ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಟಿವಿಎಸ್ ಜೂಪಿಟರ್ 125

ಜೂಪಿಟರ್ ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಕಂಪನಿಯ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಟಿವಿಎಸ್ ಜೂಪಿಟರ್ ಸ್ಕೂಟರ್ 110ಸಿಸಿ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಟಕ್ಕರ್ ನೀಡಲು ಬರುತ್ತಿದೆ ಟಿವಿಎಸ್ ಜೂಪಿಟರ್ 125

ಇದೀಗ ಟಿವಿಎಸ್ ಕಂಪನಿಯು 125ಸಿಸಿ ಮಾದರಿಯ ಜೂಪಿಟರ್ ಸ್ಕೂಟರ್ ಅನ್ನು ಅಭಿವೃದ್ದಿ ಪಡಿಸುವುದರಲ್ಲಿ ನಿರತರಾಗಿದ್ದಾರೆ. ಪ್ರಸ್ತುತ ಟಿವಿಎಸ್ ಸರಣಿಯಲ್ಲಿ ಎನ್‌ಟಾರ್ಕ್ ಮಾತ್ರ 125ಸಿಸಿ ಎಂಜಿನ್ ನಲ್ಲಿ ಲಭ್ಯವಿದೆ. ಆದರೆ ಇದು ಹೆಚ್ಚು ಪ್ರೀಮಿಯಂ ಫೀಚರ್ ನಿಂದಾಗಿ ತುಸು ದುಬಾರಿ ಬೆಲೆಯನ್ನು ಹೊಂದಿದೆ. ಟಿವಿಎಸ್ ಎನ್‌ಟಾರ್ಕ್ ಸ್ಕೂಟರ್ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡುತ್ತದೆ. ಇದು ಕಂಪನಿಯ ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಒಳಗೊಂಡಿದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಟಕ್ಕರ್ ನೀಡಲು ಬರುತ್ತಿದೆ ಟಿವಿಎಸ್ ಜೂಪಿಟರ್ 125

ಈ ಫೀಚರ್ ಬ್ಲೂಟೂತ್ ಬಳಸಿ ಟಿವಿಎಸ್ ಕನೆಕ್ಟ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಸ್ಕೂಟರ್‌ಗೆ ಕನೆಕ್ಟ್ ಮಾಡಬಹುದು.ಇನ್ಸ್ ಟ್ರೂಮೆಂಟ್ ಕನ್ಸೋಲ್‌ನಲ್ಲಿ ಬಳಕೆದಾರರು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಇಂಡಿಕೇಟರ್ ಮತ್ತು ಎಸ್‌ಎಂಎಸ್/ಕಾಲ್ ಅಲರ್ಟ್ ಅನ್ನು ಪಡೆಯಬಹುದು, ಮತ್ತು ಅಪ್ಲಿಕೇಶನ್ ಕೊನೆಯ ನಿಲುಗಡೆ ಮಾಡಿದ ಸ್ಥಳ, ಸವಾರಿ ಅಂಕಿಅಂಶಗಳು ಮುಂತಾದ ಹೆಚ್ಚಿನ ಮಾಹಿತಿಯನ್ನು ತೋರಿಸುತ್ತದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಟಕ್ಕರ್ ನೀಡಲು ಬರುತ್ತಿದೆ ಟಿವಿಎಸ್ ಜೂಪಿಟರ್ 125

ಇನ್ನು ಟಿವಿಎಸ್ ಜೂಪಿಟರ್ ಸರಳ ಸ್ಕೂಟರ್ ಆಗಿದೆ. ಇದು ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಸಣ್ಣ ಎಲ್ಸಿಡಿ ಡಿಸ್ ಪ್ಲೇ ಮತ್ತು ಹೆಚ್ಚಿನ ಟ್ರಿಮ್ಗಳಲ್ಲಿ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಲಭ್ಯವಿದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಟಕ್ಕರ್ ನೀಡಲು ಬರುತ್ತಿದೆ ಟಿವಿಎಸ್ ಜೂಪಿಟರ್ 125

ಮಾರುಕಟ್ಟೆಯಲ್ಲಿರುವ ಬಿಎಸ್-6 ಟಿವಿಎಸ್ ಜೂಪಿಟರ್ ಮಾದರಿಯು ಈಗ ಬ್ರಾಂಡ್‌ನ ಇಟಿ ಫೈ ಅಂದರೆ ಇಕೋಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಕಂಪನಿಯು ಹೊಸದಾಗಿ ಅಭಿವೃದ್ಧಿಪಡಿಸಿದ ಇಟಿ-ಫೈ ಹಾಗೂ ಆರ್‌ಟಿ-ಫೈ ಎಂಬ ಫೈ ತಂತ್ರಜ್ಞಾನದ ಭಾಗವಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಟಕ್ಕರ್ ನೀಡಲು ಬರುತ್ತಿದೆ ಟಿವಿಎಸ್ ಜೂಪಿಟರ್ 125

ಮೊದಲ ಆವೃತ್ತಿಯಾದ ಇಟಿ ಫೈ ಹೆಚ್ಚಿನ ರಿಫೈನ್‍‍ಮೆಂಟ್, ಸುಧಾರಿತ ಮೈಲೇಜ್ ಹಾಗೂ ಒಟ್ಟಾರೆ ಪರ್ಫಾಮೆನ್ಸ್ ಅನ್ನು ಒದಗಿಸುತ್ತದೆ. ಇನ್ನು ಆರ್‍‍ಟಿ ಫೈ (ರೇಸ್ ಟ್ಯೂನ್ಡ್ ಫ್ಯೂಯಲ್ ಇಂಜೆಕ್ಷನ್) ಟೆಕ್ನಾಲಜಿಯು ಎಲ್ಲಾ ಪರಿಸ್ಥಿತಿಗಳಲ್ಲೂ ರೇಸಿಂಗ್ ಅನುಭವವನ್ನು ನೀಡುತ್ತದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಟಕ್ಕರ್ ನೀಡಲು ಬರುತ್ತಿದೆ ಟಿವಿಎಸ್ ಜೂಪಿಟರ್ 125

ಬಿಎಸ್ 6 ಎಂಜಿನ್ ಹೊಂದಿರುವ ಟಿವಿಎಸ್ ಜೂಪಿಟರ್ ಕ್ಲಾಸಿಕ್, ಇಟಿ ಫೈ ಟೆಕ್ನಾಲಜಿಯನ್ನು ಹೊಂದಿದ ಮೊದಲ ಸ್ಕೂಟರ್ ಆಗಿದೆ. ಬಿಎಸ್ 6 ಎಂಜಿನ್ ಅಪ್‌ಡೇಟ್‌ನೊಂದಿಗೆ ಇತರ ಎಲ್ಲ ಮಾದರಿಗಳಲ್ಲೂ ಈ ಟೆಕ್ನಾಲಜಿಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಾಗುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಟಕ್ಕರ್ ನೀಡಲು ಬರುತ್ತಿದೆ ಟಿವಿಎಸ್ ಜೂಪಿಟರ್ 125

ಹೊಸ ಟೆಕ್ನಾಲಜಿಯನ್ನು ಹೊಂದಿರುವ ಜೂಪಿಟರ್ ಕ್ಲಾಸಿಕ್ ಹಳೆಯ ಮಾದರಿಗಳಿಗಿಂತ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ಈ ಅಪ್‍‍ಡೇಟ್‍‍ಗಳ ಹೊರತಾಗಿ, ಹೊಸ ಟಿವಿಎಸ್ ಜುಪಿಟರ್ ಬಿಎಸ್ 6 ಸ್ಕೂಟರ್ ಅನ್ನು ಈಗ ಇಂಡಿ ಬ್ಲೂ ಎಂಬ ಹೊಸ ಬಣ್ಣದಲ್ಲಿ ಮಾರಾಟ ಮಾಡಲಾಗುತ್ತದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಟಕ್ಕರ್ ನೀಡಲು ಬರುತ್ತಿದೆ ಟಿವಿಎಸ್ ಜೂಪಿಟರ್ 125

ಹೊಸ ಟಿವಿಎಸ್ ಜೂಪಿಟರ್ 125 ಸ್ಕೂಟರ್ ನಲ್ಲಿ 124.8 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9.38 ಬಿಹೆಚ್‍ಪಿ ಪವರ್ ಮತ್ತು 10.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಟಕ್ಕರ್ ನೀಡಲು ಬರುತ್ತಿದೆ ಟಿವಿಎಸ್ ಜೂಪಿಟರ್ 125

ಇನ್ನು ಪ್ರಸ್ತುತ ಟಿವಿಎಸ್ ಜೂಪಿಟರ್ 110 ಸ್ಕೂಟರ್ ಗಿಂತ ಹೊಸ ಮಾದರಿಯು ತುಸು ದುಬಾರಿಯಾಗಿರಲಿದೆ. ಹೊಸ ಟಿವಿಎಸ್ ಜೂಪಿಟರ್ 125 ಸ್ಕೂಟರ್ ಈ ವರ್ಷದ ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಟಿವಿಎಸ್ ಜೂಪಿಟರ್ 125 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಆಕ್ಟಿವಾ 125, ಸುಜುಕಿ ಆಕ್ಸೆಸ್ 125, ಮತ್ತು ಹೀರೋ ಡೆಸ್ಟಿನಿ 125 ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ

Most Read Articles

Kannada
English summary
TVS Jupiter 125 Expected To Launch In India In May 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X