ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಟೀಸರ್ ಬಿಡುಗಡೆ

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಡಯಾವೆಲ್ 1260 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗೊಂಡು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಟೀಸರ್ ಬಿಡುಗಡೆ

ಇದೀಗ ಡುಕಾಟಿ ತನ್ನ ಹೊಸ ಡಯಾವೆಲ್ 1260 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಬಿಎಸ್-6 ಡುಕಾಟಿ ಡಯಾವೆಲ್ ಬೈಕ್ ಸ್ಟ್ಯಾಂಡರ್ಡ್ ಮತ್ತು 'ಎಸ್' ಎರಡೂ ರೂಪಾಂತರಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಡುಕಾಟಿ ಡಯಾವೆಲ್ ಬೈಕಿನಲ್ಲಿ ಹಿಂದಿನ ಮಾದರಿಯಲ್ಲಿ ಇದ್ದ ಅದೇ ಎಂಜಿನ್ ಅನ್ನು ಹೊಂದಿರುತ್ತದೆ. ಆದರೆ ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.

ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಟೀಸರ್ ಬಿಡುಗಡೆ

ಈ ಹೊಸ ಡಯಾವೆಲ್ 1260 ಬೈಕಿನಲ್ಲಿ ಬಿಎಸ್-6 1262 ಸಿಸಿ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 9500 ಆರ್‌ಪಿಎಂನಲ್ಲಿ 160 ಬಿಹೆಚ್‍ಪಿ ಪವರ್ ಮತ್ತು 7500 ಆರ್‌ಪಿಎಂನಲ್ಲಿ 129 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಟೀಸರ್ ಬಿಡುಗಡೆ

ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಕ್ಲಚ್ ಅಸಿಸ್ಟ್ ಅನ್ನು ಜೋಡಿಸಲಾಗುತ್ತದೆ. ಇದರಲ್ಲಿ ಡೆಸ್ಮೋಡ್ರೊಮಿಕ್ ವಾಲ್ವ್ ಟೈಮಿಂಗ್ ಸ್ಟ್ಯಾಂಡರ್ಡ್ ಆಗಿ ತೋರಿಸುವುದನ್ನು ಮುಂದುವರಿಸುತ್ತದೆ. ಹೊಸ ಡುಕಾಟಿ ಡಯಾವೆಲ್ 1260 ಬೈಕಿನ ಎಸ್ ರೂಪಾಂತರವನ್ನು (ಡಿಕ್ಯೂಎಸ್) ಡುಕಾಟಿ ಕ್ವಿಕ್ ಶಿಫ್ಟ್ ಬೈ-ಡೈರಕ್ಷನಲ್ ಅನ್ನು ನೀಡಲಾಗುತ್ತದೆ.

ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಟೀಸರ್ ಬಿಡುಗಡೆ

ಇನ್ನು ಈ ಹೊಸ ಡುಕಾಟಿ ಡಯಾವೆಲ್ 1260 ಬೈಕಿನಲ್ಲಿ ಸಿಂಗಲ್-ಸೈಡ್ ಸ್ವಿಂಗಾರ್ಮ್, ಉದ್ದವಾದ ಮಸ್ಕಲರ್ ಫ್ಯೂಯಲ್ ಟ್ಯಾಂಕ್, ಹಿಂಭಾಗದ ಸೀಟಿನ ಕೆಳಗೆ ಇರಿಸಲಾಗಿರುವ ಉದ್ದವಾದ ಎಲ್‌ಇಡಿ ಟೈಲ್-ಲೈಟ್‌ಗಳು ಮತ್ತು ಅದರ ಸುತ್ತಲಿನ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ವಿಶಿಷ್ಟವಾದ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್ ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಟೀಸರ್ ಬಿಡುಗಡೆ

ಇನ್ನು ಈ ಹೊಸ ಬೈಕಿನಲ್ಲಿ ಇನ್ ಟ್ರೂಮೆಂಟ್ ಕನ್ಸೋಲ್‌ಗಾಗಿ 3.5 ಇಂಚಿನ ಟಿಎಫ್‌ಟಿ ಬಣ್ಣದ ಡಿಸ್ ಪ್ಲೇಯನ್ನು ಹೊಂದಿದೆ. ಬ್ಯಾಕ್‌ಲಿಟ್ ಹ್ಯಾಂಡಲ್‌ಬಾರ್ ಸ್ವಿಚ್‌ಗಳ ಜೊತೆಗೆ, ಬಳಕೆದಾರರು ಸ್ಪೋರ್ಟ್ಸ್ ಕ್ರೂಸರ್‌ನಲ್ಲಿ ಎಲೆಕ್ಟ್ರಾನಿಕ್ ರೈಡರ್ ಏಡ್ಸ್‌ಗಳನ್ನು ಒಳಗೊಂಡಿವೆ.

ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಟೀಸರ್ ಬಿಡುಗಡೆ

ಇನ್ನು ಹೊಸ ಡುಕಾಟಿ ಡಯಾವೆಲ್ 1260 ಬೈಕಿನಲ್ಲಿ ಬಾಷ್ ಕಾರ್ನರಿಂಗ್ ಎಬಿಎಸ್ ಇವಿಒ, (ಡಿಟಿಸಿ) ಡುಕಾಟಿ ಟ್ರ್ಯಾಕ್ಷನ್ ಕಂಟ್ರೋಲ್ ಇವಿಒ, (ಡಿಡಬ್ಲ್ಯೂಸಿ) ಡುಕಾಟಿ ವ್ಹೀಲಿ ಕಂಟ್ರೋಲ್ ಇವಿಒ, (ಡಿಪಿಎಲ್) ಡುಕಾಟಿ ಪವರ್ ಲಾಂಚ್ ಇವಿಒ, ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಈ ಬೈಕಿನ ಎಸ್' ರೂಪಾಂತರವು ಡುಕಾಟಿ ಮಲ್ಟಿಮೀಡಿಯಾ ಸಿಸ್ಟಂ ಅನ್ನು ಸಹ ಒಳಗೊಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಟೀಸರ್ ಬಿಡುಗಡೆ

ಹೊಸ ಡುಕಾಟಿ ಡಯಾವೆಲ್ 1260 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 48 ಎಂಎಂ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಹೊಂದಿದೆ.

ಹೊಸ ಡುಕಾಟಿ ಡಯಾವೆಲ್ 1260 ಬೈಕ್ ಟೀಸರ್ ಬಿಡುಗಡೆ

ಇನ್ನು ಈ ಹೊಸ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂ, ರೇಡಿಯಲ್-ಮೌಂಟೆಡ್ ಬ್ರೆಂಬೊ ಮೊನೊಬ್ಲೋಕ್ 4-ಪಿಸ್ಟನ್ ಎಂ 50 ಕ್ಯಾಲಿಪರ್‌ಗಳೊಂದಿಗೆ ಮುಂಭಾಗದಲ್ಲಿ ರೇಡಿಯಲ್ ಮಾಸ್ಟರ್ ಸಿಲಿಂಡರ್ ಮತ್ತು ಹಿಂಭಾಗದಲ್ಲಿ ಬ್ರೆಂಬೊ 2-ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್‌ನೊಂದಿಗೆ ಡ್ಯುಯಲ್ 320 ಎಂಎಂ ಸೆಮಿ ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

Most Read Articles

Kannada
Read more on ಡುಕಾಟಿ ducati
English summary
Ducati Diavel 1260 BS6 Teased Ahead Of India Launch. Read In Kannada.
Story first published: Monday, May 31, 2021, 19:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X