Just In
Don't Miss!
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು 2021ರ ಕೆಟಿಎಂ 890 ಡ್ಯೂಕ್ ಬೈಕ್
ಕೆಟಿಎಂ ಕಂಪನಿಯು ತನ್ನ 2021ರ 890 ಡ್ಯೂಕ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಹಿಂದಿನ ತಲೆಮಾರಿನ ಡ್ಯೂಕ್ 790 ಬೈಕನ್ನು ಬದಲಾಯಿಸಿ ಕೆಟಿಎಂ ಹೊಸ 890 ಡ್ಯೂಕ್ ಮಾದರಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಹೊಸ ಕೆಟಿಎಂ 890 ಡ್ಯೂಕ್ ಬೈಕ್ ಅದೇ ಸರಣಿಯ ಪವರ್ ಫುಲ್ ಬೈಕ್ 890ಆರ್ ರೂಪಾಂತರಕ್ಕಿಂತ ಕೆಳಗಿನ ಸ್ಥಾನದಲ್ಲಿರುತ್ತದೆ, ಆದರೆ ಅದೇ ಚಾಸಿಸ್, ಎಂಜಿನ್ ಮತ್ತು ಬಾಡಿ ಪ್ಯಾನೆಲ್ಗಳನ್ನು ಅದರ ಪವರ್ ಫುಲ್ ರೂಪಾಂತರವಾಗಿ ಎರವಲು ಪಡೆಯುತ್ತದೆ. ಹೊಸ ಕೆಟಿಎಂ 890 ಡ್ಯೂಕ್ ಅದರ ಹಿಂದಿನ ಮಾದರಿಯ ವಿನ್ಯಾಸವನ್ನು ಮುಂದಕ್ಕೆ ಸಾಗಿಸುತ್ತದೆ.

ಹೊಸ ಕೆಟಿಎಂ 890 ಡ್ಯೂಕ್ ಬೈಕ್ ಹಿಂದಿನ ಮಾದರಿಯಲ್ಲಿರುವಂತ ಎಲ್ಇಡಿ ಹೆಡ್ಲ್ಯಾಂಪ್ಗಳು, ಎಲ್ಇಡಿ ಟೈಲ್ ಲೈಟ್ಗಳು, ಫ್ಯೂಯಲ್ ಟ್ಯಾಂಕ್ ವಿನ್ಯಾಸ,ಸ್ ಸೀಟುಗಳು ಮತ್ತು ಇತರವುಗಳನ್ನು ಒಳಗೊಂಡಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

2021ರ ಕೆಟಿಎಂ 890 ಡ್ಯೂಕ್ ಮತು ಅದರ ಹಿಂದಿನ ಮಾದರಿಗಳ ಏಕೈಕ ವ್ಯತ್ಯಾಸವೆಂದರೆ ಹೊಸ ಬಾಡಿ ಗ್ರಾಫಿಕ್ಸ್ನೊಂದಿಗೆ ಹೊಸ ಬ್ಲ್ಯಾಕ್ ಮತ್ತು ಅರೇಂಜ್ ಬಣ್ಣಗಳ ಆಯ್ಕೆಯನ್ನು ಹೊಂದಿವೆ. ಇತರ ಕೆಟಿಎಂ ಮಾದರಿಗಳಲ್ಲಿ ಕಂಡುಬರುವ ಅರೇಂಜ್ ಬಣ್ಣಕ್ಕೆ ಬದಲಾಗಿ ಬ್ಲ್ಯಾಕ್-ಔಟ್ ಫ್ರೇಮ್ನೊಂದಿಗೆ ಬರುತ್ತದೆ.

ಹೊಸ ಕೆಟಿಎಂ 890 ಡ್ಯೂಕ್ ಬೈಕ್ ಡ್ಯೂಕ್ 790 ಮಾದರಿಯಂತೆಯೇ 169 ಕೆಜಿ ತೂಕವನ್ನು ಹೊಂದಿರುತ್ತದೆ. ಡ್ಯೂಕ್ 890 ಬೈಕಿನ ಸೀಟ್ ಎತ್ತರವು ಹಿಂದಿನ ಮಾದರಿಯಲ್ಲಿರುವುದಗಿಂತ 5 ಎಂಎಂ ಕಡಿಮೆಯಾಗಿದೆ. ಇದು ಕಡಿಮೆ ಎತ್ತರವರೆಗೆ ಹೆಚ್ಚು ಸಹಕಾರಿಯಾಗಿರಲಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್ಸೈಕಲ್

2021ರ ಕೆಟಿಎಂ 890 ಡ್ಯೂಕ್ ಅದೇ 889ಸಿಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿರುತ್ತದೆ. ಇದೇ ಎಂಜಿನ್ ಪವರ್ ಫುಲ್ 890ಆರ್ ಮಾದರಿಯಲ್ಲಿಯು ಇದೆ. ಆದರೆ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಈ ಎಂಜಿನ್ ಅನ್ನು ಲ್ಪ ಡಿ-ಟ್ಯೂನ್ ಮಾಡಲಾಗಿದೆ,

ಈ ಎಂಜಿನ್ 9000 ಆರ್ಪಿಎಂನಲ್ಲಿ 115 ಬಿಹೆಚ್ಪಿ ಪವರ್ ಮತ್ತು 8000 ಆರ್ಪಿಎಂನಲ್ಲಿ 92 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾಗಿದೆ. ಇನ್ನು ಇದರೊಂದಿಗೆ ಟೂ-ವೇ ಕ್ವೀಕ್ ಶಿಫ್ಟರ್ನೊಂದಿಗೆ ಬರುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

2021ರ ಕೆಟಿಎಂ 890 ಡ್ಯೂಕ್ ಬೈಕಿನಲ್ಲಿ ಇತರ ಎಲೆಕ್ಟ್ರಾನಿಕ್ ರೈಡರ್ ಫೀಚರ್ ಗಳನ್ನು ಸಹ ಒಳಗೊಂಡಿದೆ. ಇದು ಐಎಂಯು ಅಸಿಸ್ಟ್, ಒಂಬತ್ತು-ಹಂತದ ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು 6ಡಿ ಲೀನ್ ಎಂಜೆಲ್ ಸೆನ್ಸಾರ್ ಗಳು ಒಲಗೊಂಡಿದೆ.

2021ರ ಕೆಟಿಎಂ 890 ಡ್ಯೂಕ್ ಬೈಕ್ ಈ ವರ್ಷದಲ್ಲಿ ಕೊನೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಕೆಟಿಎಂ ಇದರ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಭಾರತದಲ್ಲಿ 2021ರ ಕೆಟಿಎಂ 890 ಡ್ಯೂಕ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9 ಲಕ್ಷ ನಿಗಧಿಪಡಿಸಬಹುದು ಎಂದು ನಿರೀಕ್ಷಿಸುತ್ತೇವೆ.