Just In
- 1 min ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 5 min ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- 30 min ago ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- 1 hr ago Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
Don't Miss!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಾವರಣವಾಯ್ತು ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್ಸ್ಟರ್ ಎಸ್ ಕ್ರೂಸರ್ ಬೈಕ್
ಅಮೆರಿಕ ಮೂಲದ ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಹೊಸ ಸ್ಪೋರ್ಟ್ಸ್ಟರ್ ಎಸ್ ಕ್ರೂಸರ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್ಸ್ಟರ್ ಎಸ್ ಸುಧಾರಿತ ತಂತ್ರಜ್ಙಾನವನ್ನು ಹೊಂದಿರುವ ಪ್ರೀಮಿಯಂ ಕ್ರೂಸರ್ ಬೈಕ್ ಆಗಿದೆ.
ಯುಎಸ್ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್ಸ್ಟರ್ ಎಸ್ ಬೈಕಿನ ಬೆಲೆಯು 14,999 ಡಾಲರ್ ಆಗಿದೆ. ಇನ್ನು ಈ ಕ್ರೂಸರ್ ಬೈಕನ್ನು ಭಾರತದಲ್ಲಿ ಸುಮಾರು ರೂ,15 ಲಕ್ಷಗಳಿಗೆ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ, ಈ ಹೊಸ ಕ್ರೂಸರ್ ಬೈಕ್ ಹಾರ್ಲಿಯ ರೆವಲ್ಯೂಷನ್ ಮ್ಯಾಕ್ಸ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. ಹಾರ್ಲೆ ಡೇವಿಡ್ಸನ್ ಸ್ಪೋರ್ಟ್ಸ್ಟರ್ ಎಸ್ ಬೈಕ್ 227.7 ಕೆಜಿ ತೂಕವನ್ನು ಹೊಂದಿದೆ.
ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್ಸ್ಟರ್ ಎಸ್ ಬೈಕಿನಲ್ಲಿ 250 ಸಿಸಿ ರೆವಲ್ಯೂಷನ್ ಮ್ಯಾಕ್ಸ್ 1250 ಟಿ ವಿ-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 121 ಬಿಹೆಚ್ಪಿ ಪವರ್ ಮತ್ತು 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ಬಾಕ್ಸ್ಗೆ ಸ್ಲಿಪ್ಪರ್ ಕ್ಲಚ್ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಬೈಕಿನಲ್ಲಿ ರೋಡ್, ಸ್ಪೋರ್ಟ್ಸ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಒಳಗೊಂಡಿದೆ.
ಹೊಸ ಹಾರ್ಲೆ ಡೇವಿಡ್ಸನ್ ಸ್ಪೋರ್ಟ್ಸ್ಟರ್ ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಶೋವಾ ಫೋರ್ಕ್ ಮತ್ತು ಹಿಂಭಾಗದಲ್ಲಿ ಶೋವಾ ಪಿಗ್ಗಿಬ್ಯಾಕ್ ಪ್ರಿ ಲೊಡ್ ಸೆಟಪ್ ಅನ್ನು ಹೊಂದಿದೆ.
ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ನಿಂದ ಬ್ರೆಂಬೊ ರೇಡಿಯಲ್ 4-ಪಿಸ್ಟನ್ ಕ್ಯಾಲಿಪರ್ ಮತ್ತು ಹಿಂಭಾಗದಲ್ಲಿ 2-ಪಿಸ್ಟನ್ ಬ್ರೆಂಬೊ ಕ್ಯಾಲಿಪರ್ನೊಂದಿಗೆ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.
ಈ ಬೈಕಿನಲ್ಲಿ ಕಾರ್ನೆರಿಂಗ್ ವರ್ಧಿತ ಡ್ರ್ಯಾಗ್-ಟಾರ್ಕ್ ಸ್ಲಿಪ್ ಕಂಟ್ರೋಲ್ ಸಿಸ್ಟಂ, ವರ್ಧಿತ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ಸಿ-ಎಬಿಎಸ್), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ( ಫ್ರಂಟ್-ವೀಲ್ ಲಿಫ್ಟ್ ತಗ್ಗಿಸುವಿಕೆ (ಎಫ್ಎಲ್ಎಂ) ಯೊಂದಿಗೆ ಟಿಪಿಎಂಎಸ್) ಮತ್ತು ಕಾರ್ನರಿಂಗ್ ವರ್ಧಿತ ಟ್ರ್ಯಾಕ್ಷನ್ ಕಂಟ್ರೋಲ್ (ಸಿ-ಟಿಸಿಎಸ್) ಅನ್ನು ಹೊಂದಿದೆ.
ಹಾರ್ಲೆ ಡೇವಿಡ್ಸನ್ ಸ್ಪೋರ್ಟ್ಸ್ಟರ್ ಎಸ್ ಕ್ರೂಸರ್ ಬೈಕ್ ಸ್ಟೋನ್ ವಾಶ್ಡ್ ವೈಟ್ ಪರ್ಲ್, ಮಿಡ್ನೈಟ್ ಕ್ರಿಮ್ಸನ್ ಮತ್ತು ವಿವಿದ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳ ಆಯ್ಜೆಗಳನ್ನು ಒಳಗೊಂಡಿದೆ.
ಈ ಬೈಕಿನಲ್ಲಿ ಯತಾಕಾರದ ಎಲ್ಇಡಿ ಹೆಡ್ಲ್ಯಾಂಪ್, ಟಿಯರ್ಡ್ರಾಪ್ ಇಂಧನ ಟ್ಯಾಂಕ್, ವಿಶಾಲ ಹ್ಯಾಂಡಲ್ಬಾರ್ಗಳು ಮತ್ತು ಫ್ಲಾಟ್ ಸೀಟ್. ಕಂಚಿನ ಎಂಜಿನ್ ಹೆಡ್, ಬಾಬ್ ಕಟ್ ಫೆಂಡರ್ಗಳು ಮತ್ತು ಟೈಲ್-ಪೈಪ್ ಅನ್ನು ಹೊಂದಿದೆ. ಈ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.