ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ತನ್ನ ಹೊಸ ಎಕ್ಸ್‌ಪಲ್ಸ್ 200 4ವಿ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೀರೋ ಎಕ್ಸ್‌ಪಲ್ಸ್ 200 4ವಿ(Hero XPulse 200 4V) ಯಾವಾಗಲೂ ನೈಜ ಆಫ್-ರೋಡ್ ಸಾಮರ್ಥ್ಯ ಹೊಂದಿರುವ ಅತ್ಯಂತ ಸಮರ್ಥ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಆಗಿದೆ.

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಹೀರೋ ಎಕ್ಸ್‌ಪಲ್ಸ್ 200 ಕಡಿಮೆ ತೂಕ ಮತ್ತು ವೇಗದ ಆಫ್-ರೋಡ್ ಸಾಮರ್ಥ್ಯದೊಂದಿಗೆ ಸಾಕಷ್ಟು ಜನಪ್ರಿಯ ಮಾದರಿಯಾಗಿದೆ. ಈಗ, ಹೀರೋ ಮೋಟೋಕಾರ್ಪ್ ಎಕ್ಸ್‌ಪಲ್ಸ್ 200 ಅನ್ನು ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡಲು ನವೀಕರಿಸಿದೆ, ಜೊತೆಗೆ ಎಕ್ಸ್‌ಪಲ್ಸ್ 200 4ವ್ಯಾಲ್ಸ್ ಹೊಸ ಮನವಿಯೊಂದಿಗೆ ಪರಿಚಯಿಸಲು ಸಣ್ಣ ನವೀಕರಣಗಳನ್ನು ನೀಡುತ್ತದೆ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಅಲ್ಲದೇ ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಭಾರತದ ಹೆಚ್ಚಿನ ಆಫ್-ರೋಡ್ ಪ್ರೇಮಿಗಳನ್ನು ಈ ಬೈಕ್ ಸೆಳಯಬಹುದು.

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ನವೀಕರಿಸಿದ ಇಂಜಿನ್‌ನ ನಾಲ್ಕು ವಾಲ್ವ್ ಸಿಲಿಂಡರ್ ಹೆಡ್ ಅನ್ನು ಒಳಗೊಂಡಿದೆ. ಹೊಸ ಹೀರೋ ಎಕ್ಸ್‌ಪಲ್ಸ್ 200 4 ವಾಲ್ವ್‌ನಲ್ಲಿ ಕೆಲವು ಬದಲಾವಣೆಗಳಿವೆ, ಅಲ್ಲದೇ ಈ ಹೊಸ ನಾಲ್ಕು ವಾಲ್ವ್ ಸಿಲಿಂಡರ್ ಎಕ್ಸ್‌ಪಲ್ಸ್ 200 ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ,

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಎಂಜಿನ್

ಹೆಸರೇ ಸೂಚಿಸುವಂತೆ, ಹೀರೋ ಎಕ್ಸ್‌ಪಲ್ಸ್ 200 ಈಗ 200 ಸಿಸಿ, ನಾಲ್ಕು ವಾಲ್ವ್, ಆಯಿಲ್-ಕೂಲ್ಡ್ ಎಂಜಿನ್ ಹೊಂದಿದ್ದು, ಈ ಎಂಜಿನ್ 8,500 ಆರ್‌ಪಿಎಂನಲ್ಲಿ 19 ಬಿಎಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 17.35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 6 ಶೇಕಡಾ ಹೆಚ್ಚು ಪವರ್ ಮತ್ತು 5 ಶೇಕಡಾ ಟಾರ್ಕ್ ಹೆಚ್ಚು ಸೇರಿಸಲಾಗಿದೆ,

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಹೊಸ ಎಂಜಿನ್ ಹೆಚ್ಚಿನ ವೇಗದಲ್ಲಿ ವಿಶ್ರಾಂತಿ ಮತ್ತು ಒತ್ತಡ ರಹಿತ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ ಎಂದು ಹೇಳಲಾಗಿದೆ. ಹೀರೋ ಮೋಟೋಕಾರ್ಪ್ ಪ್ರಕಾರ, ನಾಲ್ಕು-ವಾಲ್ವ್, ಆಯಿಲ್-ಕೂಲ್ಡ್ ಎಂಜಿನ್ ಮಧ್ಯಮ ಮತ್ತು ಟಾಪ್-ಎಂಡ್ ವೇಗದ ಶ್ರೇಣಿಯಲ್ಲಿ ಉತ್ತಮ ಶಕ್ತಿಯನ್ನು ಒದಗಿಸುತ್ತದೆ,

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಆದರೆ ಕಂಪನಗಳನ್ನು ನಿಯಂತ್ರಿಸುವಾಗ ಹೆಚ್ಚಿನ ವೇಗದಲ್ಲಿಯೂ ಒತ್ತಡ ರಹಿತ ಎಂಜಿನ್ ಕಾರ್ಯಕ್ಷಮತೆಯನ್ನು ನೀಡುತ್ತದೆ. ಉತ್ತಮ ಶಾಖ ನಿರ್ವಹಣೆಗಾಗಿ, ಕೂಲಿಂಗ್ ವ್ಯವಸ್ಥೆಯನ್ನು 7-ಫಿನ್ ಆಯಿಲ್ ಕೂಲರ್‌ನೊಂದಿಗೆ ನವೀಕರಿಸಲಾಗಿದೆ. ಗೇರ್ ಅನುಪಾತಗಳನ್ನು ಉತ್ತಮ ಟ್ರ್ಯಾಕ್ಟಬಿಲಿಟಿ ಮತ್ತು ವೇಗವರ್ಧನೆಗಾಗಿ ನವೀಕರಿಸಲಾಗಿದೆ ಮತ್ತು ಒಟ್ಟಾರೆ ಟಾರ್ನ್ ಮಿಷನ್ ಸುಧಾರಿಸಲಾಗಿದೆ.

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಸಸ್ಪೆಂಕ್ಷನ್

ಸ್ಟಾಕ್ ಹೀರೋ ಎಕ್ಸ್‌ಪಲ್ಸ್ 200 4ವಾಲ್ವ್ ದೀರ್ಘ ಸಸ್ಪೆಂಕ್ಷನ್ ಟ್ರ್ಯಾವೆಲ್ ಅನ್ನು ಹೊಂದಿದೆ. ಇದರ ಮುಂಭಾಗದಲ್ಲಿ 190 ಎಂಎಂ ಮತ್ತು ಹಿಂಭಾಗದಲ್ಲಿ 170 ಎಂಎಂ ಟ್ರ್ಯಾವೆಲ್ ಹೊಂದಿದೆ. ಇನ್ನು ಈ ಬೈಕಿನ ಮುಂಭಾಗದಲ್ಲಿ 1 ಇಂಚಿನ ಚಕ್ರ ಮತ್ತು ಹಿಂಭಾಗದಲ್ಲಿ 18 ಇಂಚಿನ ಚಕ್ರವನ್ನು ಹೊಂದಿದೆ.

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಎಕ್ಸ್‌ಪಲ್ಸ್ 200 ಸಹ ಸ್ಟ್ಯಾಂಡರ್ಡ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್ ಜೊತೆಗೆ ಎಂಜಿನ್ ಅನ್ನು ರಕ್ಷಿಸುತ್ತದೆ.ಮತ್ತು ಉತ್ತಮ ಹಿಡಿತಕ್ಕಾಗಿ ಹೊಸ ಹಲ್ಲಿನ ಬ್ರೇಕ್ ಪೆಡಲ್, ಮತ್ತು ನೀರಿನ ಕ್ರಾಸಿಂಗ್‌ಗಳನ್ನು ಸುಲಭವಾಗಿ ನಿಭಾಯಿಸಲು ಉತ್ಕೃಷ್ಟವಾದ ಎಕ್ಸಾಸ್ಟ್ ಅನ್ನು ಹೊಂದಿದೆ.

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಡ್ಯುಯಲ್-ಪರ್ಪಸ್ ಟೈರ್‌ಗಳು, 10-ಸ್ಟೆಪ್ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸಸ್ಪೆಂಕ್ಷನ್, , 825 ಎಂಎಂ ಪ್ರವೇಶಿಸಬಹುದಾದ ಸೀಟ್ ಎತ್ತರ ಮತ್ತು 220 ಎಂಎಂನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಎಲ್ಲಾ ರೀತಿಯು ಈ ಬೈಕ್ ಯೋಗ್ಯವಾದ ಆಫ್-ರೋಡ್ ಸಾಮರ್ಥ್ಯವನ್ನು ಒದಗಿಸುತ್ತದೆ.ಎಕ್ಸ್‌ಪಲ್ಸ್ 200 ಬಂಗೀ ಹುಕ್‌ಗಳೊಂದಿಗೆ ಸ್ಟ್ಯಾಂಡರ್ಡ್ ಲಗೇಜ್ ಪ್ಲೇಟ್‌ನೊಂದಿಗೆ ಬ್ಯಾಗೇಜ್‌ನಲ್ಲಿ ಸಹ ಪ್ರಯಾಣಿಕರೊಂದಿಗೆ ಲಗೇಜ್ ಸಾಗಿಸಲು ಬರುತ್ತದೆ.

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಫೀಚರ್ಸ್

ಯಾಂತ್ರಿಕ ನವೀಕರಣಗಳ ಹೊರತಾಗಿ, ಹೀರೋ ಮೋಟೋಕಾರ್ಪ್ ಹೊಸ ಎಕ್ಸ್‌ಪಲ್ಸ್ 200 4ವಿ ಸ್ವಿಚ್ ಗೇರ್ ಅನ್ನು ಪರಿಷ್ಕರಿಸಿದೆ ಮತ್ತು ಹೊಸ ಮಾದರಿಯು ಸಂಯೋಜಿತ ಸ್ಟಾರ್ಟರ್/ಎಂಜಿನ್ ಕಟ್-ಆಫ್ ಬಟನ್ ಅನ್ನು ಪಡೆಯುತ್ತದೆಉಳಿದ ವೈಶಿಷ್ಟ್ಯಗಳು ಎರಡು-ವಾಲ್ವ್ ರೂಪಾಂತರವನ್ನು ಹೋಲುತ್ತವೆ.

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಹೀರೋ ಎಕ್ಸ್‌ಪಲ್ಸ್ 200 4ವಿಯ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್‌ಲೈಟ್, ಬ್ಲೂಟೂತ್-ಸಕ್ರಿಯಗೊಳಿಸಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಬಳಸುತ್ತದೆ. ಹೊಸ ಮಾದರಿಯ ಹೆಡ್‌ಲೈಟ್ ಸುಧಾರಿತ ಗೋಚರತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ ಆದರೆ ಏಳು-ಫಿನ್ ಆಯಿಲ್ ಕೂಲರ್ ಉತ್ತಮ ಶಾಖ ನಿರ್ವಹಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ರ‍್ಯಾಲಿ ಕಿಟ್

2021 ಹೀರೋ ಎಕ್ಸ್‌ಪಲ್ಸ್ 200 4 ವಾಲ್ವ್ ರ‍್ಯಾಲಿ ಕಿಟ್ ಅನ್ನು ಸ್ಟಾಕ್ ಬೈಕನ್ನು ಹೆಚ್ಚು ಸಾಮರ್ಥ್ಯದ ರ‍್ಯಾಲಿ ಮಾದರಿಯಾಗಿ ಪರಿವರ್ತಿಸಲು ಮುಂದುವರಿಯುತ್ತದೆ. ರ‍್ಯಾಲಿ ಕಿಟ್ ಕಾನೂನುಬದ್ಧವಾಗಿದೆ ಮತ್ತು ಎಫ್‌ಎಂಎಸ್‌ಸಿಐ ಅನುಮೋದಿತ ಮೋಟಾರ್ ಸ್ಪೋರ್ಟ್ಸ್ ಈವೆಂಟ್‌ಗಳಿಗೆ ಹೋಮೋಲೊಗೇಟ್ ಆಗಿದೆ.

ಹೊಸ Hero XPulse 200 4V ಅಡ್ವೆಂಚರ್ ಬೈಕ್ ವಿಶೇಷತೆಗಳು

ಬೆಲೆ

ಈ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.28 ಲಕ್ಷಗಳಾಗಿದೆ. ಇನ್ನು ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1,23,150 ಆಗಿದೆ, ಈ ಹೊಸ ಬೈಕ್ ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಆಫ್-ರೋಡ್ ಪ್ರೇಮಿಗಳನ್ನು ಸೆಳಯಬಹುದು. ಇನ್ನು ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಮೇಲಿನ ವಿಭಾಗದಲ್ಲಿ ಗಣನೀಯವಾಗಿ ಹೆಚ್ಚಿನ ಬೆಲೆಯನ್ನು ಹೊಂದಿರುವುದರಿಂದ ಇದು ಯಾವುದೇ ನೇರ ಪ್ರತಿಸ್ಪರ್ಧಿ ಹೊಂದಿಲ್ಲ.

Most Read Articles

Kannada
English summary
Major highlights of new hero xpulse 200 4v details
Story first published: Saturday, October 9, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X