2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ರಾಯಲ್ ಎನ್‌ಫೀಲ್ಡ್(Royal Enfield) ಕಂಪನಿಯು ತನ್ನ ಜನಪ್ರಿಯ ಕ್ಲಾಸಿಕ್ 350(Classic 350) ಮಾದರಿಯನ್ನು ಬಿಡುಗಡೆ ಮಾಡಿ ವಿತರಣೆ ಆರಂಭಿಸಿದ್ದು, ಹೊಸ ಬೈಕ್ ಮಾದರಿಗಾಗಿ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಪ್ರಕಟಿಸಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಹೊಸ ಕ್ಲಾಸಿಕ್ 350 (Classic 350) ಮಾದರಿಯು ಹಳೆಯ ಆವೃತ್ತಿಗಳಿಂತಲೂ ಸಾಕಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಬೈಕ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2.15 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹೊಸ ಬೈಕಿನಲ್ಲಿ ಕಂಪನಿಯು ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಹೆಚ್ಚುವರಿ ಸೌಲಭ್ಯಗಳನ್ನು ಹೊಂದಬಹುದಾಗಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ರಾಯಲ್ ಎನ್‌ಫೀಲ್ಡ್ ಕಂಪನಿಯು ಪ್ರಕಟಿಸಿರುವ ಕ್ಲಾಸಿಕ್ 350 ಮಾದರಿಯ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿರುವ ಸೌಲಭ್ಯಗಳನ್ನು ಕಂಪನಿಯ ವೆಬ್‌ಸೈಟ್ ಮೂಲಕವೇ ಗ್ರಾಹಕರು ಆನ್‌ಲೈನ್ ಕಾನ್ಫಿಗೇಷನ್ ಮಾಡಿಕೊಳ್ಳುವ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿರುವ ವಿವಿಧ ತಾಂತ್ರಿಕ ಸೌಲಭ್ಯಗಳು ಹೊಸ ಬೈಕ್‌ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸುರಕ್ಷಿತ ಮತ್ತು ಆರಾಮದಾಯಕ ಬೈಕ್ ಚಾಲನೆಗೂ ಸಹಕಾರಿಯಾಗಿವೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಕಂಪನಿಯ ಆಕ್ಸೆಸರಿಸ್‌ನಲ್ಲಿ ಎಂಜಿನ್ ಗಾರ್ಡ್, ಸಿಲ್ವರ್ ಸಂಪ್ ಗಾರ್ಡ್, ಸಿಲ್ವರ್ ಫುಟ್‌ಪೆಗ್, ಬಾರ್ ಎಂಡ್ ಮಿರರ್ ಮೌಂಟ್, ಬ್ಲಾಕ್ ವಾಟರ್‌ಪ್ರೂಫ್ ಇನ್ನರ್ ಬ್ಯಾಗ್, ಪ್ಯಾನಿಯರ್ ರೈಲ್, ಸ್ಟೈಲಿಶ್ ಅಲಾಯ್ ವ್ಹೀಲ್, ಆರಾಮದಾಯಕವಾದ ರೈಡರ್ ಮತ್ತು ಪಿಲಿಯನ್ ಟೂರಿಂಗ್ ಸೀಟ್ ಮತ್ತು ರಿಯರ್ ರಾಕ್ ನೀಡಲಾಗಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಜೊತೆಗೆ ಸಿಲ್ವರ್ ಆರಿಯೋ ವಿಸರ್, ಟೂರಿಂಗ್ ಸ್ಕ್ರೀನ್, ಬ್ಲ್ಯಾಕ್ ರೆಸ್ಟ್ ಪ್ಯಾಡ್, ಬ್ಲ್ಯಾಕ್ ರೆಡ್ ಪ್ಯಾಡ್, ಸೀಟ್ ಕವರ್, ಬಾರ್ ಅಂಡ್ ಮಿರರ್, ಟೂರಿಂಗ್ ಮಿರರ್‌ಗಳನ್ನು ನೀಡಲಾಗಿದ್ದು, ಆಕ್ಸೆಸರಿಸ್‌ಗಳ ಬೆಲೆಯು ಆರಂಭಿಕವಾಗಿ ರೂ. 550ರಿಂದ ರೂ. 12,500 ಬೆಲೆ ಹೊಂದಿವೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಇನ್ನು ಹೊಸ ಕ್ಲಾಸಿಕ್ 350 ಬೈಕ್ ಮಾದರಿಯು ರೆಡ್‌ಡಿಚ್, ಹಾಲ್ಕೈನ್, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಎಂಬ ಐದು ವೆರಿಯೆಂಟ್ ಮತ್ತು ಹನ್ನೊಂದು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಬೈಕ್ ಮಾದರಿಯು ಇತ್ತೀಚೆಗೆ ಬಿಡುಗಡೆಯಾಗಿರುವ ಮಿಟಿಯೊರ್ 350 ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಕಂಪನಿಯು ಸಸ್ಷೆಂಷನ್ ಮತ್ತು ಬ್ರೇಕಿಂಗ್ ಸೌಲಭ್ಯವನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಲಾಗಿದ್ದು, ಹೊಸ ಬೈಕಿನಲ್ಲಿ ಇದೀಗ ಫ್ಯೂಲ್ ಗೇಜ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್ ಮಾದರಿಯಲ್ಲಿ ಮಿಟಿಯೊರ್ 350 ಮಾದರಿಗಾಗಿ ಪರಿಚಯಿಸಿರುವ 349 ಸಿಸಿ SOHC ಎಂಜಿನ್ ಬಳಕೆ ಮಾಡಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 19.1 ಬಿಎಚ್‌ಪಿ ಮತ್ತು 28 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆಯೊಂದಿಗೆ ಅತ್ಯುತ್ತಮ ಹ್ಯಾಂಡ್ಲಿಂಗ್ ಹೊಂದಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಕ್ಲಾಸಿಕ್ 350 ಬೈಕಿನಲ್ಲಿ ಈ ಹಿಂದೆ ಬಳಕೆ ಮಾಡಲಾಗುತ್ತಿದ್ದ 346 ಸಿಸಿ UCE ಎಂಜಿನ್ ತೆಗೆದುಹಾಕಿರುವ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ 349 ಸಿಸಿ SOHC ಎಂಜಿನ್ ಜೋಡಣೆ ಮಾಡಿದ್ದು, ಈ ಹಿಂದಿನ ಮಾದರಿಗಳಲ್ಲಿ ಇದ್ದ ವೈಬ್ರೆಷನ್ ಪ್ರಮಾಣವು ಗಣನೀಯವಾಗಿ ಸುಧಾರಣೆಯಾಗಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಜೊತೆಗೆ ಎಲೆಕ್ಟ್ರಾನಿಕ್ಸ್ ಸೌಲಭ್ಯಗಳು ಬೈಕ್ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ಜೋಡಣೆ ಮಾಡಲಾಗಿದೆ. ಎಲ್‌ಸಿಡಿ ಜೊತೆಗೆ ಪ್ರತ್ಯೇಕವಾದ ಫ್ಯೂಲ್ ಗೇಜ್ ಮತ್ತು ಟ್ರಿಪ್ಲರ್ ಮೀಟರ್ ನೀಡಲಾಗಿದ್ದು, ಮಿಟಿಯೊರ್ ಮಾದರಿಯಲ್ಲಿರುವಂತೆ ಪ್ರತ್ಯೇಕವಾದ ಟ್ವಿನ್ ಪಾಡ್ ನೀಡದೆ ಇಂಟ್ರಾಗ್ರೆಟೆಡ್ ಮಾಡಲಾಗಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಟಾಪ್ ಎಂಡ್ ಮಾದರಿಗಳಿಗಾಗಿ ಮಾತ್ರವೇ ಕಂಪನಿಯು ಟ್ರಿಪ್ಪರ್ ಮೀಟರ್ ಅನ್ನು ಜೋಡಣೆ ಮಾಡಿದ್ದು, ಈ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮೂಲಕ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಆದರೆ ಹೊಸ ಬೈಕಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಬದಲಾಗಿ ಹಾಲೊಜೆನ್ ಬಲ್ಬ್ ಬಳಕೆ ಮಾಡಿದ್ದು, ಹೆಡ್‌ಲ್ಯಾಂಪ್ ಮಾತ್ರವಲ್ಲ ಟೈಲ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಸಹ ಹಾಲೊಜೆನ್ ಬಲ್ಬ್ ಹೊಂದಿವೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಹೊಸ ಬೈಕಿನಲ್ಲಿರುವ ಸ್ವಿಚ್ ಗೇರ್ ಸೌಲಭ್ಯವನ್ನು ಮಿಟಿಯೊರ್ 350 ಮಾದರಿಯಿಂದ ಎರವಲು ಪಡೆದುಕೊಳ್ಳಲಾಗಿದ್ದು, ಕಂಪನಿಯು ಹೊಸ ಬೈಕ್ ಮಾದರಿಯನ್ನು ಸಿಂಗಲ್ ಕ್ರೆಡಲ್ ಫ್ರೆಮ್ ಬದಲಾಗಿ ಡ್ಯುಯಲ್ ಡೌನ್ ಟ್ಯೂಬ್ ಚಾರ್ಸಿ‌ಯೊಂದಿಗೆ ಅಭಿವೃದ್ದಿಗೊಳಿಸಿದೆ.

2021ರ Classic 350 ಮಾದರಿಯ ಅಧಿಕೃತ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Royal Enfield

ಡಬಲ್ ಕ್ರೆಡ್ ಚಾರ್ಸಿಸ್ ಬದಲಾವಣೆಯಿಂದಾಗಿ ಬೈಕ್ ರೈಡಿಂಗ್ ದೂರದ ಪ್ರಯಾಣದಲ್ಲೂ ಸ್ಮೂಥ್ ಎನ್ನಿಸಲಿದ್ದು, 41 ಎಂಎಂ ಟೆಲಿಸ್ಕೊಪಿಕ್ ಫೋರ್ಕ್‌ನೊಂದಿಗೆ 170 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಹಾಗೆಯೇ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯಗಳನ್ನು ನೀಡಲಾಗಿದೆ.

Most Read Articles

Kannada
English summary
New royal enfield classic 350 official accessories revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X