ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಬಹಿರಂಗ

ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ಹಲವ್ವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇದೀಗ ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‍‍ಸೈಕಲ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಬಹಿರಂಗ

ಸುಜುಕಿ ಮೋಟಾರ್‍‍ಸೈಕಲ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಇದೀಗ ಈ ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಬಹಿರಂಗವಾಗಿವೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ಆಕಾರ ಮತ್ತು ಸಿಲೂಯೆಟ್ ಸಾಂಪ್ರದಾಯಿಕ ಸ್ಕೂಟರ್‌ಗಳಿಗೆ ಹೋಲುತ್ತದೆ ಎಂದು ತೋರುತ್ತದೆಯಾದರೂ, ವಿನ್ಯಾಸವು ಸ್ವಲ್ಪ ವಿಭಿನ್ನವಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಆಗಿರುವುದರಿಂದ ಕೆಲವು ಸಣ್ಣ ಬದಲಾವಣೆಗಳನ್ನು ಪಡೆದುಕೊಳ್ಳುತ್ತದೆ.

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಬಹಿರಂಗ

ಪೇಟೆಂಟ್ ಚಿತ್ರಗಳಲ್ಲಿ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿಯ ಸ್ಥಾನ ಮತ್ತು ಅದರ ಕೆಳಗಿರುವ ಫ್ರೇಮ್-ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಕೂಡ ಗೋಚರಿಸುತ್ತದೆ. ಈ ಮೋಟರ್ ಹಿಂದಿನ ಚಕ್ರವನ್ನು ವಿಶಿಷ್ಟ ಬೆಲ್ಟ್ ಡ್ರೈವ್ ಸಿಸ್ಟಮ್ ಮೂಲಕ ಪವರ್ ಅನ್ನು ನೀಡುತ್ತದೆ.

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಬಹಿರಂಗ

ಇದು ವೆಚ್ಚ-ಪರಿಣಾಮಕಾರಿಯಾಗಿ ಕಡಿಮೆ ಗೊಳಿಸಲು ಮತ್ತೊಂದು ಮಾರ್ಗವಾಗಿದೆ. ಬಜಾಜ್ ಚೇತಕ್ ಸ್ವಿಂಗ್ ಆರ್ಮ್-ಮೌಂಟೆಡ್ ಯುನಿಟ್ ಹೊಂದಿದೆ ಮತ್ತು ಹಬ್-ಮೌಂಟೆಡ್ ಮೋಟರ್ ಟಿವಿಎಸ್ ಐಕ್ಯೂಬ್ ಮಾದರಿಯು ಹೊಂದಿದೆ.

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಬಹಿರಂಗ

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್‌ನ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ತೆಗೆಯಬಹುದಾದಂತೆ ತೋರುತ್ತಿದೆ, ಇದು ಜನರು ತಮ್ಮ ಮನೆ ಅಥವಾ ಕಚೇರಿಗೆ ಸಾಗಿಸಲು ಮತ್ತು ಸಾಮಾನ್ಯ ವಾಲ್ ಸಾಕೆಟ್ ಬಳಸಿ ಚಾರ್ಜ್ ಮಾಡಲು ಅನುಕೂಲಕರವಾಗಿಸುತ್ತದೆ.

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಬಹಿರಂಗ

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್, ಟಿಎಫ್‌ಟಿ ಡಿಸ್ ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಒಟಿಎ (ಓವರ್ ದಿ ಏರ್) ಅಪ್‌ಡೇಟ್‌ಗಳಂತಹ ಫೀಚರ್ಸ್ ಗಳನ್ನು ನೀಡುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಫೀಚರ್ಸ್ ಎಥರ್ 450 ಎಕ್ಸ್ ಮತ್ತು ಟಿವಿಎಸ್ ಐಕ್ಯೂಬ್‌ನಂತಹ ಸ್ಕೂಟರ್‌ಗಳಲ್ಲಿ ಇವೆ.

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಬಹಿರಂಗ

ಆದರೆ ಕಡಿಮೆ-ವೆಚ್ಚದ ಗುರಿಯನ್ನು ಗಮನದಲ್ಲಿಟ್ಟುಕೊಂಡು, ಸುಜುಕಿ ಅಂತಹ ವೈಶಿಷ್ಟ್ಯಗಳನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ. ಇನ್ನು ಸುಜುಕಿ ಜನಪ್ರಿಯ ಬರ್ಗ್‌ಮನ್ ಸ್ಟ್ರೀಟ್ 125 ಮ್ಯಾಕ್ಸಿ-ಸ್ಕೂಟರ್ ಆಧರಿಸಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ವರದಿಗಳಾಗಿದೆ.

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಬಹಿರಂಗ

ಸುಜುಕಿ ಮೋಟಾರ್‍‍ಸೈಕಲ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಹಲವು ಬಾರಿ ಸ್ಫಾಟ್ ಟೆಸ್ಟ್ ನಡೆಸಿದೆ .ಸ್ಪೈ ಚಿತ್ರದಲ್ಲಿ ಕಂಡುಬಂದತೆ ಸುಜುಕಿ ಬರ್ಗ್‌ಮನ್ ಎಲೆಕ್ಟ್ರಿಕ್ ಸ್ಕೂಟರ್ ಬಹುತೇಕೆ ತನ್ನ ಪೆಟ್ರೋಲ್ ಮಾದರಿಯ ವಿನ್ಯಾಸವನ್ನು ಹೊಂದಿಕೊಂಡಿದೆ. ಆದರೆ ಎಲೆಕ್ಟ್ರಿಕ್ ಮಾದರಿಯಲ್ಲಿ ವಿನ್ಯಾಸದಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗುತ್ತದೆ.

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಪೇಟೆಂಟ್ ಚಿತ್ರಗಳು ಬಹಿರಂಗ

ಹೊಸ ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಿರುತ್ತದೆ. ಸುಜುಕಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡರೆ ಬಜಾಜ್ ಚೇತಕ್ ಮತ್ತು ಟಿವಿಎಸ್ ಐಕ್ಯೂಬ್ ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Suzuki Electric Scooter Revealed In Patent Filings. Read In Kannada.
Story first published: Wednesday, June 23, 2021, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X