Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಗ್ರಾಜಿಯಾ 125 ರೆಪ್ಸೊಲ್ ಹೋಂಡಾ ಟೀಮ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಗ್ರಾಜಿಯಾ 125 ರೆಪ್ಸೊಲ್ ಹೋಂಡಾ ಟೀಮ್ ಎಡಿಷನ್(Honda Grazia 125 Repsol Honda Team Edition) ಬೆಲೆಯು ಗುರುಗ್ರಾಮ್ ಎಕ್ಸ್ ಶೂರೂಂ ಪ್ರಕಾರ ರೂ.87,138 ಆಗಿದೆ.

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಹೊಸ ಹೋಂಡಾ ಗ್ರಾಜಿಯಾ 125 ರೆಪ್ಸೊಲ್ ಹೋಂಡಾ ಟೀಮ್ ಎಡಿಷನ್ ರೇಸಿಂಗ್ ಟೀಮ್-ಪ್ರೇರಿತ ಗ್ರಾಫಿಕ್ಸ್ ಮತ್ತು ವಿನ್ಯಾಸ ಥೀಮ್ ಅನ್ನು ಒಳಗೊಂಡಿದೆ. ಈ ಎಡಿಷನ್ ಆಕರ್ಷಕ ಆರೇಂಜ್ ಬಣ್ಣದ ಅಸ್ಸೆಂಟ್ ಗಳೊಂದಿಗೆ ಕಂಡುಬರುತ್ತದೆ, ಹೋಂಡಾ ಮೋಟೋಜಿಪಿಯ ಸಿಗ್ನೇಚರ್ ಬಣ್ಣ, ಅದರ ವ್ಹೀಲ್ ರಿಮ್‌ಗಳಾದ್ಯಂತ ಸ್ಪೋರ್ಟಿಯರ್ ಆಕರ್ಷಣೆಯೊಂದಿಗೆ ದೇಶದ ರೇಸಿಂಗ್ ಅಭಿಮಾನಿಗಳನ್ನು ಆಕರ್ಷಿಸುವಂತಿದೆ.

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಹೊಸ ಹೋಂಡಾ ಗ್ರಾಜಿಯಾ 125 ರೆಪ್ಸೊಲ್ ಹೋಂಡಾ ಟೀಮ್ ಎಡಿಷನ್ ಏಪ್ರನ್-ಮೌಂಟೆಡ್ ಎಲ್ಇಡಿ ಹೆಡ್‌ಲೈಟ್ ಇಂಟಿಗ್ರೇಟೆಡ್ ಪಾಸ್ ಲೈಟ್ ಸ್ವಿಚ್, ಎಂಜಿನ್ ಕಟ್-ಆಫ್ ಸಿಸ್ಟಂನೊಂದಿಗೆ ಸೈಡ್-ಸ್ಟ್ಯಾಂಡ್ ಇಂಟಿಕೇಟರ್ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಉಳಿಸಿಕೊಂಡಿದೆ.

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಈ ಹೊಸ ಕಾಸ್ಮೆಟಿಕ್ ಅಪ್‌ಡೇಟ್‌ನ ಹೊರತಾಗಿ, ಸ್ಕೂಟರ್ ಇತರ ಎಲ್ಲ ಅಂಶಗಳು ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ. ಗ್ರಾಜಿಯಾ 125 ಸ್ಕೂಟರ್‌ನಲ್ಲಿ 125 ಸಿಸಿ ಹೆಚ್‌ಇಟಿ(ಹೋಂಡಾ ಇಕೋ ಟೆಕ್ನಾಲಜಿ) ಬಿಎಸ್‌ವಿಐ ಪಿಜಿಎಂ-ಎಫ್‌ಐ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ ಪೇಟೆಂಟ್ ಪಡೆದ ಎಸಿಜಿ ಸ್ಟಾರ್ಟರ್ ಮೋಟರ್ ಹೊಂದಿದೆ.

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಇನ್ನು ಪಾಸ್-ಸ್ವಿಚ್, ಹೊಸ ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಸೀಟ್‌ಗಾಗಿ ಮಲ್ಟಿ-ಫಂಕ್ಷನಲ್ ಸ್ವಿಚ್ ಮತ್ತು ಫ್ಯೂಯಲ್ ಲಿಡ್ ನಂತಹ ಫೀಚರ್ಸ್ ಗಳನ್ನು ಒಳಗೊಂಡಿದೆ. ಈ ಸ್ಕೂಟರ್‌ನಲ್ಲಿ 124 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6000 ಆರ್‌ಪಿಎಂನಲ್ಲಿ 8 ಬಿಹೆಚ್‍ಪಿ ಪವರ್ ಮತ್ತು 5000 ಆರ್‌ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ವಿ-ಟೈಪ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಈ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೂರು-ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಸ್ಪ್ರಿಂಗ್-ಲೋಡೆಡ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಈ ಸ್ಕೂಟರ್‌ನಲ್ಲಿ ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 190 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇನ್ನು ಹೋಂಡಾ ಗ್ರಾಜಿಯಾ 125 ಸ್ಕೂಟರ್ ಬ್ರ್ಯಾಂಡ್‌ನ ಪ್ರೀಮಿಯಂ 125 ಸಿಸಿ ವಿಭಾಗದಲ್ಲಿ ಜನಪ್ರಿಯ ಸ್ಕೂಟರ್ ಆಗಿದೆ.

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯ ಸೇಲ್ಸ್ ಮತ್ತು ಮಾರ್ಕೆಟ್ ವಿಭಾಗದ ನಿರ್ದೇಶಕರಾದ ಯದ್ವಿಂದರ್ ಸಿಂಗ್ ಗುಲೇರಿಯಾ ಅವರು ಮಾತನಾಡಿ, ಗ್ರಾಜಿಯಾ 125 ರೆಪ್ಸೊಲ್ ಹೋಂಡಾ ಟೀಮ್ ಎಡಿಷನ್ ರೇಸಿಂಗ್ ಮತ್ತು MotoGP ಅಭಿಮಾನಿಗಳ ಆಕರ್ಷಣೆಯನ್ನು ಮತ್ತೊಮ್ಮೆ ಸೆಳೆಯುತ್ತದೆ. ಇದರ ಸ್ಪೋರ್ಟಿಯರ್ ನೋಟ ಮತ್ತು ಟ್ರೇಡ್‌ಮಾರ್ಕ್ ಆರೇಂಜ್ ಮತ್ತು ವೈಟ್ ಸ್ಮಾರ್ಟ್ ಗ್ರಾಫಿಕ್ಸ್ ಸ್ಕೀಮ್ ಸ್ಪೋರ್ಟಿ ಎಂಜಿನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ರೇಸಿಂಗ್ ಉತ್ಸಾಹಿಗಳಿಗೆ ತಡೆಯಲಾಗದ ಪ್ಯಾಕೇಜ್ ಆಗಿದೆ ಎಂದು ಹೇಳಿದರು.

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ 2021ರ ಅಕ್ಟೋಬರ್ ತಿಂಗಳ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ಈ ಮಾರಾಟ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು ಒಟ್ಟು 4,32,207 ಯುನಿಟ್‌ಗಳನ್ನು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಹೋಂಡಾ ಕಂಪನಿಯು ಒಟ್ಟು 5,27,180 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.18 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಇನ್ನು 2021ರ ಅಕ್ಟೋಬರ್ ತಿಂಗಳಿನಲ್ಲಿ ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 3,94,623 ಯುನಿಟ್‌ಗನ್ನು ಮಾರಾಟಗೊಳಿಸಿವೆ. ಇನ್ನು ಕಳೆದ ವರ್ಷದ ಇದೇ ಅವಧಿಯಲ್ಲಿ ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 4,94,459 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.20 ರಷ್ಟು ಕುಸಿತವಾಗಿದೆ. ಹೋಂಡಾ ಟೂ-ವೀಲರ್ಸ್ ಇಂಡಿಯಾ ಕಳೆದ ತಿಂಗಳಿನಲ್ಲಿ 37,584 ಯುನಿಟ್‌ಗಳನ್ನು ರಫ್ಟು ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಹೋಂಡಾ ಕಂಪನಿಯು 32,721 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಹೋಂಡಾ ಕಂಪನಿಯು ಶೇ.15 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ಭಾರತದಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ 5 ಕೋಟಿ ಗಡಿ ದಾಟಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿದ್ದಾರೆ. ಹೋಂಡಾ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಆಕ್ಟಿವಾ ಸ್ಕೂಟರ್ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಹೋಂಡಾ 2001ರಲ್ಲಿ ಆಕ್ಟಿವಾ ಮೂಲಕ ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಾಹನಗಳ ಜಾಗವನ್ನು ಪ್ರವೇಶಿಸಿದ್ದರು,

Honda Grazia 125 ಸ್ಕೂಟರ್‌ನ ಹೊಸ Repsol ಎಡಿಷನ್ ಬಿಡುಗಡೆ

ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಫ್ಯಾಸಿನೊ 125, ಟಿವಿಎಸ್ ಎನ್‍ಟಾರ್ಕ್ 125 ಮತ್ತು ಸುಜುಕಿ ಬರ್ಗ್‌ಮ್ಯಾನ್‌ ಸ್ಟ್ರೀಟ್ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New honda grazia 125 repsol honda team edition launched price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X