200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಮಿಡ್-ಡಿಸ್ ಪ್ಲೇಸ್‌ಮೆಂಟ್ ಎಂದೂ ಕರೆಯಲಾಗುವ 200 ಸಿಸಿ - 400 ಸಿಸಿ ಮೋಟಾರ್‌ಸೈಕಲ್ ಸೆಗ್ ಮೆಂಟ್ ಅನ್ನು ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ವೇಗವಾಗಿ ವಿಸ್ತರಿಸಲಾಗುತ್ತಿದೆ.

200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಕರೋನಾ ವೈರಸ್‌ನಿಂದಾಗಿ ಇತರ ಬೈಕ್ ಸೆಗ್ ಮೆಂಟ್'ಗಳಂತೆ ಈ ಸೆಗ್ ಮೆಂಟಿನಲ್ಲಿಯೂ ಬೈಕ್‌ಗಳ ಮಾರಾಟವು ಕಡಿಮೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಈ ಸೆಗ್ ಮೆಂಟಿನ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ.

200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಈ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ಸೆಗ್ ಮೆಂಟಿನಲ್ಲಿರುವ ಎಲ್ಲಾ ಬೈಕುಗಳ ಮಾರಾಟವು ಮೇ ತಿಂಗಳಿನಲ್ಲಿ ತೀವ್ರವಾಗಿ ಕುಸಿದಿದೆ. ಮೇ ತಿಂಗಳಿನಲ್ಲಿ 200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಒಟ್ಟು 22,044 ಯುನಿಟ್ ಬೈಕುಗಳನ್ನು ಮಾರಾಟ ಮಾಡಲಾಗಿದೆ.

200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಏಪ್ರಿಲ್ ತಿಂಗಳಿನಲ್ಲಿ 58,878 ಯುನಿಟ್ ಬೈಕುಗಳನ್ನು ಮಾರಾಟ ಮಾಡಲಾಗಿತ್ತು. ಈ ಮೂಲಕ 200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿರುವ ಬೈಕುಗಳ ಮಾರಾಟವು 62.56%ನಷ್ಟು ಕಡಿಮೆಯಾಗಿದೆ.

200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಈ ಸೆಗ್ ಮೆಂಟಿನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕುಗಳು ಯಾವಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಮೇ ತಿಂಗಳಿನಲ್ಲಿಯೂ ರಾಯಲ್ ಎನ್‌ಫೀಲ್ಡ್ ಬೈಕುಗಳು ಪ್ರಾಬಲ್ಯ ಸಾಧಿಸಿವೆ.

200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಹೆಚ್ಚು ಮಾರಾಟವಾದ ಬೈಕುಗಳ ಪಟ್ಟಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ನಾಲ್ಕು ಬೈಕ್‌ಗಳು ಮೊದಲ ನಾಲ್ಕು ಸ್ಥಾನಗಳನ್ನು ಪಡೆದಿವೆ. ಒಟ್ಟಾರೆ ದ್ವಿಚಕ್ರ ವಾಹನ ಮಾರಾಟದಲ್ಲಿ 10ನೇ ಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಸ್ಥಾನ ಮಾದರಿಗಳು ಮೇ - 21 ಏಪ್ರಿಲ್ - 21 ಬೆಳವಣಿಗೆ (%)
1 ಆರ್‌ಇ ಕ್ಲಾಸಿಕ್ 350 9,239 23,298 -60.34
2 ಆರ್‌ಇ ಬುಲೆಟ್ 350 4,557 9,908 -54.01
3 ಆರ್‌ಇ ಮೆಟಿಯೊರ್ 350 3,375 7,844 -56.97
4 ಆರ್‌ಇ ಎಲೆಕ್ಟ್ರಾ 350 2,112 3,631 -41.83
5 ಬಜಾಜ್ ಪಲ್ಸರ್ 200 1,026 3,914 -73.79
6 ಆರ್‌ಇ ಹಿಮಾಲಯನ್ 463 2,815 -83.55
7 ಹೋಂಡಾ ಹೈನೆಸ್ ಸಿಬಿ 350 428 2,969 -85.58
8 ಬಜಾಜ್ ಅವೆಂಜರ್ 220 176 650 -72.92
9 ಕೆಟಿಎಂ 250 168 1,089 -84.57
10 ಯಮಹಾ ಎಫ್‌ಝಡ್25 140 182 -23.08
200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್‌ ಕಂಪನಿಯ ಪ್ರಮುಖ ಮಾದರಿಯಾದ ಕ್ಲಾಸಿಕ್ 350 ಬೈಕಿನ 9,239 ಯುನಿಟ್‌ಗಳನ್ನು ಕಳೆದ ತಿಂಗಳು ಮಾರಾಟ ಮಾಡಲಾಗಿದೆ.

200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಏಪ್ರಿಲ್ ತಿಂಗಳಿನಲ್ಲಿ ಈ ಬೈಕಿನ 23,298 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಮೇ ತಿಂಗಳಿನಲ್ಲಿ ಕ್ಲಾಸಿಕ್ 350 ಬೈಕ್‌ಗಳ ಮಾರಾಟವು 60.34%ನಷ್ಟು ಕಡಿಮೆಯಾಗಿದೆ. ಮೇ ತಿಂಗಳಿನಲ್ಲಿ ಬುಲೆಟ್ 350 ಬೈಕಿನ 4,557 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಏಪ್ರಿಲ್‌ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕಿನ 9,908 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ರಾಯಲ್ ಎನ್‌ಫೀಲ್ಡ್‌ ಕಂಪನಿಯ ಇತ್ತೀಚಿನ ಕೊಡುಗೆಯಾದ ಮೆಟಿಯೋರ್ 350 ಬೈಕ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

200 ಸಿಸಿ - 400 ಸಿಸಿ ಸೆಗ್ ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಮೇ ತಿಂಗಳಿನಲ್ಲಿ ಮೆಟಿಯೋರ್ 350 ಬೈಕಿನ 3,375 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ರಾಯಲ್ ಎನ್‌ಫೀಲ್ಡ್ ಕಂಪನಿಯ ಎಲೆಕ್ಟ್ರಾ 350 ಬೈಕ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Most Read Articles

Kannada
English summary
Motorcycles sold more in 200 cc to 500 cc segment. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X