ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕನ್ನು ಪರಿಚಯಿಸಲು ಸಜ್ಜಾಗಿದೆ. ಇದೀಗ ಜಾಗತಿಕವಾಗಿ ಅನಾವರಣವಾಗುವ ಮೊದಲೇ ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಬೈಕಿನ ಚಿತ್ರಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ

ಸೋರಿಕೆಯಾದ ಚಿತ್ರಗಳಲ್ಲಿ ಹೊಸ ಯಮಹಾ ವೈಜೆಡ್ಎಫ್-ಆರ್7 ಬೈಕ್ ಹಿಂದಿನದಕ್ಕಿಂತ ಹೆಚ್ಚು ಸ್ಪೋರ್ಟಿಯರ್ ಮತ್ತು ಅಗ್ರೇಸಿವ್ ಕಾಣುತ್ತದೆ. ಸ್ಪೋರ್ಟಿ ವಿನ್ಯಾಸವನ್ನು ಬ್ರ್ಯಾಂಡ್‌ನ ಆರ್-ಸೀರೀಸ್ ಸೂಪರ್‌ಸ್ಪೋರ್ಟ್ ಬೈಕ್‌ಗಳಿಂದ ಪ್ರೇರೇಣೆ ಪಡೆದಿರುವಂತಿದೆ. ಇನ್ನು ಈ ಹೊಸ ಬೈಕಿನಲ್ಲಿ ಸಿಂಗಲ್-ಪಾಡ್ ಎಲ್ಇಡಿ ಹೆಡ್ ಲೈಟ್, ಟ್ವಿನ್ ಎಲ್ಇಡಿ ಡಿಆರ್ಎಲ್ ಗಳು, ಫ್ಯೂಯಲ್ ಟ್ಯಾಂಕ್, ಸ್ಪ್ಲಿಟ್ ಸೀಟ್, ಎಲ್ಇಡಿ ಟೈಲೈಟ್, ಫೇರಿಂಗ್-ಮೌಂಟೆಡ್ ಮೀರರ್ ಗಳು ಮತ್ತು ಸೈಡ್ ಪೇರಿಂಗ್ ನಲ್ಲಿ ಮಾನಿಕರ್ ಗಳನ್ನು ಪಡೆಯಲಿವೆ.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ

ಇನ್ನು ಈ ಹೊಸ ಬೈಕಿನಲ್ಲಿ 689 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ನು ಅನ್ನು ಹೊಂದಿರಬಹುದು. ಈ ಎಂಜಿನ್ 73.4 ಬಿಹೆಚ್‌ಪಿ ಪವರ್ ಮತ್ತು 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಯಮಹಾ ಕಂಪನಿಯು ಈ ಬೈಕಿಗೆ ವೈಜೆಡ್ಎಫ್-ಆರ್7 ಎಂದು ಅಧಿಕೃತವಾಗಿ ಹೆಸರನ್ನು ನೀಡಲಾಗಿಲ್ಲ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ

ಬೈಕ್ ಪ್ರಿಯರ ನಡುವೆ ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿಸಿದೆ. ವೈಜೆಡ್ಎಫ್-ಆರ್6 ಬೈಕಿನ ಬದಲಾಯಿಸಿ ಯಮಹಾ ಕಂಪನಿಯು ವೈಜೆಡ್ಎಫ್-ಆರ್7 ಬೈಕನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ

ಯಮಹಾ ವೈಜೆಡ್ಎಫ್ ಸರಣಿಯ ಬೈಕ್‌ಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾರಿ ಜನಪ್ರಿಯತೆಯನ್ನು ಗಳಿಸಿದೆ. ಇತ್ತೀಚೆಗೆ ಟೀಸರ್ ವಿಡಿಯೋದಲ್ಲಿ ಈ ಹೊಸ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕನ್ನು ಇದೇ ತಿಂಗಳ 18 ರಂದು ತನ್ನ ಅಧಿಕೃತ ಜಾಗತಿಕ ಮಟ್ಟದಲ್ಲಿ ಪರಿಚಯಿಸಲಿದೆ ಎಂದು ಬಹಿರಂಗಪಡಿಸಲಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ

ಯಮಹಾ ವೈಜೆಡ್ಎಫ್ ಸರಣಿಯಲ್ಲಿ 125 ಸಿಸಿ ಬೈಕಿನಿಂದ ವೈಜೆಡ್ಎಫ್ ಆರ್15, ವೈಜೆಡ್ಎಫ್ ಆರ್3 ಮತ್ತು ವೈಜೆಡ್ಎಫ್ ಆರ್1 ಮಾದರಿನಂತಹ ಲೀಟರ್ ಕ್ಲಾಸ್ ಬೈಕ್‌ಗಳನ್ನುಕೂಡ ಒಳಗೊಂಡಿದೆ. ವೈಜೆಡ್ಎಫ್-ಆರ್1 ವಿಶ್ವದ ಅತ್ಯಾಧುನಿಕ ಬೈಕ್‌ಗಳಲ್ಲಿ ಒಂದಾಗಿದೆ.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ

ಕಳೆದ ವರ್ಷದವರೆಗೂ ಯಮಹಾ ವೈಜೆಡ್ಎಫ್-ಆರ್6 ಬೈಕನ್ನು ಉತ್ಪಾದನೆಯಲ್ಲಿತ್ತು. ಯಮಹಾ ಆರ್6 ಬೈಕಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಅಭಿಮಾನಿಗಳ ವರ್ಗವಿದೆ. 600ಸಿಸಿ ವಿಭಾಗದಲ್ಲಿ ಹೆಚ್ಚು ಜನಪ್ರಿಯಯನ್ನು ಗಳಿಸಿಕೊಂಡಿತು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ

ಆದರೆ ಯಮಹಾ ಭಾರತದಲ್ಲಿ ಎಂದಿಗೂ ಆರ್6 ಬೈಕನ್ನು ಮಾರಾಟ ಮಾಡಲಿಲ್ಲ, ಆದರೆ ಯಮಹಾ ವೈಜೆಡ್ಎಫ್-ಆರ್6 ಬೈಕ್ 2020ರವರೆಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಉತ್ಪಾದನೆಯಲ್ಲಿತು, ಆದರೆ ಯುರೋ 5 ಮಾಲಿನ್ಯ ನಿಯಮ ಜಾರಿಯಾದ ಕಾರಣ ವೈಜೆಡ್ಎಫ್-ಆರ್6 ಬೈಕಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ

ಆದರೆ ವೈಜೆಡ್ಎಫ್-ಆರ್6 ಬೈಕನ್ನು ಟ್ರ್ಯಾಕ್ ಬಳಕೆಗಾಗಿ ಸೀಮಿತ ಸಂಖ್ಯೆಯಲ್ಲಿ ತಯಾರಿಸುವುದನ್ನು ಮುಂದುವರೆಸಿತು. ಎಂಟಿ-07 ಆಧಾರಿತ ಯಮಹಾ ಫೇರ್ಡ್ ಸ್ಪೋರ್ಟ್ಸ್ ಬೈಕು ಅಭಿವೃದ್ಧಿಪಡಿಸುತ್ತದೆ ಎಂದು ವದಂತಿಗಳಿತ್ತು. ಆದರೆ ಇತ್ತೀಚೆಗೆ ಯಮಹಾ ಕಂಪನಿಯು ನೋಂದಾಯಿಸಿದ ಟ್ರೇಡ್‌ಮಾರ್ಕ್ ಮೂಲಕ ಹೊಸ ಫೇರ್ಡ್ ಎಂಟಿ-07 ಅನ್ನು ಆಧರಿಸಿದೆ ಎಂದು ಬಹುತೇಕ ಖಚಿತವಾಗಿತ್ತು.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಚಿತ್ರಗಳು ಬಹಿರಂಗ

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಮಾದರಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಎಪ್ರಿಲಿಯಾ ಆರ್‌ಎಸ್ 660, ಹೋಂಡಾ ಸಿಬಿಆರ್ 6 ಆರ್ ಮತ್ತು ಕವಾಸಕಿ ನಿಂಜಾ 650 ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಯಮಹಾ yamaha
English summary
2022 Yamaha YZF-R7 Images Leaked Ahead Of Official Debut. Read In Kannada.
Story first published: Saturday, May 15, 2021, 20:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X