ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಹೊಸ ಆರ್15ಎಂ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಯಮಹಾ ಆರ್15ಎಂ(Yamaha R15M) ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬೈಕ್ಗಳಲ್ಲಿ ಒಂದಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಯಮಹಾ ಮೋಟಾರ್ ಇಂಡಿಯಾ ಹೊಸ ಬೈಕಿನ ವರ್ಚುವಲ್ ಬಿಡುಗಡೆಗಾಗಿ ಮಾಧ್ಯಮಗಳನ್ನು ಆಹ್ವಾನಿಸಿದೆ. ಇದನ್ನು "ಆರ್ ಡಿಎನ್ಎಯ ಹೊಸ ಅಧ್ಯಾಯವನ್ನು ಅನುಭವಿಸಿ" ಎಂದು ಆಹ್ವಾನಿಸಿದೆ. ಇತ್ತೀಚೆಗೆ ಸಾಕಷ್ಟು ಊಹಾಪೋಹಗಳಿಗೆ ಒಳಪಟ್ಟಿರುವ ಆರ್15ಎಂ ಬೈಕ್ ಬಿಡುಗಡೆ ಎಂದು ನಿರೀಕ್ಷಿಸುತ್ತೇವೆ. ಯಮಹಾ ಆರ್15ಎಂ ಬೈಕ್ ಇದೇ ತಿಂಗಳ 21 ರಂದು ಬೆಳಿಗ್ಗೆ 11:00 ಗಂಟೆಗೆ ಬಿಡುಗಡೆಯಾಗಲಿದೆ. ಇದನ್ನು yamahavirtualgallery.com ಗೆ ಭೇಟಿ ನೀಡಿ ನೋಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಹೊಸ ಯಮಹಾ ಆರ್15ಎಂ ಬೈಕ್ ಅತ್ಯಂತ ಜನಪ್ರಿಯವಾದ ಫೇರ್ಡ್ ಸೂಪರ್‌ಸ್ಪೋರ್ಟ್‌ಗಿಂತ ಸ್ವಲ್ಪ ಪ್ರೀಮಿಯಂ ಬೆಲೆಯಲ್ಲಿರುತ್ತದೆ. ಇದು ಆರ್15 ಸರಣಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಮತ್ತು ಬಹುಶಃ ತಮ್ಮ ವಿ3ನ ವಿಭಿನ್ನ ದೃಷ್ಟಿಕೋನವನ್ನು ಹೊಂದಲು ಬಯಸುವ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಏಕೆಂದರೆ ಈ ಬೈಕ್ ಯಾವುದೇ ಗಣನೀಯ ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳಿವೆ. ಆರ್15ಎಂ ಬೈಕ್ ಆರ್15 ಸರಣಿಯಲ್ಲಿ ಮೇಲ್ಭಾಗದ ಸ್ಥಾನದಲ್ಲಿರುತ್ತದೆ. ಇನ್ನು ಹೊಸ ಯಮಹಾ ಆರ್15ಎಂ ಬೈಕ್ ಆರ್7 ಬೈಕಿನಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಜಪಾನಿನ ತಯಾರಕರು ಸಾಮಾನ್ಯವಾಗಿ ಎಂ ಮೋನಿಕರ್ ಅನ್ನು ಸಾಮಾನ್ಯ ಮಾದರಿಗಳ ಕಾರ್ಯಕ್ಷಮತೆ ಅವತಾರಗಳಿಗಾಗಿ ಬಳಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಪವರ್ ಮತ್ತು ಟಾರ್ಕ್ ವರ್ಧನೆಗಳನ್ನು ಮಾಡಲಾಗಿಲ್ಲ. ಇದು ಎರಡು ವಿಂಟೇಜ್-ಲುಕಿಂಗ್ ಕಲರ್ ಸ್ಕೀಮ್‌ಗಳಲ್ಲಿ ರೇಸಿಂಗ್ ಬ್ಲೂ ಮತ್ತು ಸಿಲಿವರ್ ಬ್ಲೂ ಬಣ್ಣದ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್‌ಗಳೊಂದಿಗೆ ನೀಡಲಾಗುವುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ವಿನ್ಯಾಸಕ್ಕೆ ಸಂಬಂಧಿಸಿದಂತೆ, ಬದಲಾವಣೆಗಳು ಮುಖ್ಯವಾಗಿ ಮುಂಭಾಗದ ಫಾಸಿಕ್ ಮೇಲೆ ಕೇಂದ್ರೀಕೃತವಾಗಿವೆ. ಇದು ಹೊಸ ಮುಂಭಾಗದ ಫೇರಿಂಗ್ ವಿನ್ಯಾಸದೊಂದಿಗೆ ಬರುತ್ತದೆ ಮತ್ತು ಡ್ಯುಯಲ್-ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಎಂಟಿ -15 ನಲ್ಲಿರುವಂತೆ ಒಂದೇ ಎಲ್‌ಇಡಿ ಪ್ರೊಜೆಕ್ಟರ್ ಘಟಕದ ಪರವಾಗಿ ಡಿಚ್ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಇನ್ನು ಎರಡೂ ಕಡೆಗಳಲ್ಲಿ ವಿಂಗ್‌ಲೆಟ್ ಆಕಾರದ ವಿನ್ಯಾಸದೊಂದಿಗೆ ಚೂಪಾದ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್‌ನಿಂದ ಸುತ್ತುವರಿದಿದೆ . ಇದು ಹೊಸ ಸೈಡ್ ಬಾಡಿ ಪ್ಯಾನಲ್‌ಗಳು, ದೊಡ್ಡ ಏರ್ ಇನ್‌ಲೆಟ್‌ಗಳು ಮತ್ತು ಸ್ವಲ್ಪ ಮರುವಿನ್ಯಾಸಗೊಳಿಸಲಾದ ಎಲ್‌ಇಡಿ ಟೈಲ್ ಲ್ಯಾಂಪ್ ಕ್ಲಸ್ಟರ್ ಅನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಇದರೊಂದಿಗೆ ಇತರ ಮುಖ್ಯಾಂಶಗಳು ಮೆಟಾಲಿಕ್ ಹೀಟ್‌ಶೀಲ್ಡ್, ಎತ್ತರದ ವಿಂಡ್‌ಸ್ಕ್ರೀನ್, ಬ್ಲೂಟೂತ್ ಸಂಪರ್ಕದೊಂದಿಗೆ ಎಲ್ಲಾ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಪರಿಷ್ಕೃತ ಎಕ್ಸಾಸ್ಟ್ ಸಿಸ್ಟಂ, ನ್ಯಾವಿಗೇಷನ್ ಮತ್ತು ಕರೆಗಳನ್ನು ಸಕ್ರಿಯಗೊಳಿಸುತ್ತದೆ. ಇನ್ನು ಯಮಹಾ ಆರ್15ಎಂ ಬೈಕ್ ನಲ್ಲಿನ ದೊಡ್ಡ ಅಪ್‌ಗ್ರೇಡ್ ಖಂಡಿತವಾಗಿಯೂ ಗೋಲ್ಡನ್ ಬಣ್ಣದ ಅಪ್ ಸೈಡ್ ಮುಂಭಾಗದ ಫೋರ್ಕ್‌ಗಳ ಉಪಸ್ಥಿತಿಯಾಗಿದೆ ಮತ್ತು ಇದು ಸವಾರಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಯಮಹಾ ತನ್ನ ಹೊಸ ಎಂಜಿ-15 ಮೊಟೊಜಿಪಿ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಯಮಹಾ ಎಂಜಿ-15 ಮೊಟೊಜಿಪಿ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.48 ಲಕ್ಷಗಳಾಗಿದೆ. ಹೊಸ ಯಮಹಾ ಎಂಜಿ-15 ಮೊಟೊಜಿಪಿ ಎಡಿಷನ್ ಸ್ಟ್ಯಾಂಡರ್ಡ್ ಮಾದರಿಗಿಂತ ಎಂಟಿ-15 ಗಿಂತ ಸುಮಾರು ರೂ.1,400 ರಷ್ಟು ದುಬಾರಿಯಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಇನ್ನು ಹೊಸ ಯಮಹಾ ಎಂಜಿ-15 ಮೊಟೊಜಿಪಿ ಎಡಿಷನ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದ್ದಾರೆ. ಈ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ರೂ. 2,000 ಟೋಕನ್ ಮೊತ್ತ ಪಾವತಿಸಿ ಆನ್‌ಲೈನ್‌ನಲ್ಲಿ ಅಥವಾ ಡೀಲರ್‌ಶಿಪ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೊಸ ಯಮಹಾ ಎಂಜಿ-15 ಮೊಟೊಜಿಪಿ ಎಡಿಷನ್ ಫ್ಯೂಯಲ್ ಟ್ಯಾಂಕ್ ವಿಸ್ತರಣೆಗಳಲ್ಲಿ ಮಾನ್ಸ್ಟರ್ ಎನರ್ಜಿ ಗ್ರಾಫಿಕ್ಸ್ ಸಹಿ ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಮೋಟೋ ಜಿಪಿ ಬ್ರಾಂನಿಂಗ್ ಅನ್ನು ಇಂಧನ ಟ್ಯಾಂಕ್ ಕವಚಗಳು, ಸೈಡ್ ಪ್ಯಾನಲ್‌ಗಳು ಮತ್ತು ಇಂಧನ ಟ್ಯಾಂಕ್‌ನಲ್ಲಿ ಸೇರಿಸಲಾಗಿದೆ. ಪ್ರಮುಖ ಯಮಹಾ ಲೋಗೋವನ್ನು ಗೋಲ್ಡನ್ ಬಣ್ಣದಲ್ಲಿದೆ. ಈ ಬದಲಾವಣೆಗಳನ್ನು ಹೊರತುಪಡಿಸಿ ಸ್ಟ್ಯಾಂಡರ್ಡ್ ಬೈಕಿನಂತೆಯೇ ಕಾಣುತ್ತದೆ. ಹೊಸ ರೂಪಾಂತರವು ಮಾನ್ಸ್ಟರ್ ಎನರ್ಜಿ ಮೋಟೋ ಜಿಪಿ ಗ್ರಾಫಿಕ್ಸ್‌ನೊಂದಿಗೆ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಈ ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೊಡಣೆ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Yamaha R15M ಬೈಕ್

ಇನ್ನು ಹೊಸ ಯಮಹಾ ಆರ್15ಎಂ ಬೈಕಿನಲ್ಲಿ 155 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಸ್‌ಒಎಚ್‌ಸಿ ಫ್ಯೂಯಲ್ ಇಂಜೆಕ್ಟೆಡ್ ಇಂಜಿನ್ ಅನ್ನು ಹೊಂದಿರುತ್ತದೆ, ಈ ಎಂಜಿನ್ 18 ಬಿಎಚ್‌ಪಿ ಮತ್ತು 14 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ವಿವಿಎ ಸುಸಜ್ಜಿತ ಎಂಜಿನ್ ಅನ್ನು ಆರು-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. ಇನ್ನು ಈ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಸಹ ನೀಡಲಾಗುವುದು.

Image Source: RevNitro

Most Read Articles

Kannada
Read more on ಯಮಹಾ yamaha
English summary
New yamaha r15m premium bike set to be launched on 21 september details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X