ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ದೇಶದ ಮುಂಚೂಣಿ ಕ್ಲಾಸಿಕ್ ಬೈಕ್ ತಯಾರಕ ಕಂಪನಿಯಾಗಿರುವ Royal Enfield ತನ್ನ ಜನಪ್ರಿಯ Classic ಬೈಕ್ ಆವೃತ್ತಿಯಾದ Classic 350 ನ್ಯೂ ಜನರೇಷನ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಹಲವಾರು ಹೊಸ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಗೊಂಡಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಕಳೆದ ಒಂದು ದಶಕದಿಂದಲೂ ಅಗ್ರಸ್ಥಾನದಲ್ಲಿರುವ Royal Enfield ಕಂಪನಿಯು Classic ಸರಣಿ ಮಾರಾಟದಲ್ಲಿ ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ Classic 350 ನ್ಯೂ ಜನರೇಷನ್ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.84 ಲಕ್ಷ ಬೆಲೆ ಹೊಂದಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ಹೊಸ Classic 350 ಮಾದರಿಯು ಹಳೆಯ ಆವೃತ್ತಿಗಳಿಂತಲೂ ಸಾಕಷ್ಟು ಬದಲಾವಣೆಯೊಂದಿಗೆ ವಿವಿಧ ಮಾದರಿಗಳು ರೂ.10 ಸಾವಿರದಿಂದ ರೂ. 15 ಸಾವಿರದಷ್ಟು ದುಬಾರಿಯಾಗಿದ್ದು, ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಹೊಸ ಬೈಕಿನಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಹೊಸ ಬೈಕ್ ಮಾದರಿಯು ಒಟ್ಟು ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2.15 ಲಕ್ಷ ಬೆಲೆ ಹೊಂದಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ನ್ಯೂ ಜನರೇಷನ್ ಮಾದರಿಯನ್ನು ಮಾರ್ಡನ್ ರೆಟ್ರೊ ವಿನ್ಯಾಸದೊಂದಿಗೆ ಅಭಿವೃದ್ದಿಗೊಳಿಸಿರುವ Royal Enfield ಕಂಪನಿಯು ಹೊಸ ಬೈಕಿ ಪ್ರತಿಯೊಂದು ತಾಂತ್ರಿಕ ಅಂಶಗಳನ್ನು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಉನ್ನತೀಕರಿಸಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ಹೊಸ ಬೈಕ್ ಮಾದರಿಯನ್ನು ರೆಡ್‌ಡಿಚ್, ಹಾಲ್ಕೈನ್, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಮಾದರಿಗಳಲ್ಲಿ ಬಿಡುಗಡೆ ಮಾಡಿದ್ದು, Meteor 350 ಮಾದರಿಯಲ್ಲಿನ ಬಹುತೇಕ ತಾಂತ್ರಿಕ ಅಂಶಗಳು ಹೊಸ Classic 350 ಮಾದರಿಗಾಗಿ ಎರವಲು ಪಡೆದುಕೊಳ್ಳಲಾಗಿದೆ.

2021 Royal Enfield Classic 350 Price
Redditch ₹1,84,374
Halcyon ₹1,93,123
Signals ₹2,04,367
Dark ₹2,11,465
Chrome ₹2,15,118
ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ಹೊಸ Classic 350 ಮಾದರಿಯಲ್ಲಿ Royal Enfield ಕಂಪನಿಯು ಸಸ್ಷೆಂಷನ್ ಮತ್ತು ಬ್ರೇಕಿಂಗ್ ಸೌಲಭ್ಯವನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಿದ್ದು, ಹೊಸ ಬೈಕಿನಲ್ಲಿ ಇದೀಗ ಫ್ಯೂಲ್ ಗೇಜ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಸೌಲಭ್ಯವು ಸುಲಭ ಪ್ರಯಾಣಕ್ಕೆ ಸಹಕಾರಿಯಾಗಿವೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

Classic 350 ಮಾದರಿಯಲ್ಲಿ Royal Enfield ಕಂಪನಿಯು Meteor 350 ಮಾದರಿಯಲ್ಲಿನ 349 ಸಿಸಿ SOHC ಎಂಜಿನ್ ಬಳಕೆ ಮಾಡಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 19.1 ಬಿಎಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

Royal Enfield ಕಂಪನಿಯು ಈ ಹಿಂದಿನ 346 ಸಿಸಿ UCE ಎಂಜಿನ್ ತೆಗೆದುಹಾಕಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಜಿನ್ ಜೋಡಣೆ ಮಾಡಿರುವುದರಿಂದ ವೈಬ್ರೆಷನ್ ಪ್ರಮಾಣವು ಸಾಕಷ್ಟು ಸುಧಾರಣೆಯಾಗಿದ್ದು, ಎಲೆಕ್ಟ್ರಾನಿಕ್ಸ್ ಸೌಲಭ್ಯಗಳು ಬೈಕ್ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುತ್ತವೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ನ್ಯೂ ಜನರೇಷನ್ Classic 350 ಮಾದರಿಯಲ್ಲಿ ಸಂಪೂರ್ಣವಾಗಿ ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಜೋಡಣೆ ಮಾಡಿದ್ದು, ಎಲ್‌ಸಿಡಿ ಜೊತೆ ಪ್ರತ್ಯೇಕವಾದ ಫ್ಯೂಲ್ ಗೇಜ್ ನೀಡಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಕಂಪನಿಯು ಟ್ರಿಪ್ಪರ್ ಮೀಟರ್ ಜೋಡಣೆ ಮಾಡಿದ್ದು, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮೂಲಕ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ಹೊಸ ಬೈಕಿನಲ್ಲಿ ಕಂಪನಿಯು ಹಾಲೊಜೆನ್ ಬಲ್ಬ್ ಬಳಕೆ ಮಾಡಿದ್ದು, ಸ್ವಿಚ್ ಗೇರ್ ಸೌಲಭ್ಯವನ್ನು Meteor 350 ಮಾದರಿಯಿಂದ ಎರವಲು ಪಡೆದುಕೊಳ್ಳಲಾಗಿದೆ. ಹೊಸ ಬೈಕಿನಲ್ಲಿ ಹೆಡ್‌ಲ್ಯಾಂಪ್ ಮಾತ್ರವಲ್ಲ ಟೈಲ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಸಹ ಹಾಲೊಜೆನ್ ಬಲ್ಬ್ ಹೊಂದಿವೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ಇದರೊಂದಿಗೆ ಹೊಸ Classic 350 ಮಾದರಿಯಲ್ಲಿ ಕಂಪನಿಯು ಸಿಂಗಲ್ ಕ್ರೆಡಲ್ ಫ್ರೆಮ್ ಬದಲಾಗಿ ಡ್ಯುಯಲ್ ಡೌನ್ ಟ್ಯೂಬ್ ಚಾರ್ಸಿ ಬಳಕೆ ಮಾಡಲಾಗಿದ್ದು, ಚಾರ್ಸಿಸ್ ಬದಲಾವಣೆಯಿಂದಾಗಿ ಬೈಕ್ ರೈಡಿಂಗ್ ಹೊಸ ಅನುಭವ ನೀಡಲಿದ್ದು, 41 ಎಂಎಂ ಟೆಲಿಸ್ಕೊಪಿಕ್ ಫೋರ್ಕ್‌ನೊಂದಿಗೆ 170 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ಸುರಕ್ಷಾ ಫೀಚರ್ಸ್‌ಗಳು

ಹೊಸ Classic 350 ಬೈಕ್ ಮಾದರಿಯಲ್ಲಿ Royal Enfield ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯಗಳನ್ನು ನೀಡಲಾಗಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ಆದರೂ ಹೊಸ ಬೈಕಿನ ಆರಂಭಿಕ ಮಾದರಿಯಲ್ಲಿ ಮಾತ್ರ ಸಿಂಗಲ್ ಚಾನೆಲ್ ಎಬಿಎಸ್ ಮೂಲಕ ಎರಡು ಬದಿಯಲ್ಲೂ ಡ್ರಮ್ ಬ್ರೇಕ್ ಜೋಡಣೆ ಮಾಡಿದ್ದು, ಇನ್ನುಳಿದ ಮಾದರಿಗಳ ಮುಂಭಾಗದಲ್ಲಿ 300ಎಂಎಂ ಮತ್ತು ಹಿಂಬದಿಯಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಬಳಕೆ ಮಾಡಲಾಗಿದೆ.

ವಿನೂತನ ಫೀಚರ್ಸ್‌ಗಳೊಂದಿಗೆ ನ್ಯೂ ಜನರೇಷನ್ Royal Enfield Classic 350 ಬೈಕ್ ಬಿಡುಗಡೆ

ಗ್ರಾಹಕರ ಬೇಡಿಕೆಯೆಂತೆ ಹೊಸ ಬೈಕ್ ಮಾದರಿಯು ಒಟ್ಟು 11 ಬಣ್ಣಗಳ ಆಯ್ಕೆ ಹೊಂದಿದ್ದು, ಕ್ರೋಮ್ ರೆಡ್, ಕ್ರೋಮ್ ಬ್ರೊಂಜ್, ಡಾರ್ಕ್ ಸ್ಟೆಲ್ತ್ ಬ್ಲ್ಯಾಕ್, ಡಾರ್ಕ್ ಗನ್‌ಮೆಟಲ್ ಗ್ರೇ, ಸಿಗ್ನಲ್ಸ್ ಮಾರ್ಷ್ ಗ್ರೇ, ಸಿಗ್ನಲ್ಸ್ ಸ್ಯಾಂಡ್ ಸ್ಟಾರ್ಮ, ಹಾಲ್ಸಿಯಾನ್ ಗ್ರೀನ್, ಹಾಲ್ಸಿಯಾನ್ ಬ್ಲ್ಯಾಕ್, ಹಾಲ್ಸಿಯಾನ್ ಗ್ರೇ, ರೆಡ್‌ಡಿಚ್ ಗ್ರೀನ್ ಮತ್ತು ರೆಡ್‌ಡಿಚ್ ಗ್ರೇ ಬಣ್ಣಗಳನ್ನು ಹೊಂದಿದೆ.

Most Read Articles

Kannada
English summary
New royal enfield classic 350 launched prices start at rs 1 84 lakh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X