ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ ಎರಡು ಹೊಸ ಪ್ರೀಮಿಯಂ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ. ಇದು ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ನಿಯೋ ಕೆಫೆ ರೇಸರ್ ಬೈಕ್‌ಗಳಾಗಿವೆ.

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಇನ್ನು ಈ ಎರಡು ಪ್ರೀಮಿಯಂ ಬೈಕ್‌ಗಳ ಬೆಲೆ ಬಗ್ಗೆ ಹೇಳುವುದಾದರೆ. ಇದರಲ್ಲಿ 2021ರ ಹೋಂಡಾ ಸಿಬಿಆರ್650ಆರ್ ಬೈಕಿನ ಬೆಲೆಯು ರೂ.8.88 ಲಕ್ಷಗಳಾದರೆ, ಸಿಬಿ650ಆರ್ ನಿಯೋ ಕೆಫೆ ರೇಸರ್ ಬೈಕ್ ಬೆಲೆಯು ರೂ.8.67 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಗುರುಗ್ರಾಮ್ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಎರಡು ಪ್ರೀಮಿಯಂ ಬೈಕ್‌ಗಳು ಪರಸ್ಪರ ಯಾಂತ್ರಿಕತೆಯನ್ನು ಹಂಚಿಕೊಳ್ಳುತ್ತವೆ.

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ನಿಯೋ ಕೆಫೆ ರೇಸರ್ ಬೈಕ್‌ಗಳು ಕ್ಯಾಂಡಿ ಕ್ರೋಮೋಸ್ಫಿಯರ್ ರೆಡ್ ಮತ್ತು ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇನ್ನು ಸಿಬಿ650ಆರ್ ಅನ್ನು ಗ್ರ್ಯಾಂಡ್ ಪ್ರಿಕ್ಸ್ ರೆಡ್ ಮತ್ತು ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್‌ನಲ್ಲಿ ನೀಡಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ನಿಯೋ ಕೆಫೆ ರೇಸರ್ ಬೈಕ್‌ಗಳು ನವೀಕರಿಸಿದ ಎಂಜಿನ್ ಅನ್ನು ಒಳಗೊಂಡಿರುತ್ತವೆ. ಇತ್ತೀಚಿನ ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಪೂರೈಸಲು ಇನ್-ಲೈನ್ ನಾಲ್ಕು-ಸಿಲಿಂಡರ್ 649 ಸಿಸಿ ಎಂಜಿನ್ ಅನ್ನು ನವೀಕರಿಸಲಾಗಿದೆ.

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಈ ಎಂಜಿನ್ ಆರ್‌ಪಿಎಂನಲ್ಲಿ 86 ಬಿಹೆಚ್‌ಪಿ ಮತ್ತು 8,500 ಆರ್‌ಪಿಎಂನಲ್ಲಿ ಗರಿಷ್ಠ ಟಾರ್ಕ್ 57.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಅಸಿಸ್ಟ್ ಕ್ಲಚ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಸಿಬಿಆರ್650ಆರ್ ಮತ್ತು ಸಿಬಿ650ಆರ್ ಬೈಕ್‌ಗಳು ಸೈಡ್-ಸ್ವಿಪ್ಟ್ ಎಕ್ಸಾಸ್ಟ್ ಅನ್ನು ಹೊಂದಿದ್ದು, ಇದು ಬೈಕ್‌ಗಳ ಒಟ್ಟಾರೆ ಲುಕ್ ಅನ್ನು ಹೆಚ್ಚಿಸುತ್ತದೆ. ಈ ಬೈಕ್‌ಗಳಲ್ಲಿ ಒಂದೇ ರೀತಿಯ ಚಾಸಿಸ್, ಸಸ್ಪೆಂಕ್ಷನ್ ಮತ್ತು ಬ್ರೇಕ್‌ಗಳ ಸೆಟಪ್ ಅನ್ನು ಬಳಿಸಿದೆ.

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಹೊಸ ಹೋಂಡಾ ಎರಡು ಪ್ರೀಮಿಯಂ ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಶೋವಾ ಸೆಪರೇಟ್ ಫಂಕ್ಷನ್-ಬಿಗ್ ಪಿಸ್ಟನ್ (ಎಸ್‌ಎಸ್‌ಎಫ್-ಬಿಪಿ) ಯುಎಸ್‌ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಇನ್ನು ಈ ಬೈಕ್‌ಗಳಲ್ಲಿ ಬ್ರೇಕಿಂಗ್ ಅನ್ನು ಡ್ಯುಯಲ್ 310 ಎಂಎಂ ರೋಟರ್‌ಗಳ ಮೂಲಕ ನಾಲ್ಕು ಪಿಸ್ಟನ್ ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಮುಂಭಾಗದಲ್ಲಿ ಒಂದೇ 240 ಎಂಎಂ ರೋಟರ್ ಸಿಸ್ಟಂ ಅನ್ನು ಹೊಂದಿದೆ.

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಇನ್ನು ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ಬೈಕ್‌ಗಳಲ್ಲಿ ಎಲೆಕ್ಟ್ರಾನಿಕ್ಸ್ ರೈಡರ್ ಏಡ್ಸ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, (ಎಚ್ಐಎಸ್ಎಸ್) ಹೋಂಡಾ ಇಗ್ನಿಷನ್ ಸೆಕ್ಯುರಿಟಿ ಸಿಸ್ಟಂ ಮತ್ತು (ಎಚ್ಎಸ್ಟಿಸಿ) ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಅನ್ನು ಒಳಗೊಂಡಿದೆ.

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಇನ್ನು ಎಡ ಹ್ಯಾಂಡಲ್‌ಬಾರ್‌ನಲ್ಲಿರುವ ಸ್ವಿಚ್ ಮೂಲಕ ಟಾರ್ಕ್ ನಿಯಂತ್ರಣವನ್ನು (ಟಿಸಿ) ಆನ್ ಅಥವಾ ಆಫ್ ಮಾಡಲು ರೈಡರ್ ಆಯ್ಕೆ ಮಾಡಬಹುದು. ಎರಡು ಬೈಕ್‌ಗಳಲ್ಲಿ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಒಂದೇ ಆಗಿರುತ್ತದೆ.

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಈ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಗೇರ್ ಪೋಷಿಸನ್, ಡಿಜಿಟಲ್ ಸ್ಪೀಡೋಮೀಟರ್, ಡಿಜಿಟಲ್ ಬಾರ್-ಗ್ರಾಫ್ ಟ್ಯಾಕೋಮೀಟರ್, ಡ್ಯುಯಲ್ ಟ್ರಿಪ್ ಮೀಟರ್, ಡಿಜಿಟಲ್ ಫ್ಯೂಯಲ್ ಗೇಜ್ ಮತ್ತು ಇತರ ಮಾಹಿತಿಗಳನ್ನು ಒದಗಿಸುತ್ತದೆ.

ಭಾರತದಲ್ಲಿ 2021ರ ಹೋಂಡಾ ಸಿಬಿಆರ್650ಆರ್, ಸಿಬಿ650ಆರ್ ಬೈಕ್‌ಗಳು ಬಿಡುಗಡೆ

ಹೊಸ ಹೋಂಡಾ ಸಿಬಿಆರ್650ಆರ್ ಮತ್ತು ಸಿಬಿ650ಆರ್ ಬೈಕ್‌ಗಳು ಭಾರತದಲ್ಲಿ ಮಿಡ್-ವೈಟ್ ವಿಭಾಗದಲ್ಲಿರುತ್ತದೆ. ಈ ಎರಡು ಬೈಕ್‌ಗಳು ತನ್ನ ಪ್ರತಿಸ್ಪರ್ಧಿಗಳಾದ ಕವಾಸಕಿ ಝಡ್650 ಮತ್ತು ನಿಂಜಾ 650 ಬೈಕ್ ಗಳಿಗಿಂತ ದುಬಾರಿಯಾಗಿದೆ.

Most Read Articles

Kannada
English summary
2021 Honda CB650R & CBR650R Launched. Read In Kananada.
Story first published: Tuesday, March 30, 2021, 20:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X