Just In
- 47 min ago Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 13 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 16 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 16 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
Don't Miss!
- Finance Zero Shadow Day: ಬೆಂಗಳೂರಿನಲ್ಲಿ ಇಂದು ಪ್ರಕೃತಿಯ ಅಚ್ಚರಿ
- News ರಾಜ್ಯದ ವಿವಿಧೆಡೆ ವರುಣದೇವನ ಆರ್ಭಟ; ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟು ?
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಾವರಣವಾಯ್ತು ಹೊಸ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕ್
ಸ್ವೀಡಿಷ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಸ್ಕ್ವರ್ನಾ ತನ್ನ ಸ್ವಾರ್ಟ್ಪಿಲೆನ್ 125 ಬೈಕನ್ನು ಅನಾವರಣಗೊಳಿಸಿದೆ. ಈ ಹೊಸ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕ್ ಕೆಟಿಎಂ 125 ಡ್ಯೂಕ್ ಮಾದರಿಯನ್ನು ಆಧರಿಸಿದೆ.
ಈ ಹೊಸ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕನ್ನು ಪುಣೆಯಲ್ಲಿರುವ ಬಜಾಜ್ ಆಟೋ ಕಂಪನಿಯ ಚಕನ್ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದಿಸಲಾಗುತ್ತದೆ. ಕೆಟಿಎಂ ಕಂಪನಿಯಡಿಯಲ್ಲಿ ಹಸ್ಕ್ವರ್ನಾ ಬ್ರ್ಯಾಂಡ್ ಬರುತ್ತದೆ. ಕೆಟಿಎಂನಲ್ಲಿ ಬಜಾಜ್ ಶೇ.48 ರಷ್ಟು ಪಾಲನ್ನು ಹೊಂದಿದ್ದಾರೆ. ಸದ್ಯಕ್ಕೆ, ಸ್ವಾರ್ಟ್ಪಿಲೆನ್ 125 ಅನ್ನು ಯುರೋಪಿನಲ್ಲಿ ಪರಿಚಯಿಸುವ ನಿರೀಕ್ಷೆಯಿದೆ, ಆದರೆ ಭಾರತದಲ್ಲಿ ಕೆಟಿಎಂ 125 ಡ್ಯೂಕ್ನ ಯಶಸ್ಸನ್ನು ಪರಿಗಣಿಸಿ, ಸ್ವಾರ್ಟ್ಪಿಲೆನ್ 125 ಅನ್ನು ಭಾರತದಲ್ಲಿ ಪರಿಚಯಿಸುವ ಸಾಧ್ಯತೆಯಿದೆ.
ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ತನ್ನ ಎಂಜಿನ್ ಮತ್ತು ಚಾಸಿಸ್ ಅನ್ನು ಕೆಟಿಎಂ 125 ಡ್ಯೂಕ್ನೊಂದಿಗೆ ಹಂಚಿಕೊಳ್ಳುತ್ತದೆ, ಆದ್ದರಿಂದ ಇದು ಅದೇ 125 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಪಡೆಯುತ್ತದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್ಸೈಕಲ್
ಈ ಎಂಜಿನ್ 9,250 ಆರ್ಪಿಎಂನಲ್ಲಿ 14.3 ಬಿಹೆಚ್ಪಿ ಪವರ್ ಮತ್ತು 8,000 ಆರ್ಪಿಎಂನಲ್ಲಿ 12 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮ್ಯರ್ಥ್ಯವನ್ನು ಹೊಂದಿದೆ. ಕೆಟಿಎಂಗಿಂತ ಭಿನ್ನವಾಗಿ, ಸ್ವಾರ್ಟ್ಪಿಲೆನ್ 125 ಸೈಡ್-ಮೌಂಟಡ್ ಎಕ್ಸಾಸ್ಟ್ ಅನ್ನು ಹೊಂದಿದೆ.
ಇನ್ನು ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕಿನ ಉತ್ತಮ-ಗುಣಮಟ್ಟದ ಬ್ರೆಂಬೊದ ಬ್ರೇಕ್ಗಳನ್ನು ಹೊಂದಿದೆ. ಮುಂಭಾಗದಲ್ಲಿ 320 ಎಂಎಂ ಡಿಸ್ ಬ್ರೇಕ್ ಮತ್ತು ನಾಲ್ಕು ಪಿಸ್ಟನ್ ಕ್ಯಾಲಿಪರ್ ಗಳನ್ನು ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್
ಇನ್ನು ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಪ್ರಿ-ಲೋಡ್ ಮಾಡಬಹುದಾದ ಡಬ್ಲ್ಯೂಪಿ ಅಪೆಕ್ಸ್ ಮತ್ತು ಹಿಂಭಾಗದಲ್ಲಿ 142 ಎಂಎಂ ಟ್ರ್ಯಾವೆಲ್ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ.
ಸ್ವಾರ್ಟ್ಪಿಲೆನ್ 125 ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಭಾರತದಲ್ಲಿ ಮಾರಾಟವಾಗುವ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 250 ರಂತೆ ಕಾಣುತ್ತದೆ ವಿಭಿನ್ನವಾದ ಸಂಗತಿಯೆಂದರೆ, ಸ್ವಾರ್ಟ್ಪಿಲೆನ್ 250ರ ಆಲಾಯ್ ವ್ಹಿಲ್ ಗಿಂತ ಭಿನ್ನವಾಗಿ, ಸ್ವರ್ಟ್ಪಿಲೆನ್ 125 ವೈರ್-ಸ್ಪೋಕ್ ವೀಲ್ ಗಳನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್
ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹಸ್ಕ್ವರ್ನಾ ತನ್ನ ಇತರ ಜನಪ್ರಿಯ ಮಾದರಿಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 401 ಮತ್ತು ವಿಟ್ಪಿಲೆನ್ 401 ಬೈಕ್ಗಳು ಒಳಗೊಂಡಿವೆ.
ಹಸ್ಕ್ವರ್ನಾ ಸ್ವಾರ್ಟ್ಪಿಲೆನ್ 125 ಬೈಕ್ ಬಾರತದಲ್ಲಿ ಬಿಡುಗಡೆಗೊಳಿಸಿದರೆ ಸರಿಸುಮಾರು ರೂ.1.25-1.30 ಲಕ್ಷ ಬೆಲೆಯನ್ನು ನಿಗಧಿಪಡಿಸಬಹುದು. ಇದರ ವಿಭಿನ್ನ ಸ್ಟೈಲಿಂಗ್ ಮತ್ತು ಅಗ್ರೇಸಿವ್ ಲುಕ್ ಹೆಚ್ಚಾಗಿ ಯುವಜನತೆಯನ್ನು ಸೆಳೆಯುವಂತಿದೆ, ಇನ್ನು ಬ್ರ್ಯಾಂಡ್ ಕೂಡ ಹೆಚ್ಚು ಯುವ ಗ್ರಾಹಕರನ್ನು ಗುರಿಯಾಗಿಸಿ ಈ ಸ್ವಾರ್ಟ್ಪಿಲೆನ್ 125 ಬೈಕನ್ನು ಬಿಡುಗಡೆಗೊಳಿಸಳಾಗಿದೆ.