ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಟಿಆರ್‌ಕೆ 502 ಅಡ್ವೆಂಚರ್ ಬೈಕ್ ಅನ್ನು ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿತ್ತು. ಇದರ ನಂತರ ಬೆನೆಲ್ಲಿ ಕಂಪನಿಯು ಭಾರತದಲ್ಲಿ ಟಿಆರ್‌ಕೆ 502ಎಕ್ಸ್ ಬೈಕ್ ಅನ್ನು ಬಿಡುಗಡೆಗೊಳಿಸಲಾಯಿತು.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಇದೀಗ ಬೆನೆಲ್ಲಿ ಕಂಪನಿಯು ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಬೈಕ್ ಅನ್ನು ಬಿಡುಗಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಮತ್ತು ಬಹುಶಃ ಭಾರತದಲ್ಲಿ ಇಂಪೀರಿಯಲ್ 400 ಗಿಂತ ಹೆಚ್ಚು ಕೈಗೆಟುಕುವ ಬೈಕ್ ಆಗಲಿದೆ, ಸಧ್ಯ ಇಂಪೀರಿಯಲ್ 400 ಬೆನೆಲ್ಲಿ ಕಂಪನಿಯ ದೇಶದಲ್ಲಿ ಅವರ ಅತ್ಯಂತ ಕೈಗೆಟುಕುವ ಮತ್ತು ಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. 2021ರ ಆರಂಭದಲ್ಲಿ, ಬೆನೆಲ್ಲಿ 250 ಸಿಸಿ ನಿಂದ 600 ಸಿಸಿ ವ್ಯಾಪ್ತಿಯಲ್ಲಿ 7 ಹೊಸ ಬೈಕ್ ಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಪ್ರಕಟಿಸಿತ್ತು ಈ 7 ರಲ್ಲಿ ಬೆನೆಲ್ಲಿ ಈಗಾಗಲೇ ಅವುಗಳಲ್ಲಿ 4 ಅನ್ನು 2021 ರಲ್ಲಿ ಬಿಡುಗಡೆ ಮಾಡಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಬೆನೆಲ್ಲಿ ಕಂಪನಿಯು ಶೀಘ್ರದಲ್ಲೇ ಈ ಯೋಜನೆಯಡಿಯಲ್ಲಿ ತಮ್ಮ 5ನೇ ಬೈಕ್ ಅನ್ನು.ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಬೆನೆಲ್ಲಿ ಇಂಡಿಯಾ ತನ್ನ ಮುಂಬರುವ ಬೈಕ್ ಬೆನೆಲ್ಲಿ ಟಿಆರ್‌ಕೆ 251 ಎಂಟ್ರಿ-ಲೆವೆಲ್ ಅಡ್ವೆಂಚರ್ ಟೂರರ್ ಆಗಿದೆ. ಇದೀಗ ಬೆನೆಲ್ಲಿ ಕಂಪನಿಯು ಈ ಹೊಸ ಟಿಆರ್‌ಕೆ 251 ಅಡ್ವೆಂಚರ್ ಬೈಕ್ ಖರೀದಿಗಾಗಿ ಪ್ರಿ-ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಈ ಹೊಸ ಎಂಟ್ರಿ-ಲೆವೆಲ್ ಅಡ್ವೆಂಚರ್ ಟೂರರ್ ಬೈಕ್ ಖರೀದಿಸಲು ಬಯಸುವ ಗ್ರಾಹಕರ್ ಟೋಕನ್ ಮೊತ್ತ ರೂ.6,000 ಪಾವತಿಸಿ ಬ್ರ್ಯಾಂಡ್‌ನ ಆನ್‌ಲೈನ್ ಪೋರ್ಟಲ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು. ಬೆನೆಲ್ಲಿ ಟಿಆರ್‌ಕೆ 251 ಅಡ್ವೆಂಚರ್ 250 ಸಿಸಿ ಬೈಕ್ ನಿಂದ TRK 502 ನಿಂದ ಸ್ಫೂರ್ತಿ ಪಡೆದಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಇದನ್ನು ಸ್ಟೀಲ್ ಟ್ಯೂಬ್ ಟ್ರೆಲ್ಲಿಸ್ ಫ್ರೇಮ್‌ನಲ್ಲಿ ನಿರ್ಮಿಸಲಾಗಿದೆ. ಈ ಬೆನೆಲ್ಲಿ ಟಿಆರ್‌ಕೆ 251 ಬೈಕಿನಲ್ಲಿ 17 ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು 110/70 ಮುಂಭಾಗ ಮತ್ತು 150/60 ಹಿಂಭಾಗದ ಟೈರ್‌ಗಳೊಂದಿಗೆ ಹೊಂದಿದೆ. ಈ ಹೊಸ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41 ಎಂಎಂ ಅಪ್ ಸೈಡ್ ಡೌನ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ 51 ಎಂಎಂ ಮೊನೊಶಾಕ್ ಅನ್ನು ಪಡೆಯುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 280 ಎಂಎಂ ಸಿಂಗಲ್ ಫ್ಲೋಟಿಂಗ್ ಡಿಸ್ಕ್ ಮತ್ತು 4 ಪಿಸ್ಟನ್ ಕ್ಯಾಲಿಪರ್ ಜೊತೆಗೆ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಸಿಂಗಲ್ ಪಿಸ್ಟನ್ ಕ್ಯಾಲಿಪರ್ ಅನ್ನು ಹೊಂದಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಹೊಸ ಎಂಟ್ರಿ-ಲೆವೆಲ್ ಅಡ್ವೆಂಚರ್ ಟೂರರ್ ಬೈಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ವಿಶಿಷ್ಟವಾದ ಮುಂಭಾಗದ ಮಡ್‌ಗಾರ್ಡ್ ಮತ್ತು ಎತ್ತರದ ವಿಂಡ್‌ಶೀಲ್ಡ್ ಅನ್ನು ಹೆಚ್ಚಿನ ವೇಗದಲ್ಲಿಯೂ ಸಹ ದೂರದವರೆಗೆ ಸವಾರರಿಗೆ ಉತ್ತಮ ರಕ್ಷಣೆ ನೀಡುತ್ತದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ವೈಡ್ ಹ್ಯಾಂಡಲ್‌ಬಾರ್‌ಗಳು ಉತ್ತಮ ಕಂಟ್ರೋಲ್ ಗಳನ್ನು ನೀಡುತ್ತವೆ ಆದರೆ ಸಂಪೂರ್ಣ ಡಿಜಿಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್ ಅದರ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಸ್ಪ್ಲಿಟ್ ಪಿಲಿಯನ್ ರೈಡರ್ ಸೀಟ್, ಲಾಂಗ್ ಗ್ರಾಬ್ ಹ್ಯಾಂಡಲ್‌ಗಳು ಮತ್ತು ಕಾಂಪ್ಯಾಕ್ಟ್ ಎಲ್ಇಡಿ ಟೈಲ್ ಲ್ಯಾಂಪ್ ಕೂಡ ಈ ಆಫ್ ರೋಡರ್‌ನ ವೈಶಿಷ್ಟ್ಯಗಳ ಭಾಗವಾಗಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಹೊಸ ಬೆನೆಲ್ಲಿ ಟಿಆರ್‌ಕೆ 251 ಬೈಕಿನಲ್ಲಿ 249 ಸಿಸಿ ಲಿಕ್ವಿಡ್ ಕೂಲ್ಡ್, ಫೋರ್ ಸ್ಟ್ರೋಕ್ ಮೋಟಾರ್‌ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,250 ಆರ್‌ಪಿಎಂನಲ್ಲಿ 26 ಬಿಹೆಚ್‍ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 21 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

18-ಲೀಟರ್ ಸಾಮರ್ಥ್ಯದ ದೊಡ್ಡ ಇಂಧನ ಟ್ಯಾಂಕ್ ಇಂಧನ ಕೇಂದ್ರಗಳಲ್ಲಿ ಕಡಿಮೆ ನಿಲ್ದಾಣಗಳನ್ನು ಖಚಿತಪಡಿಸಿಕೊಳ್ಳಬೇಕು. ವಿಶಾಲವಾದ ಮತ್ತು ಎತ್ತರದ ಹ್ಯಾಂಡಲ್‌ಬಾರ್, ಬಾಹ್ಯರೇಖೆಯ ಆಸನಗಳು ಮತ್ತು ಕೇಂದ್ರೀಕೃತ ಫುಟ್‌ಪೆಗ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬಳಕೆದಾರರು ಸೂಕ್ತವಾದ ಸವಾರಿ ಸೌಕರ್ಯವನ್ನು ನಿರೀಕ್ಷಿಸಬಹುದು. ಭಾರತದಲ್ಲಿ 3 ಬಣ್ಣಗಳನ್ನು ನೀಡಲಾಗುತ್ತದೆ - ಹೊಳಪು ಬಿಳಿ, ಹೊಳಪು ಕಪ್ಪು ಮತ್ತು ಹೊಳಪು ಬೂದು.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಅಡ್ವೆಂಚರ್ ಟೂರರ್ ಬೈಕಿನಲ್ಲಿ 18-ಲೀಟರ್ ಸಾಮರ್ಥ್ಯದ ದೊಡ್ಡ ಇಂಧನ ಟ್ಯಾಂಕ್ ಅನ್ನು ಹೊಂದಿರಬಹುದು. ಇನ್ನು ಈ ಹೊಸ ಬೈಕ್ ಗ್ಲೋಸಿ ವೈಟ್, ಗ್ಲೋಸಿ ಬ್ಲ್ಯಾಕ್ ಮತ್ತು ಗ್ಲೋಸಿ ಗ್ರೇ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಇನ್ನು ಈ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ವೈಟ್ ಮತ್ತು ಅರೇಂಜ್ ಬಣ್ಣದ ಸೆಮಿ-ಡಿಜೆಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬ್ಯಾಕ್‌ಲಿಟ್, ಹೊಸ ಹ್ಯಾಂಡಲ್‌ಬಾರ್, ಪರಿಷ್ಕೃತ ಬಾಡಿ ಗ್ರಾಫಿಕ್ಸ್ ಮತ್ತು ಇದರ ಕಂಫರ್ಟ್ ಲೆವೆಲ್ ಕೂಡ ಹೆಚ್ಚಾಗಿದೆ. ಈ ಬೈಕಿನ ಎಂಜಿನ್ ಅನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರ ಜೊತೆಗೆ ಬೆನೆಲ್ಲಿ ಮರುವಿನ್ಯಾಸಗೊಳಿಸಿದ ಸೈಡ್ ಮೀರರ್ ಗಳನ್ನು ಅಳವಡಿಸಿದ್ದಾರೆ. ಇನ್ನು ಅಲ್ಯೂಮಿನಿಯಂ ಫ್ರೇಮ್ ನಕಲ್ ಗಾರ್ಡ್‌ಗಳನ್ನು ಸಹ ಒಳಗೊಂಡಿದೆ.

ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿರುವ Benelli TRK 251 ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ

ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಬೈಕ್ ಬಾರತದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಬೈಕಿನ ಬೆಲೆಯು ಅಂದಾಜು ರೂ.2.50 ಲಕ್ಷವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 251 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ ಅಡ್ವೆಂಚರ್ 250, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ದುಬಾರಿ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New benelli trk 251 bookings open launch soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X