ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಟೀಸರ್ ಬಿಡುಗಡೆ

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಯಮಹಾ ಕಂಪನಿಯು ಬಹುನಿರೀಕ್ಷಿತ ಈ ಹೊಸ ವೈಜೆಡ್ಎಫ್-ಆರ್7 ಬೈಕಿನ ಟೀಸರ್ ವಿಡಿಯೋವನ್ನು ಬಿಡುಗಡೆಗೊಳಿಸಿದೆ.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಟೀಸರ್ ಬಿಡುಗಡೆ

ಬೈಕ್ ಪ್ರಿಯರ ನಡುವೆ ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿಸಿದೆ. ವೈಜೆಡ್ಎಫ್-ಆರ್6 ಬೈಕಿನ ಬದಲಾಯಿಸಿ ಯಮಹಾ ಕಂಪನಿಯು ವೈಜೆಡ್ಎಫ್-ಆರ್7 ಬೈಕನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಯಮಹಾ ವೈಜೆಡ್ಎಫ್ ಸರಣಿಯ ಬೈಕ್‌ಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾರಿ ಜನಪ್ರಿಯತೆಯನ್ನು ಗಳಿಸಿದೆ.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಟೀಸರ್ ಬಿಡುಗಡೆ

ಯಮಹಾ ವೈಜೆಡ್ಎಫ್ ಸರಣಿಯಲ್ಲಿ 125 ಸಿಸಿ ಬೈಕಿನಿಂದ ವೈಜೆಡ್ಎಫ್ ಆರ್15, ವೈಜೆಡ್ಎಫ್ ಆರ್3 ಮತ್ತು ವೈಜೆಡ್ಎಫ್ ಆರ್1 ಮಾದರಿನಂತಹ ಲೀಟರ್ ಕ್ಲಾಸ್ ಬೈಕ್‌ಗಳನ್ನು ಒಳಗೊಂಡಿದೆ. ವೈಜೆಡ್ಎಫ್-ಆರ್1 ವಿಶ್ವದ ಅತ್ಯಾಧುನಿಕ ಬೈಕ್‌ಗಳಲ್ಲಿ ಒಂದಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಟೀಸರ್ ಬಿಡುಗಡೆ

ಕಳೆದ ವರ್ಷದವರೆಗೂ ಯಮಹಾ ವೈಜೆಡ್ಎಫ್-ಆರ್6 ಬೈಕನ್ನು ಉತ್ಪಾದಿಸಿತು. ಯಮಹಾ ಆರ್6 ಬೈಕಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಅಭಿಮಾನಿಗಳ ವರ್ಗವಿದೆ. 600ಸಿಸಿ ವಿಭಾಗದಲ್ಲಿ ಹೆಚ್ಚು ಜನಪ್ರಿಯಯನ್ನು ಗಳಿಸಿಕೊಂಡಿತು.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಟೀಸರ್ ಬಿಡುಗಡೆ

ಆದರೆ ಯಮಹಾ ಭಾರತದಲ್ಲಿ ಎಂದಿಗೂ ಆರ್6 ಬೈಕನ್ನು ಮಾರಾಟ ಮಾಡಲಿಲ್ಲ, ಆದರೆ ಈ ಯಮಹಾ ವೈಜೆಡ್ಎಫ್-ಆರ್6 ಬೈಕ್ 2020ರವರೆಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಉತ್ಪಾದನೆಯಲ್ಲಿತು, ಆದರೆ ಯುರೋ 5 ಮಾಲಿನ್ಯ ನಿಯಮ ಜಾರಿಯಾದ ಕಾರಣ ವೈಜೆಡ್ಎಫ್-ಆರ್6 ಬೈಕಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಟೀಸರ್ ಬಿಡುಗಡೆ

ಆದರೆ ವೈಜೆಡ್ಎಫ್-ಆರ್6 ಬೈಕನ್ನು ಟ್ರ್ಯಾಕ್ ಬಳಕೆಗಾಗಿ ಸೀಮಿತ ಸಂಖ್ಯೆಯಲ್ಲಿ ತಯಾರಿಸುವುದನ್ನು ಮುಂದುವರೆಸಿತು. ಇನ್ನು ಯಮಹಾ ವೈಜೆಡ್ಎಫ್-ಆರ್6 ಬೈಕ್ ಸ್ಥಗಿತಗೊಂಡ ಕೂಡಲೇ ಹಲವಾರು ವದಂತಿಗಳು ಹರಿದಾಡತೊಡಗಿದವು.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಟೀಸರ್ ಬಿಡುಗಡೆ

ಎಂಟಿ -07 ಆಧಾರಿತ ಯಮಹಾ ಫೇರ್ಡ್ ಸ್ಪೋರ್ಟ್ಸ್ ಬೈಕು ಅಭಿವೃದ್ಧಿಪಡಿಸುತ್ತದೆ ಎಂದು ವದಂತಿಗಳಿತ್ತು. ಆದರೆ ಇತ್ತೀಚೆಗೆ ಯಮಹಾ ಕಂಪನಿಯು ವೈಜೆಡ್ಎಫ್-ಆರ್ 7 ಮಾನಿಕರ್ ಅನ್ನು ಟ್ರೇಡ್ಮಾರ್ಕ್ ಟ್ರೇಡ್‌ಮಾರ್ಕ್ ಹೊಸ ಫೇರ್ಡ್ ಎಂಟಿ-07 ಅನ್ನು ಆಧರಿಸಿದೆ ಎಂದು ಬಹುತೇಕ ಖಚಿತವಾಗಿತ್ತು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಇದೀಗ ಯಮಹಾ ಕಂಪನಿಯು ಟೀಸರ್ ವಿಡಿಯೋವನ್ನು ಬಿಡುಗಡೆಗೊಳಿಸಿದೆ. ಈ ಟೀಸರ್ ವಿಡಿಯೋದಲ್ಲಿ ಈ ಹೊಸ ಬೈಕಿನ ಸಿಲೂಯೆಟ್ ಅನ್ನು ಸಹ ಬಹಿರಂಗಪಡಿಸಿಲ್ಲ. ಈ ಯಮಹಾ ವೈಜೆಡ್ಎಫ್-ಆರ್7 ಬೈಕನ್ನು ರೇಸ್‌ಟ್ರಾಕ್‌ನಲ್ಲಿ ಮತ್ತು ನಂತರ ಪರ್ವತಗಳಲ್ಲಿ ರೈಡ್ ಮಾಡುವುದನ್ನು ತೋರಿಸಿದೆ. ಈ ಬೈಕ್ ರೇಸ್‌ಟ್ರಾಕ್‌ಗೆ ಮಾತ್ರವಲ್ಲದೆ ರಸ್ತೆಗೂ ಕೂಡ ಸೂಕ್ತವಾಗಿದೆ ಎಂದು ಟೀಸರ್ ನಲ್ಲಿ ಪ್ರದರ್ಶಿಸಿದೆ.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಟೀಸರ್ ಬಿಡುಗಡೆ

ಯಮಹಾ ಕಂಪನಿಯು ಈ ಬೈಕಿಗೆ ವೈಜೆಡ್ಎಫ್-ಆರ್7 ಎಂದು ಅಧಿಕೃತವಾಗಿ ಹೆಸರನ್ನು ನೀಡಲಾಗಿಲ್ಲ. ಇನ್ನು ಈ ಹೊಸ ಬೈಕಿನಲ್ಲಿ 689 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ನು ಅನ್ನು ಹೊಂದಿದೆ. ಈ ಎಂಜಿನ್ 73.4 ಬಿಹೆಚ್‌ಪಿ ಪವರ್ ಮತ್ತು 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕ್ ಟೀಸರ್ ಬಿಡುಗಡೆ

ಯಮಹಾ ಕಂಪನಿಯು ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಮಾದರಿಯು ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಎಪ್ರಿಲಿಯಾ ಆರ್‌ಎಸ್ 660, ಹೋಂಡಾ ಸಿಬಿಆರ್ 6 ಆರ್ ಮತ್ತು ಕವಾಸಕಿ ನಿಂಜಾ 650 ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಯಮಹಾ yamaha
English summary
Yamaha YZF-R7 Teaser Video Released. Read In Kannada.
Story first published: Saturday, May 8, 2021, 18:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X