ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹಸ್ಕ್​ವರ್ನಾ

ಸ್ವೀಡಿಷ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಸ್ಕ್​ವರ್ನಾ ತನ್ನ ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಹಸ್ಕ್​ವರ್ನಾ ಎಲೆಕ್ಟ್ರಿಕ್ ಬೈಕಿನ ಕಾನ್ಸೆಪ್ಟ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹಸ್ಕ್​ವರ್ನಾ

ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಮಾರಾಟವಾಗುವ 250ಸಿಸಿಯ ವಿಟ್‌ಪಿಲೆನ್ ಮತ್ತು ಸ್ವಾರ್ಟ್‌ಪಿಲೆನ್ ಮಾದರಿಗಳನ್ನು ಹೋಲುತ್ತದೆ. ಇ-ಪಿಲೆನ್ ಆಲ್-ಎಲೆಕ್ಟ್ರಿಕ್ ಆಗಿದ್ದು, ಮತ್ತು ಇದು ಮೂಲ ಸಂಸ್ಥೆ ಪಿಯರೆರ್ ಮೊಬಿಲಿಟಿ ಮತ್ತು ಭಾರತದ ಬಜಾಜ್ ಆಟೋ ಕಂಪನಿಗಳ ಮಾದರಿಯಾಗಿದೆ. ಇ-ಪಿಲೆನ್ ಹಸ್ಕ್​ವರ್ನಾದ ಮೊದಲ ಎಲೆಕ್ಟ್ರಿಕ್ ಕಾನ್ಸೆಪ್ಟ್ ಆಗಿರಬಹುದು.

ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹಸ್ಕ್​ವರ್ನಾ

ಈ ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಶೀಘ್ರದಲ್ಲೇ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಬಹುದು. ಇದನ್ನು ಮೊದಲು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬಹುದು. ಸಾಮಾನ್ಯ 48-ವೋಲ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಭವಿಷ್ಯದಲ್ಲಿ ವಿವಿಧ ರೀತಿಯ ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡುಬಹುದು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹಸ್ಕ್​ವರ್ನಾ

ಇನ್ನು ಹೊಸ ಹಸ್ಕ್​ವರ್ನಾ ಎಲೆಕ್ಟ್ರಿಕ್ ಬೈಕನ್ನು ಭಾರತೀಯ ಮಾರುಕಟ್ಟೆಗಾಗಿ ಬಜಾಜ್ ಆಟೋ ಘಟಕದಲ್ಲಿ ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹಸ್ಕ್​ವರ್ನಾ ಕಂಪನಿಯ ಪ್ರಕಾರ, ಇ-ಪಿಲೆನ್ ಎಲೆಕ್ಟ್ರಿಕ್ ಬೈಕಿನಲ್ಲಿ 8 ಕಿ.ವ್ಯಾಟ್ ಮೋಟಾರ್ ಅನ್ನು ಅಳವಡಿಸಲಾಗುತ್ತದೆ.

ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹಸ್ಕ್​ವರ್ನಾ

ಈ ಮೋಟಾರ್ 10.73 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಬೈಕನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 100 ಕಿ.ಮೀ.ವರೆಗೆ ಚಲಿಸುತ್ತದೆ. ಕೆಟಿಎಂ, ಹೋಂಡಾ, ಯಮಹಾ ಮತ್ತು ಪಿಯಾಜಿಯೊ ನಡುವಿನ ಒಕ್ಕೂಟದ ಮೂಲಕ ಸ್ವ್ಯಾಪ್ ಮಾಡಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಬಹುದು.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹಸ್ಕ್​ವರ್ನಾ

ಹಸ್ಕ್​ವರ್ನಾ ಎಲೆಕ್ಟ್ರಿಕ್ ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಬ್ಲ್ಯುಪಿ ಅಪೆಕ್ಸ್ ಸಸ್ಪೆಂಕ್ಷನ್ ಅನ್ನು ಪಡೆಯುತ್ತದೆ. ಫ್ರೇಮ್ ಮತ್ತು ಸ್ವಿಂಗಾರ್ಮ್ ಅನ್ನು ಮುಂದಿನ ತಲೆಮಾರಿನ ಕೆಟಿಎಂ 125, 250 ಮತ್ತು 390 ಡ್ಯೂಕ್ ಮಾದರಿಗಳೊಂದಿಗೆ ಹಂಚಿಕೊಳ್ಳಬಹುದು,

ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹಸ್ಕ್​ವರ್ನಾ

ಇನ್ನು ಹಸ್ಕ್​ವರ್ನಾ ತನ್ನ ಸ್ವಾರ್ಟ್‍‍ಪಿಲೆನ್ 125 ಬೈಕನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಕೆಟಿಎಂ 125 ಡ್ಯೂಕ್ ಮಾದರಿಯನ್ನು ಆಧರಿಸಿದೆ. ಈ ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕನ್ನು ಪುಣೆಯಲ್ಲಿರುವ ಬಜಾಜ್ ಆಟೋ ಕಂಪನಿಯ ಚಕನ್ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದಿಸಲಾಗುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹಸ್ಕ್​ವರ್ನಾ

ಹಸ್ಕ್​ವರ್ನಾ ಬೈಕ್‌ಗಳು ವಿಭಿನ್ನ ಸ್ಟೈಲಿಂಗ್ ಮತ್ತು ಅಗ್ರೇಸಿವ್ ಲುಕ್ ಹೆಚ್ಚಾಗಿ ಯುವಜನತೆಯನ್ನು ಸೆಳೆಯುವಂತಿದೆ, ಬ್ರ್ಯಾಂಡ್ ಹೆಚ್ಚು ಯುವ ಗ್ರಾಹಕರನ್ನು ಗುರಿಯಾಗಿಸಿ ಬೈಕ್ ಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹಸ್ಕ್​ವರ್ನಾ

ಇನ್ನು ಈ ಹೊಸ ಇ-ಪಿಲೆನ್ ಎಲೆಕ್ಟ್ರಿಕ್ ಬೈಕನ್ನು ಬಾರತೀಯ ಮಾರುಕಟ್ಟೆಯಲ್ಲಿಯು ಕೂಡ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹಸ್ಕ್​ವರ್ನಾ ಮಾತ್ರವಲ್ಲ ಕೆಟಿಎಂ ಮತ್ತು ಬಜಾಜ್ ಸಹ ಭಾರತದಲ್ಲಿ ಎಲೆಕ್ಟ್ರಿಕ್ ಬೈಕನ್ನು ಬಿಡುಗಡೆಗೊಳಿಸಬಹುದು.

Most Read Articles

Kannada
English summary
Husqvarna E-Pilen Electric Bike Concept Revealed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X