Just In
- 4 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 4 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 6 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 7 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ
ಐಷಾರಾಮಿ ಬೈಕ್ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ತನ್ನ ಹೊಸ ಆರ್ 1250 ಜಿಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿರುವ ಐಷಾರಾಮಿ ಬೈಕ್ಗಳಲ್ಲಿ ಒಂದಾಗಿದೆ.
ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಭಾರತದಲ್ಲಿ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕನ್ನು ಬಿಡುಗಡೆಗೊಳಿಸಲಿರುವ ದಿನಾಂಕವನ್ನು ಬಹಿರಂಗಪಡಿಸಿದೆ. ಅದರಂತೆ ಈ ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಇದೇ ತಿಂಗಳ 8 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ, ಈ ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.
ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರವು ಟ್ರಿಪಲ್ ಬ್ಲ್ಯಾಕ್, ಲೈಟ್ ವೈಟ್ ಮತ್ತು ರ್ಯಾಲಿ ಬಣ್ಣಗಳ ಆಯ್ಕೆಯನ್ನು ಹೊಂದಿದ್ದರೆ, ಅಡ್ವೆಂಚರ್ ರೂಪಾಂತರವು ಟ್ರಿಪಲ್ ಬ್ಲ್ಯಾಕ್, ಐಸ್ ಗ್ರೇ ಮತ್ತು ರ್ಯಾಲಿ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿರುತ್ತದೆ.
ಈ ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಖರೀದಿಗಾಗಿ ಪ್ರಿ-ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಐಷಾರಾಮಿ ಬೈಕನ್ನು ಅನ್ನು ಕಂಪ್ಲೀಟ್ ಬಿಲ್ಟ್-ಅಪ್ ಯುನಿಟ್(ಸಿಬಿಯು) ಆಗಿ ಭಾರತೀಯ ಮಾರುಕಟ್ಟೆಗೆ ತರಬಹುದು.
ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಅಡ್ವೆಂಚರ್ ಬೈಕನ್ನು ಹಿಂದಿನ ಮಾದರಿಗಿಂತ ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಲಾಗುತ್ತದೆ. ಇದರಲ್ಲಿ ವಿನ್ಯಾಸ, ಎಂಜಿನ್, ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ ಮತ್ತು ಹೊಸ ಬಣ್ಣಗಳನ್ನು ಒಳಗೊಂಡಿರುತ್ತದೆ.
ಈ ಐಷಾರಾಮಿ ಬೈಕಿನ ಬೆಲೆಯು ಅಂದಾಜು ಎಕ್ಸ್ ಶೋರೂಂ ಪ್ರಕಾರ ರೂ.20 ಲಕ್ಷಗಳಾಗಿರಬಹುದು. ಈ ಆರ್ 1250 ಜಿಎಸ್ ಬಿಎಂಡಬ್ಲ್ಯು ಮೋಟೊರಾಡ್ನ ಪ್ರಮುಖ ಅಡ್ವೆಂಚರ್-ಟೂರಿಂಗ್ ಬೈಕ್ ಆಗಿದೆ.
ಹಳೆಯ ಮಾದರಿಗೆ ಹೋಲಿಸಿದರೆ 2021ರ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕಿನ ವಿನ್ಯಾಸದ ವಿಷಯದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ ಅನನ್ಯವಾಗಿ ವಿನ್ಯಾಸಗೊಳಿಸಲಾದ ಹೆಡ್ಲ್ಯಾಂಪ್, ಫ್ರಂಟ್ ಬೀಕ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಡ್ಸ್ಕ್ರೀನ್ ಅನ್ನು ಕೂಡ ಹೊಂದಿರಲಿದೆ.
ಈ ಅಡ್ವೆಂಚರ್-ಟೂರರ್ ಬೈಕಿನಲ್ಲಿ ಸಿಂಗಲ್-ಪೀಸ್ ಹ್ಯಾಂಡಲ್ಬಾರ್, ಮೆತ್ತನೆಯ ಸೀಟ್, ಆಫ್-ರೋಡ್ ಬಯಾಸ್ಡ್ ಗ್ರಿಪ್ಪಿ ಫುಟ್ಪೆಗ್ಗಳು ಮತ್ತು ಫ್ಯೂಯಲ್ ಟ್ಯಾಂಕ್ ಸವಾರನಿಗೆ ಎದ್ದು ನಿಂತು ಬೈಕ್ ರೈಡ್ ಮಾಡಲು ಸಾಕಷ್ಟು ಸಹಕಾರಿಯಾಗುವಂತೆ ಫುಟ್ ಪೆಗ್ ಗಳನ್ನು ಕೂಡ ಒಳಗೊಂಡಿರುತ್ತದೆ.
ಈ ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕಿನಲ್ಲಿ 6.5-ಇಂಚಿನ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಬಿಎಂಡಬ್ಲ್ಯು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಸ್ಟ್ಯಾಂಡರ್ಡ್ ಆಗಿ ಹೊಂದಿರುತ್ತದೆ. ಇನ್ನು ಈ ಬೈಕಿನಲ್ಲಿ ಯುಎಸ್ಬಿ ಸಾಕೆಟ್, ಇಂಟಿಗ್ರಲ್ ಎಬಿಎಸ್ ಪ್ರೊ, ಹಿಲ್ ಸ್ಟಾರ್ಟ್ ಕಂಟ್ರೋಲ್ (ಎಚ್ಎಸ್ಸಿ), ಡೈನಾಮಿಕ್ ಟ್ರ್ಯಾಕ್ಷನ್ ಕಂಟ್ರೋಲ್ (ಡಿಟಿಸಿ), ಐಎಂಯು ಫುಲ್-ಎಲ್ಇಡಿ ಲೈಟಿಂಗ್ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿರಲಿವೆ.
ಈ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕಿನಲ್ಲಿ ಬಾಕ್ಸರ್ ಕಾನ್ಫಿಗರೇಶನ್ನಲ್ಲಿ ಟ್ವಿನ್-ಸಿಲಿಂಡರ್ 1254 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,750 ಆರ್ಪಿಎಂನಲ್ಲಿ 134 ಬಿಹೆಚ್ಪಿ ಪವರ್ ಮತ್ತು 6,250 ಆರ್ಪಿಎಂನಲ್ಲಿ 143 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ಬಾಕ್ಸ್ಗೆ ಜೋಡಿಯಾಗಿ ಸ್ಲಿಪ್-ಅಸಿಸ್ಟ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗುತ್ತದೆ.