ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕ್ ಟೀಸರ್ ಬಿಡುಗಡೆ

ಅಮೆರಿಕ ಮೂಲದ ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಹೊಸ ಕಸ್ಟಮ್ 1250 ಬೈಕನ್ನು ಭಾರತದಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಇದೀಗ ಹಾರ್ಲೆ ಡೇವಿಡ್ಸನ್ ಕಂಪನಿಯು ಹೊಸ ಕಸ್ಟಮ್ 1250 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಲಿದೆ.

ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕ್ ಟೀಸರ್ ಬಿಡುಗಡೆ

ಹಾರ್ಲೆ-ಡೇವಿಡ್ಸನ್ ಕಂಪನಿಯು ಹೀರೋ ಮೊಟೊಕಾರ್ಪ್ ಸಹಯೋಗದೊಂದಿಗೆ ಭಾರತದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಾರೆ. ಇನ್ನು ಮೊದಲ ಅಡ್ವಂಚರ್ ಬೈಕ್ ಪ್ಯಾನ್ ಅಮೆರಿಕವನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ, ಸ್ಪೋಟ್ಸ್ ವಿಭಾಗದಲ್ಲಿ ರೆವಲ್ಯೂಷನ್ ಮ್ಯಾಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಮತ್ತೊಂದು ಹೊಸ ಬೈಕನ್ನು ಅನಾವರಣಗೊಳಿಸಲು ನಾವು ಉತ್ಸುಕರಾಗಿದ್ದೇವೆ, ಸಾಟಿಯಿಲ್ಲದ ಹಾರ್ಲೆ-ಡೇವಿಡ್ಸನ್ ತಂತ್ರಜ್ಞಾನ, ಕಾರ್ಯಕ್ಷಮತೆ ಮತ್ತು ಶೈಲಿಯನ್ನು ಪ್ರದರ್ಶಿಸುತ್ತೇವೆ ಎಂದು ಸಿಇಒ ಜೋಚೆನ್ ಜೆಟ್ಸ್ ಹೇಳಿದ್ದರು.

ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕ್ ಟೀಸರ್ ಬಿಡುಗಡೆ

ಹೊಸ ಟೀಸರ್ ಚಿತ್ರದಲ್ಲಿ ಜುಲೈ 13 ರಂದು ಪರಿಚಯಿಸುತ್ತೇವೆ ಎಂಬ ಸುಳಿವನ್ನು ನೀಡಿದೆ, ಪ್ಯಾನ್ ಅಮೇರಿಕಾ 1250 ಬೈಕಿನಲ್ಲಿ ಬಳಿಸಿದ ಅದೇ ರೆವಲ್ಯೂಷನ್ಮ್ಯಾಕ್ಸ್ ಎಂಜಿನ್ ಅನ್ನು ಇದರಲ್ಲಿಯು ನೀಡಬಹುದು ಎಂಬ ಸುಳಿವನ್ನು ಟೀಸರ್ ನಲ್ಲಿ ನೀಡಿದೆ.

ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕ್ ಟೀಸರ್ ಬಿಡುಗಡೆ

2018ರಲ್ಲಿ ಮೊದಲ ಬಾರಿ ಹಾರ್ಲೆ-ಡೇವಿಡ್ಸನ್ ಕಂಪನಿಯು ಕಸ್ಟಮ್ 1250 ಬೈಕನ್ನು ಕಾನ್ಸಪ್ಟ್ ಮಾದರಿಯಾಗಿ ಪ್ರದರ್ಶಿಸಿದ್ದರು. ಇನ್ನು ಈ ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಯಾವುದು ಬಹಿರಂಗವಾಗಿಲ್ಲ,

ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕ್ ಟೀಸರ್ ಬಿಡುಗಡೆ

ಹಾರ್ಲೆ ಡೇವಿಡ್ಸನ್ ತನ್ನ ಹೊಸ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕ್ ಟೀಸರ್ ಬಿಡುಗಡೆ

ಅಗ್ರೇಸಿವ್ ಲುಕ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ಕಾಣುವ ಅಡ್ವೆಂಚರ್ ಬೈಕ್ ಗಳ ರೀತಿ ವಿನ್ಯಾಸವನ್ನು ಹೊಂದಿದೆ. ಅಲ್ಲದೇ ಈ ಬೈಕಿನಲ್ಲಿ ಹಲವಾರು ನೂತನ ಫೀಚರ್ಸ್‌ಗಳು ಮತ್ತು ಅತ್ಯಾಧುನಿಕ ತಂತ್ರಜ್ಙಾನಗಳನ್ನು ಒಳಗೊಂಡಿದೆ. ಇದೇ ರೀತಿಯ ಎಲ್ಲಾ ತಂತ್ರಜ್ಙಾನ ಮತ್ತು ಆಕರ್ಷಕ ವಿನ್ಯಾಸವನ್ನು ಕಸ್ಟಮ್ 1250 ಬೈಕ್ ಹೊಂದಿರುತ್ತದೆ.

ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕ್ ಟೀಸರ್ ಬಿಡುಗಡೆ

ಈ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನ ಎರಡು ರೂಪಾಂತರಗಳಲ್ಲಿ ಕೆಲವು ಫೀಚರ್ಸ್‌ಗಳು ಒಂದೇ ರೀತಿಯಲ್ಲಿ ನೀಡಿದ್ದಾರೆ. ಇದು ಫುಲ್-ಎಲ್ಇಡಿ ಲೈಟಿಂಗ್, ಬ್ಲೂಟೂತ್-ಕನೆಕ್ಟಿವಿಟಿ ಹೊಂದಿರುವ 6.8-ಇಂಚಿನ ಕಲರ್ ಡಿಸ್ ಪ್ಲೇ ಮತ್ತು ಯುಎಸ್‌ಬಿ ಸಿ-ಟೈಪ್ ಔಟ್ ಲೈಟ್ ಅನ್ನು ಒಳಗೊಂಡಿವೆ.

ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕ್ ಟೀಸರ್ ಬಿಡುಗಡೆ

ಇನ್ನು ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ ಐದು ರೈಡಿಂಗ್ ಮೋಡ್ ಗಳನ್ನು ಪಡೆಯುತ್ತದೆ. ನಾಲ್ಕು ಪ್ರಿ-ಪ್ರೊಗಾಮ್ ಮಾಡಲಾದ ರೋಡ್, ಸ್ಪೋರ್ಟ್, ರೈನ್, ಆಫ್-ರೋಡ್ ಮತ್ತು ಒಂದು ಕಸ್ಟಮ್ ಮೋಡ್ ಅನ್ನು ರೈಡರ್ ತನ್ನ ಸ್ವಂತ ಆದ್ಯತೆಯ ಪ್ರಕಾರ ಹೊಂದಿಸಬಹುದು.

ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕ್ ಟೀಸರ್ ಬಿಡುಗಡೆ

ಇದೇ ರೀತಿ ಹೊಸ ಹಾರ್ಲೆ ಡೇವಿಡ್ಸನ್ ಕಸ್ಟಮ್ 1250 ಬೈಕ್ ಕೂಡ ಅತ್ಯಾಧುನಿಕ ತಂತ್ರಜ್ಙಾನ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಬರುತ್ತದೆ. ಇನ್ನು ಜುಲೈ 13ರಂದು ಅನಾವರಣದ ವೇಳೆ ಈ ಹೊಸ ಹಾರ್ಲೆ ಡೇವಿಡ್ಸನ್ ಬೈಕಿನ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗವಾಗುತ್ತದೆ.

Most Read Articles

Kannada
English summary
Harley-Davidson Custom 1250 To Be Introduced Soon. Read In Kannada.
Story first published: Tuesday, June 22, 2021, 21:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X