ಬಹುನಿರೀಕ್ಷಿತ 2021ರ ಸ್ಪೀಡ್ ಟ್ವಿನ್ ಬೈಕ್ ಟೀಸರ್ ಬಿಡುಗಡೆಗೊಳಿಸಿದ ಟ್ರಯಂಫ್

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ನವೀಕರಿಸಿದ ಸ್ಪೀಡ್ ಟ್ವಿನ್ ಬೈಕನ್ನು ಜಾಗತಿಕವಾಗಿ ಪರಿಚಯಿಸಲು ಸಜ್ಜಾಗುತ್ತಿದೆ. ಇದೀಗ ಟ್ರಯಂಫ್ ಕಂಪನಿಯು 2021ರ ಸ್ಪೀಡ್ ಟ್ವಿನ್ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಬಹುನಿರೀಕ್ಷಿತ 2021ರ ಸ್ಪೀಡ್ ಟ್ವಿನ್ ಬೈಕ್ ಟೀಸರ್ ಬಿಡುಗಡೆಗೊಳಿಸಿದ ಟ್ರಯಂಫ್

ಈ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್ ಜೂನ್ 1ರಂದು ಜಾಗತಿಕವಾಗಿ ಅನಾವರಣವಾಗಲಿದೆ. ಹೊಸ ಸ್ಪೀಡ್ ಟ್ವಿನ್ ಹೆಚ್ಚಿನ ಪ್ರೀಮಿಯಂ ಶೈಲಿಯ ನವೀಕರಣಗಳನ್ನು ಪಡೆದುಕೊಂಡಿದೆ. ಇನ್ನು ಈ 2021ರ ಸ್ಪೀಡ್ ಟ್ವಿನ್ ಗಮನಾರ್ಹವಾಗಿ ಉದ್ದಕ್ಕೂ ವೃತ್ತಾಕಾರದ ಥೀಮ್ ಅನ್ನು ಹೊಂದಿಕೊಂಡಿದೆ. ಇದು ವೃತ್ತಾಕಾರದ ಹೆಡ್‌ಲ್ಯಾಂಪ್, ವೃತ್ತಾಕಾರದ ಅನಲಾಗ್ ಸ್ಪೀಡೋಮೀಟರ್, ವೃತ್ತಾಕಾರದ ಇಂಡಿಕೇಟರ್ ಮತ್ತು ವೃತ್ತಾಕಾರದ ಮೀರರ್ಸ್ ಅನ್ನು ಪಡೆಯುತ್ತದೆ.

ಬಹುನಿರೀಕ್ಷಿತ 2021ರ ಸ್ಪೀಡ್ ಟ್ವಿನ್ ಬೈಕ್ ಟೀಸರ್ ಬಿಡುಗಡೆಗೊಳಿಸಿದ ಟ್ರಯಂಫ್

ಈ 2021ರ ಸ್ಪೀಡ್ ಟ್ವಿನ್ ಬೈಕ್ ಗ್ರ್ಯಾಬ್ ಹ್ಯಾಂಡಲ್ ಸ್ಟ್ರಾಪ್, ದಪ್ಪವಾದ ಫ್ಯೂಯಲ್ ಟ್ಯಾಂಕ್ ಮತ್ತು ಬೈಕಿನ ಎರಡೂ ಬದಿಗಳಲ್ಲಿ ಸ್ಪೀಡ್ ಟ್ವಿನ್ ಬ್ಯಾಡ್ಜ್ ಹೊಂದಿರುವ ಸಿಂಗಲ್-ಪೀಸ್ ಸೀಟ್ ಅನ್ನು ಸಹ ಪಡೆಯುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಹುನಿರೀಕ್ಷಿತ 2021ರ ಸ್ಪೀಡ್ ಟ್ವಿನ್ ಬೈಕ್ ಟೀಸರ್ ಬಿಡುಗಡೆಗೊಳಿಸಿದ ಟ್ರಯಂಫ್

ಹೊಸ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ 41 ಅಪ್ ಸೈಡ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಇವುಗಳು ಮಸ್ಕಲರ್ ಲುಕ್ ಅನ್ನು ಹೊಂದಿದೆ.

ಬಹುನಿರೀಕ್ಷಿತ 2021ರ ಸ್ಪೀಡ್ ಟ್ವಿನ್ ಬೈಕ್ ಟೀಸರ್ ಬಿಡುಗಡೆಗೊಳಿಸಿದ ಟ್ರಯಂಫ್

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕಿನ ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಹುನಿರೀಕ್ಷಿತ 2021ರ ಸ್ಪೀಡ್ ಟ್ವಿನ್ ಬೈಕ್ ಟೀಸರ್ ಬಿಡುಗಡೆಗೊಳಿಸಿದ ಟ್ರಯಂಫ್

ಇನ್ನು ಈ ಹೊಸ ಟ್ರಯಂಫ್ ಬೈಕ್ ಉತ್ತಮ ನಿರ್ವಹಣೆ, ಹೆಚ್ಚಿನ ವಿಶೇಷಣಗಳು ಮತ್ತು ಪ್ರೀಮಿಯಂ ಅಂಶಗಳನ್ನು ಒಳಗೊಂಡಿದೆ. ಇನ್ನು ಸ್ಪೀಡ್ ಟ್ವಿನ್ ಬೈಕಿನ ಹಿಂದಿನ ಮಾದರಿಯಲ್ಲಿ ಇದ್ದ ಅದೇ 1200 ಸಿಸಿ ಎಂಜಿನ್ ಅನ್ನು ಹೊಂದಿರಬಹುದು.

ಬಹುನಿರೀಕ್ಷಿತ 2021ರ ಸ್ಪೀಡ್ ಟ್ವಿನ್ ಬೈಕ್ ಟೀಸರ್ ಬಿಡುಗಡೆಗೊಳಿಸಿದ ಟ್ರಯಂಫ್

ಈ ಎಂಜಿನ್ 96 ಬಿಹೆಚ್‌ಪಿ ಪವರ್ ಮತ್ತು 112 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಕಂಪನಿಯು ಇನ್ನು ಎಂಜಿನ್ ಬಗ್ಗೆ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಆದರೆ ಇತ್ತೀಚಿನ ಮಾದರಿಯು ಹೆಚ್ಚಿನ ಕಾರ್ಯಕ್ಷಮತೆಯಿಂದ ಪ್ರಯೋಜನ ಪಡೆಯುತ್ತದೆ ಎಂದು ಹೇಳಿಕೊಂಡಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಬಹುನಿರೀಕ್ಷಿತ 2021ರ ಸ್ಪೀಡ್ ಟ್ವಿನ್ ಬೈಕ್ ಟೀಸರ್ ಬಿಡುಗಡೆಗೊಳಿಸಿದ ಟ್ರಯಂಫ್

ಟ್ರಯಂಫ್ ಮೋಟರ್‌ಸೈಕಲ್ ತನ್ನ 2021ರ ಬೊನೊವೆಲ್ಲಿ ಬಾಬರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಬೊನೊವೆಲ್ಲಿ ಬಾಬರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.11.75 ಲಕ್ಷಗಳಾಗಿದೆ. 2021ರ ಹೊಸ ಟ್ರಯಂಫ್ ಬೊನೊವೆಲ್ಲಿ ಬಾಬರ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಆರಂಭಿಸಿದ್ದಾರೆ.

ಬಹುನಿರೀಕ್ಷಿತ 2021ರ ಸ್ಪೀಡ್ ಟ್ವಿನ್ ಬೈಕ್ ಟೀಸರ್ ಬಿಡುಗಡೆಗೊಳಿಸಿದ ಟ್ರಯಂಫ್

ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್ ಇದೇ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ಹೊಸ ಟ್ರಯಂಫ್ ಸ್ಪೀಡ್ ಟ್ವಿನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹಾರ್ಲೆ-ಡೇವಿಡ್ಸನ್ 48, ಬಿಎಂಡಬ್ಲ್ಯು ಆರ್ ನೈನ್ ಟಿ ಸ್ಕ್ರ್ಯಾಂಬ್ಲರ್ ಮತ್ತು ಡುಕಾಟಿ ಸ್ಕ್ರ್ಯಾಂಬ್ಲರ್ 1100 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2021 Triumph Speed Twin Teased. Read In Kannada.
Story first published: Wednesday, May 26, 2021, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X