ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಸಿಬಿ300ಆರ್ ಬೈಕ್ ಅನ್ನು 2021ರ ಇಂಡಿಯಾ ಬೈಕ್ ವೀಕ್‌ನಲ್ಲಿ ಅನಾವರಣಗೊಳಿಸಿದೆ. ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ 2022ರ ಹೋಂಡಾ ಸಿಬಿ300ಆರ್ ಬೈಕ್ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಈ ಬೈಕ್ ಕ್ಲೀನರ್ ಎಂಜಿನ್‌ನ ಹೊರತಾಗಿ ಸೂಕ್ಷ್ಮವಾದ ನವೀಕರಣಗಳನ್ನು ಪಡೆಯುತ್ತದೆ. ಅತ್ಯಂತ ಪ್ರಮುಖವಾದ ಬದಲಾವಣೆಯು ಗೋಲ್ಡನ್ ಅಪ್ ಸೈಡ್ ಡೌನ್ ಫೋರ್ಕ್‌ಗಳ ರೂಪದಲ್ಲಿ ಬರುತ್ತದೆ, ಅದು ಸ್ವಲ್ಪ ಬೀಫಿಯರ್ ಆಗಿ ಕಾಣುವಂತೆ ಮಾಡುತ್ತದೆ. ಇದರೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಈಗ ಸಹಾಯ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಸಹ ಪಡೆಯುತ್ತದೆ. ಎಂಜಿನ್‌ಗೆ ಸಂಬಂಧಿಸಿದಂತೆ, ಹೋಂಡಾ ಸಂಪೂರ್ಣ ವಿಶೇಷಣಗಳನ್ನು ಬಹಿರಂಗಪಡಿಸದಿದ್ದರೂ, ಅದರ ಪವರ್ ಮತ್ತು ಟಾರ್ಕ್ ಔಟ್‌ಪುಟ್‌ನಲ್ಲಿ ಕನಿಷ್ಠ ಬದಲಾವಣೆಯನ್ನು ನಿರೀಕ್ಷಿಸುತ್ತೇವೆ.

ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಹಿಂದಿನ ಸಿಬಿ300ಆರ್ ಬಿಎಸ್4 ಮಾದರಿಯಲ್ಲಿ ಇದ್ದ ಅದೇ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಮುಂದುವರೆಸಬಹುದು. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಇನ್ನು ಹೊಸ ಹೋಂಡಾ ಸಿಬಿ300ಆರ್ ಬೈಕಿನಲ್ಲಿ ನಿರೀಕ್ಷಿಸಬಹುದಾದ ಒಂದು ನವೀಕರಣವೆಂದರೆ ಸ್ಲಿಪ್-ಅಸಿಸ್ಟ್ ಕ್ಲಚ್ ಆಗಿದೆ

ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಹಿಂದಿನ ಮಾದರಿ ಹೋಂಡಾ ಸಿಬಿ300ಆರ್ ಬೈಕಿನಲ್ಲಿ 286 ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನ ಅನ್ನು ಹೊಂದಿತ್ತು. ಹೋಂಡಾ ಕಂಪನಿಯು ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಈ ಎಂಜಿನ್ 30 ಬಿಹೆಚ್‍ಪಿ ಪವರ್ ಮತ್ತು 27.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಪವರ್ ಅನ್ನು ಹೊಂದಿದೆ. ಹೋಂಡಾ ಕಂಪನಿಯು ಸಿಬಿ300ಆರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದರೆ ಅದನ್ನು ಬ್ರ್ಯಾಂಡ್‌ನ ಪ್ರೀಮಿಯಂ ಬಿಗ್‌ವ್ಹೀಂಗ್ ಡೀಲರುಗಳ ಮೂಲದ ಮಾರಾಟ ಮಾಡುವುದನ್ನು ಮುಂದುವರಿಸಲಾಗುತ್ತದೆ.

ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಇನ್ನು ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹೋಂಡಾದ ರೋಡ್ ಸಿಂಕ್ ವಾಯ್ಸ್ ಅಸಿಸ್ಟೆಂಟ್ ಮತ್ತು ಕನೆಕ್ಟಿವಿಟಿ ತಂತ್ರಜ್ಞಾನವನ್ನು ಬಿಎಸ್-6 ಹೋಂಡಾ ಸಿಬಿ300ಆರ್ ಬೈಕ್ ಪಡೆದುಕೊಳ್ಳಬಹುದು. ಇನ್ನು ಉಳಿದಂತೆ ಬೈಕಿನ ಎಲ್ಲಾ ಇತರ ಅಂಶಗಳಲ್ಲಿ ಬದಲಾಗದೆ ಉಳಿದಿದೆ

ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಹೊಸ ಹೋಂಡಾ ಸಿಬಿ300ಆರ್ ಬೈಕಿನಲ್ಲಿ ಓಲ್ಡ್ ಸ್ಕೂಲ್ ವಿನ್ಯಾಸ ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು ಮತ್ತು ಆಧುನಿಕ ಎಲ್‌ಇಡಿ ತಂತ್ರಜ್ಞಾನದ ಮಿಶ್ರಣದಿಂದ ವೈವಿಧ್ಯಮಯ ವಿನ್ಯಾಸದಿಂದ ಕೂಡಿರುತ್ತದೆ. ಇದಲ್ಲದೆ ಈ ಬೈಕ್ ಅಪ್-ರೈಟ್ ರೈಡರ್ ಏರೋಗಾಮಿಕ್ ಸರಳ ವಿನ್ಯಾಸವನ್ನು ಸಹ ಒಳಗೊಂಡಿದೆ.

ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಇನ್ನು ಈ ಹೊಸ ಹೋಂಡಾ ಸಿಬಿ300ಆರ್ ಬೈಕಿನಲ್ಲಿ ಮಸ್ಕ್ಲರ್ ಲುಕ್ ಫ್ಯೂಯಲ್ ಟ್ಯಾಂಕ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಇನ್ನು ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಗಾಗಿ, ಮುಂಭಾಗದಲ್ಲಿ ಯುಎಸ್ಡಿ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.

ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಇನ್ನು ಈ ಹೊಸ ಹೋಂಡಾ ಸಿಬಿ300ಆರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಆಳವಡಿಸಲಾಗಿದೆ, ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗುತ್ತದೆ.

ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಹೋಂಡಾ ಸಿಬಿ300ಆರ್ ಬೈಕ್ 147 ಕೆಜಿ ಕರ್ಬ್ ತೂಕವು ಬಿಎಸ್6 ಪರಿಷ್ಕರಣೆಗಳೊಂದಿಗೆ ಸ್ವಲ್ಪ ಬದಲಾಗಿರಬಹುದು. ಈ ಹಿಂದಿನ ಬಿಎಸ್4 ಹೋಂಡಾ ಸಿಬಿ300ಆರ್ ಬೈಕ್ ಅನ್ನು ಸ್ಥಗಿತಗೊಳಿಸುವ ವೇಳೆ ಎಕ್ಸ್ ಶೋರೂಂ ಪ್ರಕಾರ ರೂ.2.41 ಲಕ್ಷವಾಗಿತ್ತು. ಇನ್ನು ಬಿಎಸ್6 ಮಾದರಿಯು ಹಿಂದಿನ ಬೆಲೆಗಿಂತ ಎಷ್ಟು ಹೆಚ್ಚಳವನ್ನು ಪಡೆಯುತ್ತದೆ ಎಂಬುದನ್ನು ನೋಡಬೇಕಾಗಿದೆ.

ಇಂಡಿಯನ್ ಬೈಕ್ ವೀಕ್ 2021: ಬಿಎಸ್6 Honda CB300R ಬೈಕ್ ಅನಾವರಣ

ಹೊಸ ಹೋಂಡಾ ಸಿಬಿ300ಆರ್ ಬೈಕ್ ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಹೋಂಡಾ ಸಿಬಿ300ಆರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಮಹೀಂದ್ರಾ ಮೊಜೊ, ಬಿಎಂಡಬ್ಲ್ಯು ಜಿ310ಆರ್ ಮತ್ತು ಟಿವಿಎಸ್ ಅಪಾಚೆ 310 ಆರ್ ಬೈಕ್ ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
New honda cb300r bs 6 unveiled at ibw features updates details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X