ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಈ ನಡುವೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮೊಬಿಲಿಟಿ ಪ್ಲಾಟ್‌ಫಾರ್ಮ್, eBikeGo ತನ್ನ ಹೊಸ Rugged ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಹೊಸ eBikeGo Rugged ಎಲೆಕ್ಟ್ರಿಕ್ ಮೋಟೋ-ಸ್ಕೂಟರ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.79,999 ಗಳಾಗಿದೆ. ಈ ಹೊಸ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದು Rugged G1 ಮತ್ತು Rugged G1+ ರೂಪಾಂತರಗಳಾಗಿದೆ. ಈ Rugged G1+ ರೂಪಾಂತರದ ಬೆಲೆಯು ರೂ,99,999 ಗಳಾಗಿದೆ, ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಬ್ರಾಂಡ್‌ನ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು, ಇದರ ವಿತರಣೆಯು ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಆರಂಭವಾಗಲಿದೆ.

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸರ್ಕಾರದ ಸಬ್ಸಿಡಿಗಳಿಂದ ಹೆಚ್ಚುವರಿ ಪ್ರಯೋಜನಗಳೊಂದಿಗೆ ರಗಡ್ ಇ-ಸ್ಕೂಟರ್ ಬೆಲೆಯು ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಕಂಪನಿ ಹೇಳಿದೆ. ಈ EBikeGo Rugged ಎಲೆಕ್ಟ್ರಿಕ್ ಸ್ಕೂಟರ್ 3kW ಹಬ್-ಮೌಂಟೆಡ್ ಬ್ರಷ್ ರಹಿತ ಡಿಸಿ ಮೋಟಾರ್ ನಿಂದ ಡ್ಯುಯಲ್ 1.9kWh Li-ion ಬ್ಯಾಟರಿ ಪ್ಯಾಕ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಒಳಗೊಂಡಿದೆ. ಬ್ಯಾಟರಿ ಪ್ಯಾಕ್ IP67 ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ ರೇಟ್ ಮಾಡಲಾಗಿದೆ. ಎರಡೂ ಬ್ಯಾಟರಿಗಳು ಸುಮಾರು 4 ಗಂಟೆಗಳಲ್ಲಿ ಚಾರ್ಜ್ ಆಗಬಹುದು. ಇದು ಎರಡೂ ಬ್ಯಾಟರಿಗಳಿಂದ ಒಂದೇ ಚಾರ್ಜ್‌ನಲ್ಲಿ ಸ್ಕೂಟರ್‌ಗೆ 160 ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡುತ್ತದೆ.

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸ್ಕೂಟರ್ ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ: ಇದು ಇಕೋ & ಪವರ್ ಮೋಡ್ ಗಳಾಗಿದೆ, ಇಕೋ ಮೋಡ್ ನಲ್ಲಿ 160 ಕಿ,ಮೀ ರೇಂಜ್ ನೀಡಿದರೆ, ಪವರ್ ಮೋಡ್ ನಲ್ಲಿ 135 ಕಿ,ಮೀ ರೇಂಜ್ ಅನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 75 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ,

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಎಲೆಕ್ಟ್ರಿಕ್ ಸ್ಕೂಟರ್ 12 ಬಿಲ್ಡ್ ಇನ್ ಸ್ಮಾರ್ಟ್ ಸೆನ್ಸರ್‌ಗಳನ್ನು ಹೊಂದಿದೆ, ಬಳಕೆದಾರರು Rugged ಮೊಬೈಲ್ ಅಪ್ಲಿಕೇಶನ್ ಬಳಸಿ ವಿವಿಧ ಫೀಚರ್ಸ್ ಗಳನ್ನು ಕಂಟ್ರೋಲ್ ಮಾಡಬಹುದು. ಬಳಕೆದಾರರು ಈ ಅಪ್ಲಿಕೇಶನ್ ಮೂಲಕ ಅನ್ ಲಾಕ್ ಮಾಡಬಹುದು. ಇನ್ನು ಅಪಘಾತ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಚಾಲಕನ ಸುರಕ್ಷತೆಯನ್ನು ಖಾತ್ರಿಪಡಿಸುವ ಆಂಟಿ ಥೀಫ್ಟ್ ಫೀಚರ್ ಅನ್ನು ಹೊಂದಿದೆ.

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಕಂಪನಿಯು B2B ಗ್ರಾಹಕರಿಗೆ IoT ಆಯ್ಕೆಯನ್ನು ನೀಡಿದೆ, ಇದು ವಾಹನಗಳ ಫ್ಲೀಟ್ ನಿರ್ವಹಣೆಗೆ ಸಹಾಯ ಮಾಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಯುಎಸ್‌ಬಿ ಚಾರ್ಜ್ ಪೋರ್ಟ್, ಕ್ರ್ಯಾಶ್ ಗಾರ್ಡ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸಿಂಗಲ್-ಪೀಸ್ ಸೀಟ್ ಮತ್ತು ರೇರ್ ಗ್ರ್ಯಾಭ್ ರೈಲ್ ಅನ್ನು ಹೊಂದಿದೆ, ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 30-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ,

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

eBikeGo ಅವರು ಭಾರತದಲ್ಲಿ ಕಠಿಣವಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ತಯಾರಿಸಿದ್ದಾರೆ ಎಂದು ಹೇಳಿಕೊಂಡಿದ್ದು, ಇದು ರಗಡ್ ಎಂಬ ಹೆಸರಿಗೆ ಕಾರಣವಾಗಿದೆ. ಎಲೆಕ್ಟ್ರಿಕ್ ಮೋಟೋ ಸ್ಕೂಟರ್ ಬಾಡಿಯು ಕ್ರ್ಯಾಡಲ್ ಚಾಸಿಸ್ ಮತ್ತು ಸ್ಟೀಲ್ ಫ್ರೇಮ್ ನಿಂದ ಕೂಡಿದೆ. ಇನ್ನು ಈ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ,

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಪ್ರಮುಖ ಲಿಂಕ್ ನೊಂದಿಗೆ ಆಂಟಿ-ಡೈವ್ ಮತ್ತು ಹಿಂಭಾಗದಲ್ಲಿಪಾಯಿಂಟ್ ಹೊಂದಾಣಿಕೆ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಹೊಂದಿದೆ, ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗದಲ್ಲಿ 120/70 ಟ್ಯೂಬ್ ಲೆಸ್ ಟೈರ್ ನೊಂಡಿಗೆ 14 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಇನ್ನು ಹಿಂಭಾಗದಲ್ಲಿ 120/70 ಟ್ಯೂಬ್ ಲೆಸ್ ಟೈರ್ ನೊಂದಿಗೆ 14 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ,

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ವಾರಂಟಿಗೆ ಸಂಬಂಧಿಸಿದಂತೆ. ಈ ಎಲೆಕ್ಟ್ರಿಕ್ ಸ್ಕೂಟರ್'ಗೆ 7 ವರ್ಷಗಳ ವಾರಂಟಿಯೊಂದಿಗೆ ಚಾಸಿಸ್ ನೀಡಲಾಗುತ್ತದೆ. ಇನ್ನು ಸ್ಟ್ಯಾಂಡರ್ಡ್ ವಾರಂಟಿಯನ್ನು ವಾಹನ, ಬ್ಯಾಟರಿ ಮತ್ತು ಚಾರ್ಜರ್‌ಗಾಗಿ 3 ವರ್ಷಗಳು/20,000 ಕಿಮೀಗಳಿಗೆ ನೀಡಲಾಗುತ್ತದೆ. ಇನ್ನು ಕಂಪನಿಯು ಎಕ್ಸೆಟೆಂಟ್ ವಾರಂಟಿ ಆಯ್ಕೆಯನ್ನು ನೀಡುತ್ತದೆ.

ಭಾರತದಲ್ಲಿ 160 ಕಿ.ಮೀ ರೇಂಜ್ ಹೊಂದಿರುವ eBikeGo Rugged ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇನ್ನು ಹೆಸರೇ ಹೇಳುವಂತೆ, ರಗಡ್ ಅನ್ನು ಎಕ್ಸೋಸ್ಕೆಲಿಟನ್ ಫ್ರೇಮ್‌ನೊಂದಿಗೆ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ. ಹೆಚ್ಚುವರಿಯಾಗಿ, ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ರೇಂಜ್ ಅನ್ನು ನೀಡುತ್ತದೆ ಮತ್ತು ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಹೊಂದಿದೆ, ಒಟ್ಟಾರೆಯಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ ಅಧಿಕ ರೇಂ<�ಜ್, ಕೈಗೆಟುಕುವ ದರ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ,

Most Read Articles

Kannada
English summary
New ebikego rugged electric scooter launched in india price details
Story first published: Wednesday, August 25, 2021, 20:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X