ಹೊಸ ಸಿಎಫ್‌ಮೋಟೋ 650ಜಿಟಿ ಬೈಕ್ ಟೀಸರ್ ಬಿಡುಗಡೆ

ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೋಟೋ ತನ್ನ ಹೊಸ 650ಜಿಟಿ ಬೈಕಿನ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ. ಬಿಎಸ್6 ಸಿಎಫ್‌ಮೋಟೋ 650ಜಿಟಿ ಬೈಕನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು.

ಹೊಸ ಸಿಎಫ್‌ಮೋಟೋ 650ಜಿಟಿ ಬೈಕ್ ಟೀಸರ್ ಬಿಡುಗಡೆ

ಸಿಎಫ್‌ಮೋಟೋ ಕಂಪನಿಯು ತನ್ನ 650ಜಿಟಿ ಬೈಕನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರೀಸಲಾಗುತ್ತಿದೆ. ಸಿಎಫ್‌ಮೋಟೋ ಕಂಪನಿಯು ಇತ್ತೀಚೆಗೆ 650ಎನ್‌ಕೆ ಬೈಕಿನ ಟೀಸರ್ ಚಿತ್ರವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಹಲವು ತಂತ್ರಜ್ಙಾನಗಳನ್ನು ಮತ್ತು ಫೀಚರ್ಸ್ ಗಳನ್ನು ಪರಸ್ಪರ ಹಂಚಿಕೊಳ್ಳಲಿದೆ. ಆದರೆ ಈ ಎರಡು ಬೈಕ್ ಗಳ ವಿನ್ಯಾಸ ಸಂಪೂರ್ಣವಾಗಿ ಭಿನ್ನವಾಗಿದೆ.

ಹೊಸ ಸಿಎಫ್‌ಮೋಟೋ 650ಜಿಟಿ ಬೈಕ್ ಟೀಸರ್ ಬಿಡುಗಡೆ

ಮುಂಬರುವ ಬಿಎಸ್6 650ಜಿಟಿ ತನ್ನ ಬಿಎಸ್4 ಪ್ರತಿರೂಪಕ್ಕೆ ಹೋಲುತ್ತದೆ. ಆದರೆ ಹೊಸ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಇನ್ನು ಇದರ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಸಿಎಫ್‌ಮೋಟೋ 650ಜಿಟಿ ಬೈಕ್ ಟೀಸರ್ ಬಿಡುಗಡೆ

ಹೆಸರೇ ಸೂಚಿಸುವಂತೆ 650ಜಿಟಿ ಗ್ರ್ಯಾಂಡ್ ಟೂರರ್ ಆಗಿದೆ. ಈ ಬೈಕ್ ಉತ್ತಮ ಸವಾರಿ ಗುಣಮಟ್ಟದಿಂದ ಕೂಡಿರುತ್ತದೆ. ಇದರಲ್ಲಿ ಏರೋಡೈನಾಮಿಕ್ ವಿನ್ಯಾಸವನ್ನು ಒದಗಿಸಲು ಇದು ದೊಡ್ಡ ಫೇರಿಂಗ್ ಮತ್ತು ವಿಂಡ್‌ಸ್ಕ್ರೀನ್ ಅನ್ನು ಸಹ ಒಳಗೊಂಡಿದೆ.

ಹೊಸ ಸಿಎಫ್‌ಮೋಟೋ 650ಜಿಟಿ ಬೈಕ್ ಟೀಸರ್ ಬಿಡುಗಡೆ

2021ರ ಸಿಎಫ್‌ಮೋಟೋ 650ಜಿಟಿ ಬೈಕಿನಲ್ಲಿ ಹಿಂದಿನ ಮಾದರಿಯಲ್ಲಿ ಇದ್ದ ಅದೇ ಎಂಜಿನ್ ಅನ್ನು ಹೊಂದಿರುತ್ತದೆ. ಆದರೆ ಎಂಜಿನ್ ಅನ್ನು ನವೀಕರಿಸಲಾಗಿರುತ್ತದೆ. ಈ ಬೈಕಿನಲ್ಲಿ 649ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಸಿಎಫ್‌ಮೋಟೋ 650ಜಿಟಿ ಬೈಕ್ ಟೀಸರ್ ಬಿಡುಗಡೆ

ಈ ಎಂಜಿನ್ 66.68 ಬಿಹೆಚ್‍ಪಿ ಪವರ್ ಮತ್ತು 56 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ನವೀಕರಿಸಿದ ಬಿಎಸ್ 6 ಎಂಜಿನ್‌ನಲ್ಲಿಯು ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಒಂದೇ ರೀತಿ ಉಳಿಯುವ ನಿರೀಕ್ಷೆಯಿದೆ. ಇನ್ನು ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಹೊಸ ಸಿಎಫ್‌ಮೋಟೋ 650ಜಿಟಿ ಬೈಕ್ ಟೀಸರ್ ಬಿಡುಗಡೆ

2021ರ ಸಿಎಫ್‌ಮೋಟೋ 650ಜಿಟಿ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಕೆವೈಬಿಯಿಂದ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಸಿಎಫ್‌ಮೋಟೋ 650ಜಿಟಿ ಬೈಕ್ ಟೀಸರ್ ಬಿಡುಗಡೆ

ಇನ್ನು ಪ್ರಮುಖ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಡ್ಯುಯಲ್-ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

ಹೊಸ ಸಿಎಫ್‌ಮೋಟೋ 650ಜಿಟಿ ಬೈಕ್ ಟೀಸರ್ ಬಿಡುಗಡೆ

ಇನ್ನು ಈ ಬೈಕಿನಲ್ಲಿ ಅಲಾಯ್ ವೀಲ್ಸ್ ಟ್ಯೂಬ್‌ಲೆಸ್ ಟೈರ್‌ಗಳಿಂದ ಕೂಡಿರುತ್ತದೆ. ಟೂರರ್ ಬೈಕ್ ಆಗಿರುವುದರಿಂದ ಇದರಲ್ಲಿ 19-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಸಹ ಹೊಂದಿದೆ. ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳೊಂದಿಗೆ ಒಂದೇ ಟ್ವಿನ್-ಪಾಡ್ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದುವ ನಿರೀಕ್ಷೆಯಿದೆ. ಇತರ ವೈಶಿಷ್ಟ್ಯಗಳು ವಿವಿಧ ರೈಡ್ ಮೋಡ್‌ಗಳಿಂದ ಆಯ್ಕೆ ಮಾಡಲು ಸ್ವಿಚ್‌ಗಿಯರ್ ಅನ್ನು ಒಳಗೊಂಡಿದೆ.

Most Read Articles

Kannada
English summary
CFMoto 650GT BS6 Teased Ahead Of India Launch. Read In Kannada.
Story first published: Friday, May 7, 2021, 15:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X