Just In
- 1 hr ago ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- 2 hrs ago Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- 3 hrs ago ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- 4 hrs ago ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
Don't Miss!
- News ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶಾಂತಿಯುತ ಮತದಾನಕ್ಕಾಗಿ ಅಧಿಕಾರಿಗಳಿಗೆ ಖಡಕ್ ಸೂಚನೆ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ
ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ವೈಜೆಡ್ಎಫ್-ಆರ್7 ಸೂಪರ್ಸ್ಪೋರ್ಟ್ ಬೈಕನ್ನು ಪರಿಚಯಿಸಲು ಸಜ್ಜಾಗಿದೆ. ಇದೀಗ ಜಾಗತಿಕವಾಗಿ ಅನಾವರಣವಾಗುವ ಮೊದಲೇ ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಬೈಕಿನ ಚಿತ್ರಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ.
ಸೋರಿಕೆಯಾದ ಚಿತ್ರಗಳಲ್ಲಿ ಹೊಸ ಯಮಹಾ ವೈಜೆಡ್ಎಫ್-ಆರ್7 ಬೈಕ್ ಹಿಂದಿನದಕ್ಕಿಂತ ಹೆಚ್ಚು ಸ್ಪೋರ್ಟಿಯರ್ ಮತ್ತು ಅಗ್ರೇಸಿವ್ ಕಾಣುತ್ತದೆ. ಸ್ಪೋರ್ಟಿ ವಿನ್ಯಾಸವನ್ನು ಬ್ರ್ಯಾಂಡ್ನ ಆರ್-ಸೀರೀಸ್ ಸೂಪರ್ಸ್ಪೋರ್ಟ್ ಬೈಕ್ಗಳಿಂದ ಪ್ರೇರೇಣೆ ಪಡೆದಿರುವಂತಿದೆ. ಇನ್ನು ಈ ಹೊಸ ಬೈಕಿನಲ್ಲಿ ಸಿಂಗಲ್-ಪಾಡ್ ಎಲ್ಇಡಿ ಹೆಡ್ ಲೈಟ್, ಟ್ವಿನ್ ಎಲ್ಇಡಿ ಡಿಆರ್ಎಲ್ ಗಳು, ಫ್ಯೂಯಲ್ ಟ್ಯಾಂಕ್, ಸ್ಪ್ಲಿಟ್ ಸೀಟ್, ಎಲ್ಇಡಿ ಟೈಲೈಟ್, ಫೇರಿಂಗ್-ಮೌಂಟೆಡ್ ಮೀರರ್ ಗಳು ಮತ್ತು ಸೈಡ್ ಪೇರಿಂಗ್ ನಲ್ಲಿ ಮಾನಿಕರ್ ಗಳನ್ನು ಪಡೆಯಲಿವೆ.
ಇನ್ನು ಈ ಹೊಸ ಬೈಕಿನಲ್ಲಿ 689 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ನು ಅನ್ನು ಹೊಂದಿರಬಹುದು. ಈ ಎಂಜಿನ್ 73.4 ಬಿಹೆಚ್ಪಿ ಪವರ್ ಮತ್ತು 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಯಮಹಾ ಕಂಪನಿಯು ಈ ಬೈಕಿಗೆ ವೈಜೆಡ್ಎಫ್-ಆರ್7 ಎಂದು ಅಧಿಕೃತವಾಗಿ ಹೆಸರನ್ನು ನೀಡಲಾಗಿಲ್ಲ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್
ಬೈಕ್ ಪ್ರಿಯರ ನಡುವೆ ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್ಸ್ಪೋರ್ಟ್ ಬೈಕ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿಸಿದೆ. ವೈಜೆಡ್ಎಫ್-ಆರ್6 ಬೈಕಿನ ಬದಲಾಯಿಸಿ ಯಮಹಾ ಕಂಪನಿಯು ವೈಜೆಡ್ಎಫ್-ಆರ್7 ಬೈಕನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಯಮಹಾ ವೈಜೆಡ್ಎಫ್ ಸರಣಿಯ ಬೈಕ್ಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾರಿ ಜನಪ್ರಿಯತೆಯನ್ನು ಗಳಿಸಿದೆ. ಇತ್ತೀಚೆಗೆ ಟೀಸರ್ ವಿಡಿಯೋದಲ್ಲಿ ಈ ಹೊಸ ವೈಜೆಡ್ಎಫ್-ಆರ್7 ಸೂಪರ್ಸ್ಪೋರ್ಟ್ ಬೈಕನ್ನು ಇದೇ ತಿಂಗಳ 18 ರಂದು ತನ್ನ ಅಧಿಕೃತ ಜಾಗತಿಕ ಮಟ್ಟದಲ್ಲಿ ಪರಿಚಯಿಸಲಿದೆ ಎಂದು ಬಹಿರಂಗಪಡಿಸಲಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್
ಯಮಹಾ ವೈಜೆಡ್ಎಫ್ ಸರಣಿಯಲ್ಲಿ 125 ಸಿಸಿ ಬೈಕಿನಿಂದ ವೈಜೆಡ್ಎಫ್ ಆರ್15, ವೈಜೆಡ್ಎಫ್ ಆರ್3 ಮತ್ತು ವೈಜೆಡ್ಎಫ್ ಆರ್1 ಮಾದರಿನಂತಹ ಲೀಟರ್ ಕ್ಲಾಸ್ ಬೈಕ್ಗಳನ್ನುಕೂಡ ಒಳಗೊಂಡಿದೆ. ವೈಜೆಡ್ಎಫ್-ಆರ್1 ವಿಶ್ವದ ಅತ್ಯಾಧುನಿಕ ಬೈಕ್ಗಳಲ್ಲಿ ಒಂದಾಗಿದೆ.
ಕಳೆದ ವರ್ಷದವರೆಗೂ ಯಮಹಾ ವೈಜೆಡ್ಎಫ್-ಆರ್6 ಬೈಕನ್ನು ಉತ್ಪಾದನೆಯಲ್ಲಿತ್ತು. ಯಮಹಾ ಆರ್6 ಬೈಕಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಅಭಿಮಾನಿಗಳ ವರ್ಗವಿದೆ. 600ಸಿಸಿ ವಿಭಾಗದಲ್ಲಿ ಹೆಚ್ಚು ಜನಪ್ರಿಯಯನ್ನು ಗಳಿಸಿಕೊಂಡಿತು.
MOST READ: ಹೊಸ ಹೀರೋ ಎಕ್ಸ್ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ
ಆದರೆ ಯಮಹಾ ಭಾರತದಲ್ಲಿ ಎಂದಿಗೂ ಆರ್6 ಬೈಕನ್ನು ಮಾರಾಟ ಮಾಡಲಿಲ್ಲ, ಆದರೆ ಯಮಹಾ ವೈಜೆಡ್ಎಫ್-ಆರ್6 ಬೈಕ್ 2020ರವರೆಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಉತ್ಪಾದನೆಯಲ್ಲಿತು, ಆದರೆ ಯುರೋ 5 ಮಾಲಿನ್ಯ ನಿಯಮ ಜಾರಿಯಾದ ಕಾರಣ ವೈಜೆಡ್ಎಫ್-ಆರ್6 ಬೈಕಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.
ಆದರೆ ವೈಜೆಡ್ಎಫ್-ಆರ್6 ಬೈಕನ್ನು ಟ್ರ್ಯಾಕ್ ಬಳಕೆಗಾಗಿ ಸೀಮಿತ ಸಂಖ್ಯೆಯಲ್ಲಿ ತಯಾರಿಸುವುದನ್ನು ಮುಂದುವರೆಸಿತು. ಎಂಟಿ-07 ಆಧಾರಿತ ಯಮಹಾ ಫೇರ್ಡ್ ಸ್ಪೋರ್ಟ್ಸ್ ಬೈಕು ಅಭಿವೃದ್ಧಿಪಡಿಸುತ್ತದೆ ಎಂದು ವದಂತಿಗಳಿತ್ತು. ಆದರೆ ಇತ್ತೀಚೆಗೆ ಯಮಹಾ ಕಂಪನಿಯು ನೋಂದಾಯಿಸಿದ ಟ್ರೇಡ್ಮಾರ್ಕ್ ಮೂಲಕ ಹೊಸ ಫೇರ್ಡ್ ಎಂಟಿ-07 ಅನ್ನು ಆಧರಿಸಿದೆ ಎಂದು ಬಹುತೇಕ ಖಚಿತವಾಗಿತ್ತು.
ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್ಸ್ಪೋರ್ಟ್ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಎಪ್ರಿಲಿಯಾ ಆರ್ಎಸ್ 660, ಹೋಂಡಾ ಸಿಬಿಆರ್ 6 ಆರ್ ಮತ್ತು ಕವಾಸಕಿ ನಿಂಜಾ 650 ಬೈಕ್ಗಳಿಗೆ ಪೈಪೋಟಿ ನೀಡುತ್ತದೆ.