ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಇಟಲಿ ಮೂಲದ ಸೂಪರ್‌ಬೈಕ್ ತಯಾರಕ ಕಂಪನಿಯಾದ ಡುಕಾಟಿ ತನ್ನ 2021ರ ಎಕ್ಸ್‌ಡಿಯಾವೆಲ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.18 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಇನ್ನು ಈ ಬೈಕಿನ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸಬಹುದು. ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಡಾರ್ಕ್ ಮತ್ತು ಬ್ಲ್ಯಾಕ್ ಸ್ಟಾರ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಡಾರ್ಕ್ ರೂಪಾಂತರದ ಬೆಲೆಯು ರೂ.18 ಲಕ್ಷಗಳಾದರೆ, ಬ್ಲ್ಯಾಕ್ ಸ್ಟಾರ್ ರೂಪಾಂತರದ ಬೆಲೆಯು ರೂ.22.60 ಲಕ್ಷಗಳಾಗಿದೆ. ಇನ್ನು ಡಾರ್ಕ್ ರೂಪಾಂತರವು ಡಾರ್ಕ್ ಸ್ಟೆಲ್ತ್, ಕಾರ್ಬನ್ ಬ್ಲಾಕ್ ಫ್ರೇಮ್ ಮತ್ತು ಮ್ಯಾಟ್ ಬ್ಲ್ಯಾಕ್ ವ್ಹೀಲ್ಸ್ ಎಂಬ ಬಣ್ಣಗಳ ಹೊಂದಿದ್ದರೆ, ಎಕ್ಸ್‌ಡಿಯಾವೆಲ್ ಬ್ಲ್ಯಾಕ್ ಸ್ಟಾರ್ ಡೆಡಿಕೇಟೆಡ್ ಬ್ಲ್ಯಾಕ್ ಸ್ಟಾರ್ ಗ್ರಾಫಿಕ್ಸ್, ಗ್ಲಾಸ್ ಬ್ಲಾಕ್ ಫ್ರೇಮ್ & ವ್ಹೀಲ್ಸ್ ಬಣ್ಣಗಳನ್ನು ಹೊಂದಿವೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕಿನಲ್ಲಿ ಲಿಕ್ವಿಡ್-ಕೂಲ್ಡ್ ಟೆಸ್ಟಾಸ್ಟ್ರೆಟ್ಟಾ ಡಿವಿಟಿ 1,262 ಸಿಸಿ ಎಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಈ ಎಂಜಿನ್ 9,500 ಆರ್‌ಪಿಎಂನಲ್ಲಿ 158 ಬಿಹೆಚ್‌ಪಿ ಮತ್ತು 5,000 ಆರ್‌ಪಿಎಂನಲ್ಲಿ 130 ಎನ್‌ಎಮ್‌ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮಥ್ಯವನ್ನು ಹೊಂದಿದೆ. ಹಿಂದಿನ ಮಾದರಿಗಿಂತ 8 ಬಿಹೆಚ್‌ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್-ಅಸಿಸ್ಟ್ ಕ್ಲಚ್ ಮತ್ತು ವರ್ಧಿತ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳಿಗಾಗಿ ರೈಡ್-ಬೈ-ವೈರ್ ಸಿಸ್ಟಂ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಈ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಹಿಂದಿನ ಮಾದರಿಯನ್ನು ಆಧರಿಸಿದೆ. ಈ ಬೈಕಿನ ಬಾಡಿಯ ಹಲವು ಭಾಗಗಳಲ್ಲಿ ಕಾರ್ಬನ್ ಫೈಬರ್ ಬಳಕೆ ಮತ್ತು ಹೊಸ ಗ್ರಾಫಿಕ್ಸ್ ಸೇರಿದಂತೆ ಹಲವು ಬದಲಾವಣೆಗಳಿವೆ. ಇದು ಕಾರ್ಯಕ್ಷಮತೆಯ ಕ್ರೂಸರ್ ಬೈಕಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಈ ಬೈಕಿನಲ್ಲಿ 18-ಲೀಟರ್ ಸಾಮರ್ಥ್ಯದ ಫ್ಯೂಯಕ್ ಟ್ಯಾಂಕ್, ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್, ಎಲ್ಇಡಿ ಲೈಟಿಂಗ್, ಸಿಂಗಲ್ ಸೈಡೆಡ್ ಸ್ವಿಂಗಾರ್ಮ್, ಅಲಾಯ್ ವೀಲ್ಸ್, ಟ್ವಿನ್-ಬ್ಯಾರೆಲ್ ಎಕ್ಸಾಸ್ಟ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿವೆ.ಈ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಡಾರ್ಕ್ ಸ್ಟಾರ್ ರೂಪಾಂತರವು ಸ್ವೀಡ್ ಫ್ಯಾಬ್ರಿಕ್ ಅನ್ನು ಹೊಂದಿದ್ದು ಅದು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಇನ್ನು ಈ ಬೈಕಿನಲ್ಲಿ 3.5-ಇಂಚಿನ ಟಿಎಫ್ಟಿ ಡಿಸ್‌ಪ್ಲೇಯನ್ನು ಹೊಂದಿದ್ದು, ಕಂಪನಿಯು ನೀಡುವ ಕನೆಕ್ಟಿವಿಟಿ ಫೀಚರ್ಸ್ ಗಳಾಗಿ ಬ್ಲೂಟೂತ್ ಅನ್ನು ಹೊಂದಿದೆ. ಡಾರ್ಕ್ ಸ್ಟಾರ್ಟ್ ಬ್ರಾಂಡ್‌ನ ಡುಕಾಟಿ ಮಲ್ಟಿಮೀಡಿಯಾ ಸಿಸ್ಟಂ (ಡಿಎಂಎಸ್) ಅನ್ನು ಮತ್ತಷ್ಟು ಒಳಗೊಂಡಿದೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸ್ಪೋರ್ಟ್ಸ್, ಟೂರಿಂಗ್ ಮತ್ತು ಅರ್ಬನ್ ಎಂಬ ರೈಡಿಂಗ್ ಮೋಡ್ ಗಳನ್ನು ಹೊಂದಿದ್ದು, ಐಎಂಯು ಆಧಾರಿತ ಕಾರ್ನರ್ ಎಬಿಎಸ್, ಡುಕಾಟಿ ಟ್ರಾಕ್ಷನ್ ಕಂಟ್ರೋಲ್(ಡಿಟಿಸಿ), ಡುಕಾಟಿ ಪವರ್ ಲಾಂಚ್ (ಡಿಪಿಎಲ್) ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ 247 ಕೆಜಿ ತೂಕವನ್ನು ಹೊಂದಿದೆ, ಬ್ಲ್ಯಾಕ್ ಸ್ಟಾರ್ ಮಾದರಿಯು ಹಗುರವಾದ ಖೋಟಾ ಮತ್ತು ಆನೊಡೈಸ್ಡ್ ಸೈಡ್ ಫ್ರೇಮ್ ಪ್ಲೇಟ್‌ಗಳು ಮತ್ತು ಅಲಾಯ್ ವ್ಹೀಲ್ ಗಳನ್ನ ಹೊಂದಿದೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಇನ್ನು ಈ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 50 ಎಂಎಂ ಯುಎಸ್‌ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದ್ದು, ಈ ಎರಡು ಯುನಿಟ್ ಗಳನ್ನು ಪ್ರಿ-ಲೋಡ್ ಮತ್ತು ರಿಬೌಂಡ್ ಡ್ಯಾಂಪಿಂಗ್‌ಗಾಗಿ ಸಂಪೂರ್ಣವಾಗಿ ಹೊಂದಿಸಬಹುದಾಗಿದೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಡುಕಾಟಿ ತನ್ನ ಬಹುನಿರೀಕ್ಷಿತ ಮಲ್ಟಿಸ್ಟ್ರಾಡಾ ವಿ4 ಅಡ್ವೆಂಚರ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು ಈ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ವಿ4 ಮತ್ತು ವಿ4 ಎಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಅಡ್ವೆಂಚರ್ ಟೂರರ್ ಬೈಕಿನಲ್ಲಿ 1,158 ಸಿಸಿ, ವಿ-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅಳಾವಡಿಸಲಾಗಿದೆ

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಈ ಎಂಜಿನ್ 10,500 ಆರ್‌ಪಿಎಂನಲ್ಲಿ 167 ಬಿಹೆಚ್‌ಪಿ ಪವರ್ ಮತ್ತು 8,750 ಆರ್‌ಪಿಎಂನಲ್ಲಿ 125 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಡುಕಾಟಿ ಕ್ವಿಕ್ ಶಿಫ್ಟ್ (ಡಿಕ್ಯೂಎಸ್) ಅಪ್ & ಡೌನ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಬೈಕ್ ಅಲ್ಯೂಮಿನಿಯಂ ಫ್ರೇಮ್ ಎರಡು ಬದಿಯ ಸ್ವಿಂಗ್ ಆರ್ಮ್ ಹೊಂದಿದೆ.

ಭಾರತದಲ್ಲಿ ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕ್ ಬಿಡುಗಡೆ: ಬೆಲೆ ರೂ.18 ಲಕ್ಷ

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೊಸ ಡುಕಾಟಿ ಎಕ್ಸ್‌ಡಿಯಾವೆಲ್ ಬೈಕಿನ ಮುಂಭಾಗದಲ್ಲಿ 320 ಎಂಎಂ ಡ್ಯುಯಲ್ ಡಿಸ್ಕ್‌ಗಳು ಬ್ರೆಂಬೊ ಎಂ 50 ಫೋರ್-ಪಿಸ್ಟನ್ ಕ್ಯಾಲಿಪರ್ಸ್ (ರೇಡಿಯಲ್-ಮೌಂಟೆಡ್) ಮತ್ತು ಹಿಂಭಾಗದಲ್ಲಿ 265 ಎಂಎಂ ಡಿಸ್ಕ್, ಬ್ರೆಂಬೋ ಟೂ-ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್ ಅನ್ನು ಹೊಂದಿದೆ. ಈ ಎಕ್ಸ್‌ಡಿಯಾವೆಲ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟ್ರಯಂಫ್ ರಾಕೆಟ್ 3 ಮತ್ತು ಹಾರ್ಲೆ ಡೇವಿಡ್ಸನ್ ಫ್ಯಾಟ್ ಬಾಯ್ 114 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಡುಕಾಟಿ ducati
English summary
New 2021 ducati xdiavel launched in india price varaints details
Story first published: Thursday, August 12, 2021, 18:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X