ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಎಪ್ರಿಲಿಯಾ ಕಂಪನಿಯು ತನ್ನ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಇದೀಗ ಎಪ್ರಿಲಿಯಾ ತನ್ನ ಈ ಹೊಸ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಪ್ರಿ-ಬುಕ್ಕಿಂಗ್ ಅನ್ನು ಆರಂಭಿಸಿದೆ. ಈ ಹೊಸ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್ ಅಥವಾ ದೇಶಾದ್ಯಂತದ ಇರುವ ಕಂಪನಿಯ ಡೀಲರ್ ಬಳಿ ತೆರಳಿ ಟೋಕನ್ ಮೊತ್ತ ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಭಾರತದಲ್ಲಿ ಈಗಗಾಲೇ ಬಿಡುಗಡೆಯಾಗಬೇಕಿತ್ತು. ಆದರೆ ಕರೋನಾ ಸೋಂಕಿನಿಂದ ಈ ಸ್ಕೂಟರ್ ಬಿಡುಗಡೆ ಮಾಡುವುದನ್ನು ಎಪ್ರಿಲಿಯಾ ತಡಮಾಡಿದೆ. ಇನ್ನು ಪ್ರಿ-ಬುಕ್ಕಿಂಗ್ ಪ್ರಾರಂಭವಾಗೊರುವುದರಿಂದ ಈ ಸ್ಕೂಟರ್ ಮುಂದಿನ ವಾರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷಿಯಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ವಿನ್ಯಾಸವು ಅದರ ಹಿರಿಯ ಸಹೋದರ ಎಸ್‌ಎಕ್ಸ್‌ಆರ್ 160 ನಂತಯೇ ಇದೆ. ಅಲ್ಲದೇ ಫೀಚರ್ ಗಳನ್ನು ಈ ಎರಡು ಸ್ಖೂಟರ್ ಗಳು ಪರಸ್ಪರ ಹಂಚಿಕೊಂಡಿದೆ.

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಹೊಸ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಮುಂಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಟ್ರಿಪಲ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಇದರೊಂದಿಗೆ ಮುಂಭಾಗದ ಏಪ್ರನ್, ಬಣ್ಣದ ವಿಸರ್, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಇನ್ನು ಈ ಮ್ಯಾಕ್ಸಿ-ಸ್ಕೂಟರ್ ಮಸ್ಕಲರ್ ಲುಕ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಸ್ಕೂಟರ್‌ನಲ್ಲಿ ಸಂಪೂರ್ಣವಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ರೈಡರ್ ಮತ್ತು ಪಿಲಿಯನ್‌ಗಾಗಿ ವಿಶಾಲ ಸೀಟುಗಳು, ಮುಂಭಾಗದ ಏಪ್ರನ್‌ನ ಎರಡೂ ಬದಿಯಲ್ಲಿ ಗ್ಲೋವ್‌ಬಾಕ್ಸ್, ಒಂದು ಬದಿಯಲ್ಲಿ ಯುಎಸ್‌ಬಿ ಚಾರ್ಜರ್, ಪ್ರಕಾಶದೊಂದಿಗೆ ದೊಡ್ಡ ಅಂಡರ್-ಸೀಟ್ ಸ್ಟೋರೆಂಜ್ ಸ್ಪೆಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದೆ.

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಹೊಸ ಮ್ಯಾಕ್ಸಿ-ಸ್ಕೂಟರ್‌ನಲ್ಲಿ 125 ಸಿಸಿ ಸಿಂಗಲ್-ಸಿಲಿಂಡರ್ ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ,600 ಆರ್‌ಪಿಎಂನಲ್ಲಿ 9.3 ಬಿಹೆಚ್‌ಪಿ ಮತ್ತು 6250 ಆರ್‌ಪಿಎಂನಲ್ಲಿ ಟಾರ್ಕ್ 9.2 ಎನ್ಎಂ ಉತ್ಪಾದಿಸುತ್ತದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಹೊಸ ಮ್ಯಾಕ್ಸಿ-ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 140 ಎಂಎಂ ಡ್ರಮ್ ಬ್ರೇಕ್ ಮೂಲಕ ಹೆಚ್ಚುವರಿ ಸುರಕ್ಷತೆಗಾಗಿ ಸಂಯೋಜಿತ ಬ್ರೇಕಿಂಗ್ ಸಿಸ್ಟಂ ಅನ್ನು ಒಳಗೊಂಡಿದೆ.

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಮ್ಯಾಕ್ಸಿ-ಸ್ಕೂಟರ್ ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ 12 ಇಂಚಿನ ಅಲಾಯ್ ವ್ಹೀಲ್ ಶಾಡ್ ಅನ್ನು ಹೊಂದಿರುತ್ತದೆ. ಈ ಸ್ಕೂಟರ್ 7 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿರುತ್ತದೆ,

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಈ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಸ್ಕೂಟರ್ ಮ್ಯಾಟ್ ಬ್ಲ್ಯಾಕ್, ಗ್ಲೋಸಿ ವೈಟ್, ಮ್ಯಾಟ್ ಬ್ಲೂ ಮತ್ತು ಗ್ಲೋಸಿ ರೆಡ್ ಎಂಬ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇನ್ನು ಈ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮಾದರಿ ಬಿಡುಗಡೆಯಾದ ಬಳಿಕ ಸುಜುಕಿ ಬರ್ಗ್‌ಮನ್ 125 ಸ್ಕೂಟರ್‌ಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Aprilia SXR 125 Pre-Bookings Begin. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X