ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕೆಟಿಎಂ ತನ್ನ ಎರಡನೇ ತಲೆಮಾರಿನ ಆರ್‌ಸಿ-ಸರಣಿಯ ಬೈಕ್‌ಗಳನ್ನು ಈ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಅನಾವರಣಗೊಳಿಸಿತ್ತು. ಇತ್ತೀಚೆಗೆ ಕೆಟಿಎಂ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ನ್ಯೂ ಜನರೇಷನ್ ರ್‌ಸಿ 125 ಮತ್ತು ಆರ್‌ಸಿ 200 ಬೈಕ್‌ಗಳನ್ನು ಬಿಡುಗಡೆಗೊಳಿಸಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಇದೀಗ ಕೆಟಿಎಂ ಕಂಪನಿಯು ಎರಡನೇ ತಲೆಮಾರಿನ ಕೆಟಿಎಂ ಆರ್‌ಸಿ 390 ಬೈಕಿನ ಹೆಸರನ್ನು ಕಂಪನಿಯ ಭಾರತದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇನ್ನು ಎರಡನೇ ತಲೆಮಾರಿನ ಕೆಟಿಎಂ ಆರ್‌ಸಿ 390 ಅನ್ನು ಕೆಲವು ತಿಂಗಳುಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಬಹಿರಂಗಪಡಿಸಿದೆ. ಆದರೆ ಅಧಿಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ, ಶೀಘ್ರದಲ್ಲೇ ಈ ಹೊಸ ಕೆಟಿಎಂ ಆರ್‌ಸಿ 390 ಸೂಪರ್‌ಸ್ಪೋರ್ಟ್ ಬೈಕ್ ಈ ವರ್ಷದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಸೂಪರ್‌ಸ್ಪೋರ್ಟ್ ಬೈಕ್ ಅನ್ನು ಹಿಂದಿನ ಮಾದರಿಗೆ ಹೋಲಿಸಿದರೆ ವಿನ್ಯಾಸದ ವಿಷಯದಲ್ಲಿ ಸಂಪೂರ್ಣ ಮೇಕ್ ಓವರ್ ಅನ್ನು ಪಡೆದುಕೊಂಡಿದೆ. ಈ ಬೈಕ್ ಹೆಡ್‌ಲೈಟ್‌ನ ಸುತ್ತಲಿನ ಮುಂಭಾಗದ ಕಾರ್ಬನ್-ಫೈಬರ್ ಫಿನಿಶ್ ಅನ್ನು ತೋರುತ್ತಿದೆ. ಆದರೆ ನಿಜವಾದ ಕಾರ್ಬನ್-ಫೈಬರ್ ಅನ್ನು ಪಡೆಯುವ ಸಾಧ್ಯತೆಯಿಲ್ಲ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಇನ್ನು ಈ ಹೊಸ ಬೈಕ್ ವಿಂಡ್‌ಸ್ಕ್ರೀನ್ ಪ್ರಸ್ತುತ ಆರ್‌ಸಿ ಸರಣಿಯಲ್ಲಿರುವುದಕ್ಕಿಂತ ಸ್ವಲ್ಪ ಎತ್ತರವಾಗಿದೆ ಎಂದು ತೋರುತ್ತದೆ. ಹೆಡ್‌ಲ್ಯಾಂಪ್‌ನ ಬದಿಯಲ್ಲಿರುವ ಎರಡು ಸ್ಲಿಮ್ ಲೈಟ್‌ಗಳು ಇಂಡೀಕೆಟರ್ ಗಳಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ, ಆದರೆ ಬಹುಶಃ ಪೈಲಟ್ ಲೈಟ್ ಗಳಾಗಿಯು ಕಾರ್ಯನಿರ್ವಹಿಸಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಈ ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಟಾಪ್ ಟ್ರಿಪಲ್-ಕ್ಲಾಂಪ್ ಹೊಸದು, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಮತ್ತು ಹಿಂದಿನ ಸಬ್‌ಫ್ರೇಮ್ ಈಗ ಬೋಲ್ಟ್-ಆನ್ ಯೂನಿಟ್ ಆಗಿದೆ. ಕ್ಲಿಪ್-ಆನ್‌ಗಳು ಪ್ರಸ್ತುತ ಬೈಕ್‌ಗಿಂತ ಹೆಚ್ಚಿನದಾಗಿರುವಂತೆ ತೋರುತ್ತದೆ, ಇದು ಹೆಚ್ಚು ಆರಾಮದಾಯಕವಾದ ಸವಾರಿ ಸ್ಥಾನವನ್ನು ಒದಗಿಸಬೇಕು, ಇನ್ನು ಹೊಸ ವ್ಹೀಲ್ ಗಳನ್ನು ಕಾಂಟಿನೆಂಟಲ್ ಕಾಂಟಿರೋಡ್ ಸ್ಪೋರ್ಟ್ ಟೂರಿಂಗ್ ಟೈರ್‌ಗಳನ್ನು ಒಳಗೊಂಡಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಸಂಪೂರ್ಣವಾಗಿ ಮರು-ವಿನ್ಯಾಸಗೊಳಿಸಲಾದ ಬಾಡಿವರ್ಕ್ ಆಗಿದೆ, ಇದು ಈ ಸೂಪರ್‌ಸ್ಪೋರ್ಟ್ ಬೈಕಿನ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಹೊಸ ಕೆಟಿಎಂ ಆರ್‌ಸಿ 390 ಬೈಕಿನಲ್ಲಿ ಬ್ಲೂಟೂತ್-ಕನೆಕ್ಟಿವಿಟಿ TFT ಡಿಸ್ ಪ್ಲೇಯನ್ನು ಪಡೆಯುತ್ತದೆ ಅದು ಕೆಟಿಎಂನ ಮೈ ರೈಡ್ ಅಪ್ಲಿಕೇಶನ್ ಅನ್ನು ಸಹ ಬೆಂಬಲಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಸವಾರರು ಅದರ ಹೊಸ ಸ್ವಿಚ್ ಗೇರ್ ಬಳಸಿ ಪ್ರಯಾಣದಲ್ಲಿರುವಾಗ ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಫೋನ್ ಕರೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದು ಕೆಟಿಎಂನ ಸೂಪರ್‌ಮೋಟೋ ಎಬಿಎಸ್ ಮೋಡ್, ಕಾರ್ನರ್ ಮಾಡುವ ಎಬಿಎಸ್ ಮತ್ತು ಕಾರ್ನರ್ ಮಾಡುವ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಜೊತೆಗೆ ಆಯ್ಕೆಯ ಬೈ-ಡೈರಕ್ಷನಲ್ ಕ್ವೀಕ್ -ಶಿಫ್ಟರ್ ಅನ್ನು ಒಳಗೊಂಡಿರುವ ಹಲವಾರು ಎಲೆಕ್ಟ್ರಾನಿಕ್ ಸಾಧನಗಳನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಕೆಲವು ಚಿಕ್ಕ ಬದಲಾವಣೆಗಳನ್ನು ಹೊಂದಿದ್ದರೂ ಅದರ ಹಿಂದಿನ ಎಂಜಿನ್ ಅನ್ನು ಪಡೆಯುತ್ತದೆ. ಇದರಲ್ಲಿ ಅದೇ 373.2 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಹೊಂದಿದೆ. ಈ ಎಂಜಿನ್ 43.5 ಬಿಹೆಚ್‍ಪಿ ಪವರ್ ಮತ್ತು 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಇನ್ನು ಈ ಹೊಸ ಕೆಟಿಎಂ ಆರ್‌ಸಿ 390 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಫೋರ್ಕ್‌ಗೆ ಹೊಂದಾಣಿಕೆ ಮಾಡಬಹುದಾದ ಕಂಪ್ರೆಷನ್ ಮತ್ತು ರಿಬೌಂಡ್ ಡ್ಯಾಂಪಿಂಗ್ ಅನ್ನು ಒಳಗೊಂಡಿದೆ.ಇನ್ನು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆಯನ್ನು ಒಳಗೊಂಡಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಇನ್ನು ಇತ್ತಿಚೆಗೆ ಬಿಡುಗಡೆಗೊಂಡ ಕೆಟಿಎಂ ಆರ್‌ಸಿ 200 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.09 ಲಕ್ಷಗಳಾದರೆ, ಕೆಟಿಎಂ ಆರ್‌ಸಿ 125 ಬೈಕಿನ ಬೆಲೆಯು ರೂ.1.82 ಲಕ್ಷಗಳಾಗಿದೆ. ಕೆಟಿಎಂ ತನ್ನ 2022ರ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳ ಖರೀದಿಗಾಗಿ ಅಧಿಕೃತ ಕೆಟಿಎಂ ಡೀಲರ್‌ಶಿಪ್‌ಗಳು ಬುಕ್ಕಿಂಗ್ ಆರಂಭಿಸಿದೆ. ಆಸಕ್ತ ಗ್ರಾಹಕರು ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕ್ಕೊಳ್ಳಬಹುದು. ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳು ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಕೆಟಿಎಂ ಬೈಕ್‌ಗಳು ಹೊಸ ಚಾಸಿಸ್, ಕ್ಲಾಸ್ ಲೀಡಿಂಗ್ ಕಾರ್ಯಕ್ಷಮತೆ, ನವೀಕರಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಹೊಸ ಗ್ರ್ಯಾಂಡ್ ಪ್ರಿಕ್ಸ್-ಪ್ರೇರಿತ ಸ್ಟೈಲಿಂಗ್‌ನೊಂದಿಗೆ ಪ್ರಮುಖ ಅಪ್‌ಡೇಟ್ ನೀಡಲಾಗಿದೆ. ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಅನ್ನು ಕೆಲವೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೆಟಿಎಂ ಇಂಡಿಯಾ ಹೇಳಿದೆ.ಇದರಲ್ಲಿ ಹೊಸ ಕೆಟಿಎಂ ಆರ್‌ಸಿ 200 ಬೈಕ್ ಡೀಲರ್ ಬಳಿ ಕಾಣಿಸಿಕೊಂಡಿದೆ. 2022ರ ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ ಎಂದು ನಿರೀಕ್ಷಿಸುತ್ತೇವೆ, ಇದರಿಂದ ಶೀಘ್ರದಲ್ಲೇ ಕೆಟಿಎಂ ಬೈಕ್‌ಗಳ ವಿತರಣೆಯನ್ನು ಪ್ರಾರಂಭಿಸಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ KTM RC 390 ಬೈಕ್

ಹೊಸ ವಿನ್ಯಾಸದ ನ್ಯೂ ಜನರೇಷನ್ ಆರ್‌ಸಿ ಬೈಕ್‌ಗಳು ಪ್ರಸ್ತುತ ತಲೆಮಾರಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನ ಶೈಲಿಯನ್ನು ಹೊಂದಿದೆ. ಈ ನ್ಯೂ ಜನರೇಷನ್ ಬೈಕ್‌ಗಳು ಮಾರಾಟದಲ್ಲಿ ಕೆಟಿಎಂ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು. ಇದರೊಂದಿಗೆ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಬೈಕ್ ಕೂಡ ಹೊಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಶೀಘ್ರದಲ್ಲೇ ಪ್ರವೇಶಿಸಲಿದೆ.

Most Read Articles

Kannada
Read more on ಕೆಟಿಎಂ ktm
English summary
New gen rc 390 bike launch soon in india ktm listed on indian website details
Story first published: Monday, October 25, 2021, 14:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X