Just In
Don't Miss!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶತಮಾನೋತ್ಸವದ ಸಂಭ್ರಮದಲ್ಲಿ ಸ್ಪೆಷಲ್ ಎಡಿಷನ್ ಮಾದರಿಗಳನ್ನು ಪರಿಚಯಿಸಿದ ಮೋಟೋ ಗುಜಿ
ಇಟಾಲಿಯನ್ ಸೂಪರ್ ಬೈಕ್ ತಯಾರಕ ಕಂಪನಿಯಾದ ಮೋಟೋ ಗುಜಿ ಮಾರುಕಟ್ಟೆಯಲ್ಲಿ 100 ವರ್ಷಗಳನ್ನು ಪೂರೈಸಿದೆ. ಈ ಶತಮಾನೋತ್ಸವದ ಸಂಭ್ರಮದಲ್ಲಿ ಮೋಟೋ ಗುಜಿ ವಿ7, ವಿ9 ಮತ್ತು ವಿ85 ಟಿಟಿ ಮಾದರಿಗಳ ಸ್ಪೆಷಲ್ ಎಡಿಷನ್ ಮಾದರಿಗಳನ್ನು ಪರಿಚಯಿಸಿದೆ.

ಸ್ಪೆಷಲ್ ಎಡಿಷನ್ ಬೈಕ್ಗಳಲ್ಲಿ ಸ್ಯಾಟಿನ್-ಸಿದ್ಧಪಡಿಸಿದ ಫ್ಯೂಯಲ್ ಟ್ಯಾಂಕ್, ಗ್ರೀನ್ ಫೇರಿಂಗ್ ಮತ್ತು ಲೆದರ್ ಸೀಟ್, ಮತ್ತು ಮುಂಭಾಗದ ಮಡ್ಗಾರ್ಡ್ ಅನ್ನು ಅಲಂಕರಿಸುವ ಗೋಲ್ಡನ್ ಫಿನಿಶ್ನೊಂದಿಗೆ ಮೀಸಲಾದ 100 ವರ್ಷದ ಮೋಟೋ ಗುಜಿ ಲೋಗೊವನ್ನು ಸಹ ಒಳಗೊಂಡಿರುತ್ತದೆ. ಮೋಟೋ ಗುಜಿ ಸ್ಪೆಷಲ್ ಎಡಿಷನ್ ಬೈಕ್ಗಳ ಬಣ್ಣಗಳು 350 ಬಿಯಾಲ್ಬೆರೊವನ್ನು ಸಹ ನಿರೂಪಿಸಿವೆ. ಇದು ಬ್ರ್ಯಾಂಡ್ ಇತಿಹಾಸದಲ್ಲಿ ಅತ್ಯಂತ ವಿಜಯಶಾಲಿ ಬೈಕ್ಗಳಲ್ಲಿ ಒಂದಾಗಿದೆ.

ಈ 350 ಬಿಯಾಲ್ಬೆರೊ ಬೈಕ್ ವಿಶ್ವ ಚಾಂಪಿಯನ್ಶಿಪ್ ಜಿಪಿ ಮೋಟಾರ್ಸೈಕಲ್ ರೇಸಿಂಗ್ನಲ್ಲಿ 1953 ರಿಂದ 1957 ರವರೆಗೆ ಸತತ 9 ವಿಶ್ವ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಅದ್ಭುತ ದಾಖಲೆಯನ್ನು ಹೊಂದಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್ಸೈಕಲ್

ಇಟಾಲಿಯನ್ ಸಂಸ್ಥೆ ಮೋಟೋ ಗುಜಿ ಬ್ರ್ಯಾಂಡ್ ಮೈಲಿಗಲ್ಲು ವರ್ಷವನ್ನು ಆಚರಿಸಲು ತನ್ನ ಮ್ಯಾಂಡೆಲ್ಲೊ ಡೆಲ್ ಲಾರಿಯೋ ಕಾರ್ಖಾನೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮೋಟೋ ಗುಜಿ ವರ್ಲ್ಡ್ ಡೇಸ್ ಅನ್ನು ಸಹ ಪುನರುಜ್ಜೀವನಗೊಳಿಸಲಾಗುತ್ತದೆ.

ಮೋಟೋ ಗುಜಿ ಕೊನೆಯ ಕಾರ್ಯಕ್ರಮ 2021ರ ಸೆಪ್ಟೆಂಬರ್ 9-12 ವರೆಗೆ ನಡೆಯಲಿದೆ. ಮೋಟೋ ಗುಜಿ ವರ್ಲ್ಡ್ ಡೇಸ್ ಈವೆಂಟ್ನಲ್ಲಿ ಸಾವಿರಾರು ಉತ್ಸಾಹಿಗಳು ಭಾಗವಹಿಸುವ ನಿರೀಕ್ಷೆಯಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಮೋಟೋ ಗುಜಿ ಕಂಪನಿಯನ್ನು ಮೊದಲ ಬಾರಿಗೆ 1921ರಲ್ಲಿ ಪ್ರಾರಂಭಿಸಲಾಯಿತ್ತು. ಈ ಮೋಟೋ ಗುಜಿ ಕಂಪನಿಯ ಕೇಂದ್ರ ಕಚೇರಿಯನ್ನು ಮಾಂಡೆಲ್ಲೊ ಡೆಲ್ ಲಾರಿಯೊದಲ್ಲಿ ತೆರೆಯಲಾಯಿತು ಅದೇ ಸ್ಥಾವರದಲ್ಲಿ ಇಂದಿಗೂ ಮೋಟೋ ಗುಜಿ ಬೈಕುಗಳನ್ನು ಉತ್ಪಾದಿಸಲಾಗುತ್ತಿದೆ.

2004ರಿಂದ ಮೋಟೋ ಗುಜಿ ಯುರೋಪಿನ ಅತಿದೊಡ್ಡ ಮೋಟಾರ್ಸೈಕಲ್ ತಯಾರಕರಾದ ಪಿಯಾಜಿಯೊ ಗ್ರೂಪ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಮೋಟೋ ಗುಜಿ ಬೈಕುಗಳನ್ನು 90-ಡಿಗ್ರಿ ವಿ-ಟ್ವಿನ್ ಎಂಜಿನ್ಗಳನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇತ್ತೀಚೆಗೆ ಮೋಟೋ ಗುಜಿ ತನ್ನ ವಿ85 ಟಿಟಿ ಬೈಕ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. 2021ರ ಮೋಟೋ ಗುಜಿ ವಿ85 ಟಿಟಿ ಬೈಕ್ ಕೆಲವು ಹೊಸ ನವೀಕರಣಗಳನ್ನು ಪಡೆದುಕೊಂಡಿವೆ.

ಮೋಟೋ ಗುಜಿ ಮಾರುಕಟ್ಟೆಯಲ್ಲಿ 100 ವರ್ಷಗಳನ್ನು ಪೂರೈಸಿದೆ. ಈ ಶತಮಾನೋತ್ಸವದ ಸಂಭ್ರಮದಲ್ಲಿ ಸ್ಪೆಷಲ್ ಎಡಿಷನ್ ಮಾದರಿಗಳನ್ನು ಮೊಟೊ ಗುಜಿ ಕಂಪನಿಯು ಪರಿಚಯಿಸಿದೆ. ಮೋಟೋ ಗುಜಿ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಬಳೆವಣಿಗೆಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ.