ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನಾವರಣಗೊಳಿಸಿದ ಡುಕಾಟಿ

ಡುಕಾಟಿ ಕಂಪನಿಯು ತನ್ನ ಹೊಸ ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. ಇದು ಲಿಮಿಟೆಡ್ ಎಡಿಷನ್ ಮಾದರಿಯಾಗಿದೆ. ಡುಕಾಟಿ ಪ್ರಕಾರ, ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ 2019ರಲ್ಲಿ ಅನಾವರಣಗೊಂಡ ಡಯಾವೆಲ್ "ಮೆಟರಿಕೊ" ಮಾದರಿಯಿಂದ ಸ್ಫೂರ್ತಿ ಪಡೆದಿದೆ.

ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನಾವರಣಗೊಳಿಸಿದ ಡುಕಾಟಿ

ಹೊಸ ಡುಕಾಟಿ ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಬ್ಲ್ಯಾಕ್ ಮತ್ತು ಗ್ರೇ ಬಣ್ಣವನ್ನು ಹೊಂದಿದೆ. ಇದರೊಂದಿಗೆ ಯೆಲ್ಲೋ ಬಣ್ಣದ ಮುಖ್ಯಾಂಶಗಳನ್ನು ಒಳಗೊಂಡಿದೆ. ಇನ್ನು ಇದರಲ್ಲಿ ಎಂಜಿನ್ ಬೆಲ್ಲಿ ಪ್ಯಾನ್, ಫ್ರೇಮ್ ಮತ್ತು ಟೈಲ್ ಫೀಸ್ ಅನ್ನು ಒಳಗೊಂಡಿದೆ. ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ನಲ್ಲಿ 1,262 ಸಿಸಿ ಟೆಸ್ಟಾಸ್ಟ್ರೆಟಾ ಡಿವಿಟಿ (ಡೆಸ್ಮೋಡ್ರೊಮಿಕ್ ವಾಲ್ವ್ ಟೈಮಿಂಗ್) ವಿ-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನಾವರಣಗೊಳಿಸಿದ ಡುಕಾಟಿ

ಈ ಎಂಜಿನ್ 9,500 ಆರ್‌ಪಿಎಂನಲ್ಲಿ 160 ಬಿಹೆಚ್‌ಪಿ ಮತ್ತು 7,500 ಆರ್‌ಪಿಎಂನಲ್ಲಿ 129 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನಾವರಣಗೊಳಿಸಿದ ಡುಕಾಟಿ

ಹೊಸ ಡುಕಾಟಿ ಡಯಾವೆಲ್ 1260 ಬೈಕಿನಲ್ಲಿ ಸಿಂಗಲ್-ಸೈಡ್ ಸ್ವಿಂಗಾರ್ಮ್, ಉದ್ದವಾದ ಮಸ್ಕಲರ್ ಫ್ಯೂಯಲ್ ಟ್ಯಾಂಕ್, ಹಿಂಭಾಗದ ಸೀಟಿನ ಕೆಳಗೆ ಇರಿಸಲಾಗಿರುವ ಉದ್ದವಾದ ಎಲ್‌ಇಡಿ ಟೈಲ್-ಲೈಟ್‌ಗಳು ಮತ್ತು ಅದರ ಸುತ್ತಲಿನ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ವಿಶಿಷ್ಟವಾದ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್ ಹೊಂದಿದೆ.

ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನಾವರಣಗೊಳಿಸಿದ ಡುಕಾಟಿ

ಇದು ಸ್ಲಿಪ್ಪರ್ ಕ್ಲಚ್ ಮತ್ತು ಚೈನ್ ಫೈನಲ್ ಡ್ರೈವ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಡಯಾವೆಲ್ 1260 ಎಸ್ ಸ್ಟ್ಯಾಂಡರ್ಡ್ ಅಪ್ ಮತ್ತು ಡೌನ್ ಕ್ವಿಕ್‌ಶಿಫ್ಟರ್‌ನೊಂದಿಗೆ ಬರುತ್ತದೆ,

ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನಾವರಣಗೊಳಿಸಿದ ಡುಕಾಟಿ

ಇನ್ನು ಈ ಬೈಕಿನಲ್ಲಿ ಎಲೆಕ್ಟ್ರಾನಿಕ್ಸ್ ಸೂಟ್ ಬಾಷ್ ಕಾರ್ನರಿಂಗ್ ಎಬಿಎಸ್, ಜೊತೆಗೆ ವ್ಹೀಲಿ ಕಂಟ್ರೋಲ್, ಲಾಂಚ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಮಲ್ಟಿಪಲ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನಾವರಣಗೊಳಿಸಿದ ಡುಕಾಟಿ

ಕೀಲೆಸ್ ಇಗ್ನಿಷನ್ ಮತ್ತು ಡುಕಾಟಿ ಲಿಂಕ್ ಅಪ್ಲಿಕೇಶನ್ ಮೂಲಕ ಸ್ಮಾರ್ಟ್ ಪೋನ್ ಕನೆಕ್ಟಿವಿಟಿ ಒದಗಿಸುವ ಫುಲ್-ಬಣ್ಣದ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ಒಳಗೊಂಡಿದೆ.

ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನಾವರಣಗೊಳಿಸಿದ ಡುಕಾಟಿ

ಹೊಸ ಡುಕಾಟಿ ಡಯಾವೆಲ್ 1260 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 48 ಎಂಎಂ ಓಹಿನ್ಸ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್ ಮೊನೊ-ಶಾಕ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಹೊಂದಿದೆ.

ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನಾವರಣಗೊಳಿಸಿದ ಡುಕಾಟಿ

ಇನ್ನು ಈ ಹೊಸ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂ, ರೇಡಿಯಲ್-ಮೌಂಟೆಡ್ ಬ್ರೆಂಬೊ ಮೊನೊಬ್ಲೋಕ್ 4-ಪಿಸ್ಟನ್ ಎಂ 50 ಕ್ಯಾಲಿಪರ್‌ಗಳೊಂದಿಗೆ ಮುಂಭಾಗದಲ್ಲಿ ರೇಡಿಯಲ್ ಮಾಸ್ಟರ್ ಸಿಲಿಂಡರ್ ಮತ್ತು ಹಿಂಭಾಗದಲ್ಲಿ ಬ್ರೆಂಬೊ 2-ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್‌ನೊಂದಿಗೆ ಡ್ಯುಯಲ್ 320 ಎಂಎಂ ಸೆಮಿ ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಡಯಾವೆಲ್ 1260 ಎಸ್ ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನಾವರಣಗೊಳಿಸಿದ ಡುಕಾಟಿ

ಡಯಾವೆಲ್ 1260 ಎಸ್ ಬೈಕ್ 17-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಈ ಬೈಕ್ 247 ಕೆಜಿ ತೂಕವನ್ನು ಹೊಂದಿದೆ. ಇನ್ನು ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾತ್ರ ಡಯಾವೆಲ್ 1260 ಬ್ಲ್ಯಾಕ್ ಮತ್ತು ಸ್ಟೀಲ್ ಎಡಿಷನ್ ಅನ್ನು ನೀಡಲಾಗುವುದು.

Most Read Articles

Kannada
Read more on ಡುಕಾಟಿ ducati
English summary
2021 Ducati Diavel 1260 S Black And Steel Edition Unveiled. Read In Kannada.
Story first published: Friday, June 11, 2021, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X