Just In
- 15 min ago Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- 1 hr ago ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- 2 hrs ago ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- 4 hrs ago ಹ್ಯುಂಡೈ ವೆರ್ನಾ ಕಾರಿಗೆ ಭಾರೀ ಡಿಸ್ಕೌಂಟ್: ರಾಶಿ ಫೀಚರ್ನ ಕಾರಿಗೆ ಇಷ್ಟು ಆಫರ್ ಯಾಕೆಂದ ನೆಟ್ಟಿಗರು!
Don't Miss!
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Movies ಕಲರ್ಫುಲ್ ಲೈಟು.. ಡಿಂಪಲ್ ಸ್ಮೈಲು.. 'ಸಂಜು ವೆಡ್ಸ್ ಗೀತಾ 2' ಒಂದು ಹಾಡಿನ ಸೆಟ್ಟಿಗೆ ಬರೋಬ್ಬರಿ ₹50 ಲಕ್ಷ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಫೀಚರ್ಸ್ಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್
ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್ಫೀಲ್ಡ್ ತನ್ನ ಸರಣಿಯಲ್ಲಿರು ಜನಪ್ರಿಯ ಕ್ಲಾಸಿಕ್ 350 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ನವೀಕರಣಗಳೊಂದಿಗೆ ಈ 2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ಭಾರತದಲ್ಲಿ ಹಲವು ಬಾರಿ ಸ್ಫಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ತಲೆಮಾರಿನ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕಿನ ಇನ್ಸ್ ಟ್ರೂಮೆಟ್ ಕ್ಲಸ್ಟರ್ ವಿಡಿಯೋ ಬಹಿರಂಗವಾಗಿದೆ. ಇದರಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಈಗ ಅನಲಾಗ್ ಸ್ಪೀಡೋಮೀಟರ್ ಕೆಳಗೆ ಸಣ್ಣ ಡಿಜಿಟಲ್ ಡಿಸ್ ಪ್ಲೇಯನ್ನು ಹೊಂದಿರುತ್ತದೆ.
ಈ ಡಿಸ್ ಪ್ಲೇಯಲ್ಲಿ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಓಡೋಮೀಟರ್, ಓಡೋಮೀಟರ್ ಮತ್ತು ಇತರ ವಿವರಗಳನ್ನು ಪ್ರದರ್ಶಿಸುತ್ತದೆ. ಬದಿಯಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಇರುವಿಕೆಯು ಅತ್ಯಂತ ಮುಖ್ಯವಾದ ಸೇರ್ಪಡೆಯಾಗಿದೆ. ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ಕೂಡ ಒಳಗೊಂಡಿರುತ್ತದೆ.
MOST READ: ಹೊಸ ಹೀರೋ ಎಕ್ಸ್ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ
ಬ್ಲೂಟೂತ್ ಮತ್ತು ಮೀಸಲಾದ ಅಪ್ಲಿಕೇಶನ್ ಮೂಲಕ ಸ್ಮಾರ್ಟ್ಫೋನ್ಗೆ ಕನೆಕ್ಟ್ ಮಾಡಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೌಲ್ಯಭ್ಯವನ್ನು ಒದಗಿಸುತ್ತದೆ. ಇನ್ನು ಹೊಸ ಕ್ಲಾಸಿಕ್ 350 ಮಾದರಿಯು ಈಗ ವೃತ್ತಾಕಾರದ ಎಲ್ಇಡಿ ಟೈಲ್ಲೈಟ್ಗಳನ್ನು ಹೊಂದಿದೆ. ಇನ್ನು ಇದರಲ್ಲಿ ಸ್ಪ್ಲಿಟ್ ಸೀಟ್ ಮತ್ತು ಹಿಂಭಾಗದಲ್ಲಿ ಸ್ವಲ್ಪ ದೊಡ್ಡದಾದ ಗ್ರ್ಯಾಬ್ ಹ್ಯಾಂಡಲ್ ಅನ್ನು ಹೊಂದಿರುತ್ತದೆ.
2021ರ ಕ್ಲಾಸಿಕ್ 350 ಹ್ಯಾಲೊಜೆನ್ ಯುನಿಟ್ ಸುತ್ತ ವೃತ್ತಾಕಾರದ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ನವೀಕರಿಸಿದ ಹೆಡ್ ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಈ ಹೊಸ ಹ್ಯಾಂಡಲ್ಬಾರ್ ಗ್ರಿಪ್ಸ್ ಮತ್ತು ಸ್ವಿಚ್ಗಿಯರ್ಗಳನ್ನು ಸಹ ಹೊಂದಿರುತ್ತದೆ. 2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ಪ್ರಸ್ತುತ ಮಾದರಿಯಂತೆಯೇ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಮುಂದಕ್ಕೆ ಸಾಗಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್
ಅದರೆ ಮಿಟಿಯೊರ್ 350 ಬೈಕಿನಿಂದ ಕೆಲವು ಅಂಶಗಳನ್ನು ಎರವಲು ಪಡೆಯಬಹುದು. ಇದು ಡಬಲ್-ಕ್ರ್ಯಾಡಲ್ ಫ್ರೇಮ್ ನತ್ತು ಸಿಂಗಲ್ ಡೌನ್ಟ್ಯೂಬ್ ಫ್ರೇಮ್ ಅನ್ನು ಕೂಡ ಬದಲಾಯಿಸುತ್ತದೆ.
ಈ ಹೊಸ ಕ್ಲಾಸಿಕ್ 350 ಬೈಕ್ ಅಲಾಯ್ ವ್ಹೀಲ್ ಗಳು ಮತ್ತು ವಿಂಡ್ ಡಿಫ್ಲೆಕ್ಟರ್ ಅನ್ನು ಪಡೆದುಕೊಂಡಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಟೈಲ್ಲ್ಯಾಂಪ್, ಹೊಸ ಗ್ರ್ಯಾಪ್ ರೈಲ್, ಕಡಿಮೆ ಹಿಂಭಾಗದ ಫೆಂಡರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಅನಲಾಗ್ ಸ್ಪೀಡೋಮೀಟರ್ ಹೊಂದಿರುವ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಕೂಡ ಒಳಗೊಂಡಿರುತ್ತದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್ಸೈಕಲ್
ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ, ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ಕ್ಲಾಸಿಕ್ ಬೈಕ್ ಬ್ಲ್ಯಾಕ್, ಪ್ಯೂರ್ ಬ್ಲ್ಯಾಕ್, ಮರ್ಕ್ಯುರಿ ಸಿಲ್ವರ್, ಗನ್ಮೆಟಲ್ ಗ್ರೇ, ಸ್ಟ್ರೋಮೈಡರ್ ಸ್ಯಾಂಡ್, ಏರ್ ಬೋನ್ ಬ್ಲೂ, ಕ್ರೋಮ್, ಸ್ಟೆಲ್ತ್ ಬ್ಲ್ಯಾಕ್ ಆರೆಂಜ್ ಎಂಬರ್ ಮತ್ತು ಮೆಟಲ್ಲೊ ಸಿಲ್ವರ್ ಸೇರಿದಂತೆ 12 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕಿನ ಪ್ಲಾಟ್ಫಾರ್ಮ್ ಮತ್ತು ಎಂಜಿನ್ ಸೆಟಪ್ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗುತ್ತದೆ. 2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಹೊಸ ಮಾಡ್ಯುಲರ್ ಜೆ ಪ್ಲಾಟ್ಫಾರ್ಮ್ನಲ್ಲಿ ತಯಾರಿಸಲಾಗುತ್ತದೆ.
ಮಾಡ್ಯುಲರ್ ಜೆ ಪ್ಲಾಟ್ಫಾರ್ಮ್ ಅಸ್ತಿತ್ವದಲ್ಲಿರುವ ಪ್ಲಾಟ್ಫಾರ್ಮ್ಗಿಂತ ಹಗುರವಾಗಿರುತ್ತದೆ, ಇನ್ನು 2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕಿನಲ್ಲಿ ಹೊಸ 350ಸಿಸಿ, ಸುಧಾರಿತ ಎಸ್ಒಹೆಚ್ಸಿ ಕಾನ್ಫಿಗರೇಶನ್ನೊಂದಿಗೆ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ.
ಈ 350ಸಿಸಿ ಎಂಜಿನ್ 20.2 ಬಿಹೆಚ್ಪಿ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ಗೆ ಜೋಡಿಸಲಾಗುತ್ತದೆ. ಈ 2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ದೇಶೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.