Just In
Don't Miss!
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Movies
ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್
ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ 2021ರ 1290 ಸೂಪರ್ ಅಡ್ವೆಂಚರ್ ಎಸ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಇದು ಇದುವರೆಗೆ ತಯಾರಿಸಿದ ಅತ್ಯಂತ ಸಮರ್ಥ ಮತ್ತು ತಾಂತ್ರಿಕವಾಗಿ ಸುಧಾರಿತ ಅಡ್ವೆಂಚರ್ ಬೈಕ್ ಎಂದು ಕೆಟಿಎಂ ಕಂಪನಿ ಹೇಳಿದೆ.

ರಾಡಾರ್ ನೆರವಿನ ಕ್ರೂಸ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುವ ವಿಶ್ವದ ಏಕೈಕ ಬೈಕ್ ಇದಾಗಿದೆ. ಕ್ರೂಸ್ ಕಂಟ್ರೋಲ್ ಗಾಗಿ ಐದು(ಡಿಸ್ಟನ್ಸ್) ಸೆಟ್ಟಿಂಗ್ಗಳಿವೆ ಮತ್ತು ಇದು 'ಓವರ್ಟೇಕ್ ಅಸಿಸ್ಟ್' ಅನ್ನು ಸಹ ಪಡೆಯುತ್ತದೆ, ಇದು ಲೇನ್ಗಳನ್ನು ಬದಲಾಯಿಸುವಾಗ ಅಥವಾ ಓವರ್ ಟೇಕ್ ಮಾಡುವಾಗ ಹೆಚ್ಚಿನ ಪವರ್ ಅನ್ನು ಒದಗಿಸುತ್ತದೆ. ಇತರ ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಫೀಚರ್ ಗಳು ಐಎಂಯು ಅನ್ನು ಒಳಗೊಂಡಿದೆ.

ಇನ್ನು ಈ ಹೊಸ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್ ರೈನ್, ರೋಡ್, ಸ್ಪೋರ್ಟ್ಸ್, ಆಫ್-ರೋಡ್ ಮತ್ತು ರ್ಯಾಲಿ ಎಂಬ ಐದು ರೈಡಿಂಗ್ ಮೋಡ್ ಗಳನ್ನು ಹೊಂದಿವೆ. ಇದರ ಸ್ವಿಚ್ ಗೇರ್ ಅನ್ನು ಸಂಪೂರ್ಣವಾಗಿ ಮರು ವಿನ್ಯಾಸಗೊಳಿಸಲಾಗಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್ಸೈಕಲ್

2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್ ಹೊಸ 7 ಇಂಚಿನ ಟಿಎಫ್ಟಿ ಡಿಸ್ ಪ್ಲೇಯನ್ನು ಪಡೆಯುತ್ತದೆ. ಇನ್ನು ಇದರಲ್ಲಿ ದೊಡ್ಡ ಡ್ಯಾಶ್ಬೋರ್ಡ್ ವೀಕ್ಷಣೆಯು ತ್ವರಿತ ಮತ್ತು ಹೆಚ್ಚು ಪ್ರಾಯೋಗಿಕ ಮೆನು ಸಿಸ್ಟಂಗಳನ್ನು ಹೊಂದಿದೆ ಮತ್ತು ಬೈಕ್ನ ಮಾಹಿತಿಯ ವಿಭಿನ್ನ ಬಿಟ್ಗಳಿಗೆ ಸ್ಪಷ್ಟವಾದ ಇನ್ಫೋಗ್ರಾಫಿಕ್ಸ್ ಅನ್ನು ಹೊಂದಿದೆ.

ಇನ್ನು ಇದರೊಂದಿಗೆ ಯುಎಸ್ಬಿ ಚಾರ್ಜಿಂಗ್ ಸಾಕೆಟ್ ಪಡೆಯುತ್ತದೆ. ಇತರ ದೊಡ್ಡ ನವೀಕರಣವೆಂದರೆ ಹೊಸ ತಲೆಮಾರಿನ ಡಬ್ಲ್ಯುಪಿ ಅಪೆಕ್ಸ್ ಸೆಮಿ-ಆಕ್ಟಿವ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿರುತ್ತದೆ. ಇದು ಎಲ್ಲಾ ತರಹದ ರಸ್ತೆಗಳ ಬದಲಾವಣೆಗಳಿಗೆ ಅನುಗುಣವಾಗಿ ಹೆಚ್ಚು ವೇಗವಾಗಿ ಪ್ರತಿಕ್ರಿಯಿಸುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್

ಜೊತಗೆ ಸೂಪರ್ ಅಡ್ವೆಂಚರ್ ಎಸ್ ಬೈಕಿನಲ್ಲಿ ಐಎಂಯು ಕೂಡ ಹೊಂದಿರುತ್ತದೆ, ಕೆಟಿಎಂ ಅಡ್ವೆಚರ್ ಗಾಗಿ ಎರಡೂ ಆಯ್ಕೆಯ ಸಸ್ಪೆಂಕ್ಷನ್ ಪ್ಯಾಕೇಜ್ಗಳನ್ನು ಸಹ ನೀಡುತ್ತದೆ, ಅವುಗಳು ಸಸ್ಪೆಂಕ್ಷನ್ ಪ್ರೊ ಮತ್ತು ರ್ಯಾಲಿ ಪ್ಯಾಕ್ ಆಗಿದೆ.

ಎರಡೂ ಪ್ಯಾಕ್ಗಳು ಬೈ-ಡೈರಕ್ಷನಲ್ ಕ್ವಿಕ್-ಶಿಫ್ಟರ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಇದರಿಂದ ಸವಾರಿಗೆ ಆಯ್ಕೆ ಮಾಡಲು ವಿವಿಧ ಸಸ್ಪೆಂಕ್ಷನ್ ಸೆಟ್ಟಿಂಗ್ಗಳನ್ನು ಹೊಂದಿವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕಿನಲ್ಲಿ ಸ್ಟೀಯರಿಂಗ್ ಹೆಡ್ ಅನ್ನು 15 ಎಂಎಂ ಹಿಂದಕ್ಕೆ ಸರಿಸಲಾಗಿದೆ ಮತ್ತು ಎಂಜಿನ್ನ ಮುಂಭಾಗದ ವಿಭಾಗವನ್ನು ಮರು ಸ್ಥಾಪಿಸಲಾಗಿದೆ. ಓಪನ್-ಲ್ಯಾಟಿಸ್ ಸ್ವಿಂಗಾರ್ಮ್ ಉದ್ದವಾಗಿದೆ ಮತ್ತು ಸಬ್-ಫ್ರೇಮ್ 15 ಎಂಎಂ ಜೊತೆಗೆ ಸೀಟಿನ ಎತ್ತರವು 11 ಎಂಎಂ ವರೆಗೆ ಇಳಿಸಲಾಗಿದೆ.

ಈ ಹೊಸ ಸೂಪರ್ ಅಡ್ವೆಂಚರ್ ಬೈಕ್ 23-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಪಡೆಯುತ್ತದೆ. ಇನ್ನು ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕಿನಲ್ಲಿ ಅದೇ 1,308 ಸಿಸಿ ವಿ-ಟ್ವಿನ್ ಎಂಜಿನ್ ಅನ್ನು ಆಳವಡಿಸಲಾಗಿದೆ.

ಈ ಎಂಜಿನ್ 158 ಬಿಹೆಚ್ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಹಿಂದಿನ ಮಾದರಿಗೆ ಹೋಲಿಸಿದರೆ 1.6 ಕೆಜಿ ಹಗುರವಾಗಿದೆ.