ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿಯು ತನ್ನ 2021ರ ನಿಂಜಾ ಝಡ್ಎಕ್ಸ್-10ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.14.99 ಲಕ್ಷಗಳಾಗಿದೆ.

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

ಈ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ವಿಶ್ವದಾದ್ಯಂತ ಅತ್ಯಂತ ಜನಪ್ರಿಯ ಲೀಟರ್-ಕ್ಲಾಸ್ ಬೈಕ್‌ಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡ ಈ ಹೊಸ ಪ್ರೀಮಿಯಂ ಸೂಪರ್‌ಸ್ಪೋರ್ಟ್ ಬೈಕನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗಿದೆ. ಇದರೊಂದಿಗೆ ಕೆಲವು ಹೊಸ ಫೀಚರ್ ಗಳನ್ನು ಪಡೆದುಕೊಂಡಿದೆ. ಇನ್ನು ಈ ಹೊಸ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ.

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿರುವುದರಿಂದ ಶೀಘ್ರದಲ್ಲೇ ಈ ಪ್ರೀಮಿಯಂ ಸೂಪರ್‌ಸ್ಪೋರ್ಟ್ ಬೈಕಿನ ವಿತರಣೆಯನ್ನು ಪ್ರಾರಂಭಿಸಬಹುದು. ಇನ್ನು ಈ ಹೊಸ ನಿಂಜಾ ಝಡ್ಎಕ್ಸ್-10ಆರ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಈ ಹೊಸ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಹತ್ತಿರ ಕವಾಸಕಿ ಡೀಲರ್ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

ಇನ್ನು 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಬೈಕ್ ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಸೂಪರ್‌ಸ್ಪೋರ್ಟ್ ಬೈಕ್ ಏರೋಡೈನಾಮಿಕ್ ಮೇಲ್ಭಾಗದ ಕೌಲ್, ಹೊಸ ಟೈಲ್ ಕೌಲ್, ಪರಿಷ್ಕೃತ ಹ್ಯಾಂಡಲ್‌ಬಾರ್, ಫುಟ್‌ಪೆಗ್ ಮತ್ತು ಎಲ್‌ಇಡಿ ಲೈಟಿಂಗ್ ಅನ್ನು ಒಳಗೊಂಡಿದೆ.

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯನ್ನು ಒಳಗೊಂಡ ಬಣ್ಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸಹ ಅಳವಡಿಸಲಾಗಿದೆ. ಇದು ಬ್ರ್ಯಾಂಡ್‌ನ 'ರೈಡಾಲಜಿ ದಿ ಆ್ಯಪ್' ನೊಂದಿಗೆ ಕಾರ್ಯನಿರ್ವಹಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

ಇನ್ನು ಲೀಟರ್-ಕ್ಲಾಸ್ ಸೂಪರ್‌ಸ್ಪೋರ್ಟ್ ಬೈಕ್ ಆಗಿರುವುದರಿಂದ, 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್‌ಗಳನ್ನು ಹೊಂದಿದೆ. ಇದರಲ್ಲಿ ಕ್ರೂಸ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಅನ್ನು ಸಹ ಒಳಗೊಂಡಿದೆ.

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

ಇದರೊಂದಿಗೆ ರೈಡಿಂಗ್ ಮೋಡ್ ಗಳು, ಎಂಜಿನ್ ಬ್ರೇಕ್ ಮತ್ತು ಇನು ಹಲವಾರು ತಂತ್ರಜ್ಙಾನಗಳನ್ನು ಒಳಗೊಂಡಿದೆ. 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕಿನ ಹಿಂದಿನ ಮಾದರಿಗೆ ಹೋಲಿಸಿದರೆ ಎಂಜಿನ್ ಅನ್ನು ಬದಲಾವಣೆಯನ್ನು ಮಾಡಲಾಗಿಲ್ಲ. ಆದರೆ ಎಂಜಿನ್ ಅನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ 998 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 13,200 ಆರ್‌ಪಿಎಂನಲ್ಲಿ 200 ಬಿಹೆಚ್‌ಪಿ ಪವರ್ ಮತ್ತು 11,400 ಆರ್‌ಪಿಎಂನಲ್ಲಿ 114 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ;

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಸಿಕ್ಸ್-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ, ಬೈಡೈರೆಕ್ಷನಲ್ ಕ್ವಿಕ್-ಶಿಫ್ಟರ್ ಸ್ಟ್ಯಾಂಡರ್ಡ್‌ ಆಗಿ ನೀಡಿದೆ. ಹೊಸ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ಲೈಮ್ ಗ್ರೀನ್ ಮತ್ತು ಫ್ಲಾಟ್ ಎಬೊನಿ ಟೈಪ್2 ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

ಇನ್ನು ಈ ಲೀಟರ್-ಕ್ಲಾಸ್ ಸೂಪರ್‌ಸ್ಪೋರ್ಟ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 43 ಎಂಎಂ ಇನ್ವರ್ಡಡ್ ಶೋವಾ ಬಿಎಫ್‌ಎಫ್ (ಬ್ಯಾಲೆನ್ಸ್ ಫ್ರೀ ಫೋರ್ಕ್ಸ್) ಮತ್ತು ಹಿಂಭಾಗದಲ್ಲಿ ಬಿಆರ್‌ಎಫ್‌ಸಿ ಲೈಟ್ (ಬ್ಯಾಲೆನ್ಸ್ ಫ್ರೀ ರಿಯರ್ ಕುಶನ್) ಮೊನೊ-ಶಾಕ್ ಸೆಟಪ್ ಅನ್ನು ನೀಡಿದೆ.

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

ಇನ್ನು ಪ್ರಮುಖವಾಗಿ ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 330 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇನ್ನು ಇದರೊಂದಿಗೆ ಡ್ಯುಯಲ್-ಚಾನೆಲ್ ಮತ್ತು ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಡೀಲರ್ ಬಳಿ ತಲುಪಿದ 2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್

2021ರ ಕವಾಸಕಿ ನಿಂಜಾ ಝಡ್ಎಕ್ಸ್-10ಆರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾದ ಲೀಟರ್-ಕ್ಲಾಸ್ ಸೂಪರ್‌ಸ್ಪೋರ್ಟ್ ಕೊಡುಗೆಗಳಲ್ಲಿ ಒಂದಾಗಿದೆ. ಈ ಹೊಸ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಸ್ 1000 ಆರ್ಆರ್ ಮತ್ತು ಡುಕಾಟಿ ಪಾನಿಗಲೆ ವಿ2 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಅಲ್ಲದೇ ಶೀಘ್ರದಲ್ಲೇ ಈ ಲೀಟರ್-ಕ್ಲಾಸ್ ಸೂಪರ್‌ಸ್ಪೋರ್ಟ್ ಬೈಕಿನ ವಿತರಣೆಯು ಪ್ರಾರಂಭವಾಗಲಿದೆ.

Most Read Articles

Kannada
English summary
Most Affordable Litre-class Bike Has Reached Dealerships. Read In Kannada.
Story first published: Tuesday, April 13, 2021, 17:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X