ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ಝಡ್650ಆರ್‌ಎಸ್ ರೆಟ್ರೊ ಶೈಲಿಯ ಬೈಕ್ ಇತ್ತೀಚೆಗೆ ಜಾಗತಿಕವಾಗಿ ಪರಿಚಯಿಸಿದ್ದರು. ಈ ಝಡ್650ಆರ್‌ಎಸ್ ರೆಟ್ರೊ ಶೈಲಿಯ ಬೈಕ್ ಅನ್ನು ಕವಾಸಕಿ ಕಂಪನಿಯು ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಳಿಸಿದ್ದಾರೆ.

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ರೆಟ್ರೊ ಶೈಲಿಯ ಝಡ್650ಆರ್‌ಎಸ್ ಬೈಕ್ ಬಿಡುಗಡೆಯೊಂದಿಗೆ ಕವಾಸಕಿ ಇಂಡಿಯಾ ತನ್ನ ಪೋರ್ಟ್‌ಫೋಲಿಯೊವನ್ನು ನವೀಕರಿಸಿದೆ. ಈ ಹೊಸ ಕವಾಸಕಿ ಝಡ್650ಆರ್‌ಎಸ್ ರೆಟ್ರೊ-ಥೀಮ್ ಬೈಕಿನ ವಿತರಣೆಯನ್ನು ಮುಂದಿನ ತಿಂಗಳ ಅಂತ್ಯದಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಪ್ರಾರಂಭಿಸಬಹುದು. ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಇದರ ಹಿರಿಯ ಸಹೋದರ ಮಾದರಿ ಝಡ್900ಆರ್‌ಎಸ್ ಮಾದರಿಯಿಂದ ವಿನ್ಯಾಸ ಸ್ಫೂರ್ತಿ ಪಡೆಯುತ್ತದೆ ಮತ್ತು ಇದು ಸೊಗಸಾದ ರೆಟ್ರೊ ವಿನ್ಯಾಸವನ್ನು ಹೊಂದಿದೆ. ಈ ಕವಾಸಕಿ ಝಡ್650ಆರ್‌ಎಸ್ ಬೈಕಿನ ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ವಿನ್ಯಾಸ

ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ರೋಮ್ ಬೆಜೆಲ್‌ಗಳೊಂದಿಗೆ ರೌಂಡ್-ಆಕಾರದ ಎಲ್‌ಇಡಿ ಹೆಡ್‌ಲೈಟ್ ಯುನ್ಇಟ್ ಅನ್ನು ಹೊಂದಿದೆ. ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ರೋಮ್ ಬೆಜೆಲ್‌ಗಳೊಂದಿಗೆ ರೌಂಡ್-ಆಕಾರದ ಎಲ್‌ಇಡಿ ಹೆಡ್‌ಲೈಟ್ ಯುನಿಟ್, ಎಲ್‌ಇಡಿ ಟೈಲ್‌ಲೈಟ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿವೆ

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಇದರೊಂದಿಗೆ ಈ ರೆಟ್ರೊ-ಶೈಲಿಯ ಬೈಕಿನ ಇತರ ಮುಖ್ಯಾಂಶಗಳು ವೃತ್ತಾಕಾರದ ಹಿಂಬದಿಯ ಮೀರರ್ಸ್, ಸ್ಪೋಕ್ಡ್ ವ್ಹೀಲ್ ಗಳು, ಚದರ-ಆಕಾರದ ಇಂಧನ ಟ್ಯಾಂಕ್, ಸಿಂಗಲ್-ಪೀಸ್ ಸೀಟ್, ಅಂಡರ್ಬೆಲ್ಲಿ ಎಕ್ಸಾಸ್ಟ್ ಸಿಸ್ಟಮ್ ಮತ್ತು ಡ್ಯುಯಲ್-ಪಾಡ್ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್.ಅನ್ನು ಒಳಗೊಂಡಿದೆ.

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಬಣ್ಣಗಳು

ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಕ್ಯಾಂಡಿ ಎಮರಾಲ್ಡ್ ಗ್ರೀನ್ ಮತ್ತು ಮೆಟಾಲಿಕ್ ಮೂಂಡಸ್ಟ್ ಗ್ರೇ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಾಸಕಿ ಝಡ್650ಆರ್‌ಎಸ್ ಬೈಕ್ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ.

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಇತರ ಮುಖ್ಯಾಂಶಗಳು ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ, ಜೊತೆಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್, ಲಂಬವಾದ ಹ್ಯಾಂಡಲ್‌ಬಾರ್ ಪೊಸಿಶನಿಂಗ್ ಮತ್ತು ಸ್ವಲ್ಪ ಹಿಂಭಾಗದಲ್ಲಿ ಸೆಟ್ ಫುಟ್‌ಪೆಗ್‌ಗಳು ಇತ್ಯಾದಿಗಳನ್ನು ಒಳಗೊಂಡಿದೆ.

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಎಂಜಿನ್

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕಿನಲ್ಲಿ ಅದೇ 649 ಸಿಸಿ ಪ್ಯಾರಲಲ್ ಟ್ವಿನ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,700 ಆರ್‌ಪಿಎಮ್‌ನಲ್ಲಿ 67.3 ಬಿಹೆಚ್‌ಪಿ ಮತ್ತು 8,000 ಆರ್‌ಪಿಎಂನಲ್ಲಿ 64 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕ್ ಗಳಿಗೆ ಹೋಲಿಸಿದರೆ ಈ ಹೊಸ ಬೈಕ್ 20 ಬಿಹೆಚ್‍ಪಿ ಪವರ್ ಮತ್ತು 12 ಎನ್ಎಂ ಟಾರ್ಕ್ ಕಡಿಮೆ ಉತ್ಪಾದಿಸಲಾಗುತ್ತದೆ.

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಸಸ್ಪೆಂಕ್ಷನ್

ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಅಂತರರಾಷ್ಟ್ರೀಯ ಮಾದರಿಯಂತೆ ಇದರ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಬ್ಯಾಕ್‌ಲಿಂಕ್ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ,

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಬ್ರೇಕಿಂಗ್ ಸಿಸ್ಟಂ

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಡ್ಯುಯಲ್-ಪಿಸ್ಟನ್ ಫ್ರಂಟ್ ಕ್ಯಾಲಿಪರ್‌ಗಳೊಂದಿಗೆ 300 ಎಂಎಂ ಟ್ವಿನ್ ರೋಟರ್‌ಗಳು ಮತ್ತು ಸಿಂಗಲ್-ಪಿಸ್ಟನ್ ರಿಯರ್ ಕಾಲಿಪರ್ ಹೊಂದಿರುವ 220 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಬೆಲೆ

ಹೊಸ ಕವಾಸಕಿ ಝಡ್650ಆರ್‌ಎಸ್ ನಿಯೋ-ರೆಟ್ರೊ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.65 ಲಕ್ಷಗಳಾಗಿದೆ, ಇದರ ಪ್ರತಿಸ್ಪರ್ಧಿಯಾದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕಿನ ಬೆಲೆಯು ರೂ.2.82 ಲಕ್ಷಗಳಾಗಿದೆ. ಇನ್ನು ಹೋಂಡಾ ಸಿಬಿ650ಆರ್ ಬೈಕ್ ಬೆಲೆಯು ರೂ.8.68 ಲಕ್ಷಗಳಾಗಿದೆ,

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಇನ್ನು ಕವಾಸಕಿ ಇಂಡಿಯಾ ತನ್ನ 2022ರ ವರ್ಸಿಸ್ 1000 ಬೈಕ್ ಅನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಕವಾಸಕಿ ವರ್ಸಿಸ್ 1000 ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.55 ಲಕ್ಷಗಳಾಗಿದೆ. ಹೊಸ ಕವಾಸಕಿ ವರ್ಸಿಸ್ 1000 ಬೈಕ್ ಲೀಟರ್-ಕ್ಲಾಸ್ ಸ್ಪೋರ್ಟ್ಸ್ ಟೂರರ್ ಒಂದೇ ರೂಪಾಂತರದಲ್ಲಿ ಲಭ್ಯವಿದೆ.ಹೊಸ ಕವಾಸಕಿ ವರ್ಸಿಸ್ 1000 ಬೈಕ್ ಕ್ಯಾಂಡಿ ಲೈಮ್ ಗ್ರೀನ್ ಬಣ್ಣದಲ್ಲಿ ಲಭ್ಯವಿರಲಿದೆ, ಈ ಹೊಸ ಮಾದರಿಯ ವರ್ಷಕ್ಕೆ ಬೈಕು ಯಾವುದೇ ಗಣನೀಯ ಬದಲಾವಣೆಗಳನ್ನು ಪಡೆಯುವುದಿಲ್ಲ ಮತ್ತು ಅದೇ ಎಂಜಿನ್ ಮತ್ತು ವಿನ್ಯಾಸದೊಂದಿಗೆ ಮುಂದುವರೆಸಿದೆ. ಮಾಲೀಕತ್ವದ ಅನುಭವವನ್ನು ಸುಧಾರಿಸಲು ಇದು ಹೊಸ ರೇರ್ ಪ್ಯಾಕೇಜ್ ಅನ್ನು ಪಡೆಯುತ್ತದೆ.

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಈ ಹೊಸ ಕವಾಸಕಿ ವರ್ಸಿಸ್ 1000 ಬೈಕ್ ಈಗಾಗಲೇ ಇತ್ತೀಚಿನ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ. ಇನ್ನು ಈ ಹೊಸ ವರ್ಸಿಸ್ 1000 ಬೈಕಿನಲ್ಲಿ ಯಾಂತ್ರಿಕ ವಿಶೇಷಣಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದರಲ್ಲಿ ಅದೇ 1,043ಸಿಸಿ ಇನ್‌ಲೈನ್-ನಾಲ್ಕು, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,000 ಆರ್‌ಪಿಎಂನಲ್ಲಿ 118 ಬಿಹೆಚ್‍ಪಿ ಪವರ್ ಮತ್ತು 7,500 ಆರ್‌ಪಿಎಂನಲ್ಲಿ 102 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ Kawasaki Z650RS ರೆಟ್ರೊ ಶೈಲಿಯ ಬೈಕ್ ವಿಶೇಷತೆಗಳು

ಕವಾಸಕಿ ಕಂಪನಿಯು ಝಡ್650ಆರ್‌ಎಸ್ ನಿಯೋ-ರೆಟ್ರೊ ಬೈಕ್ ಅನ್ನು ಕೊನೆಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಿಡ್ ಸೈಜ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಕವಾಸಕಿ ಕಂಪನಿಯು ಈ ಝಡ್650ಆರ್‌ಎಸ್ ಬೈಕ್ ಅನ್ನು ಬಿಡುಗಡೆಗೊಳಿಸಬಹುದು. ಈ ಹೊಸ ಕವಾಸಕಿ ಝಡ್650ಆರ್‌ಎಸ್ ಬೈಕ್ ಮಿಡ್ ಸೈಜ್ ಐಷಾರಾಮಿ ಬೈಕ್ ಪ್ರಿಯರನ್ನು ಸೆಳಯಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Major highlights of new kawasaki z650rs details
Story first published: Monday, November 1, 2021, 10:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X