ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ದೇಶದಲ್ಲಿ ತೈಲ ಬೆಲೆ ಗಗನಕ್ಕೇರಿದೆ. ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಹೋಗುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಗಳದ ಬಜಾಜ್ ಆಟೋ, ಟಿವಿಎಸ್ ಮೋಟಾರ್ ಸಹ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಈಗಾಗಲೇ ಬಿಡುಗಡೆಗೊಳಿಸಿವೆ. ಬಜಾಜ್‌ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್‌ನಂತಹ ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇದರ ನಡುವೆ ಹಲವು ಎಲೆಕ್ಟ್ರಿಕ್ ದ್ವಿಚಕ್ರ ಬ್ರ್ಯಾಂಡ್ ಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಇದರ ನಡುವೆ ಬೆಂಗಳೂರು ಮೂಲದ ಸ್ಮಾರ್ಟ್ ಮೊಬಿಲಿಟಿ ಸೊಲ್ಯೂಷನ್ಸ್ ಕಂಪನಿ, ಬೌನ್ಸ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ಸಜ್ಜಾಗಿದೆ. ಬೌನ್ಸ್ ತನ್ನ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಬೌನ್ಸ್ ತನ್ನ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಈ ಹೊಸ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ರೂ.499 ಟೋಕನ್‌ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಮೇಡ್ ಇನ್ ಇಂಡಿಯಾ ಉತ್ಪನ್ನ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಸುಧಾರಿತ ತಂತ್ರಜ್ಙಾನ ಮತ್ತು ಅತ್ಯಾಧುನಿಕ ಪೀಚರ್ಸ್ ಗಳನ್ನು ಒಳಗೊಂಡಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಹೊಸ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ರೆಟ್ರೊ-ಶೈಲಿಯ ಫ್ರಂಟ್ ಫೆಂಡರ್, ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸಿಂಗಲ್ ಪೀಸ್ ಸೀಟ್, ಸ್ಪೋರ್ಟಿ ಅಲಾಯ್ ವೀಲ್‌ಗಳು, ಪ್ರಮುಖ ಗ್ರ್ಯಾಬ್ ರೈಲ್ ಮತ್ತು ಹರಿತ ಟೈಲ್ ಲ್ಯಾಂಪ್‌ನಂತಹ ವೈಶಿಷ್ಟ್ಯಗಳೊಂದಿಗೆ ಸೊಗಸಾದ, ಏರೋಡೈನಾಮಿಕ್ ಪ್ರೊಫೈಲ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರ್ ಅನ್ನು ಸಿಂಗಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ನೀಡುವ ಸಾಧ್ಯತೆಯಿದೆ.ಬೌನ್ಸ್ ಇನ್ಫಿನಿಟಿ ಹಬ್-ಮೌಂಟೆಡ್ ಮೋಟರ್ ಅನ್ನು ಬಳಸುತ್ತದೆ. ಹೆಚ್ಚಿನ ತಾಂತ್ರಿಕ ಮಾಹಿತಿಗಳು ಬಹಿರಂಗಗೊಂಡಿಲ್ಲ. ಬಿಡುಗಡೆಯ ಸಮಯದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ತಾಂತ್ರಿಕ ಮಾಹಿತಿಗಳು ಬಹಿರಂಗವಾಗಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಈ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ರಿಯರ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಹೊಸ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವ ಬಳಕೆದಾರರಿಗೆ ಎರಡು ಆಯ್ಕೆಗಳಿವೆ. ಮೊದಲನೆಯದು ಸಾಂಪ್ರದಾಯಿಕ ಮಾರ್ಗವಾಗಿದೆ, ಇದರಲ್ಲಿ ಬಳಕೆದಾರರು ಸ್ಕೂಟರ್ ಮತ್ತು ಬ್ಯಾಟರಿಯ ವೆಚ್ಚವನ್ನು ಒಳಗೊಂಡಂತೆ ಸಂಪೂರ್ಣ ಬೆಲೆಯನ್ನು ಪಾವತಿಸುತ್ತಾರೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಈ ಆಯ್ಕೆಯಲ್ಲಿ ಬಳಕೆದಾರರು Li-ion ಬ್ಯಾಟರಿಯನ್ನು ತೆಗೆದುಹಾಕಲು ಮತ್ತು ಅವರ ಅನುಕೂಲಕ್ಕೆ ಅನುಗುಣವಾಗಿ ಅದನ್ನು ಚಾರ್ಜ್ ಮಾಡಲು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವ ನಗರವ ಪ್ರದೇಶದ ಜನರು ಇದಕ್ಕೆ ಆದ್ಯತೆ ನೀಡುವ ಸಾಧ್ಯತೆಯಿದೆ. ಫ್ಲಿಪ್ ಸೈಡ್ ಈ ಆಯ್ಕೆಯು ಒಟ್ಟಾರೆ ಮಾಲೀಕತ್ವದ ವೆಚ್ಚವನ್ನು ಹೆಚ್ಚಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಎರಡನೆಯ ಆಯ್ಕೆಯಲ್ಲಿ ಬಳಕೆದಾರರು ಬ್ಯಾಟರಿಯ ವೆಚ್ಚವನ್ನು ಪಾವತಿಸಬೇಕಾಗಿಲ್ಲ. ಅವರಿಗೆ ಸಂಪೂರ್ಣ ಚಾರ್ಜ್ ಮಾಡಲಾದ ಬ್ಯಾಟರಿ ಅಗತ್ಯವಿದ್ದಾಗ, ಅವರು ಬೌನ್ಸ್‌ನ ಯಾವುದೇ ಬ್ಯಾಟರಿ ವಿನಿಮಯ ಕೇಂದ್ರಗಳಲ್ಲಿ ಬ್ಯಾಟರಿಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಈ ವ್ಯವಸ್ಥೆಯು ಒಟ್ಟಾರೆ ಅನುಭವವನ್ನು ಪ್ರಮಾಣಿತ ಇಂಧನ ಕೇಂದ್ರದಲ್ಲಿ ಇಂಧನ ತುಂಬಿಸುವ ಅನುಭವವನ್ನು ತರುತ್ತದೆ. ಇದು ಸಮಯವನ್ನು ಉಳಿಸುವುದು ಮಾತ್ರವಲ್ಲದೆ ರೇಂಜ್ ಆತಂಕ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡುವ ತೊಂದರೆಗಳನ್ನು ನಿವಾರಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟರಿ ಸೇವೆಯಾಗಿ ಆಯ್ಕೆಯನ್ನು ಆರಿಸುವುದರಿಂದ ಸ್ವಾಧೀನ ವೆಚ್ಚವು ಶೇ.40-50 ರಷ್ಟು ಕಡಿಮೆಯಾಗುತ್ತದೆ. ಬಳಕೆದಾರರು ತಮ್ಮ ಬ್ಯಾಟರಿಯನ್ನು ಸ್ವ್ಯಾಪ್ ಮಾಡಿದಾಗ ಮಾತ್ರ ಚಾರ್ಜ್ ಮಾಡಲಾಗುತ್ತದೆ. ಕಡಿಮೆ ಸ್ವಾಧೀನ ವೆಚ್ಚದೊಂದಿಗೆ, ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದು. ತೆಗೆಯಲಾಗದ ಬ್ಯಾಟರಿಗಳೊಂದಿಗೆ ಬರುವ ಪ್ರತಿಸ್ಪರ್ಧಿ ಉತ್ಪನ್ನಗಳಿಗಿಂತಲೂ ಇದನ್ನು ಆದ್ಯತೆ ನೀಡಬಹುದುಎ ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಬಳಕೆದಾರರು ಬ್ಯಾಟರಿ ವಿನಿಮಯ ಕೇಂದ್ರವನ್ನು ಸುಲಭವಾಗಿ ಹುಡುಕಬಹುದೆಂದು ಖಚಿತಪಡಿಸಿಕೊಳ್ಳಲು, ಬೌನ್ಸ್ ತನ್ನ ಬ್ಯಾಟರಿ-ಸ್ವಾಪಿಂಗ್ ನೆಟ್‌ವರ್ಕ್ ಅನ್ನು ವಿಸ್ತರಿಸಲು ಕೆಲಸ ಮಾಡುತ್ತಿದೆ. ನೆಟ್‌ವರ್ಕ್ ಚಿಲ್ಲರೆ ಗ್ರಾಹಕರು ಮತ್ತು ಕಂಪನಿಯ ರೈಡ್-ಹಂಚಿಕೆ ವ್ಯಾಪಾರ ಎರಡನ್ನೂ ಪೂರೈಸುತ್ತದೆ. ಸದ್ಯಕ್ಕೆ, ಬೌನ್ಸ್ 170 ಕ್ಕೂ ಹೆಚ್ಚು ಸ್ಥಳಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಹೊಂದಿದೆ. ಮುಂದಿನ ವರ್ಷಗಳಲ್ಲಿ ಭಾರತದಾದ್ಯಂತ ಇದನ್ನು ವಿಸ್ತರಿಸಲಾಗುವುದು. ಇಲ್ಲಿಯವರೆಗೆ, ಬೌನ್ಸ್‌ನ ಇವಿ ಫ್ಲೀಟ್ 2 ಕೋಟಿ ಕಿಲೋಮೀಟರ್‌ಗಳನ್ನು ಕ್ರಮಿಸಿದೆ. 5 ಲಕ್ಷಕ್ಕೂ ಹೆಚ್ಚು ಬ್ಯಾಟರಿ ಸ್ವಾಪ್‌ಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ Bounce Infinity ಎಲೆಕ್ಟ್ರಿಕ್ ಸ್ಕೂಟರ್

ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರಾಜಸ್ಥಾನದ ಭಿವಾಡಿಯ ಸ್ಥಾವರದಲ್ಲಿ ತಯಾರಿಸಲಾಗುವುದು. ಈ ಸ್ಥಾವರವನ್ನು ಮೊದಲು 22ಮೋಟಾರ್ಸ್ ಒಡೆತನದಲ್ಲಿತ್ತು ಮತ್ತು ನಿರ್ವಹಿಸುತ್ತಿತ್ತು. ಬೌನ್ಸ್ ಈ ಕಂಪನಿಯನ್ನು 2021 ರಲ್ಲಿ 100% ಷೇರು ಮಾರಾಟದ ಒಪ್ಪಂದದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಈ ಘಟಕದಲ್ಲಿ ವರ್ಷಕ್ಕೆ 1.80 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸಬಹುದು. ಬೇಡಿಕೆಯ ಆಧಾರದ ಮೇಲೆ, ಬೌನ್ಸ್ ತನ್ನ ಎರಡನೇ ಸೌಲಭ್ಯವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸಬಹುದು. ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಮಾದರಿಯು ಬಿಡುಗಡೆಯಾದ ಬಳಿಕ ಎಥರ್ 450, ಓಲಾ ಎಸ್1 ಬಜಾಜ್ ಚೇತಕ್ ಮತ್ತು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New bounce infinity electric scooter will be launch tomorrow details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X