Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 4 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 4 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 5 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಕಬೀರ ಕೆಎಂ 4000 ಎಲೆಕ್ಟ್ರಿಕ್ ಬೈಕ್
ಕಬೀರ ಮೊಬಿಲಿಟಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಎರಡು ಹೈಸ್ಪೀಡ್ ಎಲೆಕ್ಟ್ರಿಕ್ ಬೈಕುಗಳನ್ನು ಬಿಡುಗಡಗೊಳಿಸಲು ಸಜ್ಜಾಗಿದೆ. ಈ ಹೊಸ ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿವೆ.

ಹೊಸ ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳನ್ನು ಸ್ಥಳಿಯವಾಗಿ ಉತ್ಪಾದನೆ ಮತ್ತು ಅಭಿವೃದ್ಧಿ ಪಡಿಸಲಾಗುತ್ತದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಎರಡು ಬೈಕ್‌ಗಳಿಗೆ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಇನ್ನು ಇತ್ತೀಚೆಗೆ ಗೋವಾದ ವೆರ್ನಾ ಎಂಬ ಪ್ರದೇಶದಲ್ಲಿ ಕಬೀರ ಕೆಎಂ 4000 ಎಲೆಕ್ಟ್ರಿಕ್ ಬೈಕಿನ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಕಬೀರ ಕೆಎಂ 4000 ಎಲೆಕ್ಟ್ರಿಕ್ ಬೈಕ್ ನೇಕೆಡ್ ವಿನ್ಯಾಸವನ್ನು ಹೊಂದಿದೆ.

ಕಬೀರ ಕೆಎಂ 4000 ಎಲೆಕ್ಟ್ರಿಕ್ ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಚಿತ್ರಗಳನ್ನು ರಶ್ಲೇನ್ ಬಹಿರಂಗಪಡಿಸಿದೆ. ಚಿತ್ರಗಳಲ್ಲಿ ನೋಡಿದಂತೆ ಈ ಹೊಸ ಕೆಎಂ 4000 ಎಲೆಕ್ಟ್ರಿಕ್ ಬೈಕಿನ ಬಿಳಿ ಬಣ್ಣದ ಕವರ್ ನಿಂದ ಮರೆಮಾಚಿ ಸ್ಪಾಟ್ ಟೆಸ್ಟ್ ನಡೆಸಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳು ಏರೋಡೈನಾಮಿಕ್ ಪ್ರೊಫೈಲ್‌ಗಳೊಂದಿಗೆ ಸಾಕಷ್ಟು ಆಧುನಿಕವಾಗಿವೆ. ಎರಡೂ ಬೈಕ್‌ಗಳಿಗೆ ಫೈರ್ ಫ್ರೋಮ್ ಬ್ಯಾಟರಿ, ಪಾರ್ಕ್ ಅಸಿಸ್ಟ್ ಮತ್ತು ಇತರ ಅತ್ಯಾಕರ್ಷಕ ಸ್ಮಾರ್ಟ್ ಫೀಚರ್ ಗಳನ್ನು ಹೊಂದಿರುತ್ತದೆ.

ಇದರೊಂದಿಗೆ ಕಬೀರ ರೋಡ್ ಸೈಡ್ ಅಸಿಸ್ಟ್ (ಆರ್‌ಎಸ್‌ಎ), ಫಾಸ್ಟ್ ಚಾರ್ಜಿಂಗ್ ಮತ್ತು ಕಾಂಬಿ ಬ್ರೇಕ್‌ಗಳನ್ನು ಸಹ ಒಳಗೊಂಡಿರುತ್ತದೆ. ಈ ಬೈಕುಗಳ ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಗಳನ್ನು ಪಡೆಯುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳು ಡೆಲ್ಟಾಇವಿ ಬಿಎಲ್‌ಡಿಸಿ ಮೋಟಾರ್ ಹೊಂದಿರುವ ಈ ಎಲೆಕ್ಟ್ರಿಕ್ ಬೈಕ್‌ಗಳು 120 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿರುತ್ತದೆ. ಈ ಎಲೆಕ್ಟ್ರಿಕ್ ಬೈಕುಗಳು ಸಿಂಗಲ್ ಚಾರ್ಜ್‌ನಲ್ಲಿ 150 ಕಿ.ಮೀ ದೂರವನ್ನು ಚಲಿಸುತ್ತದೆ.

ಇನ್ನು ಕಬೀರ ಎಲೆಕ್ಟ್ರಿಕ್ ಬೈಕುಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಪಡೆಯುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕಬೀರ ಕೆಎಂ 3000 ಮತ್ತು ಕೆಎಂ 4000 ಎಲೆಕ್ಟ್ರಿಕ್ ಬೈಕುಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಯು ಹೆಚ್ಚಾಗುತ್ತಿದೆ. ಕಬೀರ ಮೊಬಿಲಿಟಿ ಕಂಪನಿಯು ರಾಷ್ಟ್ರವ್ಯಾಪಿ ವಿಸ್ತರಿಸಲು ಮತ್ತು ಜಾಗತಿಕ ಮಟ್ಟಕ್ಕೆ ಹೋಗಲು ಯೋಜನೆಗಳನ್ನು ಹೊಂದಿದೆ.

ಇದಕ್ಕಾಗಿ ಕಬೀರ ಮೊಬಿಲಿಟಿ ಕಂಪನಿಯು ಭರ್ಜರಿಯಾಗಿ ಸಿದ್ದವಾಗುತ್ತಿದೆ. ಬೆಳೆಯುತ್ತಿರುವ ಕಬೀರ ಮೊಬಿಲಿಟಿ ಕಂಪನಿಯ ಪ್ರಧಾನ ಕಚೇರಿಯು ಗೋವಾದಲ್ಲಿದೆ. ಈ ಕಂಪನಿಯು ಗೋವಾ ಮತ್ತು ಕರ್ನಾಟಕದ ಧಾರವಾಡದಲ್ಲಿ ಅತಿದೊಡ್ಡ ಉತ್ಪಾದನಾ ಘಟಕಗಳನ್ನು ಹೊಂದಿವೆ. ಭಾರತೀಯ ಮಾರುಕಟ್ಟೆಗೆ ಪ್ರಾಯೋಗಿಕ ಮತ್ತು ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಬೈಕುಗಳನ್ನು ತಯಾರಿಸಲು ಕಬೀರ ಕಂಪನಿಯು ಗಮನ ಹರಿಸುತ್ತದೆ.