ಪ್ರತಿ ಚಾರ್ಜ್‌ಗೆ 75 ಕಿ.ಮೀ ರೇಂಜ್ ಹೊಂದಿರುವ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಅನಾವರಣ

ಜರ್ಮನ್ ಮೂಲದ ಎಲೆಕ್ಟ್ರಿಕ್ ದಿಚಕ್ರ ವಾಹನ ತಯಾರಕರಾದ ಬ್ಲ್ಯಾಕ್ ಟೀ ತನ್ನ ಮೊದಲ ಮಾದರಿಯಾದ ಬಾನ್‌ಫೈರ್‌ ಅನ್ನು ಅನಾವರಣಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್ ಬೈಕ್ ಕಮ್ಯೂಟರ್ ಬೈಕ್ ಆಗಿದ್ದು, ಕೆಲವು ಸಂದರ್ಭಗಳಲ್ಲಿ ಆಫ್-ರೋಡ್ ಆಗಿಯು ಬಳಕೆ ಮಾಡಬಹುದಾಗಿದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ರೇಂಜ್ ಹೊಂದಿರುವ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಅನಾವರಣ

ಈ ಹೊಸ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ 75 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಲ್ ಬೈಕ್ ಇಕೋ ಮೋಡ್ ನಲ್ಲಿ 75 ಕಿ.ಮೀ ರೇಂಜ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಬೈಕ್ ಡ್ಯುಯಲ್ ತೆಗೆಯಬಹುದಾದ ಬ್ಯಾಟರಿ ವಿನ್ಯಾಸದೊಂದಿಗೆ ಬರುತ್ತದೆ. ಈ ಬೈಕ್ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದ್ದು, ಪ್ರತಿ ಮೋಡ್‌ನಲ್ಲಿ ವಿಭಿನ್ನ ರೇಂಜ್ ಅನ್ನು ಹೊಂದಿದೆ. ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಸ್ಕ್ರಾಂಬ್ಲರ್ ಶೈಲಿಯನ್ನು ಹೊಂದಿದೆ, ಇನ್ನು ಈ ಬೈಕಿನ ಉತ್ಪಾದನೆಯನ್ನು ಆರಂಭಿಸಿದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ರೇಂಜ್ ಹೊಂದಿರುವ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಅನಾವರಣ

ಬ್ಲಾಕ್ ಟೀ ಸಂಸ್ಥೆಯ ಸಿಇಒ ವಿಕ್ಟರ್ ಸೊಮ್ಮರ್ ಮಾತನಾಡಿ, ನಾವು ಮ್ಯೂನಿಚ್‌ನಲ್ಲಿ ಬಾನ್‌ಫೈರ್‌ನ ಉತ್ಪಾದನೆಯ ಆರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದೆವು, ಇದೀಗ ಉತ್ಪಾದನೆಯನ್ನು ಆರಂಭಿಸಿದ್ದೇವೆ, ಪೂರೈಕೆದಾರರಿಂದ ವಿಳಂಬ ಮತ್ತು ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದ ಉತ್ಪಾದನೆಯನ್ನು ಆರಂಭವು ವಿಳಂಬವಾಗಿ‌ದೆ ಎಂದರು,

ಪ್ರತಿ ಚಾರ್ಜ್‌ಗೆ 75 ಕಿ.ಮೀ ರೇಂಜ್ ಹೊಂದಿರುವ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಅನಾವರಣ

ಬಾನ್‌ಫೈರ್‌ 5.4 ಕಿವ್ಯಾಟ್ ಸರಿಸುಮಾರು 7.2 ಬಿಹೆ‍ಪಿ ಪವರ್ ರೇಟೆಡ್ ಪೀಕ್ ಪವರ್ ಔಟ್ಪುಟ್ ಮತ್ತು 195 ಎನ್ಎಂ ಟಾರ್ಕ್ ನೊಂದಿಗೆ ಬರುತ್ತದೆ. ಸ್ಪೋರ್ಟ್ ಮೋಡ್‌ನಲ್ಲಿ 55 ಕಿಮೀ ರೇಂಜ್ ಅನ್ನು ಹೊಂದಿದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ರೇಂಜ್ ಹೊಂದಿರುವ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಅನಾವರಣ

ಹೊಸ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ 7 ನಾರ್ಮಲ್ ಮೋಡ್‌ನಲ್ಲಿ 55 ಕಿ.ಮೀ ರೇಂಜ್ ಅನ್ನು ಹೊಂದಿದೆ. ಇನ್ನು ಇಕೋ ಮೋಡ್‌ನಲ್ಲಿ 75 ಕಿ.ಮೀ ರೇಂಜ್ ಅನ್ನು ಹೊಂದಿದೆ. ಬೈಕನ್ನು ಕೇವಲ ಮೂರು ಗಂಟೆಗಳಲ್ಲಿ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಮತ್ತು ಏಕರೂಪದ ಬ್ಯಾಟರಿ ಸಿಸ್ಟಂ ಅನ್ನು ಒಳಗೊಂಡಿರುತ್ತದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ರೇಂಜ್ ಹೊಂದಿರುವ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಅನಾವರಣ

ಎಲ್ಲಾ ಬ್ಲಾಕ್ ಟೀ ಮಾದರಿಗಳು ಒಂದೇ ಬ್ಯಾಟರಿಯಿಂದ ಚಾಲಿತವಾಗುವುದನ್ನು ಖಾತ್ರಿಪಡಿಸುತ್ತದೆ. ಬಾನ್‌ಫೈರ್‌ 18-ಇಂಚಿನ ಸ್ಪೋಕ್ಡ್ ಅಲ್ಯೂಮಿನಿಯಂ ರಿಮ್‌ಗಳನ್ನು ಹೊಂದಿದೆ. ಇದು ಹೈಡೆನೊ ಕೆ 41 ಡ್ಯುಯಲ್-ಸ್ಪೋರ್ಟ್ ರಬ್ಬರ್‌ನಲ್ಲಿ ಸುತ್ತಿರುತ್ತದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ರೇಂಜ್ ಹೊಂದಿರುವ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಅನಾವರಣ

ಇನ್ನು ಈ ಬ್ಲಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 31 ಎಂಎಂ ಫೋರ್ಕ್‌ಗಳನ್ನು ಹೊಂದಿದ್ದು, ಹಿಂಭಾಗದಲ್ಲಿ 200 ಎಂಎಂ ಟ್ರಾವೆಲ್ ಮತ್ತು ಟ್ವಿನ್ ಶಾಕ್ ಅನ್ನು ಒಳಗೊಂಡಿದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ರೇಂಜ್ ಹೊಂದಿರುವ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಅನಾವರಣ

ಬ್ಲ್ಯಾಕ್ ಟೀ ಮೋಟಾರ್‌ಬೈಕ್‌ಗಳ ಸಂಸ್ಥೆಯ ಸಿಇಒ ವಿಕ್ಟರ್ ಸೊಮ್ಮರ್ 2020ರಲ್ಲಿ ಈ ಕಂಪನಿಯನ್ನು ಸ್ಥಾಪಿಸಿದರು ಮತ್ತು ವಿಂಟೇಜ್-ಪ್ರೇರಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ತಯಾರಿಸುವ ಮೂಲಕ ಪ್ರಾರಂಭಿಸಿದರು, ಇದು ಹೀಗ ಬಾನ್‌ಫೈರ್‌ ಮಾರ್ಪಟ್ಟಿದೆ.

ಪ್ರತಿ ಚಾರ್ಜ್‌ಗೆ 75 ಕಿ.ಮೀ ರೇಂಜ್ ಹೊಂದಿರುವ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಅನಾವರಣ

ಕ್ರೌಡ್‌ಫಂಡಿಂಗ್ ಅಭಿಯಾನದ ಯುರೋಪ್ ಮತ್ತು ಯುಎಸ್‌ನಲ್ಲಿ ಮಾರಾಟಕ್ಕೆ ನೀಡಲಾಗುವುದು. ಇನ್ನು ಈ ಹೊಸ ಬ್ಲ್ಯಾಕ್ ಟೀ ಬಾನ್‌ಫೈರ್‌ ಎಲೆಕ್ಟ್ರಿಕ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಆದರೆ ಈ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Most Read Articles

Kannada
English summary
Black Tea Bonfire Electric Motorcycle. Read In Kannada.
Story first published: Saturday, July 31, 2021, 20:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X