ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಉತ್ಪಾದನೆ ಆರಂಭ

ಸ್ವೀಡಿಷ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಸ್ಕ್​ವರ್ನಾ ತನ್ನ ಸ್ವಾರ್ಟ್‍‍ಪಿಲೆನ್ 125 ಬೈಕನ್ನು ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಕೆಟಿಎಂ 125 ಡ್ಯೂಕ್ ಮಾದರಿಯನ್ನು ಆಧರಿಸಿದೆ.

ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಉತ್ಪಾದನೆ ಆರಂಭ

ಪುಣೆಯಲ್ಲಿರುವ ಬಜಾಜ್ ಆಟೋ ಕಂಪನಿಯ ಚಕನ್ ಸ್ಥಾವರದಲ್ಲಿ ಈ ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕಿನ ಉತ್ಪಾದನೆಯನ್ನು ಪ್ರಾರಂಭಿಸಿದೆ. ಕೆಟಿಎಂ ಕಂಪನಿಯಡಿಯಲ್ಲಿ ಹಸ್ಕ್​ವರ್ನಾ ಬ್ರ್ಯಾಂಡ್ ಬರುತ್ತದೆ. ಕೆಟಿಎಂನಲ್ಲಿ ಬಜಾಜ್ ಶೇ.48 ರಷ್ಟು ಪಾಲನ್ನು ಹೊಂದಿದ್ದಾರೆ. ಸದ್ಯಕ್ಕೆ, ಸ್ವಾರ್ಟ್‌ಪಿಲೆನ್ 125 ಅನ್ನು ಮೊದಲು ಯುರೋಪಿನಲ್ಲಿ ಪರಿಚಯಿಸುವ ನಿರೀಕ್ಷೆಯಿದೆ, ಆದರೆ ಭಾರತದಲ್ಲಿ ಕೆಟಿಎಂ 125 ಡ್ಯೂಕ್‌ನ ಯಶಸ್ಸನ್ನು ಪರಿಗಣಿಸಿ, ಸ್ವಾರ್ಟ್‌ಪಿಲೆನ್ 125 ಅನ್ನು ಭಾರತದಲ್ಲಿ ಪರಿಚಯಿಸುವ ಸಾಧ್ಯತೆಯಿದೆ.

ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಉತ್ಪಾದನೆ ಆರಂಭ

ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ತನ್ನ ಎಂಜಿನ್ ಮತ್ತು ಚಾಸಿಸ್ ಅನ್ನು ಕೆಟಿಎಂ 125 ಡ್ಯೂಕ್‌ನೊಂದಿಗೆ ಹಂಚಿಕೊಳ್ಳುತ್ತದೆ, ಆದ್ದರಿಂದ ಇದು ಅದೇ 125 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಉತ್ಪಾದನೆ ಆರಂಭ

ಈ ಎಂಜಿನ್ 9,250 ಆರ್‌ಪಿಎಂನಲ್ಲಿ 14.3 ಬಿಹೆಚ್‌ಪಿ ಪವರ್ ಮತ್ತು 8,000 ಆರ್‌ಪಿಎಂನಲ್ಲಿ 12 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮ್ಯರ್ಥ್ಯವನ್ನು ಹೊಂದಿದೆ. ಕೆಟಿಎಂಗಿಂತ ಭಿನ್ನವಾಗಿ, ಸ್ವಾರ್ಟ್‌ಪಿಲೆನ್ 125 ಸೈಡ್-ಮೌಂಟಡ್ ಎಕ್ಸಾಸ್ಟ್ ಅನ್ನು ಕೂಡ ಹೊಂದಿದೆ.

ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಉತ್ಪಾದನೆ ಆರಂಭ

ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ ಪ್ರಿ-ಲೋಡ್ ಮಾಡಬಹುದಾದ ಡಬ್ಲ್ಯೂಪಿ ಅಪೆಕ್ಸ್ ಮತ್ತು ಹಿಂಭಾಗದಲ್ಲಿ 142 ಎಂಎಂ ಟ್ರ್ಯಾವೆಲ್ ಮೊನೊ ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಉತ್ಪಾದನೆ ಆರಂಭ

ಇನ್ನು ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕಿನ ಉತ್ತಮ-ಗುಣಮಟ್ಟದ ಬ್ರೆಂಬೊದ ಬ್ರೇಕ್‌ಗಳನ್ನು ಹೊಂದಿದೆ. ಮುಂಭಾಗದಲ್ಲಿ 320 ಎಂಎಂ ಡಿಸ್ ಬ್ರೇಕ್ ಮತ್ತು ನಾಲ್ಕು ಪಿಸ್ಟನ್ ಕ್ಯಾಲಿಪರ್ ಗಳನ್ನು ಒಳಗೊಂಡಿದೆ.

ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಉತ್ಪಾದನೆ ಆರಂಭ

ಸ್ವಾರ್ಟ್‌ಪಿಲೆನ್ 125 ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಭಾರತದಲ್ಲಿ ಮಾರಾಟವಾಗುವ ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 250 ರಂತೆ ಕಾಣುತ್ತದೆ ವಿಭಿನ್ನವಾದ ಸಂಗತಿಯೆಂದರೆ, ಸ್ವಾರ್ಟ್‌ಪಿಲೆನ್ 250ರ ಆಲಾಯ್ ವ್ಹಿಲ್ ಗಿಂತ ಭಿನ್ನವಾಗಿ, ಸ್ವರ್ಟ್‌ಪಿಲೆನ್ 125 ವೈರ್-ಸ್ಪೋಕ್ ವೀಲ್ ಗಳನ್ನು ಹೊಂದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಉತ್ಪಾದನೆ ಆರಂಭ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹಸ್ಕ್​ವರ್ನಾ ತನ್ನ ಇತರ ಜನಪ್ರಿಯ ಮಾದರಿಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 401 ಮತ್ತು ಹಸ್ಕ್​ವರ್ನಾ ವಿಟ್‌ಪಿಲೆನ್ 401 ಬೈಕ್‍‍ಗಳು ಒಳಗೊಂಡಿವೆ.

ಹೊಸ ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಉತ್ಪಾದನೆ ಆರಂಭ

ಹಸ್ಕ್​ವರ್ನಾ ಸ್ವಾರ್ಟ್‍‍ಪಿಲೆನ್ 125 ಬೈಕ್ ಬಾರತದಲ್ಲಿ ಬಿಡುಗಡೆಗೊಳಿಸಿದರೆ ಸರಿಸುಮಾರು ರೂ.1.25-1.30 ಲಕ್ಷ ಬೆಲೆಯನ್ನು ನಿಗಧಿಪಡಿಸಬಹುದು. ಇದರ ವಿಭಿನ್ನ ಸ್ಟೈಲಿಂಗ್ ಮತ್ತು ಅಗ್ರೇಸಿವ್ ಲುಕ್ ಹೆಚ್ಚಾಗಿ ಯುವಜನತೆಯನ್ನು ಸೆಳೆಯುವಂತಿದೆ, ಇನ್ನು ಬ್ರ್ಯಾಂಡ್ ಕೂಡ ಹೆಚ್ಚು ಯುವ ಗ್ರಾಹಕರನ್ನು ಗುರಿಯಾಗಿಸಿ ಈ ಸ್ವಾರ್ಟ್‍‍ಪಿಲೆನ್ 125 ಬೈಕನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Husqvarna Svartpilen 125 Production Begins At Bajaj's Chakan Plant. Read In Kannada.
Story first published: Wednesday, May 5, 2021, 18:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X