ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ನ್ಯೂ ಜನರೇಷನ್ ಕೆಟಿಎಂ ಬೈಕ್

ಕೆಟಿಎಂ ಕಂಪನಿಯು ತನ್ನ ನ್ಯೂ ಜನರೇಷನ್ ಆರ್‍‍ಸಿ 125, 200 ಮತ್ತು 390 ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಇದೀಗ ನ್ಯೂ ನರೇಷನ್ ಆರ್‍‍ಸಿ ಮಾದರಿಯೊಂದು ಭಾರತೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ನ್ಯೂ ಜನರೇಷನ್ ಕೆಟಿಎಂ ಬೈಕ್

ವರದಿಗಳ ಪ್ರಕಾರ, ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿರುವುದು 2021ರ ಕೆಟಿಎಂ ಆರ್‍‍ಸಿ 200 ಅಥವಾ 125 ಮಾದರಿಯಾಗಿರಬಹುದು. ಈ ಹೊಸ ಬೈಕನ್ನು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ಅನ್ನು ನಡೆಸಲಾಗಿದೆ. ಹೊಸ ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ರಶ್ಲೇನ್ ಬಹಿರಂಗಪಡಿಸಿದೆ.ಟೆಸ್ಟ್ ನಲ್ಲಿ ಕಾಣಿಸಿಕೊಂಡಿರುವುದು 2021ರ ಕೆಟಿಎಂ ಆರ್‍‍ಸಿ200 ಅಥವಾ 125 ಬೈಕ್ ಆಗಿರಬಹುದು. ಅದರೆ ಆರ್‍‍ಸಿ 390 ಬೈಕ್ ಆಗಿರಲು ಸಾಧ್ಯತೆಗಳಿಲ್ಲ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ನ್ಯೂ ಜನರೇಷನ್ ಕೆಟಿಎಂ ಬೈಕ್

ಇನ್ನು ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕೆಟಿಎಂ ಬೈಕ್ ಬಾಡಿವರ್ಕ್ ಮೊದಲಿಗಿಂತ ತೀಕ್ಷ್ಣವಾಗಿದೆ ಆದರೆ ಸ್ಟೀರಿಂಗ್ ಮೌಂಟ್ ಮತ್ತು ಇನ್ಸ್ಟ್ರುಮೆಂಟ್ ಕನ್ಸೋಲ್ ನಡುವೆ ಅಂತರವಿದೆ ಹೊಸ ಕೆಟಿಎಂ ಆರ್‍‍ಸಿ 200 ಬೈಕ್ ಹ್ಯಾಲೊಜೆನ್ ಯುನಿಟ್ ಅನ್ನು ಪಡೆಯುತ್ತದೆ. ಹ್ಯಾಲೊಜೆನ್ ಯುನಿಟ್ ನೊಂದಿಗೆ ಎಲ್ಇಡಿ ಆರ್ಎಲ್ ಗಳನ್ನು ಹೊಂದಿರಲಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ನ್ಯೂ ಜನರೇಷನ್ ಕೆಟಿಎಂ ಬೈಕ್

ಇನ್ನು ಹೊಸ ಕೆಟಿಎಂ ಆರ್‍‍ಸಿ 200 ಬೈಕಿನ ಗ್ರಾಫಿಕ್ಸ್ ಹೊಸದಾದರೆ, ಬ್ಲ್ಯಾಕ್ ಮತ್ತು ಆರೇಂಜ್ ಬಣ್ಣದಿಂದ ಕೂಡಿದೆ. ಇದರೊಂದಿಗೆ ಇತರ ಬಣ್ಣದ ಆಯ್ಕೆಯನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ನ್ಯೂ ಜನರೇಷನ್ ಕೆಟಿಎಂ ಬೈಕ್

ನ್ಯೂ ಜನರೇಷನ್ ಕೆಟಿಎಂ ಆರ್‍‍ಸಿ 200 ಬೈಕಿನಲ್ಲಿ ಅದೇ 199.5 ಸಿಸಿ, ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 24.6 ಬಿಹೆಚ್‌ಪಿ ಪವರ್ ಮತ್ತು 19.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ನ್ಯೂ ಜನರೇಷನ್ ಕೆಟಿಎಂ ಬೈಕ್

ಈ ಎಂಜಿನ್ ನೊಂದಿಗೆ 6-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೊಸ ಕೆಟಿಎಂ ಆರ್‍‍ಸಿ 200 ಬೈಕಿನ ಬೆಲೆಯನ್ನು ಪ್ರಕಿಟಿಸಲಾಗಿಲ್ಲ. ಆದರೆ ಹಿಂದಿನ ಮಾದರಿಗಿಂತ ತುಸು ದುಬಾರಿಯಾಗಿರಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ನ್ಯೂ ಜನರೇಷನ್ ಕೆಟಿಎಂ ಬೈಕ್

ಇನ್ನು ಈ ನ್ಯೂ ಜನರೇಷನ್ ಕೆಟಿಎಂ ಆರ್‍‍ಸಿ 200 ಬೈಕ್ ಇತ್ತೀಚೆಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲಿಸಿದರೆ ಅಷ್ಟು ಅಗ್ರೇಸಿವ್ ಲುಕ್ ಹೊಂದಿಲ್ಲ. ಹೆಚ್ಚು ಅರಾಮದಾಯಕ ಮತ್ತು ಸ್ಟ್ಯಾಂಡರ್ಡ್ ವಿನ್ಯಾಸವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ನ್ಯೂ ಜನರೇಷನ್ ಕೆಟಿಎಂ ಬೈಕ್

ಸ್ಪಾಟ್ ಟೆಸ್ಟ್ ನಲ್ಲಿ ಕೆಟಿಎಂ ಆರ್‍‍ಸಿ 200 ಬೈಕ್ ಹೊಸ ಆಯತಾಕಾರದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಮಾರುಕಟ್ಟೆಯಲ್ಲಿ ಆರ್‍‍ಸಿ 200 ಎಲ್ಸಿಡಿ ಡಿಸ್ ಪ್ಲೇಯನ್ನು ಹೊಂದಿದ್ದರೆ, ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಹೊಸ ಬೈಕಿನಲ್ಲಿ ಟಿಎಫ್ಟಿ ಯುನಿಟ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ನ್ಯೂ ಜನರೇಷನ್ ಕೆಟಿಎಂ ಬೈಕ್

ಇದು 390 ಡ್ಯೂಕ್ ಮಾದರಿಯಲ್ಲಿರುವ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಡ್ಯಾಶ್ ಆಗಿರಬಹುದು. ಬೈಕಿನ ತಾಂತ್ರಿಕ ಅಂಶಗಳ ಬಗ್ಗೆ ನೋಡುವುದಾದರೆ, ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ನಡೆಸುವುದಿಲ್ಲವೆಂದು ನಿರೀಕ್ಷಿಸುತ್ತೇವೆ ಬಹುನಿರೀಕ್ಷಿತ 2021ರ ಕೆಟಿಎಂ ಆರ್‍‍ಸಿ 200 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು. 2021ರ ಕೆಟಿಎಂ ಆರ್‍‍ಸಿ 200 ಬೈಕ್ ಹಲವಾರು ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಕೆಟಿಎಂ ktm
English summary
2021 KTM RC 200, 125 Spied Testing. Read In Kannada.
Story first published: Friday, March 12, 2021, 12:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X