ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ಇಟಲಿಯ ಮಿಲನ್‌ನಲ್ಲಿ 2021ರ EICMA ಶೋನಲ್ಲಿ ಆರಂಭಿಕ ದಿನದಂದು ರಾಯಲ್ ಎನ್‌ಫೀಲ್ಡ್ ಕಂಪನಿಯು ಎಸ್‌ಜಿ650 ಕಾನ್ಸೆಪ್ಟ್‌ ಬೈಕ್ ಅನ್ನು ಅನಾವರಣಗೊಳಿಸಿದೆ. ಬ್ರ್ಯಾಂಡ್ ತನ್ನ 120ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಈ ಹೊಸ ಕಾನ್ಸೆಪ್ಟ್‌ ಮಾದರಿಯನ್ನು ಬಹಿರಂಗಪಡಿಸಿದೆ.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ರಾಯಲ್ ಎನ್‌ಫೀಲ್ಡ್ ಕಂಪನಿಯು 120ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಹೊಸ ಕಾನ್ಸೆಪ್ಟ್ ಮಾದರಿಯು ಆಗಮಿಸುತ್ತದೆ ಮತ್ತು ಭವಿಷ್ಯದಲ್ಲಿ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650ಗೆ ಸೇರುವ ರಾಯಲ್ ಎನ್‌ಫೀಲ್ಡ್‌ನಿಂದ ಹೊಸ ಕ್ರೂಸರ್ ಅನ್ನು ಪೂರ್ವವೀಕ್ಷಣೆ ಮಾಡುವ ಸಾಧ್ಯತೆಯಿದೆ. ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಕಾನ್ಸೆಪ್ಟ್‌ ಬೈಕ್ ಓಲ್ಡ್-ಸ್ಕೂಲ್ ಅನಲಾಗ್ ಯುಗವನ್ನು ಪ್ರತಿನಿಧಿಸುವ ಕಂಪನಿಗೆ ಪರಿವರ್ತನೆಯ ಹಂತವನ್ನು ಪ್ರದರ್ಶಿಸುತ್ತದೆ ಮತ್ತು ಡಿಜಿಟಲ್ ಪ್ರಸ್ತುತದಲ್ಲಿ ಸಂಯೋಜಿಸಲ್ಪಟ್ಟಿದೆ. ಕಾನ್ಸೆಪ್ಟ್ ಯೋಜನೆಯು ರಾಯಲ್ ಎನ್‌ಫೀಲ್ಡ್‌ನ ಕಸ್ಟಮ್ ಬೈಕ್ ಗಳ ಶ್ರೀಮಂತ ಇತಿಹಾಸಕ್ಕೆ ಗೌರವವನ್ನು ನೀಡುತ್ತದೆ, ಆದರೆ ಹಿಂದಿನದರಿಂದ ಹೊರೆಯಾಗಿರಲಿಲ್ಲ.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ಹೊಸ ಕಾನ್ಸೆಪ್ಟ್ ಕುರಿತು ರಾಯಲ್ ಎನ್‌ಫೀಲ್ಡ್‌ನ ವಿನ್ಯಾಸ ಮುಖ್ಯಸ್ಥ ಮಾರ್ಕ್ ವೆಲ್ಸ್ ಮಾತನಾಡಿ, ಈ ಸವಾಲಿನ ಮೂಲಕ ರಾಯಲ್ ಎನ್‌ಫೀಲ್ಡ್ ತಂಡವು ಎಸ್‌ಜಿ65 ಕಾನ್ಸೆಪ್ಟ್‌ನೊಂದಿಗೆ ಹೊಸ ಸೃಜನಶೀಲ ಪ್ರಯಾಣವನ್ನು ಪ್ರಾರಂಭಿಸುವುದು ಗುರಿಯಾಗಿದೆ;ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್‌ನಿಂದ ಪ್ರಾರಂಭಿಸಿ. ವಿನ್ಯಾಸದ ಸೂಕ್ಷ್ಮತೆಗಳು ಮತ್ತು ಭವಿಷ್ಯದ ರಾಯಲ್ ಎನ್‌ಫೀಲ್ಡ್‌ಗಳು ಹೇಗಿರಬಹುದು ಎಂಬ ಸುಳಿವು ಇರುತ್ತದೆ ಎಂದು ಹೇಳಿದರು.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಕಾನ್ಸೆಪ್ಟ್ ಪರಂಪರೆ-ಪ್ರೇರಿತ ಪಾಲಿಶ್ ಮಾಡಿದ ಅಲ್ಯೂಮಿನಿಯಂ ಮುಂಭಾಗವನ್ನು ಒಳಗೊಂಡಿದೆ. ಪರಿವರ್ತನೆಯನ್ನು ಪ್ರದರ್ಶಿಸಲು ಫ್ಯೂಯಲ್ ಟ್ಯಾಂಕ್‌ನಲ್ಲಿ ಡಿಜಿಟಲ್ ಗ್ರಾಫಿಕ್ ಇದೆ. ಕಾನ್ಸೆಪ್ಟ್ ಲವಾರು ಅಂಶಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ರಾಯಲ್ ಎನ್‌ಫೀಲ್ಡ್ ಎಸ್‌ಜಿ 650 ಟ್ವಿನ್ ಕಾನ್ಸೆಪ್ಟ್ ಚೆನ್ನೈ ಮೂಲದ ತಯಾರಕರಿಂದ ಮುಂಬರುವ 650 ಸಿಸಿ ಕ್ರೂಸರ್‌ನ ಉತ್ಪಾದನೆಯ ಸಮೀಪವಿರುವ ಮೂಲಮಾದರಿಯಾಗಿದೆ ಮತ್ತು ಇದು ಈಗಾಗಲೇ ಹಲವು ತಿಂಗಳುಗಳಿಂದ ಸಾರ್ವಜನಿಕ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ಇದು ಮುಂದಿನ ವರ್ಷದ ಮೊದಲಾರ್ಧದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ ಮತ್ತು ಇದು ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಯಂತೆಯೇ ಅದೇ ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿದೆ. ಇದು ಸಿಂಗಲ್ ಸೀಟ್ ಮಾದರಿಯಾಗಿದೆ. ಹಿಂಭಾಗದ ಬ್ಲ್ಯಾಕ್ ಫೆಂಡರ್ ಬಾಬರ್ ನಿಲುವನ್ನು ನೀಡುತ್ತದೆ.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ರಾಯಲ್ ಎನ್‌ಫೀಲ್ಡ್ ವೈಟ್ ಮತ್ತು ಬ್ಲ್ಯಾಕ್ ಬಣ್ಣದ ಮಿಶ್ರಣವನ್ನು ಸ್ಟ್ರೈಕಿಂಗ್ ಗ್ರಾಫಿಕ್ಸ್ ಮತ್ತು ರಾಯಲ್ ಎನ್‌ಫೀಲ್ಡ್ ಸ್ಟಿಕ್ಕರಿಂಗ್ ಅನ್ನು ಇಂಧನ ಟ್ಯಾಂಕ್‌ನಲ್ಲಿ ಅಳವಡಿಸಿ ವೈಬ್ರೆನ್ಸ್ ಸೇರಿಸಿದೆ.ಕ್ಲಾಸಿಕ್ ಥೀಮ್‌ಗೆ ಅನುಗುಣವಾಗಿ ನಿಂತಿರುವ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಟ್ವಿನ್ ಕಾನ್ಸೆಪ್ಟ್ ಸಾಮಾನ್ಯ ಹ್ಯಾಲೊಜೆನ್ ಬಲ್ಬ್‌ನೊಂದಿಗೆ ವೃತ್ತಾಕಾರದ ಹೆಡ್‌ಲ್ಯಾಂಪ್, ಕ್ರೋಮ್ ಫಿನಿಶ್ಡ್ ಬಾರ್-ಎಂಡ್ ಮಿರರ್‌ಗಲಿವೆ.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ಇದರೊಂದಿಗೆ ಟೆಕ್ಸ್ಚರ್ಡ್ ಸೀಟ್, ಬ್ಲ್ಯಾಕ್-ಔಟ್ ಎಂಜಿನ್ ಕೇಸಿಂಗ್ ಮತ್ತು ಸ್ವಲ್ಪಮಟ್ಟಿಗೆ ಹೊಂದಿದೆ. ಮೇಲ್ಮುಖವಾಗಿ ಓರೆಯಾಗಿರುವ ಡ್ಯುಯಲ್ ಎಕ್ಸಾಸ್ಟ್ ಪೈಪ್‌ಗಳನ್ನು ಹೊಂದಿವೆ. ಇನ್ನು ಈ ಹೊಸ ಕಾನ್ಸೆಪ್ಟ್ ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ ಮುಂಭಾಗದಲ್ಲಿ ಇನ್ವರ್ಟಡ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಸ್ಪ್ರಿಂಗ್‌ಗಳನ್ನು ಹೊಂದಿವೆ.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ಇದು ಟ್ವಿನ್-ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಹೊಂದಿದೆ, ಅದು ಅದರ ಉತ್ಪಾದನೆಯ ವಿವರಣೆಯಲ್ಲಿ ಗೂಗಲ್-ಚಾಲಿತ ಟ್ರಿಪ್ಪರ್ ನ್ಯಾವಿಗೇಷನ್ ಅನ್ನು ನೀಡುತ್ತದೆ, ಇನ್ನು ನವೀಕರಿಸಿದ ಸಬ್‌ಫ್ರೇಮ್, ದಪ್ಪನಾದ ಮುಂಭಾಗದ ಫೆಂಡರ್, ಎಸ್‌ಜಿ650ಟ್ವಿನ್ ಗ್ರಾಫಿಕ್ಸ್‌ನೊಂದಿಗೆ ಸೈಡ್ ಪ್ಯಾನೆಲ್‌ಗಳು, 650 ಟ್ವಿನ್‌ಗಳಿಗೆ ಹೋಲುವ ಇಂಧನ ಟ್ಯಾಂಕ್, ಮುಂಭಾಗ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂನೊಂದಿಗೆ ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಮಧ್ಯಮ-ಸೆಟ್ ಫುಟ್‌ಪೆಗ್‌ಗಳು ಮತ್ತು ನೇರವಾದ ಹ್ಯಾಂಡಲ್‌ಬಾರ್ ಅನ್ನು ಹೊಂದಿವೆ.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ಇನ್ನು ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 2021ರ ಅಕ್ಟೋಬರ್ ತಿಂಗಳಿನ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು 40,611 ಬೈಕ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 62,000ಕ್ಕೂ ಹೆಚ್ಚು ಬೈಕ್‌ಗಳನ್ನು ಮಾರಾಟ ಮಾಡಲಾಗಿತ್ತು.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ಇದನ್ನು ಕೆಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ರಾಯಲ್ ಎನ್‌ಫೀಲ್ಡ್ ಕಂಪನಿಯು ವರ್ಷದಿಂದ ವರ್ಷದ ಮಾರಾಟದಲ್ಲಿ ಶೇ.38.13 ಇಳಿಕೆಯನ್ನು ಕಂಡಿದೆ. ಇನ್ನು ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 3,522 ಯುನಿಟ್‌ಗಳನ್ನು ರಫ್ತು ಮಾಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 4,033 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು.

ಆಕರ್ಷಕ ವಿನ್ಯಾಸದ Royal Enfield SG650 ಕಾನ್ಸೆಪ್ಟ್‌ ಬೈಕ್ ಅನಾವರಣ

ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.12.67 ರಷ್ಟು ಕುಸಿತವನ್ನು ಕಂಡಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಬಾರಿ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡಿದೆ. ಮಾರಾಟದ ಜೊತೆ ರಫ್ತಿನಲ್ಲಿಯು ಕೂಡ ಈ ಬಾರಿ ಕುಸಿತವನ್ನು ಕಂಡಿದೆ, ಇನ್ನು ಹೊಸ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಕಾನ್ಸೆಪ್ಟ್‌ ಬೈಕ್ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.

Most Read Articles

Kannada
English summary
New royal enfield sg650 concept unveiled eicma 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X