Just In
- 7 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 8 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 9 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 10 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದ ಅತಿ ವೇಗದ ಆರ್ಇ ಇಂಟರ್ಸೆಪ್ಟರ್ 650 ಅಭಿವೃದ್ಧಿಪಡಿಸಿದ ಮಂತ್ರ ರೇಸಿಂಗ್ ತಂಡ!
ಪರ್ಫಾಮೆನ್ಸ್ ಉದ್ದೇಶಗಳಿಗಾಗಿ ಪ್ರತ್ಯೇಕ ವಾಹನಗಳ ಬಳಕೆಯು ಇತ್ತೀಚೆಗೆ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಂತ್ರ ರೇಸಿಂಗ್ ತಂಡವು ತನ್ನದೇ ಆದ ಹೊಸ ತಂತ್ರಜ್ಞಾನಗಳೊಂದಿಗೆ ಸಾಮಾನ್ಯ ವಾಹನಗಳನ್ನೇ ರೇಸಿಂಗ್ ಉದ್ದೇಶಗಳಿಗೆ ಬಳಕೆಗೆ ನೆರವಾಗುವಂತೆ ಅಭಿವೃದ್ದಿಗೊಳಿಸುವಲ್ಲಿ ಯಶಸ್ವಿಯಾಗಿದೆ.
ಆಟೋಮೊಟಿವ್ ಉದ್ಯಮದಲ್ಲಿ ಸಾಕಷ್ಟು ಅನುಭವಗಳನ್ನು ಹೊಂದಿರುವ ಮಂತ್ರ ರೇಸಿಂಗ್ ತಂಡವು ಹೈಸ್ಪೀಡ್ ಬೈಕ್ ಮತ್ತು ಟ್ಯೂನಿಂಗ್ನಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದು, ಮಂತ್ರ ರೇಸಿಂಗ್ ತಂಡವು ಇತ್ತೀತೆಗೆ ಭಾರತದ ಅತಿ ವೇಗದ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಬೈಕ್ ಮಾದರಿಯು ಅಭಿವೃದ್ಧಿಪಡಿಸಿ ಹೊಸ ಸಂಚಲವನ್ನು ಮೂಡಿಸಿದೆ.
ಮಂತ್ರ ರೇಸಿಂಗ್ ಅಭಿವೃದ್ಧಿಪಡಿಸಿರುವ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಬೈಕ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಡ್ರೈವ್ಸ್ಪಾರ್ಕ್ ತಂಡವು ಅಹ್ವಾಹನದ ಮೇರೆಗೆ ಭಾಗಿಯಾಗಿತ್ತು. ಈ ವೇಳೆ ಅನುಭವಿ ಡ್ರ್ಯಾಗ್ ರೇಸರ್ ಮತ್ತು ಹಿಲ್ ಕ್ಲೈಂಬ್ ಚಾಂಪಿಯನ್ ಬಾಬಾ ಸತಾಗೋಪನ್ ಮತ್ತು ನಾಲ್ಕು ಬಾರಿ ನ್ಯಾಷನಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ ಆದ ಹೇಮಂತ್ ಮುದ್ದಪ್ಪ ಅವರ ನಡೆಸದ ಬೈಕ್ ರೇಸಿಂಗ್ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು.
ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಬೈಕಿನ ಕಾರ್ಯಕ್ಷಮತೆ ಪರೀಕ್ಷಿಸಲು ಮಂತ್ರ ರೇಸಿಂಗ್ ತಂಡವು ತನ್ನದೇ ಆದ ಉನ್ನತೀಕರಿಸಿದ ಎಂಜಿನ್ ಮತ್ತು ಆಕ್ಸೆಸರಿಸ್ ಪ್ಯಾಕೇಜ್ ಅಳವಡಿಸಿಲಿದ್ದು, ಮಂತ್ರ ರೇಸಿಂಗ್ ಜೋಡಣೆ ಮಾಡಿರುವ ತಾಂತ್ರಿಕ ಅಂಶಗಳೊಂದಿಗೆ ಬೈಕ್ ಕಾರ್ಯಕ್ಷತೆಯಲ್ಲಿ ದುಪ್ಟಟ್ಟು ಹೆಚ್ಚಳವಾಗಲು ಸಹಕಾರಿಯಾಗಿದೆ.
ಗ್ರಾಹಕರ ಬೇಡಿಕೆಯೆಂತೆ ಮಂತ್ರ ರೇಸಿಂಗ್ ಕಂಪನಿಯು ಸ್ಟೇಜ್ I ಸ್ಟ್ರೀಟ್, ಸ್ಟೇಜ್ I ಸ್ಟ್ರೀಟ್ ಪ್ಲಸ್, ಸ್ಟೇಜ್ II ಸ್ಪೋರ್ಟ್, ಸ್ಟೇಜ್ II ಸ್ಪೋರ್ಟ್ ಪ್ಲಸ್ ಎಂಬ ನಾಲ್ಕು ಮಾದರಿಯ ರೇಸಿಂಗ್ ಕಿಟ್ ಪ್ಯಾಕೇಜ್ಗಳನ್ನು ಅಳವಡಿಸಲಿದ್ದು, ರೇಸಿಂಗ್ ಪ್ಯಾಕೇಜ್ ಅಳವಡಿಕೆ ನಂತರ ಇಂಟರ್ಸೆಪ್ಟರ್ 650 ಬೈಕ್ ಕೇವಲ 5.53 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ಪಡೆದುಕೊಳ್ಳಬಲ್ಲ ಶಕ್ತಿ ಹೊಂದಿದೆ.
ಕ್ವಾರ್ಟರ್ ಮೈಲಿ 13.93 ಸೆಕೆಂಡುಗಳಲ್ಲಿ 174 ಕಿಮೀ ಟಾಪ್ ಸ್ಪೀಡ್ ಪಡೆದುಕೊಳ್ಳುವ ಇಂಟರ್ಸೆಪ್ಟರ್ 650 ಬೈಕ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್ ಖಾತ್ರಿಪಡಿಸಲಿದ್ದು, ಅದರಲ್ಲೂ ಹೊಸ ಬೈಕಿ ತೂಕ ಕಡಿತವು ಬೈಕ್ ಪರ್ಫಾಮೆನ್ಸ್ ಅನ್ನು ಉತ್ತಮವಾಗಿ ನಿಭಾಯಿಸಲು ಪ್ರಮುಖ ಕಾರಣವಾಗಿದೆ. ಹೊಸ ಬೈಕಿನ ಕಾರ್ಯಕ್ಷಮತೆ ಅಪ್ಗ್ರೇಡ್ ಪ್ಯಾಕೇಜ್ಗಳನ್ನು ಖರೀದಿಸಲು ಬಯಸುವ ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ವಿವಿಧ ಜಾಲತಾಣಗಳ ಮೂಲಕ ಮಂತ್ರ ರೇಸಿಂಗ್ [email protected] ತಂಡವನ್ನು ಸಂಪರ್ಕಿಸಬಹುದು.