ಶೀಘ್ರದಲ್ಲೇ ಬಿಡುಗಡೆಯಾಗಲಿವೆ 2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು

ಅಮೆರಿಕ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಇಂಡಿಯನ್ ಮೋಟಾರ್‌ಸೈಕಲ್ ಶೀಘ್ರದಲ್ಲೇ ತಮ್ಮ ಹೊಸ ಸುಧಾರಿತ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಬೈಕ್‌ಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗ್ರಾಹಕರಿಗೆ ಕಸ್ಟಮೈಸ್ ಮಾಡಬಹುದಾದ ಆಕ್ಸೆಸರೀಸ್‌ಗಳ ಆಯ್ಕೆಗಳನ್ನು ನೀಡಲಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ 2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು

2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಆಟೋಕಾರ್ ಇಂಡಿಯಾ ವರದಿ ಮಾಡಿದೆ. ಎಫ್‌ಟಿಆರ್ ಮಾದರಿಯ ಸರಣಿಯನ್ನು ಕೂಡ ಬಿಎಸ್-6 ಮಾಲಿನ್ಯ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಬಹುದು. 2022ರ ಇಂಡಿಯನ್ ಚೀಫ್ ಸರಣಿಯಲ್ಲಿನ ಮೂರು ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಲಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ 2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು

ಈ ಮೂರು ಮಾದರಿಗಳು ದೊಡ್ಡ ಥಂಡರ್ ಸ್ಟ್ರೋಕ್ 116 ಮೋಟರ್ ಗಳನ್ನು ಒಳಗೊಂಡಿವೆ. ಈ ಮೂರು ಮಾದರಿಗಳು ಇಂಡಿಯನ್ ಚೀಫ್ ಡಾರ್ಕ್ ಹಾರ್ಸ್, ಚೀಫ್ ಬಾಬರ್ ಡಾರ್ಕ್ ಹಾರ್ಸ್ ಹಾಗೂ ಸೂಪರ್ ಚೀಫ್ ಲಿಮಿಟೆಡ್ ಬೈಕುಗಳಾಗಿವೆ ಎಂದು ಇಂಡಿಯನ್ ಮೋಟಾರ್‌ಸೈಕಲ್ ಕಂಪನಿ ತಿಳಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿವೆ 2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು

ಇಂಡಿಯನ್ ಚೀಫ್ ಸರಣಿಯ ಹೊಸ ಬೈಕ್‌ಗಳ ಆರಂಭಿಕ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ.20,75,922ಗಳಾಗಿದೆ. ಹೊಸ ಬೈಕುಗಳಲ್ಲಿ ವಿಭಿನ್ನ ವಿನ್ಯಾಸ, ಫೀಚರ್'ಗಳ ಜೊತೆಗೆ ಹಲವಾರು ತಾಂತ್ರಿಕ ಅಪ್‍ಡೇಟ್‌ಗಳನ್ನು ನೀಡಲಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ 2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು

ಹೊಸ ಬೈಕುಗಳ ಜೊತೆಗೆ ಒರಿಜಿನಲ್ ಬಿಡಿಭಾಗಗಳನ್ನು ಸಹ ನಿಡುವುದರಿಂದ ಗ್ರಾಹಕರು ವಿಭಿನ್ನ ಸವಾರಿ ಅನುಭವವನ್ನು ಪಡೆಯಬಹುದಾಗಿದೆ. ಇಂಡಿಯನ್ ಚೀಫ್ ಸರಣಿಯ ಹೊಸ ಬೈಕ್ 64 ಇಂಚಿನ ಶಾರ್ಟ್ ವ್ಹೀಲ್ ಬೇಸ್ ಹಾಗೂ 26 ಇಂಚಿನ ಎತ್ತರದ ಸೀಟ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿವೆ 2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು

ಚೀಫ್ ಸರಣಿಯಲ್ಲಿರುವ ಬೈಕ್ 46 ಎಂಎಂ ಫ್ರಂಟ್ ಅಡ್ಜಸ್ಟಬಲ್ ಫೋರ್ಕ್ ಹೊಂದಿದೆ. ಈ ಬೈಕಿನಲ್ಲಿ 28.5 ಡಿಗ್ರಿ ಲೀನ್ ಆಂಗಲ್ ನೀಡಲಾಗಿದೆ. ಸವಾರನ ಅನುಕೂಲಕ್ಕಾಗಿ ಈ ಬೈಕಿನಲ್ಲಿ ವಿವಿಧ ಕಸ್ಟಮೈಸ್ ಆಯ್ಕೆಗಳನ್ನು ಕೂಡ ನೀಡಲಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ 2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು

ಹೊಸ ಇಂಡಿಯನ್ ಚೀಫ್ ಬೈಕ್‌ಗಳು ಹಳೆಯ ಮಾದರಿಯಲ್ಲಿರುವಂತಹ ಸಾಂಪ್ರದಾಯಿಕ ವಿ-ಟ್ವಿನ್ ಎಂಜಿನ್‌ ಹೊಂದಿದೆ. ಈ ಬೈಕ್ ಪವರ್ ಉತ್ಪಾದನೆ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದ ದೇಶಿಯ ಮಾರುಕಟ್ಟೆಯಲ್ಲಿರುವ ಇತರ ಕಂಪನಿಯ ಬೈಕ್‌ಗಳಿಗೆ ಕಠಿಣ ಪೈಪೋಟಿ ನೀಡಲಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಶೀಘ್ರದಲ್ಲೇ ಬಿಡುಗಡೆಯಾಗಲಿವೆ 2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು

ಈ ಐಕಾನಿಕ್ ಬೈಕ್‌ಗಳು ಕ್ರೂಸ್ ಕಂಟ್ರೋಲ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್'ನಂತಹ ಫೀಚರ್ಸ್ ಗಳನ್ನು ಹೊಂದಿರಲಿವೆ. ಭಾರತದಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಕಂಪನಿಗೆ ಬೈಕ್‌ಗಳಿಗೆ ಇಂಗ್ಲೆಂಡ್ ಮೂಲದ ಟ್ರಯಂಫ್ ಕಂಪನಿಯ ಬೈಕ್‌ಗಳು ನೇರ ಪ್ರತಿಸ್ಪರ್ಧಿಗಳಾಗಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ 2022ರ ಇಂಡಿಯನ್ ಚೀಫ್ ಸೀರಿಸ್ ಬೈಕ್‌ಗಳು

ಚೀಫ್‌ ಸರಣಿಯ ಬೈಕ್‌ಗಳು ಬಿಡುಗಡೆಯಾದ ನಂತರ ಅಮೆರಿಕಾ ಮೂಲದ ಇಂಡಿಯನ್ ಮೋಟಾರ್‌ಸೈಕಲ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ಇತರ ಕ್ರೂಸರ್ ಬೈಕ್ ಕಂಪನಿಗಳಿಗೆ ಯಾವ ರೀತಿಯಲ್ಲಿ ಪೈಪೋಟಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
New 2022 Indian Chief Line-Up Expected To Launch. Read In Kananda.
Story first published: Monday, May 31, 2021, 21:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X