುತ್ತವೆ, ಎರಡೂ ತುದಿಗಳಲ್ಲಿ 170 ಎಂಎಂ ಟ್ರ್ಯಾವೆಲ್ ಹೊಂದಿದೆ,

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಬೆಲೆ

ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಅಡ್ವೆಂಚರ್-ಸ್ಪೋರ್ಟ್ಸ್ ಬೈಕಿನ ಬೆಸ್ ರೂಪಾಂತರಕ್ಕೆ ಎಕ್ಸ್-ಶೋರೂಂ ಪ್ರಕಾರ ರೂ, 13 ಲಕ್ಷದಿಂದ ಆರಂಭವಾಗಬಹುದು. ಇನ್ನು ಈ ಬೈಕಿನ ಟಾಪ್-ಸ್ಪೆಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,15 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ,

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಇನ್ನು ಡುಕಾಟಿ ಕಂಪನಿಯು ತನ್ನ ಮಲ್ಟಿಸ್ಟ್ರಾಡಾ ವಿ4 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ಮಲ್ಟಿಸ್ಟ್ರಾಡಾ ವಿ4 ಮತ್ತು ಮಲ್ಟಿಸ್ಟ್ರಾಡಾ ವಿ4 ಎಸ್ ಎಂಬ ಎರಡು ರೂಪಾಂತರಗಳನ್ನು ಹೊಂದಿದೆ. ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಅಡ್ಬೆಂಚರ್ ಟೂರರ್ ಬೈಕ್ ಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಭಾರತದಲ್ಲಿ ಬಿಡುಗಡೆಯಾಗಿರುವ ಈ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕ್ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನವನ್ನು ಹೊಂದಿದೆ. ಈ ಹೊಸ ಬೈಕಿನಲ್ಲಿ 1,158 ಸಿಸಿ ವಿ-ಟ್ವಿ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 10,500 ಆರ್‌ಪಿಎಂನಲ್ಲಿ 167 ಬಿಹೆಚ್‍ಪಿ ಪವರ್ ಮತ್ತು 8,750 ಆರ್‌ಪಿಎಂನಲ್ಲಿ 125 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಅಪ್&ಡೌನ್ ಸಿಸ್ಟಂ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ Ducati Multistrada V2 ಬೈಕ್ ವಿಶೇಷತೆಗಳು

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಬಿಡುಗಡೆಯಾಗಬಹುದು. ಇನ್ನು ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಈ ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಡುಕಾಟಿ ducati
English summary
Major highlights of new 2021 ducati multistrada v2 details
Story first published: Tuesday, October 5, 2021, 10:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X