ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಆರ್15 ವಿ3 ಮತ್ತು ಹೊಸ ಆರ್15ಎಂ ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಬೈಕ್‌ಗಳ ಜೊತೆ ಯಮಹಾ ಏರಾಕ್ಸ್ 155(Yamaha Aerox 155) ಸ್ಕೂಟರ್ ಕೂಡ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಯಮಹಾ ಕಂಪನಿಯು "ಮ್ಯಾಕ್ಸಿ ಸ್ಪೋರ್ಟ್ಸ್ ಎಕ್ಸ್‌ಪೀರಿಯನ್ಸ್ ಅವೈಟ್ಸ್" ಎಂಬ ಹೊಸ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಎಕ್ಸ್ ಸೂಚನೆಯು ಇತ್ತೀಚೆಗೆ ಹೋಮೋಲೊಗೇಟ್ ಮಾಡಿದ ಏರಾಕ್ಸ್ ಮೋಟೋ ಸ್ಕೂಟರ್ ಅನ್ನು ತೋರಿಸುತ್ತದೆ. ಯಮಹಾ ದ್ವಿಚಕ್ರ ವಾಹನಗಳ ಬಿಡುಗಡೆಯ ಕಾರ್ಯಕ್ರಮವು ಬೆಳಗ್ಗೆ 11:00 ಗಂಟೆಗೆ yamahavirutalgallery.com ನಲ್ಲಿ ಪ್ರಾರಂಭವಾಗುತ್ತದೆ. ಈ ಪುಟಕ್ಕೆ ಭೇಟಿ ನೀಡಿ ಬಿಡುಗಡೆಯ ಕಾರ್ಯಕ್ರಮವನ್ನು ವೀಕ್ಷಿಸಬಹುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಏರಾಕ್ಸ್ ಅನ್ನು ಭಾರತದಲ್ಲಿ ಬ್ರ್ಯಾಂಡ್‌ನ ಪ್ರಮುಖ ಸ್ಕೂಟರ್ ಆಗಿ ಇರಿಸಬಹುದಾಗಿದೆ. ಏರೋಕ್ಸ್ ನೇಮ್‌ಪ್ಲೇಟ್ ಯುರೋಪ್ ಮತ್ತು ಏಷ್ಯಾದಂತಹ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಲಭ್ಯವಿತ್ತು ಮತ್ತು 155 ಸಿಸಿ ಆವೃತ್ತಿಯು ಮಲೇಷಿಯಾದ ಸೆಪಾಂಗ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ 2016 ರ ನಂತರದ ಭಾಗಗಳಲ್ಲಿ ಮೊದಲು ಬಹಿರಂಗಗೊಂಡಿತು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಯಮಹಾ ಕಂಪನಿಯು ಭಾರತದಲ್ಲಿ ಪ್ರೀಮಿಯಂ ವಿಭಾಗದಲ್ಲಿ ಗಮನಹರಿಸುವುದಾಗಿ ಘೋಷಿಸಿದ್ದಾರೆ. 150 ಸಿಸಿ 250 ಸಿಸಿ ವಿಭಾಗದ ಮಾದರಿಗಳನ್ನು ಹೆಚ್ಚಾಗಿ ಬಿಡುಗಡೆ ಮಾಡಲಿದ್ದಾರೆ. ಇದರ ಭಾಗವಾಗಿ ಯಮಹಾ ಕಂಪನಿಯು ಏರಾಕ್ಸ್ 155 ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದ್ದಾರೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ 2021ರ ಯಮಹಾ ಏರಾಕ್ಸ್ ಸ್ಕೂಟರ್ ತೀಕ್ಷ್ಣವಾದ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಶಾರ್ಪ್ ಆಗಿ ಇಂಡಿಕೇಟರ್ ಅನ್ನು ಸಂಯೋಜಿಸಲಾಗಿದೆ. ಇನ್ನು ಟೈಲ್ ಗೇಟ್ ಅನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ, ಸ್ಕೂಟರ್ ಹೊಸ ಸ್ಲಿಮ್ ಎಲ್ಇಡಿ ಟೈಲೈಟ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಇದಲ್ಲದೆ, ಹೊಸ ಏರಾಕ್ಸ್ 155 ಸ್ಕೂಟರ್ ನಲ್ಲಿ ಹೊಸ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಸಂಯೋಜಿಸಲಾಗಿದೆ. ಈ ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಸ್ಕೂಟರ್ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ. ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್‌ನಲ್ಲಿ ಯಮಹಾ ಆರ್15 ವಿ3.0 ಮಾದರಿಯಲ್ಲಿರುವ ಅದೇ 155ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಈ ಎಂಜಿನ್ 15.4 ಬಿಹೆಚ್‍ಪಿ ಪವರ್ ಮತ್ತು 13.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆರ್15 ಮಾದರಿಯಲ್ಲಿ ಕಂಡುಬರುವ 6-ಸ್ಪೀಡ್ ಗೇರ್‌ಬಾಕ್ಸ್‌ಗಿಂತ ಭಿನ್ನವಾಗಿ, ಸ್ಕೂಟರ್ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್‌ನ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು 4.6 ಲೀಟರ್‌ನಿಂದ 5.5 ಲೀಟರ್‌ಗೆ ಹೆಚ್ಚಿಸಲಾಗಿದೆ. ಇನ್ನು ಈ ಏರಾಕ್ಸ್ 155 ಸ್ಕೂಟರ್‌ನಲ್ಲಿ 14 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಗ್ಯಾಸ್-ಚಾರ್ಜ್ಡ್ ಶಾಕರ್‌ಗಳನ್ನು ಪಡೆಯುತ್ತದೆ. ಇನ್ನು ಈ ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಉತ್ತಮವಾಗಿದೆ. ಬ್ರೇಕಿಂಗ್ ಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಆಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಇನ್ನು ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಹೊಸ ಆರ್15ಎಂ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಯಮಹಾ ಆರ್15ಎಂ ಬೈಕ್ ಅತ್ಯಂತ ಜನಪ್ರಿಯವಾದ ಫೇರ್ಡ್ ಸೂಪರ್‌ಸ್ಪೋರ್ಟ್‌ಗಿಂತ ಸ್ವಲ್ಪ ಪ್ರೀಮಿಯಂ ಬೆಲೆಯಲ್ಲಿರುತ್ತದೆ. ಇದು ಆರ್15 ಸರಣಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಮತ್ತು ಬಹುಶಃ ತಮ್ಮ ವಿ3ನ ವಿಭಿನ್ನ ದೃಷ್ಟಿಕೋನವನ್ನು ಹೊಂದಲು ಬಯಸುವ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಏಕೆಂದರೆ ಈ ಬೈಕ್ ಯಾವುದೇ ಗಣನೀಯ ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳಿವೆ. ಆರ್15ಎಂ ಬೈಕ್ ಆರ್15 ಸರಣಿಯಲ್ಲಿ ಮೇಲ್ಭಾಗದ ಸ್ಥಾನದಲ್ಲಿರುತ್ತದೆ. ಇನ್ನು ಹೊಸ ಯಮಹಾ ಆರ್15ಎಂ ಬೈಕ್ ಆರ್7 ಬೈಕಿನಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆಯುತ್ತದೆ. ಜಪಾನಿನ ತಯಾರಕರು ಸಾಮಾನ್ಯವಾಗಿ ಎಂ ಮೋನಿಕರ್ ಅನ್ನು ಸಾಮಾನ್ಯ ಮಾದರಿಗಳ ಕಾರ್ಯಕ್ಷಮತೆ ಅವತಾರಗಳಿಗಾಗಿ ಬಳಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಪವರ್ ಮತ್ತು ಟಾರ್ಕ್ ವರ್ಧನೆಗಳನ್ನು ಮಾಡಲಾಗಿಲ್ಲ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಇದು ಎರಡು ವಿಂಟೇಜ್-ಲುಕಿಂಗ್ ಕಲರ್ ಸ್ಕೀಮ್‌ಗಳಲ್ಲಿ ರೇಸಿಂಗ್ ಬ್ಲೂ ಮತ್ತು ಸಿಲಿವರ್ ಬ್ಲೂ ಬಣ್ಣದ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್‌ಗಳೊಂದಿಗೆ ನೀಡಲಾಗುವುದು. ಇದರೊಂದಿಗೆ ಇತರ ಮುಖ್ಯಾಂಶಗಳು ಮೆಟಾಲಿಕ್ ಹೀಟ್‌ಶೀಲ್ಡ್, ಎತ್ತರದ ವಿಂಡ್‌ಸ್ಕ್ರೀನ್, ಬ್ಲೂಟೂತ್ ಸಂಪರ್ಕದೊಂದಿಗೆ ಎಲ್ಲಾ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಪರಿಷ್ಕೃತ ಎಕ್ಸಾಸ್ಟ್ ಸಿಸ್ಟಂ, ನ್ಯಾವಿಗೇಷನ್ ಮತ್ತು ಕರೆಗಳನ್ನು ಸಕ್ರಿಯಗೊಳಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha Aerox 155 ಸ್ಕೂಟರ್

ಇನ್ನು ಈ ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್ 1,980 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,150 ಎಂಎಂ ಎತ್ತರವನ್ನು ಹೊಂದಿದೆ, ಈ ಸ್ಕೂಟರ್ 1,350 ಎಂಎಂ ಉದ್ದದ ವೀಲ್‌ಬೇಸ್‌ ಅನ್ನು ಹೊಂದಿದೆ. ಸ್ಕೂಟರ್ ಅನ್ನು ಯಮಹಾ ವೈ-ಕನೆಕ್ಟ್ ಸ್ಟಾಂಡರ್ಡ್ ಆಗಿ ಅಳವಡಿಸಲಾಗಿರುತ್ತದೆ. ಇದನ್ನು ಸಂಬಂಧಿತ ಅಪ್ಲಿಕೇಶನ್ ಬಳಸಿ ರೈಡರ್ ಸ್ಮಾರ್ಟ್ ಫೋನ್ ಗೆ ಸಂಪರ್ಕಿಸಬಹುದು.

Most Read Articles

Kannada
Read more on ಯಮಹಾ yamaha
English summary
New yamaha aerox 155 scooter india launch details
Story first published: Monday, September 20, 2021, 10:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X