ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್‌ ತನ್ನ ಹೊಸ ಹಯಾಬುಸಾ ಬೈಕನ್ನು ಭಾರತದಲ್ಲಿ ಕಳೆದ ತಿಂಗಳು ಬಿಡುಗಡೆಗೊಳಿಸಿತ್ತು. ಸುಜುಕಿ ಕಂಪನಿಯು ಮೊದಲ ಹಂತದಲ್ಲಿ ಹೊಸ ಹಯಾಬುಸಾದ 101 ಯುನಿಟ್ ಗಳನ್ನು ಮಾತ್ರ ಪರಿಚಯಿಸಿದ್ದರು.

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ

2021ರ ಸುಜುಕಿ ಹಯಾಬುಸಾದ 101 ಯುನಿಟ್ ಗಳು ಒಂದೆರಡು ದಿನಗಳಲ್ಲಿ ಮಾರಾಟವಾದವು. ಹೊಸ ವರದಿಗಳ ಪ್ರಕಾರ, ಎರಡನೇ ಹಂತದ 2021ರ ಸುಜುಕಿ ಹಯಾಬುಸಾ ಜುಲೈ ಅಥವಾ ಆಗಸ್ಟ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ. ಇನ್ನು ಈ ಎರಡನೇ ಹಂತದ ಜುಕಿ ಹಯಾಬುಸಾ ಬೈಕ್ ಖರೀದಿಗಾಗಿ ಜುಲೈ ತಿಂಗಳಿನಲ್ಲಿ ಬುಕ್ಕಿಂಗ್ ಅನ್ನು ಪ್ರಾರಂಭಿಸಬಹುದು.

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ

2021ರ ಸುಜುಕಿ ಹಯಾಬುಸಾ ಬೈಕಿನ ಬಗ್ಗೆ ಹೇಳುವುದಾದರೆ, ಈ ಸೂಪರ್ ಬೈಕ್ ತನ್ನ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡಿದೆ. ಒಟ್ಟಾರೆ ಸಿಲೂಯೆಟ್ ಅನ್ನು ಒಂದೇ ರೀತಿ ಇರಿಸಲಾಗಿದ್ದರೂ, ಸೂಪರ್ ಬೈಕ್ ಹೆಚ್ಚು ಅಗ್ರೇಸಿವ್ ವಿನ್ಯಾಸದೊಂದಿಗೆ ಅಗ್ರೇಸಿವ್ ಲೈನ್ ಗಳು ಮತ್ತು ಹೊಸ ಫಾಸಿಕವನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ

ಈ ಹೊಸ ಸೂಪರ್ ಬೈಕ್ ಎಲ್ಇಡಿ ಲೈಟ್ ಗಳನ್ನು ಹೊಂದಿವೆ. ಇದು ಹೆಡ್ ಲ್ಯಾಂಪ್ ಮತ್ತು ಟೈಲ್ ಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ ಇಂಡಿಕೇಟರ್ ಸ್ಥಾನ ಲೈಟ್ ಗಳೊಂದಿಗೆ ಸಂಯೋಜಿಸಲಾಗಿದೆ, ಮುಂಭಾಗದ ಏರ್ ಟೆಕ್ ಹೊರಭಾಗದಲ್ಲಿ ಇರಿಸಲಾಗುತ್ತದೆ.

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ

ಹೊಸ ಹಯಾಬುಸಾ ಬೈಕ್ ಫೀಚರ್ ಗಳ ಬಗ್ಗೆ ಹೇಳುವುದಾದರೆ, ಹಲವು ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಇದು ಹೊಸ ಸ್ವಿಚ್‌ಗಿಯರ್ ಜೊತೆಗೆ ರೈಡರಿಗೆ ವಿವಿಧ ರೈಡರ್ ಅಸಿಸ್ಟ್ ಆಯ್ಕೆಗಳ ನಡುವೆ ನ್ಯಾವಿಗೇಟ್ ಅನ್ನು ನೀಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ

ಇನ್ನು ಹೊಸ ಸುಜುಕಿ ಹಯಾಬುಸಾದಲ್ಲಿ ಕೆಲವು ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಮೂರು ಪವರ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಕೂಡ ಒಳಗೊಂಡಿದೆ

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ

ಇನ್ನು ಈ ಬೈಕಿನಲ್ಲಿ ಕಾರ್ನರಿಂಗ್ ಎಬಿಎಸ್, ಹಿಲ್-ಹೋಲ್ಡ್ ಕಂಟ್ರೋಲ್, ಆಕ್ಟಿವ್ ಸ್ಪೀಡ್ ಲಿಮಿಟರ್, ಲೋ ಆರ್ಪಿಎಂ ಅಸಿಸ್ಟ್, ಕಂಬೈನ್ಡ್ ಬ್ರೇಕ್ ಸಿಸ್ಟಂ, ಹೊಸ ಸಿಕ್ಸ್-ಆಕ್ಸಿಸ್ ಐಎಂಯು ಮತ್ತು ಮೂರು ಹಂತದ ಎಂಜಿನ್ ಬ್ರೇಕಿಂಗ್, 10 ಹಂತದ ಹೊಂದಾಣಿಕೆ ಹೊಂದಿರುವ ಮತ್ತು ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ

2021ರ ಸುಜುಕಿ ಹಯಾಬುಸಾ ಬೈಕಿನಲ್ಲಿ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ.

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ

2021ರ ಸುಜುಕಿ ಹಯಾಬುಸಾ ಬೈಕ್ ಗ್ಲೋಸ್ ಸ್ಪಾರ್ಕ್ಲಿ ಬ್ಲ್ಯಾಕ್/ಕ್ಯಾಂಡಿ ಬರ್ನ್ಟ್ ಗೋಲ್ಡ್, ಮೆಟಾಲಿಕ್ ಮ್ಯಾಟ್ ಸ್ವೋರ್ಡ್ ಸಿಲ್ವರ್/ಕ್ಯಾಂಡಿ ಡೇರಿಂಗ್ ರೆಡ್ ಮತ್ತು ಪರ್ಲ್ ಬ್ರಿಲಿಯಂಟ್ ವೈಟ್/ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ

ಕಂಪನಿಯ ಪ್ರಕಾರ, ಈ ಹೊಸ ಸೂಪರ್‌ಬೈಕ್ 3.2 ಸೆಕೆಂಡುಗಳಲ್ಲಿ 0 ರಿಂದ 100 ಕಿ,ವೀ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು 299 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ 2021ರ ಸುಜುಕಿ ಹಯಾಬುಸಾ ಬೈಕ್ 265 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 20-ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಕೂಡ ಹೋಂದಿದೆ.

Most Read Articles

Kannada
English summary
Suzuki Hayabusa Second Batch Delivery Details Revealed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X