ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟರ್‌ರಾಡ್ ಇಂಡಿಯಾ ತನ್ನ ಎಂ 1000 ಆರ್‌ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಬಿಎಂಡಬ್ಲ್ಯು ಮೋಟರ್‌ರಾಡ್ ಪರಿಚಯಿಸಿದ ಎಂ ವಿಭಾಗದ ಮೊದಲ ಮಾದರಿ ಇದಾಗಿದೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಸ್ಟ್ಯಾಂಡರ್ಡ್ ಮತ್ತು ಕಾಂಪಿಟೇಷನ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಇನ್ನು ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕಿನ ಬೆಲೆಯ ಬಗ್ಗೆ ಹೇಳುವುದಾದರೆ, ಇದರ ಆರಂಭಿಕ ಬೆಲೆಯು ರೂ.42 ಲಕ್ಷಗಳಾದರೆ, ಟಾಪ್ ಸ್ಪೆಕ್ ಕಾಂಪಿಟೇಷನ್ ರೂಪಾಂತರದ ಬೆಲೆಯು ರೂ.45 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಖರೀದಿಗೆ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಹತ್ತಿರದ ಬಿಎಂಡಬ್ಲ್ಯು ಮೋಟರ್‌ರಾಡ್ ಡೀಲರ್ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಇನ್ನು ಈ ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕನ್ನು ಸಿಬಿಯು ಆಗಿ ಭಾರತಕ್ಕೆ ತರಲಾಗುತದೆ. ಇನ್ನು ಈ ಐಷಾರಾಮಿ ಬೈಕ್ ಲೈಟ್ ವೈಟ್, ರೇಸಿಂಗ್ ಬ್ಲೂ ಮೆಟಾಲಿಕ್ ಮತ್ತು ರೇಸಿಂಗ್ ರೆಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಇನ್ನು ಈ ಐಷಾರಾಮಿ ಬೈಕಿನಲ್ಲಿ 999 ಸಿಸಿ ಇನ್-ಲೈಮ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಈಗ ವೇರಿಯಬಲ್ ವಾಲ್ವ್ ಟೈಮಿಂಗ್, 2-ರಿಂಗ್ ಖೋಟಾ ಪಿಸ್ಟನ್‌ಗಳು, ಟೈಟಾನಿಯಂ ಕನ್ಕೆಟೆಡ್ ರಾಡ್‌ಗಳು ಮತ್ತು ಹಗುರವಾದ ರಾಕರ್ ಅರ್ಮ್ಸ್ ಹೊಂದಿರುವ ಶಿಫ್ಟ್‌ಕ್ಯಾಮ್ ತಂತ್ರಜ್ಞಾನವನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಈ ಎಂಜಿನ್ 14,500 ಆರ್‌ಪಿಎಂನಲ್ಲಿ 210 ಬಿಹೆಚ್‌ಪಿ ಪವರ್ ಮತ್ತು 11,000 ಆರ್‌ಪಿಎಂನಲ್ಲಿ 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಂಜಿನ್ 6,000 ಆರ್‌ಪಿಎಂ ಮತ್ತು 15,100 ಆರ್‌ಪಿಎಂ ನಡುವಿನ ಮಧ್ಯ ಶ್ರೇಣಿಯಲ್ಲಿ ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ. ಇದು ಟ್ರ್ಯಾಕ್‌ಗಳಲ್ಲಿ ರೇಸಿಂಗ್ ಮಾಡುವಾಗ ಹೆಚ್ಚು ಸಹಕಾರಿಯಾಗಿದೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಇನ್ನು ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಯುನಿಟ್ ಅನ್ನು ಜೋಡಿಸಲಾಗಿದ್ದು, ಇದು ಸ್ಲಿಪ್-ಅಸಿಸ್ಟ್ ಕ್ಲಚ್ ಮತ್ತು ಕ್ಲಚ್ ಅನ್ನು ಬಳಸದೆ ತ್ವರಿತವಾಗಿ ಅಪ್ ಮತ್ತು ಡೌನ್‌ಶಿಫ್ಟ್‌ಗಳಿಗಾಗಿ ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್ ಅನ್ನು ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಹೊಸ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಕೇವಲ 3.1 ಸೆಕೆಂಡುಗಳಲ್ಲಿ 0 - 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಈ ಬೈಕಿನ ಟಾಪ್ ಸ್ಪೀಡ್ 306 ಕಿ,ಮೀ ಆಗಿದೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 45 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಹೊಂದಿದೆ. ಈ ಎರಡು ಸಸ್ಪೆಂಕ್ಷನ್ ಯುನಿಟ್ ಗಳು ಪ್ರೀ ಲೋಡ್ ಮತ್ತು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಇದು ಬ್ರ್ಯಾಂಡ್‌ನ ಫುಲ್ ಫ್ಲೋಟರ್ ಪ್ರೊ ಕೈನೆಮ್ಯಾಟಿಕ್ಸ್ ತಂತ್ರಜ್ಞಾನವನ್ನು ಒಳಗೊಂಡಿರುತ್ತವೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಇನ್ನು ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕಿನ ಎರಡು ಕಡೆಗಳಲ್ಲಿ ನಿಸ್ಸಿನ್‌ನಿಂದ ಎಂ-ಸ್ಪೆಕ್ ಯುನಿಟ್ ಗಳ ಬ್ರೇಕಿಂಗ್ ಸಿಸ್ಟಂ ಹೊಂದಿದೆ. ಮುಂಭಾಗದಲ್ಲಿ ಸೆಟಪ್ ರೇಡಿಯಲ್ ಮೌಂಟೆಡ್ ಫೋರ್-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಟ್ವಿನ್ 320 ಎಂಎಂ ಡಿಸ್ಕ್ ಅನ್ನು ಒಳಗೊಂಡಿದೆ, ಇನ್ನು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‌ನೊಂದಿಗೆ ಒಂದೇ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ,

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಹೊಸ ಬಿಎಂಡಬ್ಲ್ಯು ಎಂ1000 ಆರ್‌ಆರ್ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ 6.5-ಇಂಚಿನ ಟಿಎಫ್ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇದು ಹೆಚ್ಚುವರಿ ರೇಸ್ ಡೇಟಾಕ್ಕಾಗಿ ಎಂ ಜಿಪಿಎಸ್ ಡೇಟಾ ಲಾಗರ್ ಮತ್ತು ಎಂ ಜಿಪಿಎಸ್ ಲ್ಯಾಪ್ ಗಳಿಗೆ ಸಪೋರ್ಟ್ ಮಾಡುತ್ತದೆ. ಇದರೊಂದಿಗೆ ಹಲವಾರು ಪ್ರೀಮಿಯಂ ಪ್ಯಾಕೇಜ್ ಅನ್ನು ಕೂಡ ಒಳಗೊಂಡಿರುತ್ತದೆ.

ಭಾರತದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಎಂ 1000 ಆರ್‌ಆರ್ ಬೈಕ್ ಬಿಡುಗಡೆ

ಭಾರತದಲ್ಲಿ ಬಿಎಂಡಬ್ಲ್ಯು ತನ್ನ ಎಂ ವಿಭಾಗದ ಎಂ 1000 ಆರ್ಆರ್ ಬೈಕನ್ನು ಮೊದಲ ಬಾರಿಗೆ ಪರಿಚಯಿಸಿದೆ. ಈಬೈಕಿನಲ್ಲಿ ಕಾರ್ಬನ್-ಫೈಬರ್ ಅನ್ನು ಹೆಚ್ಚು ಬಳಿಸಿ ತಯಾರಿಸಿರುವುದರಿಂದ ಸೂಪರ್-ಲೈಟ್ ಬಾಡಿಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತಿ ವೇಗದ ಸೂಪರ್ ಸ್ಪೋರ್ಟ್ ಬೈಕ್‌ಗಳಲ್ಲಿ ಇದು ಒಂದಾಗಿದೆ.

Most Read Articles

Kannada
English summary
BMW M 1000 RR Launched. Read In Kannada.
Story first published: Thursday, March 25, 2021, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X