ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ Aprilia India ತನ್ನ ಬಹುನಿರೀಕ್ಷಿತ RS 660 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ Aprilia RS 660 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.39 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿರುವ ಈ ಹೊಸ Aprilia RS 660 ಈಗಾಗಲೇ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಈ ಮಿಡ್ ವೈಟ್ ಸೂಪರ್‌ಸ್ಪೋರ್ಟ್ ಬೈಕ್ ಸಿಬಿಯು ಆಗಿ ಭಾರತಕ್ಕೆ ಬರುತ್ತದೆ ಮತ್ತು ಇದನ್ನು ಮೂರು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದು ಆಸಿಡ್ ಗೋಲ್ಡ್ಮ್ ಅಪೆಕ್ಸ್ ಬ್ಲ್ಯಾಕ್ ಮತ್ತು ಲಾವಾ ರೆಡ್ ಆಗಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.ಈ ಹೊಸ Aprilia RS 660 ಬೈಕಿನ ಖರೀದಿಗಾಗಿ ಫೆಬ್ರವರಿ ತಿಂಗಳಿನಂದಲೇ ಪ್ರಾರಂಭವಾಗಿತ್ತು, ಈ ಮಿಡ್ ವೈಟ್ ಸೂಪರ್‌ಸ್ಪೋರ್ಟ್ ಬೈಕ್ ವಿತರಣೆಯು ಶೀಘ್ರದಲ್ಲೇ ಭಾರತದಾದ್ಯಂತ ಪ್ರಾರಂಭವಾಗುತ್ತವೆ.

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಈ ಹೊಸ Aprilia RS 660 ಬೈಕಿನಲ್ಲಿ 60 ಲಿಕ್ವಿಡ್ ಕೂಲ್ಡ್, ಡಿಒಎಚ್‌ಸಿ, ಪ್ಯಾರಲಲ್ ಟ್ವಿನ್ ಸಿಲಿಂಡರ್ 659 ಸಿಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಈ ಹೊಸ ಮಿಡ್ ವೈಟ್ ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ದೊಡ್ಡ ಒಡಹುಟ್ಟಿದವರಾದ ಆರ್‌ಎಸ್‌ವಿ 4 ನಿಂದ ಅದರ ವಿನ್ಯಾಸ ಸ್ಫೂರ್ತಿಯನ್ನು ಎರವಲು ಪಡೆಯುತ್ತದೆ. ಈ ಬೈಕ್ ಅಗ್ರೇಸಿವ್ ಆಗಿ ಕಾಣುವ ಸಂಪೂರ್ಣ ಫೇರಿಂಗ್ ಮತ್ತು ಆರ್‌ಎಸ್‌ವಿ 4 ನಲ್ಲಿ ಕಾಣುವಂತೆ ಏರೋ ವಿಂಗ್‌ಲೆಟ್‌ಗಳನ್ನು ಹೊಂದಿದೆ. ರೇಸ್-ಸ್ಪೆಕ್ ಶೈಲಿಯ ವಿಂಗ್‌ಲೆಟ್‌ಗಳು ಹೆಚ್ಚಿನ ವೇಗದಲ್ಲಿ ಏರೋಡೈನಾಮಿಕ್ ಸ್ಥಿರತೆಯನ್ನು ನೀಡುತ್ತದೆ.

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

RS 660 ಬ್ರಾಂಡ್‌ನ ಮೂರು ಭಾಗಗಳ ಹೆಡ್‌ಲೈಟ್ ಕ್ಲಸ್ಟರ್ ಅನ್ನು ಸಹ ಒಳಗೊಂಡಿದೆ. ಇನ್ನು ಈ ಹೊಸ ಬೈಕಿನಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ವಿಂಡ್‌ಸ್ಕ್ರೀನ್, ಅಂಡರ್‌ಬೆಲ್ಲಿ ಎಕ್ಸಾಸ್ಟ್, ರೇಸ್-ಸ್ಪೆಕ್ ಹ್ಯಾಂಡಲ್‌ಬಾರ್ ಮತ್ತು ಈ ಬೈಕಿನಲ್ಲಿ 15-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ,

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಈ ಹೊಸ ಬೈಕಿನಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಆರು-ಆಕ್ಸಿಸ್ (ಐಎಂಯು) ಯುನಿಟ್ ಅನ್ನು ಹೊಂದಿದೆ, ಇದು 5 ರೈಡ್ ಮೋಡ್‌ಗಳನ್ನು ಒಳಗೊಂಡಿದೆ, ಅದರಲ್ಲಿ ಮೂರು ರೋಡ್ ಮೋಡ್ ಗಳು ಮತ್ತು ಎರಡು ಟ್ರ್ಯಾಕ್ ಬಳಕೆಗಾಗಿ ಮೀಸಲಾಗಿವೆ.

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಈ ಮಿಡ್ ವೈಟ್ ಸೂಪರ್‌ಸ್ಪೋರ್ಟ್ ಬೈಕ್ ಟ್ರಾಕ್ಷನ್ ಕಂಟ್ರೋಲ್ (ATC), ಕ್ರೂಸ್ ಕಂಟ್ರೋಲ್, ಎಂಜಿನ್ ಬ್ರೇಕ್, ಎಂಜಿನ್ ಮ್ಯಾಪ್, ಎಬಿಎಸ್ ಕಾರ್ನರ್ ಫಂಕ್ಷನ್ ಜೊತೆಗೆ 5-ಇಂಚಿನ TFT ಸ್ಪ್ಲಿಟ್ ಅನ್ನು ಒಳಗೊಂಡಿದೆ. ಸ್ಕ್ರೀನ್ ಲೇಔಟ್, ಇದು ಬೈಕಿನ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಂಪನಿಯು ಆಯ್ಕೆಯಾಗಿ Aprilia MIA ಮಲ್ಟಿಮೀಡಿಯಾ ಪ್ಲಾಟ್‌ಫಾರ್ಮ್ ಅನ್ನು ಸಂಪರ್ಕಿತ ತಂತ್ರಜ್ಞಾನಕ್ಕಾಗಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ನೀಡುತ್ತಿದೆ.

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಹೊಸ Aprilia RS 660 ಬೈಕಿನ ಸಸ್ಪೆಂಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಕಯಾಬಾದ ಯುಎಸ್ಡಿ ಫೋರ್ಕ್ಸ್ ಯುನಿಟ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಈ ಎರಡು ಯುನಿಟ್ ಗಳು ಕಂಪ್ರೆಷನ್, ರೀಬೌಂಡ್ ಮತ್ತು ಪ್ರಿಲೋಡ್‌ಗಾಗಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾಗಿದೆ.

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಇನ್ನು ಪ್ರಮುಖವಾಗಿ ಈ ಹೊಸ ಪರ್ಫಾಮೆನ್ಸ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಮುಂಭಾಗದಲ್ಲಿ 320 ಎಂಎಂ ಡ್ಯುಯಲ್-ಡಿಸ್ಕ್ ಬ್ರೇಕ್ ಬ್ರೋಮೊ ಫೋರ್-ಪಾಟ್ ರೇಡಿಯಲ್ ಕ್ಯಾಲಿಪರ್ಸ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಬ್ರೆಂಬೊ ಕ್ಯಾಲಿಪರ್ಸ್ ನೀಡಲಾಗಿದೆ. ಈ Aprilia RS 660 ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಇನ್ನು ಈ Aprilia RS 660 ಬೈಕಿನಲ್ಲಿ ಟೈರುಗಳು, ಮುಂಭಾಗ: 17-ಇಂಚಿನ ಅಲಾಯ್ ವ್ಹೀಲ್ ಗಳ ಜೊತೆ 120/70 ವಿಭಾಗ ಟೈರ್ ಹಿಂಭಾಗದಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳ ಜೊತೆ 180/55 ವಿಭಾಗದ ಟೈರ್ ಹೊಂದಿದೆ.

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಇನ್ನು ಹೊಸ Aprilia RS 660 ಬೈಕ್ ಭಾರತದಲ್ಲಿ ಬಹು ನಿರೀಕ್ಷಿತ ಮಿಡಲ್ ವೇಟ್ ಸೂಪರ್ ಸ್ಪೋರ್ಟ್ ಬೈಕ್ ಆಗಿದೆ. ಈ ಬೈಕ್ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಫೀಚರ್ಸ್ ಜೊತೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಈ ಬೈಕ್ 185 ಕೆಜಿ (ಕರ್ಬ್).ತೂಕವನ್ನು ಹೊಂದಿದೆ. ಈ ಬಹುನಿರೀಕ್ಷಿತ ಮಿಡಲ್‌ವೇಟ್ ಬೈಕ್ ಭಾರತದ ಡೀಲರ್‌ಶಿಪ್‌ಗಳ ಬಳಿ ತಲುಪಲು ಪ್ರಾರಂಭವಾಗಿದೆ. ಬೆಂಗಳೂರಿನ ಬ್ರ್ಯಾಂಡ್‌ನ ಡೀಲರ್‌ಶಿಪ್‌ ತಲುಪಿದ ಚಿತ್ರಗಳು ಬಹಿರಂಗವಾಗಿದೆ.

ಭಾರತದಲ್ಲಿ ಹೊಸ Aprilia RS 660 ಸೂಪರ್‌ಸ್ಪೋರ್ಟ್ ಬೈಕ್ ಬಿಡುಗಡೆ

ಹೊಸ Aprilia RS 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಪರ್ಫಾಮೆನ್ಸ್ ಪ್ರಿಯರನ್ನು ಮತ್ತು ಯುವ ಗ್ರಾಹಕರನ್ನು ಸೆಳೆಯಬಹುದು. ಇನ್ನು ಈ ಹೊಸ Aprilia RS 660 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ CBR 650R, ಕವಾಸಕಿ ನಿಂಜಾ 650 ಮತ್ತು ನಿಂಜಾ ZX-6R ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New aprilia rs 660 launched in india price engine design features details
Story first published: Thursday, September 2, 2021, 14:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X