ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ತನ್ನ ಬಹುನಿರೀಕ್ಷಿತ 2022ರ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳನ್ನು ಭಾರತೀಯ ಮಾರುಕಟ್ತೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಕೆಟಿಎಂ ಆರ್‌ಸಿ 200(KTM RC 200) ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.09 ಲಕ್ಷಗಳಾದರೆ, ಕೆಟಿಎಂ ಆರ್‌ಸಿ 125(KTM RC 125) ಬೈಕಿನ ಬೆಲೆಯು ರೂ.1.82 ಲಕ್ಷಗಳಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

ಕೆಟಿಎಂ ತನ್ನ 2022ರ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳ ಖರೀದಿಗಾಗಿ ಅಧಿಕೃತ ಕೆಟಿಎಂ ಡೀಲರ್‌ಶಿಪ್‌ಗಳು ಬುಕ್ಕಿಂಗ್ ಆರಂಭಿಸಿದೆ. ಆಸಕ್ತ ಗ್ರಾಹಕರು ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕ್ಕೊಳ್ಳಬಹುದು. ಈ ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳು ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಕೆಟಿಎಂ ಬೈಕ್‌ಗಳು ಹೊಸ ಚಾಸಿಸ್, ಕ್ಲಾಸ್ ಲೀಡಿಂಗ್ ಕಾರ್ಯಕ್ಷಮತೆ, ನವೀಕರಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಹೊಸ ಗ್ರ್ಯಾಂಡ್ ಪ್ರಿಕ್ಸ್-ಪ್ರೇರಿತ ಸ್ಟೈಲಿಂಗ್‌ನೊಂದಿಗೆ ಪ್ರಮುಖ ಅಪ್‌ಡೇಟ್ ನೀಡಲಾಗಿದೆ. ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಅನ್ನು ಕೆಲವೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೆಟಿಎಂ ಇಂಡಿಯಾ ಹೇಳಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

ಇದರಲ್ಲಿ 2022ರರ ಕೆಟಿಎಂ ಆರ್‌ಸಿ 200 ಬೈಕ್ ಡೀಲರ್ ಬಳಿ ಕಾಣಿಸಿಕೊಂಡಿದೆ. 2022ರ ಕೆಟಿಎಂ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ ಎಂದು ನಿರೀಕ್ಷಿಸುತ್ತೇವೆ, ಇದರಿಂದ ಶೀಘ್ರದಲ್ಲೇ ಕೆಟಿಎಂ ಬೈಕ್‌ಗಳ ವಿತರಣೆಯನ್ನು ಪ್ರಾರಂಭಿಸಬಹುದು. ಇದರಲ್ಲಿ 2022ರರ ಕೆಟಿಎಂ ಆರ್‌ಸಿ 200 ಬೈಕಿನ ವಾಕ್ ರೌಂಡ್ ವೀಡಿಯೊವನ್ನು ಯುಟ್ಯೂಬ್ ನಲ್ಲಿ ಬಹಿರಂಗಪಡಿಸಿದೆ,

ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

2022ರ ಕೆಟಿಎಂ ಆರ್‌ಸಿ 200 ಬೈಕ್ ಹೊಸ ಹೊಂದಾಣಿಕೆ ಹ್ಯಾಂಡಲ್‌ಬಾರ್‌ಗಳು, ಎಲ್‌ಸಿಡಿ ಡ್ಯಾಶ್‌ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ 9.5 ಲೀಟರ್‌ನಿಂದ 13.7 ಲೀಟರ್‌ಗಳಿಗೆ ಹೆಚ್ಚಳ ಮಾಡಿದ್ದಾರೆ, ಇದರೊಂದಿಗೆ ಹೆಡ್‌ಲ್ಯಾಂಪ್ ಮತ್ತು ದೊಡ್ಡ ಏರ್‌ಬಾಕ್ಸ್ ಅನ್ನು ಪಡೆದುಕೊಂಡಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

ಇದರಲ್ಲಿ ಈ ಸ್ಪ್ಲಿಟ್ ಸ್ಟೀಲ್ ಟ್ರೆಲಿಸ್ ಫ್ರೇಮ್ ಹಗುರ ಮತ್ತು ಗಟ್ಟಿಯಾಗಿರುತ್ತದೆ ಮತ್ತು ಸೂಪರ್ ಮೋಟೋ ಎಬಿಎಸ್ ಅನ್ನು ಹೊಸ ಬೈಕಿನಲ್ಲಿ ಪರಿಚಯಿಸಲಾಗಿದೆ. ವ್ಹೀಲ್ ಗಳು ಸಹ ಹೆಚ್ಚಿನ ಸಾಮರ್ಥ್ಯ ಮತ್ತು ಹಗುರವಾಗಿರುತ್ತವೆ ಆದರೆ ಆಂಕರೇಜ್ ಅನ್ನು ಹೊಸ 320 ಎಂಎಂ ಫ್ರಂಟ್ ಡಿಸ್ಕ್ ಮತ್ತು 230 ಎಂಎಂ ರಿಯರ್ ಡಿಸ್ಕ್ ಬ್ರೇಕ್‌ಗಳಿಂದ ನಿರ್ವಹಿಸಲಾಗುತ್ತದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

ಇನ್ನು ವಿನ್ಯಾಸಕ್ಕೆ ಸಂಬಂಧಿಸಿದಂತೆ, ಹೊಸ ಫೇರಿಂಗ್ ಸುಧಾರಿತ ಏರೋಡೈನಾಮಿಕ್ ಹೊಂದುವಂತೆ ಹೇಳಲಾಗಿದೆ. ಇತರ ಮುಖ್ಯಾಂಶಗಳು ರೇಡಿಯೇಟರ್, ಗಟ್ಟಿಯಾದ ಆಕ್ಸಲ್, ಅನನ್ಯ ಲೇಸರ್ ವಿನ್ಯಾಸದೊಂದಿಗೆ ವಿಂಡ್‌ಸ್ಕ್ರೀನ್, ಫ್ರಂಟ್ ಬ್ಲಿಂಕರ್‌ಗಳೊಂದಿಗೆ ಇಂಟಿಗ್ರೇಟೆಡ್ ಫ್ರಂಟ್ ಪೊಸಿಷನ್ ಲ್ಯಾಂಪ್ ಮತ್ತು ಅಲ್ಯೂಮಿನಿಯಂ ಕ್ಯಾಸ್ಟ್ ಮತ್ತು ಸ್ಪ್ಲಿಟ್ ಪಿಲಿಯನ್ ಗ್ರ್ಯಾಬ್ ಆಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

ಇಂಡಿಯಾ-ಸ್ಪೆಕ್ 2022ರ ಕೆಟಿಎಂ ಆರ್‌ಸಿ 200 ಅಂತಾರಾಷ್ಟ್ರೀಯ ಆವೃತ್ತಿಯಂತೆ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ ವ್ಯವಸ್ಥೆಯನ್ನು ಒಳಗೊಂಡಿದೆ. ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 200 ಅಪೆಕ್ಸ್ ಬಿಗ್ ಪಿಸ್ಟನ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಹೊಸ WP ಅಪೆಕ್ಸ್ ಶಾಕ್ ಅಬ್ಸಾರ್ಬರ್ ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಅದೇ 199.5 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಫೋರ್-ಸ್ಟ್ರೋಕ್ ಫ್ಯುಯೆಲ್-ಇಂಜೆಕ್ಟೆಡ್ ಇಂಜಿನ್ ಅನ್ನು ಟ್ವಿನ್ ಓವರ್‌ಹೆಡ್ ಕ್ಯಾಮ್‌ಶಾಫ್ಟ್‌ಗಳೊಂದಿಗೆ ಬಳಸಲಾಗುತ್ತದೆ. ಇನ್ನು ದೊಡ್ಡ ಏರ್‌ಬಾಕ್ಸ್ ಎಂಜಿನ್ ಅನ್ನು ಸುಲಭವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ, ಸುಧಾರಿತ ಸ್ಪಂದನೆ ಮತ್ತು ಹೆಚ್ಚಿದ ಟಾರ್ಕ್ ಅನ್ನು ಒದಗಿಸುತ್ತದೆ. ಈ ಬೈಕಿನ ಹೊಸ ಬಾಡಿವರ್ಕ್ ಆಗಿ ವಿನ್ಯಾಸಗೊಳಿಸಲಾಗಿದೆ.

ಈ ಎಂಜಿನ್ 25.8 ಬಿಹೆಚ್‍ಪಿ ಪವರ್ ಮತ್ತು 19.5 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಕಡಿಮೆ ಘರ್ಷಣೆಗಾಗಿ ಕಾರ್ಬನ್ ಲೇಪಿತ ಕ್ಯಾಮ್ ಲಿವರ್‌ಗಳನ್ನು ಪಡೆಯುತ್ತದೆ ಆದರೆ ಪವರ್ ಅನ್ನು ಹೆಚ್ಚಿಸುತ್ತದೆ. ಹೊಸ ಕೆಟಿಎಂ ಆರ್‌ಸಿ 200 ಗೆ 40 ಪ್ರತಿಶತದಷ್ಟು ದೊಡ್ಡ ಏರ್‌ಬಾಕ್ಸ್ ಅನ್ನು ಕೂಡ ಸೇರಿಸಿದ್ದು ಅದು ಸ್ಪಂದಿಸುವ ಥ್ರೊಟಲ್ ರೆಸ್ಪಾನ್ ಅನ್ನು ನೀಡುತ್ತದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

ಇನ್ನು ಕೆಟಿಎಂ ಆರ್‌ಸಿ 125 ಬೈಕ್ ಹಿಂದಿನ ಮಾದರಿಗೆ ಹೋಲಿಸಿದರೆ ಕಡಿಮೆ ಉದ್ದವನ್ನು ಹೊಂದಿದೆ. ಬದಲಾದ ಆಯಾಮಗಳಿಗೆ ಕಾರಣ ಹೊಸ ವಿನ್ಯಾಸ; ಹೊಸ ತಲೆಮಾರಿನ ಆರ್‌ಸಿ ಸರಣಿಯು ಪ್ರಸ್ತುತ ತಲೆಮಾರಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನ ಶೈಲಿಯನ್ನು ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

ಇನ್ನೊಂದು ಪ್ರಮುಖ ಬದಲಾವಣೆ ಹೊಸ ಫ್ರೇಮ್, ನ್ಯೂ ಜನರೇಷನ್ ಆರ್‌ಸಿ ಸರಣಿಯು ಸ್ಪ್ಲಿಟ್-ಟ್ರೆಲಿಸ್ ಫ್ರೇಮ್ ಅನ್ನು ಪಡೆಯುತ್ತದೆ, ಹಿಂಭಾಗದಲ್ಲಿ ಬೋಲ್ಟ್-ಆನ್ ಸಬ್‌ಫ್ರೇಮ್, ಪ್ರಸ್ತುತ ಡ್ಯೂಕ್ ಸರಣಿಯಂತೆಯೇ ಇದೆ. ಈ ಬೈಕಿನಲ್ಲಿ ಸ್ವಲ್ಪ ಎತ್ತರಿಸಿದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು ಮತ್ತು ಸೆಂಟರ್-ಸೆಟ್ ಫುಟ್‌ಪೆಗ್‌ಗಳನ್ನು ಹೊಂದಿವೆ. ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 125 ದೊಡ್ಡ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆಯುತ್ತದೆ.

ಡೀಲರ್ ಬಳಿ ಕಾಣಿಸಿಕೊಂಡ ಹೊಸ KTM RC 200 ಬೈಕ್

ಇನ್ನು ಡಬ್ಲ್ಯೂಪಿ ಅಪೆಕ್ಸ್ ಬಿಗ್ ಪಿಸ್ಟನ್ ಫ್ರಂಟ್ ಫೋರ್ಕ್ಸ್, ರಿಯರ್ ಮೊನೊಶಾಕ್, ಎರಡೂ ವ್ಹೀಲ್ ಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಎಲ್ಲಾ ಹೊಸ ಎಲ್‌ಸಿಡಿ ಡ್ಯಾಶ್ ಡಿಸ್‌ಪ್ಲೇ, ಎಲ್ಲಾ ಹೊಸ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು, ಸೂಪರ್‌ಮೋಟೋ ಮೋಡ್‌ನೊಂದಿಗೆ ಹೊಸ ಎಬಿಎಸ್ ಅನ್ನು ಪಡೆದುಕೊಂಡಿದೆ, ಈ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 125 ಬೈಕ್ 13.7 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ, ಇನ್ನು ಕೆಟಿಎಂ ಕಂಪನಿಯು ಶೀಘ್ರದಲ್ಲೇ ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‌ಗಳ ವಿತರಣೆಯನ್ನು ಪ್ರಾರಂಭಿಸಬಹುದು.

Image Courtesy: ROLLING PEACE

Most Read Articles

Kannada
Read more on ಕೆಟಿಎಂ ktm
English summary
New ktm rc 200 starts arriving at dealerships details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X