ಅನಾವರಣವಾಯ್ತು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕ್

ಚೀನಾ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಎಫ್‌ಮೋಟೋ ತನ್ನ ಹೊಸ 800ಎಂಟಿ ಅಡ್ವೆಂಚರ್ ಬೈಕನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಕೆಟಿಎಂ 790 ಅಡ್ವೆಂಚರ್ ಬೈಕನ್ನು ಆಧರಿಸಿ ಈ ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಮಾದರಿಯನ್ನು ಅಭಿವೃದ್ದಿಪಡಿಸಿದೆ.

ಅನಾವರಣವಾಯ್ತು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕ್

ಸಿಎಫ್‌ಮೋಟೋ ಕಂಪನಿಯು ಆಸ್ಟ್ರಿಯನ್ ಬ್ರ್ಯಾಂಡ್‌ಗಾಗಿ ಎಂಜಿನ್‌ಗಳು ಮತ್ತು ಸಂಪೂರ್ಣ ಯಂತ್ರಗಳನ್ನು ತಯಾರಿಸುತ್ತದೆ, ಸಿಎಫ್‌ಮೋಟೋ 799ಸಿಸಿ ಕೆಟಿಎಂ ಎಲ್‌ಸಿ8 ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಸ ಅಡ್ವೆಂಚರ್ ಬೈಕಿನಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಕೂಡ ಸಿಎಫ್‌ಮೋಟೋ ಅಭಿವೃದ್ದಿ ಪಡಿಸಿ ಕೆಟಿಎಂಗೆ ನೀಡಿರುವುದಾಗಿದೆ. ಈ 799ಸಿಸಿ ಕೆಟಿಎಂ ಎಲ್‌ಸಿ8 ಪ್ಯಾರಲಲ್-ಟ್ವಿನ್ ಎಂಜಿನ್ ಕೇವಲ 95 ಬಿಹೆಚ್‌ಪಿ ಪವರ್ ಮತ್ತು 78 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕ್

ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕಿನಲ್ಲಿ ರೈಡ್-ಬೈ-ವೈರ್ ಥ್ರೊಟಲ್, ಎಂಜಿನ್ ಮ್ಯಾಪ್ಸ್ ಮತ್ತು ಸ್ಟ್ಯಾಂಡರ್ಡ್ ಕ್ರೂಸ್ ಕಂಟ್ರೋಲ್‌ನೊಂದಿಗೆ ಬರುತ್ತದೆ, ಸಿಎಫ್‌ಮೋಟೋ 800ಎಂಟಿ ತನ್ನದೇ ಆದ ಚಾಸಿಸ್ ಮತ್ತು ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಅನಾವರಣವಾಯ್ತು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕ್

ಕೆವೈಬಿಯ ಸಸ್ಪೆಂಕ್ಷನ್ ಯುನಿಟ್ ಗಳು ಮತ್ತು ಸ್ಪ್ಯಾನಿಷ್ ಬ್ರ್ಯಾಂಡ್ ಜೆ. ಜುವಾನ್ ಬ್ರೇಕಿಂಗ್ ಹಾರ್ಡ್‌ವೇರ್ ಅನ್ನು ಪೂರೈಸುತ್ತಿದೆ. ಆಫ್-ರೋಡ್ ಓರಿಯೆಂಟೆಡ್ ಅಡ್ವೆಂಚರ್ ಬೈಕ್‌ನ ಬದಲು, ಸಿಎಫ್‌ಮೋಟೋ 800ಎಂಟಿ ಬೈಕ್ 790 ಅಡ್ವೆಂಚರ್ ಮಾದರಿಗಿಂತ ಲೋ-ಸ್ಲಂಗ್ ಇಂಧನ ಟ್ಯಾಂಕ್‌ಗಳಿಗಿಂತ ಹೆಚ್ಚಾಗಿ ಟಾಪ್-ಮೌಂಟಡ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕ್

ಇನ್ನು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕಿನಲ್ಲಿ ಹೀಟಡ್ ಗ್ರಿಪ್ ಸೀಟನ್ನು ಹೊಂದಿದೆ. ಇನ್ನು ಸೆಟ್‌ಲೈಟ್ ನ್ಯಾವಿಗೇಷನ್‌ನೊಂದಿಗೆ 7-ಇಂಚಿನ ಟಿಎಫ್‌ಟ ಡಿಸ್ ಪ್ಲೇಯನ್ನು ಪಡೆಯುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕ್

ಇನ್ನು ಈ ಹೊಸ ಅಡ್ವೆಂಚರ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಾಗಲಿದ್ದು, ಎರಡೂ 19 ಇಂಚಿನ ಮುಂಭಾಗದ ವ್ಹೀಲ್ ಮತ್ತು 17 ಇಂಚಿನ ಹಿಂಬದಿ ವ್ಹೀಲ್ ಸಂಯೋಜನೆಯನ್ನು ಹೊಂದಿದೆ. ಸ್ಟ್ಯಾಂಡರ್ಡ್ ಟ್ರಿಮ್ ಅಲ್ಯೂಮಿನಿಯಂ ರಿಮ್ಸ್, ಸ್ಪೋಕ್ಡ್-ವ್ಹೀಲ್, ಡ್ಯುಯಲ್-ಸ್ಪೋರ್ಟ್ ಟಯರ್ ಗಳು ಮತ್ತು ಸ್ಟ್ಯಾಂಡರ್ಡ್ ಎಂಜಿನ್ ಬ್ಯಾಷ್ ಪ್ಲೇಟ್ ಅನ್ನು ಪಡೆಯುತ್ತದೆ.

ಅನಾವರಣವಾಯ್ತು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕ್

ಸಿಎಫ್‌ಮೋಟೋ ತನ್ನ ಹೊಸ 800ಎಂಟಿ ಅಡ್ವೆಂಚರ್ ಬೈಕನ್ನು ಯಾವ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸುತ್ತದೆ ಎಂಬುದು ಇನ್ನು ಬಹಿರಂಗಪಡಿಸಿಲ್ಲ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕ್

ಇನ್ನು ಸಿಎಫ್‌ಮೋಟೋ ಭಾರತದಲ್ಲಿ ತನ್ನ ಎರಡನೇ ಮಾದರಿಯನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಸಿಎಫ್‌ಮೋಟೋ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಎರಡನೇ ಮಾದರಿಯಾಗಿ 650ಎನ್‌ಕೆ ಬೈಕನ್ನು ಬಿಡುಗಡೆಗೊಳಿಸಲಿದೆ. ಸಿಎಫ್‌ಮೋಟೋ ತನ್ನ ಈ ಹೊಸ 650ಎನ್‌ಕೆ ಬೈಕಿನ ಟೀಸರ್ ಬಿಡುಗಡೆಗೊಳಿಸಿದೆ.

ಅನಾವರಣವಾಯ್ತು ಹೊಸ ಸಿಎಫ್‌ಮೋಟೋ 800ಎಂಟಿ ಅಡ್ವೆಂಚರ್ ಬೈಕ್

ಈ ಹೊಸ 800ಎಂಟಿ ಅಡ್ವೆಂಚರ್ ಸಿಎಫ್‌ಮೋಟೋ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಫ್ 750 ಜಿಎಸ್, ಬಿಎಂಡಬ್ಲ್ಯು ಎಫ್ 850 ಜಿಎಸ್ ಮತ್ತು ಟ್ರಯಂಫ್ ಟೈಗರ್‌ನಂತಹ ಮಧ್ಯಮ ಗಾತ್ರದ ಅಡ್ವೆಂಚರ್ ಬೈಕ್‌ಗಳಿಗೆ ಪ್ರತಿಸ್ಪರ್ದಿಯಾಗಿ ಬಿಡುಗಡೆಗೊಳಿಸಬಹುದು.

Most Read Articles

Kannada
English summary
CFMoto 800MT Based On KTM 790 Adventure Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X