ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಈ ಹೊಸ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್ ಎಂಜಿನ್, ಫೀಚರ್ ಮತ್ತು ವಿನ್ಯಾಸದಲ್ಲಿ ಕೆಲವು ನವೀಕರಣಗಳನ್ನು ನಡೆಸಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಸುಜುಕಿ ಕಂಪನಿಯು ಬರ್ಗ್‍ಮನ್ ಮ್ಯಾಕ್ಸಿ-ಸ್ಕೂಟರ್ ಅನ್ನು 1998ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು. ಇದು ಸುಜುಕಿ ಮ್ಯಾಕ್ಸಿ ಸ್ಕೂಟರ್‌ನ ಮೂರನೇ ಪ್ರಮುಖ ಅಪ್‌ಗ್ರೇಡ್ ಆಗಿದೆ, ಮೊದಲ ಎರಡು 2006 ಮತ್ತು 2018ರಲ್ಲಿ ಅಪ್‌ಗ್ರೇಡ್ ಮಾಡಿದ್ದರು. ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬರ್ಗ್‍ಮನ್ ಮ್ಯಾಕ್ಸಿ-ಸ್ಕೂಟರ್ ಗಳಿಗೆ ಉತ್ತಮ ಬೇಡಿಕೆಯನ್ನು ಹೊಂದಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಹೊಸ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಭಾರತದಲ್ಲಿ ಮಾರಾಟದಲ್ಲಿರುವ ಬರ್ಗ್‌ಮನ್ 125 ರ ಜಾಕ್-ಅಪ್ ಆವೃತ್ತಿಯಂತೆ ಕಾಣುತ್ತಿದೆ. ಈ ಹೊಸ ಮ್ಯಾಕ್ಸಿ-ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಎಲ್ಇಡಿ ಹೆಡ್‌ಲೈಟ್‌ಗಳು, ಟೈಲ್‌ಲೈಟ್‌ಗಳು ಮತ್ತು ಚಾಲನೆಯಲ್ಲಿರುವ ಟೈಲ್‌ಲೈಟ್‌ಗಳನ್ನು ಒಳಗೊಂಡಿರುವ ನವೀಕರಿಸಿದ ಲೈಟಿಂಗ್ ಸೆಟಪ್‌ಗೆ ಇದು ಈಗ ಹೆಚ್ಚು ಪ್ರಕಶಮಾನವಾಗಿದೆ.ಈ ಸ್ಕೂಟರ್ ಮುಂಭಾಗದ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಹೊಸ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್ ರನ್ ಗ್ರೇ, ಮ್ಯಾಟ್ ಸಿಲ್ವರ್ ಮತ್ತು ಮ್ಯಾಟ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಈ ಸ್ಕೂಟರ್ ಬ್ಲೂ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಇನ್ನು ಈ ಮ್ಯಾಕ್ಸಿ-ಸ್ಕೂಟರ್ ನಲ್ಲಿ ಅದೇ400 ಎಂಜಿನ್ ಅನ್ನು ಅಳವಡಿಸಲಾಗಿದೆ. ಆದರೆ ಈ ಎಂಜಿನ್ ಅನ್ನು ನವೀಕರಿಸಲಾಗಿದೆ. ಇದರಿಂದ ಒಟ್ಟಾರೆ ಕಾರ್ಯಕ್ಷಮತೆಯನ್ನು ಸುಧಾರಿಸಲು ಕಾರಣವಾಗಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಇದರಲ್ಲಿ ಟ್ವಿನ್-ಪ್ಲಗ್ ಸಿಲಿಂಡರ್ ಅನ್ನು ನೀಡಿದೆ. ಇದು ಹೆಚ್ಚಿನ ಟಾರ್ಕ್ ಅನ್ನು ನೀಡುತ್ತದೆ. ಹೆಚ್ಚಿನ ವೇಗವನ್ನು ಹೆಚ್ಚಿಸಲು ಕಾರಣವಾಗಿದೆ ಮತ್ತು ಅದೇ ಸಮಯದಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಹೊಸ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್ ನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ನೀಡಿದೆ. ಇನ್ನು ಹೊಸ ಬರ್ಗ್‌ಮ್ಯಾನ್ 400 ಹೆಚ್ಚು ಪ್ರಾಯೋಗಿಕವಾಗಿದ್ದು, 42 ಲೀಟರ್ ಅಂಡರ್-ಸೀಟ್ ಸ್ಟ್ರೋರೆಂಜ್ ಅನ್ನು ಹೊಂದಿದೆ. ಮುಂಭಾಗದಲ್ಲಿ 12 ವಿ ಚಾರ್ಜಿಂಗ್ ಸಾಕೆಟ್ ಕೂಡ ಇದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಹಲವು ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇದೀಗ ಸುಜುಕಿ ಮೋಟಾರ್‍‍ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬ್ರ್ಯಾಂಡ್‌ನ ಜನಪ್ರಿಯ ಬರ್ಗ್‌ಮನ್ ಸ್ಟ್ರೀಟ್ 125 ಮ್ಯಾಕ್ಸಿ-ಸ್ಕೂಟರ್ ಆಧರಿಸಿ ಅಭಿವೃದ್ದಿ ಪಡಿಸಲಿದೆ. ಸುಜುಕಿ ಮೋಟಾರ್‍‍ಸೈಕಲ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಈಗಗಾಲೇ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಿದೆ

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಸ್ಪೈ ಚಿತ್ರದಲ್ಲಿ ಕಂಡುಬಂದತೆ ಹೊಸ ಸುಜುಕಿ ಬರ್ಗ್‌ಮನ್ ಎಲೆಕ್ಟ್ರಿಕ್ ಸ್ಕೂಟರ್ ಬಹುತೇಕೆ ತನ್ನ ಪೆಟ್ರೋಲ್ ಮಾದರಿಯ ರೀತಿಯಲ್ಲೇ ವಿನ್ಯಾಸವನ್ನು ಹೊಂದಿರಲಿದೆ. ಆದರೆ ವಿನ್ಯಾಸದಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಹೊಂದಿರುತ್ತದೆ,

ಹೊಸ ತಂತ್ರಜ್ಞಾನಗಳೊಂದಿಗೆ ಅನಾವರಣಗೊಂಡ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್

ಇನ್ನು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸುಜುಕಿ ಕಂಪನಿಯು ಯಾವುದೇ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಈ ವರ್ಷದ ಕೊನೆಯಲ್ಲಿ ಸುಜುಕಿಯು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಇನ್ನು ಹೊಸ ಸುಜುಕಿ ಬರ್ಗ್‍ಮನ್ 400 ಮ್ಯಾಕ್ಸಿ-ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

Most Read Articles

Kannada
English summary
2021 Suzuki Burgman 400 Maxi Scooter Debuts. Read In Kannada.
Story first published: Wednesday, March 31, 2021, 19:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X