ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ ಮುಂದಿನ ತಲೆಮಾರಿನ ಪಲ್ಸರ್ ಸರಣಿಯ ಮಾದರಿಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ಮತ್ತು ವಿಸ್ತರಿಸುವುದರಲ್ಲಿ ನಿರತರಾಗಿದ್ದಾರೆ. ಇದರ ಭಾಗವಾಗಿ ಹೊಸ ಪಲ್ಸರ್ 250 ಬೈಕ್ ಪುಣೆಯಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250 ಬೈಕ್

ಈ ಹೊಸ ಬಜಾಜ್ ಪಲ್ಸರ್ 250 ಬೈಕ್ ಸಂಫೂರ್ಣವಾಗಿ ಮಾರೆಮಾಚಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಪಲ್ಸರ್ 250 ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವುವ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಹೊಸ ಪೀಳಿಗೆಯ ಪಲ್ಸರ್ ಬೈಕ್‌ಗಳಿಗಾಗಿ ಬಜಾಜ್ ಆಟೋ ಎಲ್ಲ ಹೊಸ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ವರದಿಯಾಗಿದೆ. ಈ ಹೊಸ ಬೈಕ್ 200ಸಿಸಿ ಎನ್ಎಸ್ ಮತ್ತು ಆರ್‍ಎಸ್ ಗಿಂತ ದೊಡ್ಡದಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250 ಬೈಕ್

ಈ ಹೊಸ ಪಲ್ಸರ್ 250 ಆಲ್-ಎಲ್ಇಡಿ ಲೈಟಿಂಗ್ ಸಿಸ್ಟಂ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇನ್ನು ಹೊಸ ಬಜಾಜ್ ಪಲ್ಸರ್ 250 ಹೊಚ್ಚ ಹೊಸ ಎಂಜಿನ್‌ನಿಂದ ಚಾಲಿತವಾಗಲಿದೆ ಎಂದು ವರದಿಯಾಗಿದೆ.ಹೊಸ ಎಂಜಿನ್ ಆಯಿಲ್ ಕೂಲ್ಡ್ ಮೋಟಾರ್ ಯುನಿಟ್ ಆಗಿರಬಹುದು.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250 ಬೈಕ್

ಇನ್ನು ಈ ಹೊಸ ಪಲ್ಸರ್ 250 ಬೈಕನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಪುಣೆ ಮೂಲದ ತಯಾರಕರು ಪಲ್ಸರ್ 220ಎಫ್ ಮಾದರಿಯನ್ನು ಅನುಸರಿಸುವ ಸಾಧ್ಯತೆಯಿದೆ, ಇದು ಪಲ್ಸರ್ ಎನ್ಎಸ್ 200 ಗಿಂತ ಗಮನಾರ್ಹವಾಗಿ ಹೆಚ್ಚು ಮಾರಾಟವಾಗುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250 ಬೈಕ್

ಹೊಸ ಬೈಕಿನ ಎಂಜಿನ್ 24 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಧ್ಯತೆಯಿದೆ ಮತ್ತು ಪಲ್ಸರ್ ಎನ್‌ಎಸ್ 200 ಗಿಂತ ಹೆಚ್ಚಿನ ಟಾರ್ಕ್ ನೀಡುತ್ತದೆ. ಎಂಜಿನ್ ಅನ್ನು ಹೊಸದಾಗಿ ಅಭಿವೃದ್ಧಿಪಡಿಸಿದ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250 ಬೈಕ್

ಕೆಲವು ವರದಿಗಳ ಪ್ರಕಾರ, ಮುಂಬರುವ ಬಜಾಜ್ ಪಲ್ಸರ್ 250 ಕೆಟಿಎಂ ಡ್ಯೂಕ್ 250 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. 250 ಡ್ಯೂಕ್‌ನ ಎಂಜಿನ್‌ನ ಸ್ವಲ್ಪ ಟ್ಯೂನ್ ಮಾಡಲಾದ ಎಂಜಿನ್ ಅನ್ನು ಹೊಸ ಪಲ್ಸರ್ 250 ಬೈಕಿಗೆ ನೀಡುವ ಸಾಧ್ಯತೆಗಳಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250 ಬೈಕ್

ಕೆಟಿಎಂ ಡ್ಯೂಕ್ 250 ಬೈಕಿನಲ್ಲಿ 248.8 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 30 ಬಿಹೆಚ್‍ಪಿ ಪವರ್ ಮತ್ತು 24 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250 ಬೈಕ್

ಆದರೆ ಹೆಚ್ಚಿನ ಇಂಧನ ದಕ್ಷತೆಗಾಗಿ ಪಲ್ಸರ್ 250 ಎಂಜಿನ್ ಅನ್ನು ಡಿ-ಟ್ಯೂನ್ ಮಾಡಲಾಗುತ್ತದೆ. ಇನ್ನು ಈ ಬೈಕಿನಲ್ಲಿ ಎಬಿಎಸ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಆದರೆ ಸ್ಲಿಪ್ಪರ್ ಕ್ಲಚ್ ಸಹ ಪ್ರಸ್ತಾಪದಲ್ಲಿರಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಬಜಾಜ್ ಪಲ್ಸರ್ 250 ಬೈಕ್

ಇನ್ನು ಹೊಸ ಬಜಾಜ್ ಪಲ್ಸರ್ 250 ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ನೀಡಿದ್ದಾರೆ. ಬಜಾಜ್ ಪಲ್ಸರ್ 250 ದೀಪಾವಳಿಯ ಹಬ್ಬದ ಅವಧಿಯ ಮೊದಲು ಬಿಡುಗಡೆಯಾಗುವ ಸಾಧ್ಯತೆಗಳಿದೆ.

Most Read Articles

Kannada
English summary
Bajaj Pulsar 250 First Spy Images. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X